ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಡಿಜೆ ಸಹಿತ ಯಾವುದೇ ಅಬ್ಬರದ ಸಂಗೀತವಿಲ್ಲದೇ, ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದು, ಬಸವಣ್ಣನವರ ವಚನ, ಶಿವನಾಮ ಹಾಗೂ ಭಜನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣೇಶ ವಿಸರ್ಜನೆ ಜರುಗಿತು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಭಾನುವಾರ ಸಾಯಂಕಾಲ ಗಣೇಶ ವಿಸರ್ಜನೆಯ ಅಂಗವಾಗಿ ಸೈಕಲ್‌ಗಳ ಮೂಲಕ ಮೆರವಣಿಗೆಯನ್ನು ಮಾಡಿ, ಸ್ವಾತಂತ್ರ‍್ಯ ಹೋರಾಟಗಾರರ ಭಾವಚಿತ್ರಗಳನ್ನು ಹಿಡಿದುಕೊಂಡು, ಬಸವಣ್ಣನವರ ವಚನಗಳನ್ನು ಹಾಡುತ್ತಾ, ಜೊತೆಗೆ ಶಿವನಾಮ ಪಠಿಸುತ್ತಾ, ಭಜನೆಯೊಂದಿಗೆ ಗ್ರಾಮದ ಪ್ರತಿಯೊಂದು ಬೀದಿಗಳ ಮೂಲಕ ಹಾದು ಬಹಳ ವಿಶಿಷ್ಟ ರೀತಿಯಲ್ಲಿ ಗಣನಾಥನ ವಿಸರ್ಜನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದÀ ಅಧ್ಯಕ್ಷ ಜಿ.ಪಿ.ಬಿರಾದಾರ, ಮುತ್ತು ಮೆಳ್ಳಿಗೇರಿ, ಮಲಕು ಸುರಗಿಹಳ್ಳಿ, ಕಲ್ಲಪ್ಪ ಮೂಲಿಮನಿ, ಸಿದ್ದು ಹದರಿ, ವಿಶ್ವನಾಥ ಸರಬಡಗಿ, ಸಿದ್ದು ಬಡಿಗೇರ, ಹಣಮಂತ ನಾಗರಳ್ಳಿ, ಸಂಜು ನಾಯ್ಕೋಡಿ, ಶಿವಪುತ್ರ ಗಬ್ಬೂರ, ಸಂದೀಪ ಬಿರಾದಾರ, ಸಂತೋಷ ಬಿರಾದಾರ, ಸಾಹೇಬಗೌಡ ಸುರಗಿಹಳ್ಳಿ, ಸಾಹೇಬಗೌಡ ನಾಗರಳ್ಳಿ, ಸಿದ್ದಾರ್ಥ ವಾಲೀಕಾರ ಹಾಗೂ ಶಾಲಾಮಕ್ಕಳು ಇದ್ದರು.

