ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಅತಿಥಿ ಉಪನ್ಯಾಸ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದೈನಂದಿನ ಜೀವನದಲ್ಲಿ ವ್ಯಾಯಾಮವು ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದೈಹಿಕ ವ್ಯಾಯಾಮದಲ್ಲಿ ತೊಡಗುವುದು ಅವಶ್ಯಕ ಎಂದು ನಗರದ ಬಿ ಎಲ್ ಡಿ ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ದೈಹಿಕ ನಿರ್ದೇಶಕಿ ಡಾ.ಸವಿತಾ ಅನ್ನೆಪ್ಪನವರ ಹೇಳಿದರು.
ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ,ಕ್ರೀಡಾ ವಿಭಾಗದ ಸಹಯೋದಲ್ಲಿ ದಿನಾಂಕ ೩೦-೦೮-೨೦೨೫ ಶನಿವಾರದಂದು ಅಯೋಜಿಸಿದ ‘ದೈನಂದಿನ ಜೀವನದಲ್ಲಿ ಫಿಟ್‌ನೆಸ್‌ನ ಮಹತ್ವ’ ದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನಮ್ಮ ಜೀವನದಲ್ಲಿ ವ್ಯಾಯಾಮದ ಪ್ರಾಮುಖ್ಯತೆ ವಹಿಸುತ್ತದೆ ಅದರಂತೆ ನಿಯಮಿತವಾಗಿ ನಿದ್ರೆ,ಊಟ ಎಲ್ಲವನ್ನು ನಮ್ಮ ಜೀವನದ್ಲಿ ಫಿಟ್ನೆಸ್ಸ್ ಕಾಯ್ದುಕೊಳ್ಳಲು ಸಾಹಯಕ ಆದ್ದರಿಂದ ದಿನಂಪ್ರತಿಯಾಗಿ ವ್ಯಾಯಾಮ ಮತ್ತು ಉತ್ತಮವಾದ ಆಹಾರ ಮತ್ತು ಉತ್ತಮವಾದ ನಿದ್ದೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ದಿನಾಲು ನಿಯಮಿತ ವ್ಯಾಯಾಮದಿಂದ ಉತ್ತಮವಾಗಿ ಕಾಣಿಸಬಹುದು ಹಾಗೂ ಉತ್ತಮವಾಗಿ, ಸುಂದರವಾಗಿ ಬದುಕಬಹುದು ಎಂದು ಹೇಳಿದರು.
ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ.ಆರ್ ಎಂ. ಮಿರ್ಧೆ ಮಾತನಾಡಿ, ವಿದ್ಯಾರ್ಥಿಗಳು ದಿನಂಪ್ರತಿ ವ್ಯಾಯಾಮ ಕೈಗೊಳ್ಳಬೇಕು ಅಲ್ಲದೆ ಕನಿಷ್ಠ ದಿನಾಲೂ ಒಂದು ಗಂಟೆಯಾದರೂ ತಮ್ಮ ದೈಹಿಕ ಸದೃಢದ ಬಗ್ಗೆ ಕಾಳಜಿ ವಹಿಸಬೇಕು ಎಂಬ ಹೇಳಿದರು.
ಇದೆ ವೇಳೆ ಮಹಾವಿದ್ಯಾಲಯದ ಹೊರಾಂಗಣದಲ್ಲಿ ಆವರಣದಲ್ಲಿ ಎನ್ ಎಸ್ ಎಸ್ ೧ & ೨ ರ ಘಟಕದ ಸಹಯೋದಲ್ಲಿ ವಿಜಯಪುರ ನಶಾ ಮುಕ್ತ ಭಾರತ ಅಭಿಯಾನದ ಬ್ಯಾನರ್ ಅಡಿಯಲ್ಲಿ ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ.ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೇಶಕರಾದ ಡಾ.ಪಿ.ಎಸ್.ಪಾಟೀಲ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ, ನ್ಯಾಕ್ ಸಂಯೋಜಕ ಡಾ.ಕೆ.ಮಹೇಶಕುಮಾರ, ಡಾ.ತರನ್ನುಮ್ ಜಬೀನಖಾನ್, ಪ್ರೊ.ಆರ್.ಜಿ.ಕಮತರ, ಪ್ರೊ.ಎಂ.ಎಸ್.ಜೇವೂರ, ಸವಿತಾ ಕನಕರೆಡ್ಡಿ ಸೇರಿದಂತೆ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರೊ.ರೂಪಾ.ಮೋಟಗಿ ಕಾರ್ಯಕ್ರಮ ನಿರೂಪಿಸಿದರು.

