ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ ಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಬೋಧಕೇತರ ಸಿಬ್ಬಂದಿ ಶ್ರೀಮತಿ ಕಾಶಿಬಾಯಿ ಬಿರಾದಾರ ಅವರ ವೃತ್ತಿಯಿಂದ ನೀವೃತ್ತಿಹೊಂದಿದ ಹಿನ್ನೆಲೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಈ ವೇಳೆಯಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿ ನಮ್ಮ ಮಹಾವಿದ್ಯಾಲಯದಲ್ಲಿ ಅತ್ಯಂತ ಕರ್ತವ್ಯ ನಿಷ್ಠೆಯಿಂದ, ಯಾವುದೆ ನ್ಯೂನ್ಯತೆ ಇಲ್ಲದೆ, ಪ್ರಾಮಾಣಿಕತೆಯಿಂದ ಸಂಸ್ಥೆಯಲ್ಲಿ ತಿಕೋಟಾದಿಂದ ವೃತ್ತಿ ಪ್ರಾರಂಭಿಸಿ ನಮ್ಮ ಮಹವಿದ್ಯಾಲಯ ಸೇರಿಂದಂತೆ ಒಟ್ಟು ೩೧ ವರ್ಷಗಳ ತಮ್ಮ ಸೇವೆಯನ್ನು ಗೈದಿದ್ದಾರೆ ಇವರ ನೀವೃತ್ತಿ ಜೀವನದ ಸುಖಕರವಾಗಿ ಸಾಗಲೆಂದು ಶುಭ ಹಾರೈಸಿದರು.
ಈ ವೇಳೆಯಲ್ಲಿ ಎಲ್ ಎಸ್ ಪೂಜಾರಿ, ದುಲಂಗೆ ಮಾತನಾಡಿದರು.
ಮಹಾವಿದ್ಯಾಲಯದಿಂದ ಶ್ರೀಮತಿ ಕಾಶಿಬಾಯಿ ಬಿರಾದಾರ ದಂಪತಿಗಳಿಗೆ ಸನ್ಮಾಸಿಲಾಯಿತು.
ಈ ಸಂದರ್ಭಲ್ಲಿ ಬಿಎಲ್‌ಡಿಇ ಸಂಸ್ಥೆಯ ಕಛೇರಿ ನಿವೃತ್ತ ಅಧೀಕ್ಷಕರು ಶ್ರೀ.ಎಸ್.ಕೆ ಬಿರಾದಾರ, ಕೆ.ಕೆ.ಪಾಟೀಲ, ಉಪ್ರಾಚಾರ್ಯ ಡಾ.ಅನೀಲ.ಭೀ,ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್ ಪಾಟೀಲ, ಕಛೇರಿ ಆಧೀಕ್ಷಕ ಎಸ್.ಬಿ.ಹೇರಲಗಿ, ಜಗದೀಶ ಪಾಟೀಲ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಡಾ.ಉಷಾದೇವಿ ಹಿರೇಮಠ ನಿರೂಪಿಸಿದರು.

