ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೬೫/೯೦೦ಎಂ.ಎಂ ವ್ಯಾಸದ ಎಂ.ಎಸ್-ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ ೬.೯೩೦ಕಿ.ಮೀ ಗರಸಂಗಿ ಹಳ್ಳದ ಹತ್ತಿರ, ದಿನಾಂಕ:೦೨.೦೯.೨೦೨೫ ರಂದು ೯೬೫ಮಿ.ಮೀ ವ್ಯಾಸದ ಎಂ.ಎಸ್ ಕೊಳವೆ ಮಾರ್ಗದ ಎಂ.ಎಸ್ ಮ್ಯಾನಹೋಲ್ ಬರ್ಸ್ಟ್ ಆಗಿದ್ದು ಹಾಗೂ ಚೈನೇಜ ೨.೪೦೬ಕಿ.ಮೀ ರಾಚಣ್ಣ ಗುಡಿ ಹತ್ತಿರ, ಚೈನೇಜ ೯.೩೩೨ಕಿ.ಮೀ ರೋಣಿಹಾಳ ಗ್ರಾಮದ ಹತ್ತಿರ, ಚೈನೇಜ ೧೩.೧೬೫ಕಿ.ಮೀ ರೋಣಿಹಾಳ ಕೆರೆ ಹತ್ತಿರ ಹಾಗೂ ಚೈನೇಜ ೪೧.೨೯೦ಕಿ.ಮೀ ಬಾರಾಕೋಟರಿ ತಾಂಡಾ ಹತ್ತಿರ ಹಾಗೂ ಮೊದಲನೇ ಹಂತದ ೪೫೦ಮಿ.ಮೀ ವ್ಯಾಸದ ಎಂ.ಎಸ್ ಮುಖ್ಯ ಏರು ಕೊಳವೆ ಮಾರ್ಗದ, ರಮಜಾನ ಹಳ್ಳ ಬಳೂತಿ ಕ್ರಾಸ ಹತ್ತಿರ ನೀರು ಸೋರುವಿಕೆಯ ತುರ್ತು ದುರಸ್ತಿ ಕಾಮಗಾರಿಗಳನ್ನು ಜಲ ಮಂಡಳಿ ವತಿಯಿಂದ ಕೈಗೊಳ್ಳಲಾಗಿದೆ.
ಆದ್ದರಿಂದ, ಸೆಪ್ಟೆಂಬರ್ ೩ರಂದು ವಿಜಯಪುರ ನಗರಕ್ಕೆ ಕೋಲ್ಹಾರದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.