Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಮನಗೂಳಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಟಿಟಿಐ ಕಾಲೇಜ್‌ನಲ್ಲಿ ಜು.೨೭ ರಿಂದ ಆ.೨ರವರೆಗೆ ಗಣಕಯಂತ್ರ ಶಿಕ್ಷಣ ಪರೀಕ್ಷೆಗಳು ಜರುಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀ. ಪ್ರದೇಶದಲ್ಲಿ ಪರೀಕ್ಷಾ ದಿನದಂದು ಬೆಳಿಗ್ಗೆ ೯ ಗಂಟೆಯಿಂದ ಪರೀಕ್ಷೆ ಮುಗಿಯುವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿನ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳನ್ನು ತೆರೆಯದಂತೆ ಆದೇಶಿಸಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ: ಉಮಾ ಕಾಂಜಿಲಾಲ್ ಅವರನ್ನು ನೇಮಕ ಮಾಡಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆದೇಶ ಹೊರಡಿಸಿದೆ ಎಂದು ವಿಜಯಪುರದ ಇಗ್ನೋ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಿ.ಎನ್.ದೇವೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ಸೈಯ್ಯದ ಅಜೀಮಪೀರ ಎಸ್.ಖಾದ್ರಿ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಎಂ, ಡಿಸಿಎಂ ಹಾಗೂ ಇಂಧನ ಸಚಿವರ ಮಾರ್ಗದರ್ಶನದಲ್ಲಿ ಈಗಾಗಲೇ ಇರುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ ದೋಷರಹಿತ, ಅಪಘಾತ ರಹಿತ ಹೆಸ್ಕಾಂವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷರಾದ ಮಾಜಿ ಶಾಸಕ ಸೈಯ್ಯದ ಅಜೀಮಪೀರ ಎಸ್.ಖಾದ್ರಿ ಅವರು ಹೇಳಿದರು.ನಗರದ ಬಿಡಿಎ ಕಚೇರಿಯ ಹತ್ತಿರವಿರುವ ಹೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಸ್ಕಾಂ ವ್ಯಾಪ್ತಿಯ ೭ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಹೆಸ್ಕಾಂ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.ಕಳೆದ ೨೦೨೩ನೇ ಸಾಲಿನವರೆಗೆ ೧೦ ಸಾವಿರ ರೂ. ಹಣ ತುಂಬಿ ಆರ್.ಆರ್.ನಂಬರ್ ಪಡೆದ ೧೫೨೦೦ ರೈತರಿಗೆ ಪಂಪಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮುಖ್ಯಶಿಕ್ಷಕ ಆಯ್.ಎಸ್.ನರೂಣಿ ಹೇಳಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸಾಮಾಜಿಕ ಪರಿಶೋಧನೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರುಅಧ್ಯಕ್ಷತೆ ವಹಿಸಿದ ತಾಲ್ಲೂಕು ತೋಟಗಾರಿಕೆ ಇಲಾಖೆಯ ಲಕ್ಷ್ಮಣ ಸಂಗೋಗಿ ಮಾತನಾಡಿ, ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಒಳ್ಳೆಯ ವಾತಾವರಣ ಇದೆ ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿಯ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಮದನಶೆಟ್ಟಿ ಮಾತನಾಡಿ, ಶಾಲೆಯಲ್ಲಿ ವಾಚನಾಲಯ, ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠ ಬೋಧನೆ, ಮಕ್ಕಳಿಗೆ ಸುರಕ್ಷತೆಯ ಭಾವನೆ, ದಾನಿಗಳ ಸಹಕಾರ, ವೃತ್ತಿಪರ ಮಾರ್ಗದರ್ಶನ, ವಿಶೇಷ ತರಗತಿ, ಸರಕಾರದ ಸೌಲಭ್ಯಗಳ ವಿತರಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಭೆಯಲ್ಲಿ ದಿ:೨೨ ರಿಂದ ೨೫…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಿಂದಗಿ ತಾಲೂಕಿನ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮತ್ತು ವನಶ್ರೀ ಪತ್ತಿನ ಸಹಕಾರಿ ಸಂಘದ ಸಭೆಯನ್ನು ಜುಲೈ 27 ರಂದು ಬೆಳಗ್ಗೆ 11=00 ಘಂಟೆಗೆ ಕರೆಯಲಾಗಿದೆ.ಸಿಂದಗಿಯ ಲಕ್ಷ್ಮಿ ದೇವಾಲಯದ ಸಭಾಭವನದಲ್ಲಿ ಸಭೆ ನಡೆಯಲಿದ್ದು ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ, ಹಾಗೂ ಸಂಘದ ಚಟುವಟಿಕೆಗಳ ಕುರಿತು ಚರ್ಚೆ ನಡೆಯುವುದುಆದ್ದರಿಂದ ಗಾಣಿಗ ಸಮಾಜದ ಬಾಂಧವರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿಬೇಕಾಗಿ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಎಲ್.ಬಿರಾದಾರ, ವನಶ್ರೀ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ ಗಂಗನಳ್ಳಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ರಿ ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ೨೦೨೫ ಸಾಲಿನ” ಮಾಧ್ಯಮ ರತ್ನ” ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ಜು.೨೭ ರವಿವಾರ ನಗರದ ಜಿಲ್ಲಾ ಪಂಚಾಯತ್ ಗಾಂಧಿ ಭವನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಬಾರಿ ದೃಶ್ಯ ಮಾಧ್ಯಮದಿಂದ ಸುನೀಲ ಭಾಸ್ಕರ್ ಜಿಲ್ಲಾ ವರದಿಗಾರರು ಪವರ್ ಟಿವಿ., ಮುದ್ರಣ ಮಾಧ್ಯಮದಿಂದ ಶ್ರೀಮತಿ ಐಶ್ವರ್ಯ ತಾಳಿಕೊಟಿ ಜಿಲ್ಲಾ ವರದಿಗಾರರು ಉದಯಕಾಲ ದಿನಪತ್ರಿಕೆ, ಮಾರುತಿ ಹಿಪ್ಪರಗಿ ಮುದ್ದೇಬಿಹಾಳ ತಾಲೂಕಾ ವರದಿಗಾರರು ಸಂಧ್ಯಾಕಾಲ, ಶ್ರೀಶೈಲ ( ಸಚೀನ ) ಎಸ್ ಇಂಡಿ ತಾಲೂಕಾ ವರದಿಗಾರರು ಲೋಕದರ್ಶನ ಪತ್ರಿಕೆ, ಮಹ್ಮದ ಆಶ್ಫಾಕ ಕರಜಗಿ ಸಿಂದಗಿ ತಾಲೂಕಾ ವರದಿಗಾರರು ಉರ್ದು ಸಾಲಾರ ಪತ್ರಿಕೆ, ಉದಯಕುಮಾರ ಆಕಾಶಿ ಸಂಪಾದಕರು ವೀರರಾಜ ವಾರ ಪತ್ರಿಕೆ, ತೌಫಿಕ ಕಲಾದಗಿ ಸಂಪಾದಕರು ಟಿ – ನ್ಯೂಸ್ ವೆಬ್ ಪೋರ್ಟಲ್, ಭಾರ್ಗವಿ ದೇಶಪಾಂಡೆ ನಿರೂಪಕಿ ಎಫ್ ಎಂ ನ್ಯೂಸ್, ಹಸನ ಮುಲ್ಲಾ ಕೊಲ್ಹಾರ ತಾಲೂಕಾ ವರದಿಗಾರರು ಸುರಂಗ ಪತ್ರಿಕೆ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ರಿ ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ೨೦೨೫ ಸಾಲಿನ” ಮಾಧ್ಯಮ ರತ್ನ” ಜಿಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ಜು.೨೭ ರವಿವಾರ ನಗರದ ಜಿಲ್ಲಾ ಪಂಚಾಯತ್ ಗಾಂಧಿ ಭವನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಬಾರಿ ದೃಶ್ಯ ಮಾಧ್ಯಮದಿಂದ ಸುನೀಲ ಭಾಸ್ಕರ್ ಜಿಲ್ಲಾ ವರದಿಗಾರರು ಪವರ್ ಟಿವಿ., ಮುದ್ರಣ ಮಾಧ್ಯಮದಿಂದ ಶ್ರೀಮತಿ ಐಶ್ವರ್ಯ ತಾಳಿಕೊಟಿ ಜಿಲ್ಲಾ ವರದಿಗಾರರು ಉದಯಕಾಲ ದಿನಪತ್ರಿಕೆ, ಮಾರುತಿ ಹಿಪ್ಪರಗಿ ಮುದ್ದೇಬಿಹಾಳ ತಾಲೂಕಾ ವರದಿಗಾರರು ಸಂಧ್ಯಾಕಾಲ, ಶ್ರೀಶೈಲ ( ಸಚೀನ ) ಎಸ್ ಇಂಡಿ ತಾಲೂಕಾ ವರದಿಗಾರರು ಲೋಕದರ್ಶನ ಪತ್ರಿಕೆ, ಮಹ್ಮದ ಆಶ್ಫಾಕ ಕರಜಗಿ ಸಿಂದಗಿ ತಾಲೂಕಾ ವರದಿಗಾರರು ಉರ್ದು ಸಾಲಾರ ಪತ್ರಿಕೆ, ಉದಯಕುಮಾರ ಆಕಾಶಿ ಸಂಪಾದಕರು ವೀರರಾಜ ವಾರ ಪತ್ರಿಕೆ, ತೌಫಿಕ ಕಲಾದಗಿ ಸಂಪಾದಕರು ಟಿ – ನ್ಯೂಸ್ ವೆಬ್ ಪೋರ್ಟಲ್, ಭಾರ್ಗವಿ ದೇಶಪಾಂಡೆ ನಿರೂಪಕಿ ಎಫ್ ಎಂ ನ್ಯೂಸ್, ಹಸನ ಮುಲ್ಲಾ ಕೊಲ್ಹಾರ ತಾಲೂಕಾ ವರದಿಗಾರರು ಸುರಂಗ ಪತ್ರಿಕೆ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜು.೨೬ರಂದು ಬೆಳಿಗ್ಗೆ ೯ ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲುಜೆ)ದ ಅಂಗಸಂಸ್ಥೆಯಾಗಿರುವ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ, ಉಪನ್ಯಾಸ, ವಾರ್ಷಿಕ ಪ್ರಶಸ್ತಿ ಪ್ರದಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಅರಿಹಂತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾವೀರ ಸಗರಿ, ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ ಮುಖ್ಯ ಅತಿಥಿಗಳಾಗಿ, ಅರಿಹಂತ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಪುಲ್ ಸಗರಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.ಸಂಘದ ತಾಲೂಕು ಅಧ್ಯಕ್ಷ ಆರ್.ಬಿ.ವಡವಡಗಿ(ಮುತ್ತು) ಅಧ್ಯಕ್ಷತೆ ವಹಿಸಲಿದ್ದು, ಅರಿಹಂತ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ರಾಜನಾರಾಯಣ ನಲವಡೆ ಅವರು ಪತ್ರಿಕೋದ್ಯಮ ಮತ್ತು ಪತ್ರಕರ್ತರ ಕಾರ್ಯಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು.ಇದೇ ಸಂದರ್ಭ ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತರಾದ ರಿಯಾಜ್‌ಅಹ್ಮದ್…

Read More

102 ಕೆಜಿ ಭಾರದ ಮೂಟೆ ಹೊತ್ತು 575 ಮೆಟ್ಟಿಲುಗಳ ಅಂಜನಾದ್ರಿ ಬೆಟ್ಟ ಹತ್ತಿದ ಹುನ್ನೂರು ಗ್ರಾಮದ ರೈತ! ಉದಯರಶ್ಮಿ ದಿನಪತ್ರಿಕೆ ವರದಿ: ಎಸ್ˌ ಎಮ್ˌ ಇಟ್ಟಿಜಮಖಂಡಿ: ಆ ಮೂಟೆ ಬರೋಬ್ಬರಿ ಒಂದು ಕ್ವಿಂಟಾಲ ಅಂದರೆ ಬರೋಬ್ಬರಿ 102 ಕೆಜಿ ಭಾರದ್ದು. ಆ ಬೆಟ್ಟ 575 ಮೆಟ್ಟಿಲುಗಳ ಕಡಿದಾದ, ಸಂಕೀರ್ಣಗಳಿಂದ ಕೂಡಿದ ಮಾರ್ಗ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಆ ರೈತ 102 ಕೆಜಿ ಭಾರದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿ ಹರಕೆ ತೀರಿಸುವ ಮೂಲಕ ಗಮನ ಸೆಳೆದರು.ವಯಸ್ಸು 61 ಆದ್ರೂ ದಣಿವರಿಯದ ವೃದ್ಧಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ 61 ವರ್ಷ ವಯಸ್ಸಿನ ನಿಂಗಪ್ಪ ಸವಣೂರು ಎಂಬ ರೈತ ಮಂಗಳವಾರ ಅಂಜನಾದ್ರಿ ಬೆಟ್ಟವನ್ನು 102 ಕೆಜಿ ಭಾರದ ಮೂಟೆ ಹೊತ್ತು ಏರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.102 ಕೆಜಿಯ ಭಾರವಿದ್ದ ಮೂಟೆಯನ್ನು ಹೊತ್ತು 575 ಮೆಟ್ಟಿಲುಗಳ ಕಡಿದಾದ ಹಾದಿಯಲ್ಲಿ ಸಾಗುವ ಮೂಲಕ ಅಂಜನಾದ್ರಿ ಬೆಟ್ಟವೇರಿದ ರೈತನೋರ್ವ ಎಲ್ಲರ ಗಮನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ‌ ಕೇಂದ್ರ ಪ್ರಕಟಿಸಿರುವ ಆದಿಲ್ ಶಾಹಿ ಕಾಲದ ಅನುವಾದ ಸಾಹಿತ್ಯದ ಸಂಪುಟಗಳನ್ನು ಸಚಿವ ಎಂ.ಬಿ.ಪಾಟೀಲರ ಸೂಚನೆ ಹಿನ್ನೆಲೆಯಲ್ಲಿ ಇಂದು ನಗರದ ಹಾಸಿಂ ಪೀರ ದರ್ಗಾದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ ಅವರಿಗೆ ನೀಡಲಾಯಿತು.ಸಚಿವ ಎಂ ಬಿ ಪಾಟೀಲ ಅವರು ಆದಿಲ್ ಶಾಹಿ ಕಾಲದ ಉರ್ದು, ದಖನಿ, ಪರ್ಶಿಯನ್ ಹಾಗೂ ಅರೆಬಿಕ್ ಸಾಹಿತ್ಯವನ್ನು ಹಳಕಟ್ಟಿ ಸಂಶೋಧನ‌ ಕೇಂದ್ರದ ಮೂಲಕ ಕನ್ನಡ ಭಾಷೆಗೆ ಅನುವಾದಿಸಿದ್ದು, ಈ ಸಂಪುಟಗಳನ್ನು ಸಂಶೋಧನ ಕೇಂದ್ರದ ಸಂಯೋಜಕ ಡಾ. ವಿ. ಡಿ.‌ ಐಹೊಳ್ಳಿ ಅವರು ಸೈಯ್ಯದ ಮೊಹಮ್ಮದ ತನ್ವೀರ್ ಹಾಸ್ಮಿ ಅವರಿಗೆ ಶುಕ್ರವಾರ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೈಯ್ಯದ ಮೊಹಮ್ಮದ ತನ್ವಿರ್ ಹಾಸ್ಮಿ, ಸಚಿವ ಎಂ. ಬಿ. ಪಾಟೀಲ ಅವರು‌ ಅನುವಾದ ಸಾಹಿತ್ಯ‌ ಪ್ರಕಟಿಸುವ ಮೂಲಕ ಗತಕಾಲದ ಇತಿಹಾಸವನ್ನು ಇಂದಿನ ಯುವ ಜನತೆ ಅಧ್ಯಯನ‌ ಮಾಡಲು ನೆರವಾಗಿದ್ದಾರೆ. ಸಚಿವರ ಈ ಕಾರ್ಯ…

Read More