ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ರಾಜ್ಯಾದ್ಯಂತವಾಗಿ ಹಮ್ಮಿಕೊಂಡಿರುವ ಬಸವ ಸಂಸ್ಕ್ರತಿ ಅಭಿಯಾನದ ಭವ್ಯ ರಥಯಾತ್ರೆ ಸೋಮವಾರ ಪ್ರಮುಖ ಬೀದಿಗಳಲ್ಲಿ ಸಾಗಿ ಬರುವ ಸಂದರ್ಭದಲ್ಲಿ ಜಾಮೀಯ ಮಸೀದಿ ಹತ್ತಿರ ರಥ ಆಗಮಿಸಿದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ರಥಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮೆರವಣಿಗೆಯಲ್ಲಿ ಸಾಗಿದ ಶ್ರೀಗಳಿಗೆ,ಬಸವ ಭಕ್ತರಿಗೆ, ರಥಕ್ಕೆ ಪುಷ್ಪ ವೃಷ್ಟಿ ಮಾಡಿದರು.
ಮೆರವಣಿಗೆಯಲ್ಲಿ ಸಾಗಿದ ಎಲ್ಲ ಜನರಿಗೆ ಶರಬತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಅಧ್ಯಕ್ಷ ಡಾ.ಶಬ್ಬೀರ ನದಾಫ, ಮುಖಂಡರಾದ ಕಮಲಸಾಬ ಕೊರಬು, ಸಲೀಂ ಸಯ್ಯದ, ಇಸ್ಮಾಯಿಲ ಭಾಗವಾನ, ಚಾಂದಭಾಷಾ ಕೊರಬು, ಎಚ್.ಆರ್.ಬಾಗವಾನ, ಶಬ್ಬೀರ ನಾಯ್ಕೋಡಿ, ಅಲ್ಲಾಭಕ್ಷ ಕೊರಬು, ಅಸ್ಲಂ ಮುಜಾವರ, ಜಾಕೀರ ನದಾಫ, ರಫೀಕ ಹೊಕ್ರಾಣಿ, ಬಸೀರ ಹೊಕ್ರಾಣಿ, ಅಬ್ದುಲರಜಾಕ ಬಾಗವಾನ, ಈಸೂ- ಬಾಗವಾನ, ತೌಫೀಕ ಶಾಬಾದಿ, ರಫೀಕ ನಂದವಾಡಗಿ, ಕೆ.ಎ.ವಾಲೀಕಾರ, ಸೇರಿದಂತೆ ಅನೇಕರು ಇದ್ದರು.