ಉದಯರಶ್ಮಿ ದಿನಪತ್ರಿಕೆ
ಇಂಡಿ: ಛಲವಾದಿ ಮಹಾಸಭಾ ಉದ್ದೇಶ ಸಮಾಜದ ಸರ್ವೋತೋಮುಖ ಅಭಿವೃದ್ದಿಯೊಂದಿಗೆ ಸಾಮಾಜಿಕ ಸಾಮರಸ್ಯ ಬೆಳೆಸುವ ಮೂಲಕ ಗುಣಾತ್ಮಕ ಸಮಾಜ ಕಟ್ಟುವಲ್ಲಿ ಶ್ರಮಿಸುವ ಸಂಘಟನೆಯಾಗಿದೆ ಎಂದು ಜಿಲ್ಲಾಧ್ಯಕ್ಷ ಸುನೀಲ ಹೊಸಹಳ್ಳಿ ಹೇಳಿದರು.
ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಛಲವಾದಿ ಮಹಾಸಭಾ ಕಟ್ಟಿದ ದಿ. ಕೆ.ಶಿವರಾಮ ಅಧಿಕಾರಿಗಳ ಪರಿಕಲ್ಪನೆ ಅನೇಕ ಆಯಾಮಗಳಿಂದ ಕೂಡಿತ್ತು. ಛಲವಾದಿ ಸಮುದಾಯ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು ಇದನ್ನು ಸುಧಾರಣೆಗೆ ತರಬೇಕು ಎಂಬ ವಿಚಾರಧಾರೆ ಶಿವರಾಮ ಅವರದಾಗಿತ್ತು. ವಿಧಿ ಅವರ ಸಮಾಜ ಮುಖಿ ಕಾರ್ಯ ದೈವಾಧೀನರಾದ ನಂತರ ಇಡೇರಲ್ಲಿಲ್ಲ. ಇಂದು ಅವರ ವಿಚಾರಧಾರೆಯನ್ನೇ ಕೈಗೆತ್ತಿಕೊಂಡ ರಾಜ್ಯ ಸಂಚಾಲಕರಾದ ಶ್ರೀಮತಿ ವಾಣಿ. ಕೆ ಶಿವರಾಂ ರವರು ಸಮಾಜ ಚಿಂತನೆಯಿಂದ ಮತ್ತು ಛಲವಾದಿ ಬಡಮಕ್ಕಳು ಆಯ್,ಎ.ಎಸ್.ಕೆ.ಎ.ಎಸ್ ತರಬೇತಿ ಕಲಿತು ಉನ್ನತ ಹುದ್ದೆ ಅಲಂಕರಿಸಲಿ ಎಂಬ ಸದಾಶಯದೊಂದಿಗೆ ತರಬೇತಿ ಕೇಂದ್ರ ತೆರೆದಿದ್ದಾರೆ ಇದರ ಸದುಪಯೋಗ ಪಡೆಯಬೇಕು. ಛಲವಾದಿ ಮಹಾಸಭಾ ಅಧ್ಯಕ್ಷ ಪದಾಧಿಕಾರಿಗಳು ಗ್ರಾಮೀಣ ಭಾಗ ,ಭೂತ ಮಟ್ಟದಲ್ಲಿ ಛಲವಾದಿ ಮಹಾಸಭಾ ಬೆಳೆಸಿ ಒಳ್ಳೆಯ ಸಂಘಟನೆ ಎಂಬ ಹೆಗ್ಗಳಿಕೆ ಬರುವಂತೆ ಶ್ರಮಿಸಿ ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಶೇಶರಾವ ಮಾನೆ ಮಾತನಾಡಿ, ಛಲವಾದಿ ಸಂಘಟನೆ ಪದಾಧಿಕಾರಿಗಳು ಗ್ರಾಮೀಣ ಭಾಗದ ಜನರ ಸಮಸ್ಯಗಳನ್ನು ಪರಿಹರಿಸಲು ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಪ್ರಭು ಶಹಾಪೂರ, ರಾಜ್ಯ ಸಮೀತಿ ಸದಸ್ಯ ರಮೇಶ ಹಂಡೇಗಾರ, ತಾಲೂಕಾ ಅಧ್ಯಕ್ಷ ಭೀಮಾಶಂಕರ ಮೂರಮನ್, ಕಾರ್ಯದರ್ಶಿ ಶೇಖರ ಶಿವಶರಣ ವೇದಿಕೆಯಲ್ಲಿದ್ದರು.
ಮಿಲಿಂದ ಹೊಸಮನಿ, ಅಪ್ಪುರಾಜ ಕಾಂಬಳೆ, ಚಂದ್ರಶೇಖರ ಕಟ್ಟಿಮನಿ, ಸದಾಶಿವ ಆಲಮೇ,ಸುನೀಲ ಗಾಯಕವಾಡ, ರಾಜು ಸಿಂಗೆ, ರೋಹಿತ ಕಾಳೆ, ರಾಜಶೇಖರ ಹಳ್ಳದಮನಿ, ಮಹೇಂದ್ರ ಹೊಸಮನಿ ಮತ್ತಿತರಿದ್ದರು.

