ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹಳೆ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಕೃಷ್ಣಾ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸದ ಗಣಪತಿ ಮೂರ್ತಿ ಮಂಟಪದ ಮುಂಭಾಗ ಮಂಗಳವಾರ ಜನರಿಗೆ ಸಾಮೂಹಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯ ಜನರು ಪ್ರಸಾದ ಸ್ವೀಕರಿಸಿದರು. ಕೃಷ್ಣಾ ಗಜಾನನ ಮಹಾಮಂಡವು ಹಾಕಿದ ಪ್ಲೆಕ್ಸಿನಲ್ಲಿ ನಮ್ಮ ಮಂಡಳ ನಮ್ಮ ಕುಟುಂಬ, ರಕ್ತ ಸಂಬಂಧಕ್ಕಿಂತ ಸ್ನೇಹದ ನಂಟು ಶಾಶ್ವತ ಎಂಬ ಬರಹ ನೋಡುಗರನ್ನು ಗಮನ ಸೆಳೆಯಿತು. ಪ್ರಸಾದಕ್ಕಾಗಿ ೫ ಕ್ವಿಂಟಾಲ್ ಸುರಾಮ,೧೧ ಕ್ವಿಂಟಾಲ್ ಅನ್ನ, ಸಾಂಬಾರು ತಯಾರಿಸಲಾಗಿದೆ ಎಂದು ಕೃಷ್ಣಾ ಗಜಾನನ ಮಹಾಮಂಡಳದ ಶ್ರೀಕಾಂತ ಕೊಟ್ರಶೆಟ್ಟಿ ಹೇಳಿದರು.