Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹12.33 ಕೋಟಿ ಕಬ್ಬು ತೂಕ ವಂಚನೆ

ಶಾಸಕ ಕಟಕಧೋಂಡ ಗೆ ಸಚಿವ ಸ್ಥಾನ ನೀಡಲು ಆಗ್ರಹ

ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಲು ಆಗ್ರಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕನ್ನಡ ಪತ್ರಿಕೆಗಳು ಸಮಾಜದ ಅಂಕು ಡೊಂಕುಗಳಿಗೆ ಕೈಗನ್ನಡಿ
ವಿಶೇಷ ಲೇಖನ

ಕನ್ನಡ ಪತ್ರಿಕೆಗಳು ಸಮಾಜದ ಅಂಕು ಡೊಂಕುಗಳಿಗೆ ಕೈಗನ್ನಡಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂದು (ಜನೇವರಿ ೨೯, ಬುಧವಾರ) “ಭಾರತೀಯ ವೃತ್ತಪತ್ರಿಕೆಯ ದಿನದ ಪ್ರಯುಕ್ತ ಈ ವಿಶೇಷ ಲೇಖನ

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ

ಉದಯರಶ್ಮಿ ದಿನಪತ್ರಿಕೆ

ಡಿ.ವ್ಹಿ.ಗುಂಡಪ್ಪ ಅವರು, “ಪತ್ರಿಕೋದ್ಯಮವು ಜನರನ್ನು ಪ್ರಬುದ್ಧರನ್ನಾಗಿ ಮಾಡಲು ಮತ್ತು ಸಮಾಜಕ್ಕೆ ಸರಿಯದ ದಾರಿಯನ್ನು ತೋರುವ ಏಕೈಕ ಮಾಧ್ಯಮವಾಗಿದೆ” ಎಂದು ಹೇಳಿದ್ದಾರೆ. ಸಮಾಜದ ಏಳ್ಗೆಗೆ ಮತ್ತು ಸಮಾಜದ ಅಂಕು ಡೊಂಕುಗಳ ಕೈಗನ್ನಡಿಯಾಗಿ ಸಮಾಜದ ಆಗುಹೋಗುಗಳ ಮೇಲೆ ಬೆಳಕು ಚೆಲ್ಲುತ್ತವೆ. ಅದರಲ್ಲೂ ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯ ಪೂರ್ವದಲ್ಲಿ, ಸಂಗ್ರಾಮದಲ್ಲಿ ಮತ್ತು ಕರ್ನಾಟಕ ಏಕೀಕರಣದಂತಹ ಸಂದರ್ಭದಲ್ಲಿ ನಾಗರೀಕತೆಯ ಬೆಳವಣಿಗೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದೆ. ನಮಗೆ ಜಗತ್ತಿನ ಎಲ್ಲ ಅಗು-ಹೋಗುಗಳ ಕುರಿತು ತಿಳಿಸಿಕೊಡುವುದೇ ವೃತ್ತಪತ್ರಿಕೆ. ಇಂದಿನ ಡಿಜಿಟಲ್ ಯುಗದಲ್ಲಿ ವೃತ್ತಪತ್ರಿಕೆಯು ಇ-ಪೇಪರ್, ಸಾಮಾಜಿಕ ಜಾಲತಾಣ ಮತ್ತು ವಿವಿಧ ವೆಬಸೈಟಗಳ ಮೂಲಕವೂ ತಮ್ಮ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುತ್ತಾ ಅತ್ಯಂತ ವಿಶ್ವಾಸಾರ್ಹ ಸಂಪರ್ಕ-ಸಂವಹನ ಮಾಧ್ಯಮವಾಗಿ ಪರಿಣಮಿಸಿದೆ.


ಕನ್ನಡ ಭಾಷೆ, ಸಾಹಿತ್ಯ ಮತ್ತು ಕರುನಾಡಿನ ಸುದ್ದಿ ಪ್ರಕಟಿಸುವ ಪ್ರಥಮ ಪತ್ರಿಕೆ
ಜರ್ಮನ್ ಮಿಷನರಿ ರೆವರೆಂಡ್ ಹರ್ಮನ್ ಮ್ಯಾಗ್ಲಿಂಗ್ ಎಂಬುವವರಿAದ ಸ್ಥಾಪಿತವಾದ ಕನ್ನಡ ಭಾಷೆಯ ಮೊದಲ ಮುದ್ರಿತ “ಮಂಗಳೂರು ಸಮಾಚಾರ” ಪತ್ರಿಕೆಯು ೧೮೪೩ ರ ಜುಲೈ ೧ ರಂದು ಪ್ರಕಟಗೊಂಡಿತು. ಈ ಪತ್ರಿಕೆಯ ಐತಿಹಾಸಿಕ ದಿನದ ಸವಿ ನೆನಪಿಗಾಗಿ ಪ್ರತಿ ವರ್ಷ ಜುಲೈ ೧ ರಂದು ರಾಜ್ಯದಲ್ಲಿ ಪತ್ರಿಕೋದ್ಯಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಾರಂಭದಲ್ಲಿ ಇದೊಂದು ಪಾಕ್ಷಿಕ ಪತ್ರಿಕೆಯಾಗಿ ಪ್ರಕಟಗೊಂಡು ನಂತರ ಕನ್ನಡ ಭಾಷೆ, ಸಾಹಿತ್ಯ ಮತ್ತು ರಾಜ್ಯದ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿತು. ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲ ಕಾಲಕ್ಕೆ ತಕ್ಕಂತೆ ಆಗುತ್ತಿರುವ ಬದಲಾದ ಮುದ್ರಣ ಮಾಧ್ಯಮದ ಕಾರ್ಯವೈಖರಿ, ಪತ್ರಿಕೋದ್ಯಮದ ಪ್ರಾಮುಖ್ಯತೆ ಮತ್ತು ಪತ್ರಕರ್ತರ ಅಮೂಲ್ಯವಾದ ಕೊಡುಗೆಯನ್ನು ಜನ ಸಾಮಾನ್ಯರಿಗೆ ತಿಳಿಸಬೇಕೆಂಬ ಮಹೋನ್ನತವಾದ ಉದ್ದೇಶದಿಂದ ಕರ್ನಾಟಕದಲ್ಲಿ “ಪತ್ರಿಕಾ ದಿನಾಚರಣೆ” ಯನ್ನು ಆಚರಿಸಲಾಗುತ್ತದೆ. ಗೌರವಿಸುವ ಮತ್ತು ಸ್ಮರಿಸುವ ಸುದಿನವಾಗಿದೆ, ಡಿಜಿಟಲ್ ಯುಗದಲ್ಲಿ ನಮ್ಮ ಸಾಂಪ್ರದಾಯಿಕ ಪತ್ರಿಕೋದ್ಯಮದ ಕುರಿತು ಓದುಗರಲ್ಲಿ ಉತ್ತೇಜಿಸುವುದು ಮತ್ತು ಅರಿವು ಮೂಡಿಸುವದು ಈ ದಿನದ ಆಚರಣೆಯ ಪ್ರಮುಖ ಉದ್ಧೇಶವಾಗಿದೆ. ಅದಕ್ಕಾಗಿ ಹರ್ಮನ್ ಮೊಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೂ ಕರೆಯಲಾಗುತ್ತದೆ.
ಸಾಮಾಜಿಕ ಪರಿವರ್ತನೆ ತರುವಲ್ಲಿ ಪತ್ರಿಕೆಗಳ ಪಾತ್ರ ಅಮೂಲ್ಯವಾದುದು
ಪತ್ರಿಕೋದ್ಯಮದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಸಮಾಜದ ಅಂಕು ಡೊಖುಗಳನ್ನು ತಿದ್ದುವಲ್ಲಿ ಕನ್ನಡ ನಾಡಿನ ಪತ್ರಿಕೆಗಳು ಅಮೂಲ್ಯವಾದ ಕೊಡುಗೆ ನೀಡಿವೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಜನಪರ ಕಾರ್ಯಯೋಜನೆಗಳನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುದ್ರಣ ಮಾಧ್ಯಮದ ಮಹತ್ವವನ್ನು ಸಾರಲು ಪತ್ರಿಕೆಗಳು ತಮ್ಮ ಮೌಲ್ವಿಕ ಸುದ್ದಿ ಮತ್ತು ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರುವಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿವೆ. ಅದರ ಜತೆಗೆ ಪತ್ರಕರ್ತರ ಹಕ್ಕುಗಳನ್ನು ರಕ್ಷಿಸುವಲ್ಲಿ ಈ ದಿನದ ಜಾಗೃತಿ ಅಗತ್ಯವಾಗಿದೆ. ಪ್ರತಿಯೊಬ್ಬರ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಾ, ಸಾರ್ವಜನಿಕರಿಗೆ ನಿಖರವಾದ ಮಾಹಿತಿಯನ್ನು ತಲುಪಿಸುವಲ್ಲಿ ಪತ್ರಕರ್ತರ ಅಮೂಲ್ಯವಾದ ಪಾತ್ರವನ್ನು ಗೌರವಿಸುವುದು ಈ ದಿನದ ಆಚರಣೆಯ ಧ್ಯೇಯೋದ್ಧೇಶವಾಗಿದೆ.
ಪತ್ರಿಕಾ ದಿನದ ಮಹತ್ವ


ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ವಿಚಾರಗಳು ಮತ್ತು ಪ್ರಚಲಿತ ಘಟನೆಗಳು ಇಡೀ ಜಗತ್ತಿನಲ್ಲಿ ನಡೆದು ಹೋದ ಸನ್ನಿವೇಶ, ಘಟನೆ ಮತ್ತು ಸಂದರ್ಭಗಳನ್ನು ತಿಳಿಸಿಕೊಡುತ್ತವೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಪತ್ರಿಕೆಗಳನ್ನು ದೈನಂದಿನವಾಗಿ ಓದುವುದರಿಂದ ಓದುವ ಹವ್ಯಾಸ ಮತ್ತು ಸಂವಹನ ಕೌಶಲ್ಯ ವೃದ್ಧಿಸಿ ಗ್ರಹಿಕಾಶಕ್ತಿಯನ್ನು ಸುಧಾರಿಸುತ್ತವೆ. ಎಲ್ಲ ರಂಗಗಳ ಬಗ್ಗೆ ವಿಶೇಷ ಅಂಕಣಗಳ ಮೂಲಕ ವಿಶ್ಲೇಷಣಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುತ್ತವೆ. ವೃತ್ತಪತ್ರಿಕೆಗಳು ಸಾರ್ವಜನಿಕ ಸಂವಾದವನ್ನು ಏರ್ಪಡಿಸಿ ಜನರಿಗೆ ಹೊಸ ಸಂಗತಿ, ವಿಷಯಗಳು ಮತ್ತು ಚರ್ಚೆಗಳ ಮೇಲೆ ಬೆಳಕು ಚೆಲ್ಲುತ್ತಿವೆ.
ಕೊನೆಯ ನುಡಿ
ಜೇಮ್ಸ್ ಎಲ್ಲೀಸ್ ಅವರು, “ವೃತ್ತಪತ್ರಿಕೆಗಳು ಈ ಜಗತ್ತಿನ ಕನ್ನಡಿ ಇದ್ದಂತೆ” ಎಂದು ಹೇಳಿದ್ದಾರೆ.ಆದ್ದರಿಂದ ಸಮಾಜವನ್ನು ಜಾಗೃತಗೊಳಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಗಣನೀಯ ಕೊಡುಗೆ ನೀಡುತ್ತಿರುವ ವೃತ್ತಪತ್ರಿಕೆ ದಿನದಂದು ಪರ್ತಕರ್ತರ ಕಾರ್ಯವನ್ನು ಗೌರವಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿ, ಯುವಕರು ಮತ್ತು ಓದುಗರಲ್ಲಿ ವೃತ್ತಪತ್ರಿಕೆಯ ಪಾತ್ರ, ಮಹತ್ವ, ಪರ್ತಕರ್ತರ ಸೇವೆಯನ್ನು ಜನರಿಗೆ ಜನರಿಗೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ. ಅದಕ್ಕಂತಲೇ ಪತ್ರಿಕೆಗಳಿಗೆ ‘ಜ್ಞಾನದ ಕಣಜ’ ಮತ್ತು ‘ಸತ್ಯದ ಪ್ರತಿಬಿಂಬ’ ಎಂತಲೂ ಕರೆಯಬಹುದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹12.33 ಕೋಟಿ ಕಬ್ಬು ತೂಕ ವಂಚನೆ

ಶಾಸಕ ಕಟಕಧೋಂಡ ಗೆ ಸಚಿವ ಸ್ಥಾನ ನೀಡಲು ಆಗ್ರಹ

ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಲು ಆಗ್ರಹ

ಹೆಣ್ಣುಮಕ್ಕಳಿಗೆ ತೊಂದರೆ ನೀಡುವ ಪುಂಡರ ಮೇಲೆ ಕ್ರಮಕ್ಕೆ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ನಂದಿ ಸಕ್ಕರೆ ಕಾರ್ಖಾನೆಯಲ್ಲಿ ₹12.33 ಕೋಟಿ ಕಬ್ಬು ತೂಕ ವಂಚನೆ
    In (ರಾಜ್ಯ ) ಜಿಲ್ಲೆ
  • ಶಾಸಕ ಕಟಕಧೋಂಡ ಗೆ ಸಚಿವ ಸ್ಥಾನ ನೀಡಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಹೆಣ್ಣುಮಕ್ಕಳಿಗೆ ತೊಂದರೆ ನೀಡುವ ಪುಂಡರ ಮೇಲೆ ಕ್ರಮಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಸರ್ಕಾರ ಕೂಡಲೇ ಶಿಕ್ಷಣ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಲಿ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ಶಾಸಕ ಮನಗೂಳಿ
    In (ರಾಜ್ಯ ) ಜಿಲ್ಲೆ
  • ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿ
    In (ರಾಜ್ಯ ) ಜಿಲ್ಲೆ
  • ಕಿತ್ತೂರ ರಾಣಿ ಚನ್ನಮ್ಮ ವಿವಿ ಸ್ನಾತಕೋತ್ತರ ಕೋರ್ಸ್ಗಳಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಾಸಕ ಶಿವಾನಂದರಿಗೆ ಅಧಿಕಾರಿಗಳಿಂದ ಗಣತಿ ನಮೂನೆ ವಿತರಣೆ
    In (ರಾಜ್ಯ ) ಜಿಲ್ಲೆ
  • ಸ್ನಾತಕ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.