Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ನೂತನ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಕಟ್ಟಡವನ್ನು ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಇಂಜನೀಯರ್ ನೀಲಕಂಠಯ್ಯ ಹಾಗೂ ತಂಡ ಪರಿವೀಕ್ಷಣೆ ನಡೆಸಿದರು.ತಾಲ್ಲೂಕಿನ ಇಂಗಳಗಿಕ್ರಾಸ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕೈಗಾರಿಕಾ ತರಬೇತಿ ಕೇಂದ್ರದ ಕಟ್ಟಡಕ್ಕೆ ಮಂಗಳವಾರ ಸಿಬ್ಬಂದಿ ಹಾಗೂ ಗುತ್ತಿಗೆದಾರರೊಂದಿಗೆ ಆಗಮಿಸಿದ ಪರಿವೀಕ್ಷಣೆ ತಂಡ ೧೦೭೦ ಚ.ಮೀ ವಿಸ್ತಿರ್ಣ ಹೊಂದಿರುವ ೨.೩೦ಕೋಟಿ ಅಂದಾಜು ಮೊತ್ತದ ಕಟ್ಟಡದ ತಳಪಾಯ, ಪ್ರತಿಕೋಣೆ, ಶೌಚಾಲಯ ಸಹಿತ ನಿರ್ಮಾಣದಲ್ಲಿ ಉಪಯೋಗಿಸಿದ ಇಟ್ಟಿಗೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಎಲ್ಲ ಕೋಠಡಿಗಳ ಸಹಿತ ಕಟ್ಟಡವನ್ನು ವಿಕ್ಷೀಸಿ ಗುಣಮಟ್ಟದ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಕಿಟಕಿಗಳಿಗೆ ಅಳವಡಿಸಬೇಕಾದ ಮೆಶ್, ಮೇಲಿನ ಪ್ಯಾರಾಪೂಟ್, ಕಾಲಂಗಳಿಗೆ ಕಾಂಕ್ರೀಟ್ ತುಂಬುವುದು, ಹೆಡ್‌ರೂಮ್ ಮತ್ತು ಸುತ್ತಲಿನ ಕಂಪೌಂಡ್, ಗೇಟ್ ಅಳವಡಿಕೆಗಳು ಬಾಕಿ ಇದ್ದು ಅವುಗಳ ಅಗತ್ಯತೆಗಳಿಗೆ ಹೆಚ್ಚುವರಿ ಅನುದಾನ ಅವಶ್ಯಕತೆಯ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.ಗುತ್ತಿಗೆದಾರ ಸೋಮನಗೌಡ ಕರೇಕಲ್, ಪ್ರಾಚಾರ್ಯೆ ಶಗುಪ್ತಾ ಪರ್ವಿನ್ ಮಲ್ಲಾಡಕರ, ಎಂ.ಎಂ.ಚಟ್ಟೇರ, ಮಲ್ಲಿಕಾರ್ಜುನ ದೇವೂರ, ಬಸವರಾಜ ಹುಣಶ್ಯಾಳ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಹುಣಶ್ಯಾಳ ಗ್ರಾಮದಿಂದ ಕಲಕೇರಿ ಕ್ರಾಸ್‌ವರೆಗೆ ಸಂಪೂರ್ಣ ಹಾಳಾದ ರಸ್ತೆಯನ್ನು ಗ್ರಾಮಸ್ಥರೇ ಹಣ ಸಂಗ್ರಹಿಸುವುದರ ಮೂಲಕ ತಾವೇ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ಗ್ರಾಮಸ್ಥರು ಹಲವು ಬಾರಿ ಪತ್ರಿಕೆಯ ಮೂಲಕ ಗ್ರಾಮದ ರಸ್ತೆ ನಿರ್ಮಾಣದ ಕುರಿತು ಶಾಸಕರಿಗೆ ಮನವಿ ಮಾಡಿದ್ದರೂ ಶಾಸಕರು ಸ್ಪಂದಿಸದ ಕಾರಣ ಸ್ವತಃ ತಾವೇ ಪ್ರತಿ ಮನೆಗೆ ೫೦೦ ರೂಗಳ ಹಣ ಸಂಗ್ರಹಿಸುವುದರ ಮೂಲಕ ಗ್ರಾಮದಿಂದ ಕಲಕೇರಿ ಕ್ರಾಸ್‌ವರೆಗಿನ ಅರ್ಧ ಕಿ.ಮೀ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಶಾಂತಗೌಡ ಕೋಟಿಖಾನಿ ಮಾತನಾಡಿ, ರಸ್ತೆ ಅಭಿವೃದ್ಧಿ ಕುರಿತು ಶಾಸಕರಲ್ಲಿ ಮೊಬೈಲ್ ಮೂಲಕ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಶಾಸಕರ ನಡೆ ನಮಗೆ ಬೇಸರ ತಂದಿದೆ. ಅವರ ಬೇಜವಾಬ್ದಾರಿ ಹೇಳಿಕೆಯಿಂದ ಬೇಸತ್ತು ಕೊನೆಗೆ ಗ್ರಾಮಸ್ಥರ ನೆರವು ಹಾಗೂ ಸಹಕಾರದೊಂದಿಗೆ ರಸ್ತೆ ನಿರ್ಮಿಸಲಾಗುತ್ತಿದೆ. ಈ ಕಾರ್ಯದಲ್ಲಿ ಕಲಕೇರಿ ಗ್ರಾಮದ ಶಿವರಾಯ ಮೋಪಗಾರ ಡಂಪರ್ ನೀಡಿ ಸಹಕಾರ ನೀಡಿದ್ದಾರೆ. ಎಂದರು.ಈ ರಸ್ತೆಯ ಹೊರತಾಗಿ ಗ್ರಾಮದಿಂದ ಕಾಲುವೆಯವರೆಗಿನ ರಸ್ತೆಯು ಸಹ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಹಲವು ವರ್ಷಗಳಿಂದ ಪಟ್ಟಣದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿ, ಇದೀಗ ನೂತನ ಮತ್ತು ವಿಶಾಲ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಸೋಮವಾರ ನಡೆದ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ವ್ಯಾಪಾರಸ್ಥರು, ರೈತರು ಹಾಗೂ ಸ್ಥಳೀಯ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು.ಹೊಸ ಕಟ್ಟಡದ ಉದ್ಘಾಟನೆನಿರ್ದೇಶಕರಾದ ಜಗದೀಶ್ ಕ್ಷತ್ರಿನೆರವೇರಿಸಿದರು. ಅವರು ಮಾತನಾಡಿ, “ಸಿದ್ಧಸಿರಿ ಬ್ಯಾಂಕ್ ಹಲವು ವರ್ಷಗಳಿಂದ ಚಡಚಣದ ಆರ್ಥಿಕ ಬೆಳವಣಿಗೆಗೆ ದೊಡ್ಡ ಬೆಂಬಲವಾಗಿದೆ. ಈಗ ಹೊಸ ಕಟ್ಟಡದ ಮೂಲಕ ಗ್ರಾಹಕರಿಗೆ ಇನ್ನಷ್ಟು ಉತ್ತಮ, ಸುಗಮ ಮತ್ತು ಆಧುನಿಕ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ,” ಎಂದು ಹೇಳಿದರು.ವಲಯ ಅಧಿಕಾರಿ ಚಂದ್ರಕಾಂತ ಗಿಣ್ಣಿ ಅವರು ಮಾತನಾಡಿ, “ಹಳೆಯ ಕಟ್ಟಡದಲ್ಲಿ ಜಾಗದ ಅಭಾವ ಮತ್ತು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು ಮನಗಂಡು ನಾವು ಈ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ಇಲ್ಲಿ ಡಿಜಿಟಲ್ ಬ್ಯಾಂಕಿಂಗ್, ಗೋಲ್ಡ್ ಲೋನ್ ಸೌಲಭ್ಯ, ಹೆಚ್ಚಿನ ಕೌಂಟರ್‌ಗಳು ಹಾಗೂ ಸುಧಾರಿತ ಗ್ರಾಹಕ ಸೇವಾ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ,” ಎಂದು ವಿವರಿಸಿದರು.ಸ್ಥಳೀಯ ವ್ಯಾಪಾರಸ್ಥರು…

Read More

ವಿಧಾನಮಂಡಲದ ಅಧಿವೇಶನದಲ್ಲಿ ಮತ್ತೊಮ್ಮೆ ಧ್ವನಿ ಏತ್ತಿದ ಎಂಎಲ್ಸಿ ಸುನೀಲಗೌಡ ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಥಳೀಯ ಸಂಸ್ಥೆಗಳಾದ ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಿಸುವಂತೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮತ್ತೊಮ್ಮೆ ವಿಧಾನಮಂಡಲದ ಅಧಿವೇಶನದಲ್ಲಿ ಧ್ವನಿ ಏತ್ತಿದ್ದಾರೆ.ಮಂಗಳವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ ಕಲಾಪದಲ್ಲಿ ಶಾಸಕರು ಈ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ, ಗೌರವಧನ ಹೆಚ್ಚಳ ಕುರಿತು ಇತರ ರಾಜ್ಯಗಳ ಚುನಾಯಿತ ಪ್ರತಿನಿಧಿಗಳ ಗೌರವಧನ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಗೌರವಧನ ಹೆಚ್ಚಳ ಮಾಡುವ ಕುರಿತು ಇಲಾಖೆಯ ನಿರ್ದೇಶಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ವಿಚಾರ ಪರಿಶೀಲನೆಯಲ್ಲಿದ್ದು, ಆರ್ಥಿಕ ಇಲಾಖೆಯ ಸಹಮತಿ ದೊರೆತ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತ ಉತ್ತರ ನೀಡಿದ್ದರು.ಈ ಕುರಿತು ಮತ್ತೆ ಪ್ರಸ್ತಾಪಿಸಿದ ಸುನೀಲಗೌಡ ಪಾಟೀಲ ಅವರು, ಕಳೆದ ಎರಡು ಅಧಿವೇಶನಗಳಲ್ಲಿ ಈ ವಿಚಾರವನ್ನು…

Read More

ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ನೆಲ್ಸನ್ ಮಂಡೇಲಾ ಅವರು, ಜನರಿಗೆ ಅವರ ಮಾನವ ಹಕ್ಕುಗಳನ್ನು ನಿರಾಕರಿಸುವುದು ಅವರ ಮಾನವೀಯತೆಯನ್ನು ಸವಾಲು ಮಾಡಿದಂತೆ” ಎಂದು ಹೇಳಿದ್ದಾರೆ. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಗಳಿಗೂ ಜೀವಿಸುವ ಹಕ್ಕಿದೆ. ಸ್ವತಂತ್ರವಾಗಿ ಬದುಕುವ, ವಾಸಿಸುವ, ಆಚರಿಸುವ, ಮಾತನಾಡುವ ಹಕ್ಕಿದೆ. ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಮಾನವನ ಹಕ್ಕುಗಳು ಸಂರಕ್ಷಿಸಲ್ಪಡಬೇಕು. ಅವು ಯಾರಿಂದಲೂ ಹತ್ತಿಕ್ಕುವ ಅಥವಾ ದಮನಿಸುವಂತಾಗಬಾರದು, ಮಾನವ ಹಕ್ಕುಗಳು ಎಂದರೆ ಜಾತಿ, ಮತ, ಪಂಥ, ಪಂಗಡ, ಜನಾಂಗ, ಲಿಂಗ, ರಾಷ್ಟ್ರೀಯತೆ, ಭಾಷೆ, ಧರ್ಮ ಅಥವಾ ಯಾವುದೇ ಇತರ ಹಿನ್ನೆಲೆಗಳನ್ನು ಪರಿಗಣಿಸದೇ ಎಲ್ಲಾ ಮಾನವರಿಗೆ ಸಹಜವಾಗಿ ದೊರೆಯುವ ಮೂಲಭೂತ ಹಕ್ಕುಗಳು, ಬದುಕುವ ಹಕ್ಕು, ಸಮಾನತೆ, ಸ್ವಾತಂತ್ರö್ಯ, ಅವಕಾಶ, ಶಿಕ್ಷಣ, ಆರೋಗ್ಯ ಮತ್ತು ಘನತೆ-ಗೌರವದ ಹಕ್ಕುಗಳನ್ನು ಒಳಗೊಂಡಿದೆ ಎಂದು ಹೇಳಬಹುದು. ಪ್ರತಿಯೊಬ್ಬ ತನ್ನ ಘನತೆ-ಗೌರವವನ್ನು ರಕ್ಷಿಸಿಕೊಳ್ಳಲು ಜವಾಬ್ದಾರನಾಗಿರುತ್ತಾನೆ. ಹೀಗೆ ಮನುಷ್ಯನಿಗೆ ಜೀವನ ನಿರ್ವಹಣೆಗೆ ಕನಿಷ್ಠ ಅಗತ್ಯತೆಗಳು ಸಿಗಬೇಕು ಮತ್ತು ಅವರ ಹಕ್ಕುಗಳಿಗೆ ಗೌರವ ನೀಡಬೇಕೆಂಬ ಮಹೋನ್ನತವಾದ ಉದ್ಧೇಶದಿಂದ ಡಿಸೆಂಬರ…

Read More

” ಅಶೋಕ್ ಹಾಜರಿದ್ದರೂ ಡೋಂಟ್ ಕೇರ್ | ನನಗೆ ಉಪ ಸಭಾಪತಿ ಪಕ್ಕದ ‘ಕುರ್ಚಿ’ ನೀಡಿ | ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ ಬೆಳಗಾವಿ: ನಾನು ನಿಜವಾದ ವಿರೋಧ ಪಕ್ಷದ ನಾಯಕ, ನನಗೆ ವಿಧಾನಸಭೆಯಲ್ಲಿ ಉಪ ಸಭಾಪತಿಯ ಪಕ್ಕದಲ್ಲಿನ ಕುರ್ಚಿ ನೀಡಿ ಎಂದು ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಅವರು, ತಮಗೆ ಮತ್ತು ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿರುವ ಇತರ ಇಬ್ಬರು ಶಾಸಕರಿಗೆ ಅವರ ಹಿರಿತನವನ್ನು ಪರಿಗಣಿಸಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ಯತ್ನಾಳ್ ಸಭಾಪತಿಗೆ ಮನವಿ ಮಾಡಿದರು.ಈ ವರ್ಷದ ಆರಂಭದಲ್ಲಿ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟ ನಂತರ ಯತ್ನಾಳ್, ಎಸ್ ಟಿ ಸೋಮಶೇಖರ್ ಮತ್ತು ಎ ಶಿವರಾಮ್ ಹೆಬ್ಬಾರ್ ಅವರನ್ನು ಹಿಂದಿನ ಬೆಂಚ್‌ಗಳಿಗೆ ವರ್ಗಾಯಿಸಲಾಗಿದೆ. ಹಿರಿಯ ಶಾಸಕರನ್ನು ಹಿಂದಿನ ಬೆಂಚುಗಳಲ್ಲಿ ಕೂರಿಸುವ ಮೂಲಕ ಅವಮಾನಿಸಲಾಗಿದೆ. ಹಿಂದಿನ ಅಧಿವೇಶನದಲ್ಲೂ ಹೀಗೆ ಮಾಡಲಾಗಿತ್ತು.ನಾವು ಐದರಿಂದ ಆರು ಬಾರಿ ಆಯ್ಕೆಯಾಗಿದ್ದೇವೆ, ನಮ್ಮನ್ನು ಮುಂದಿನ ಸಾಲಿನಲ್ಲಿ ಕೂರಿಸಲು ವ್ಯವಸ್ಥೆ ಮಾಡಬೇಕು ಎಂದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವೀರಶೈವ ಲಿಂಗಾಯತ ಸಮಾಜ ಮತ್ತು ಮಠಾಧೀಶರು ಸರ್ವರನ್ನು ಒಗ್ಗೂಡಿಸಿಕೊಂಡು ಸರ್ವ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಾ ಸಾಗುತ್ತಿದ್ದಾರೆ ಎಂದು ಜವಳಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್ ಪಾಟೀಲ್ ಹೇಳಿದರು.ಅವರು ಶನಿವಾರ ಸಾಯಂಕಾಲ ಇಂಡಿ ಪಟ್ಟಣದ ಹಳೆ ಸಾಲೋಟಗಿ ರಸ್ತೆಯಲ್ಲಿ ಶಿರಶ್ಯಾಡ ಸಂಸ್ಥಾನ ಹಿರೇಮಠದ ಇಂಡಿ ಶಾಖಾಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಮತ್ತು ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಮಹಾದ್ವಾರದ ಪ್ರಥಮ ಹೊಸ್ತಿಲ ಪೂಜಾ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವೀರಶೈವ ಮಠಾಧೀಶರು ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವರಿಗೂ ಸಮಾನತೆಯಿಂದ ಕಾಣುತ್ತಾರೆ. ಹೀಗಾಗಿ ವೀರಶೈವ ಧರ್ಮ ಅತಿ ಶ್ರೇಷ್ಠ ಧರ್ಮ ಎಂದರು.ಶಿರಶ್ಯಾಡ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಇಂದಿನ ನಗರದಲ್ಲಿ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಹಾಗೂ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ನಾನು ಈಗಾಗಲೇ ಈ ಕಾರ್ಯಕ್ಕೆ ವೈಯಕ್ತಿಕವಾಗಿ 5…

Read More

ಗೃಹ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ವಿನಯಕುಮಾರ ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿದ ಗುರಿಗಿಂತ ಅತಿ ಹೆಚ್ಚು ಸಶಸ್ತ್ರ ಪಡೆಗಳ ಧ್ವಜ ನಿಧಿ ಸಂಗ್ರಹ ಮಾಡಿದ ಹೆಗ್ಗಳಿಕೆಗೆ ವಿಜಯಪುರ ಜಿಲ್ಲೆಯು ಪ್ರಶಸ್ತಿಗೆ ಭಾಜನವಾಗಿದ್ದು, ಸಶಸ್ತ್ರ ಪಡೆಗಳ ದ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಾಜಭವನದಲ್ಲಿ ಡಿಸೆಂಬರ್ ೭ರಂದು ನಡೆದ ಸಮಾರಂಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರೂ ಆದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರೂ ಆದ ವಿನಯಕುಮಾರ ಪಾಟೀಲ ಅವರು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ಕಳೆದ ವರ್ಷವೂ ಕೂಡಾ ವಿಜಯಪುರ ಜಿಲ್ಲೆಗೆ ಪ್ರಶಸ್ತಿಗೆ ಭಾಜನವಾಗಿತ್ತು. ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಕೆ.ವಿ.ಶರತ್‌ಚಂದ್ರ, ಏರ್ ವೈಸ್ ಮಾಶಲ್ ಕೆ.ಎನ್. ಸಂತೋಷ (ವಿಎಸ್‌ಎಂ ನಿವೃತ್ತ), ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ನಿರ್ದೇಶಕರಾದ ಫ್ಲೆöÊಟ್ ಲೆಫ್ಟಿನಂಟ್ ಎಂ.ಎಸ್.ಲೋಕಾಕ್ಷ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಹರಣ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಪಟ್ಟಣ ಪಂಚಾಯಿತಿಯಿಂದ ವಿಶೇಷ ತಂಡ ರಚಿಸಿ ಸಾಗಿಸಲಾಯಿತು.ರಾಜ್ಯದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಮೇಲಿನ ನಾಯಿಗಳ ದಾಳಿ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮೂರು ದಿನಗಳಿಂದ ಪಟ್ಟಣ ಪಂಚಾಯಿತಿ ವಿಶೇಷ ಕಾರ್ಯಾಚರಣೆ ಕೈಗೊಂಡು ೫೦ ಕ್ಕೂ ಹೆಚ್ಚು ನಾಯಿಗಳನ್ನು ಹಿಡಿಯಲಾಗಿದೆ.ಸರ್ವೊಚ್ಚ ನ್ಯಾಯಾಲಯದ ಮಾರ್ಗದರ್ಶನ ಹಾಗೂ ಪ್ರಾಣಿ ನಿಯಂತ್ರಣ ಮಂಡಳಿ ನಿಯಮಗಳು ೨೦೨೩ರ ಅನ್ವಯ ಬೀದಿ ನಾಯಿಗಳ ನಿರ್ವಹಣೆಗಾಗಿ ಈ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆಫ್ರೋಜ ಅಹ್ಮದ ಪಟೇಲ ಮಾಹಿತಿ ನೀಡಿ, ಉತ್ತರಪ್ರದೇಶದ ತರಬೇತಿ ಪಡೆದ ತಂಡಗಳು ಜನನಿಬಿಡ ಪ್ರದೇಶದ ಶ್ವಾನಗಳನ್ನು ಹಿಡಿದು ಎ.ಬಿ.ಸಿ ಕೇಂದ್ರಕ್ಕೆ ಸಾಗಿಸಿ ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ ನಿರೋಧಕ ಲಸಿಕೆ ನೀಡಿ ಮೂರು ದಿನಗಳವರೆಗೆ ಆರೈಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಮುಗಿದು ಚೇತರಿಸಿಕೊಂಡ ನಾಯಿಗಳಿಗೆ ಗುರುತನ್ನು ಮಾಡಿ ಮರಳಿ…

Read More

– ಬಸವರಾಜ್ ಹೂಗಾರನಿಕಟ ಪೂರ್ವ ಜಿಲ್ಲಾಧ್ಯಕ್ಷರುಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ,ವಿಜಯಪುರ ಜಿಲ್ಲೆಮೊ. 9740207097 ಉದಯರಶ್ಮಿ ದಿನಪತ್ರಿಕೆ ಉತ್ತರ ಕರ್ನಾಟಕದ ಕನಸು–ಕಷ್ಟ–ಕಾಳಜಿಗೆ ಬೆಳಗಾವಿಯಲ್ಲಿ ಜರುಗುವ ಚಳಿಗಾಲ ಅಧಿವೇಶನ ಉತ್ತರ ಆಗಬೇಕು ಗಟ್ಟಿಯಾದ ತೀರ್ಮಾನಗಳಿಗೆ!”” ಉತ್ತರ ಕರ್ನಾಟಕ “ಇದು ಕೇವಲ ನಕ್ಷೆಯ ಮೇಲಿನ ಭಾಗವಲ್ಲ; ಇದು ಶ್ರಮದ ನೆಲ, ಸತ್ಯದ ನೆಲ, ಹೋರಾಟದ ನೆಲ.ಈ ನೆಲದ ಜನರ ಪ್ರತಿಯೊಂದು ಉಸಿರಿನಲ್ಲೂ ಬದುಕಿನ ಜಿಜ್ಞಾಸೆ ಮತ್ತು ಗಟ್ಟಿತನ ಇರುತ್ತದೆ. ಆದರೆ ಈ ಪ್ರದೇಶದ ಸಮಸ್ಯೆಗಳು ವರ್ಷಗಳಿಂದ ಅದೇ ಜಾಗದಲ್ಲೇ ನಿಂತಿರುವುದು ನೋವುಂಟುಮಾಡುವ ಸತ್ಯ.ಬೆಳಗಾವಿಯಲ್ಲಿ ಜರುಗಲಿರುವ ಈ ವರ್ಷದ ಚಳಿಗಾಲ ಅಧಿವೇಶನ, ಕೇವಲ ರಾಜಕೀಯ ಕಾಟಾಚಾರ, ಗದ್ದಲ, ಆರೋಪ–ಪ್ರತ್ಯಾರೋಪಗಳಿಗೆ ಸೀಮಿತವಾಗದಂತೆ ಉತ್ತರ ಕರ್ನಾಟಕದ ನಿಜವಾದ ನೋವು–ಬೇಡಿಕೆಗಳಿಗೆ ಉತ್ತರ ನೀಡುವ ಅಧಿವೇಶನವಾಗಬೇಕು.ಶಾಲೆ–ಕಾಲೇಜುಗಳುಬೆಳಕಿನ ಮನೆಗೆ ಇನ್ನೂ ಬೆಳಕು ಬೇಕಿದೆಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹಲವು ಶಾಲೆಗಳು ಇಂದು ಕೂಡ ಮೂಲಸೌಕರ್ಯವಿಲ್ಲದೆ ನಿಂತಿವೆ. ಶಿಕ್ಷಕರ ಕೊರತೆ, ಪ್ರಯೋಗಾಲಯ–ಲೈಬ್ರರಿ–ಶೌಚಾಲಯಗಳ ಅಭಾವ, ನಗರ–ಗ್ರಾಮದ ಶಿಕ್ಷಣ ಅಂತರ—ಇವು ನಮ್ಮ ಮಕ್ಕಳ ಭವಿಷ್ಯಕ್ಕೆ ತಡೆಯಾಗಿವೆ.ಕಾಲೇಜುಗಳಲ್ಲಿಯೂ ಉದ್ಯೋಗಮುಖಿ ಕೋರ್ಸ್‌ಗಳ…

Read More