ಉದಯರಶ್ಮಿ ದಿನಪತ್ರಿಕೆ
ಚಡಚಣ: ಪೋಷಣ್ ಅಭಿಯಾನ ೨೦೨೫ರ ಅಂಗವಾಗಿ ಚಡಚಣ ಪಟ್ಟಣದ ಅಂಗನವಾಡಿ ಕೇಂದ್ರ ೧೦ ರ ಮರಡಿಯ ಶ್ರೀ ಮಹಾದೇವನ ದೇವಸ್ಥಾನದಲ್ಲಿ ಮಂಗಳವಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಶ್ರೀಮತಿ ಸವಿತಾ ಮಲ್ಲಿಕಾರ್ಜುನ ಧೋತ್ರೆ ಮತ್ತು ಅಂಗನವಾಡಿ ಮೇಲ್ವಿಚಾರಕಿ ಸುಮಿತ್ರಾ ಜತ್ತಿ ಮತ್ತು ಮಹಿಳಾ ಮತ್ತು ಶಿಶು ಅಭೀವೃದ್ಧಿ ಇಲಾಖೆಯ ಸಿಬ್ಬಂಧಿಗಳಾದ ವಿ.ಆಯ್.ಕನಸೆ, ಪಿ.ಸಿ.ಇಳೆಗಾಂವ, ಎಸ್.ಎಸ್.ಸೌದಾಗರ ಅವರು ಜಂಟಿಯಾಗಿ ಜ್ಯೋತಿ ಬೇಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಸುಮಿತ್ರಾ ಜತ್ತಿ ಅವರು ಮಾತನಾಡಿ, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಚಿಕ್ಕಮಕ್ಕಳ ಪಾಲಕರಿಗೆ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.
“ಮೊದಲ ೧,೦೦೦ ದಿನಗಳ ಪೋಷಣೆ ಮಗುವಿನ ಆರೋಗ್ಯ ಮತ್ತು ಬುದ್ಧಿ ವಿಕಾಸಕ್ಕೆ ಅಡಿಪಾಯ” ಎಂದು ಸುಮಿತ್ರಾ ಜತ್ತಿ ತಿಳಿಸಿದರು.
ಸ್ಥಳೀಯ ಆರೋಗ್ಯ ಸಿಬ್ಬಂದಿ ಸಮತೋಲಿತ ಆಹಾರ ಪದ್ಧತಿ, ಹಣ್ಣು-ತರಕಾರಿ ಸೇವನೆ, ಶುದ್ಧ ನೀರಿನ ಅಗತ್ಯತೆ ಹಾಗೂ ಸ್ತನ್ಯಪಾನದ ಮಹತ್ವವನ್ನು ಗರ್ಭಿಣಿಯರು, ಹಾಲುಣಿಸುವ ತಾಯಂದಿರರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡರು.
ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಯಿತು, ತಾಯಂದಿರು ಪೌಷ್ಟಿಕ ಆಹಾರ ಸೇವನೆ ಹಾಗೂ ಆರೋಗ್ಯ ಕಾಳಜಿಯ ಪ್ರತಿಜ್ಞೆ ಕೈಗೊಂಡರು.
ಮಕ್ಕಳ ತೂಕ ಮಾಡಿ ಗರಿಷ್ಟ ಮಟ್ಟದಲ್ಲಿ ತೂಕಇರದೆ ಇರುವ ಮಕ್ಕಳ ತಾಯಂದಿರರಿಗೆ ತಿಳಿಹೇಳಲಾಯಿತು.
ಈ ಕಾರ್ಯಕ್ರಮವನ್ನು ಚಡಚಣದ ಅಂಗನವಾಡಿ ನಂ.೨,೮,೧೦,೧೨,೧೩,೧೪ ಅಂಗನವಾಡಿ ಕಾರ್ಯಕರ್ತೆಯರು ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅಂ.ಕಾ.ಎಸ್.ಎಸ್.ಕಟ್ಟಿಮನಿ,ಎ.ಆರ್.ಡೋಣಜಮಠ, ಎಸ್.ಈ.ಕಟಗೇರಿ,ಜಿ.ಎಸ್.ಮೋಗಲಿ, ಶೈನಾಜ ಬೀರಾದಾರ, ಪರ‍್ವತಿ ಬೇನಕನವರ, ಸೇರಿಗರ್ಭಿಣಿಯರಾದ ಸ್ವೇತಾ ಬಾಬಾನಗರ,ವೈಷ್ಣವಿ ಜಗತಾಪ್,ಅಶ್ವೀನಿ ಗಾಡಿವಡ್ಡರ,ವಿಜಯಲಕ್ಷ್ಮಿ ಗಾಡಿವಡ್ಡರ ಅವರಿಗೆ ಉಡಿತುಂಬಿ ಸೀಮಂತ ಕಾರ್ಯಕ್ರಮ ಮಾಡಲಾಯಿತು ಅಂಗನವಾಡಿ ಕೇಂದ್ರದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಸಮುದಾಯದ ಸಕ್ರಿಯ ಸಹಭಾಗಿತ್ವದಿಂದ ಅಪೌಷ್ಟಿಕತೆಯನ್ನು ತಡೆಗಟ್ಟುವಲ್ಲಿ ಚಡಚಣ ಮುನ್ನಡೆ ಸಾಧಿಸುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಶಾಲೆಯ ವಿದ್ಯಾರ್ಥಿಗಳು,ಪೋಷಕರು,ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತರು,ಗ್ರಾಮಸ್ಥರು ಇದ್ದರು.

