ಚಡಚಣ ಪಟ್ಟಣದಲ್ಲಿ ಹಾಡು ಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನುಗ್ಗಿದ ದರೋಡೆಕೋರರು | ಚಾಕು-ಬಂದೂಕು ಹಿಡಿದು ಮುಸುಕುಧಾರಿಗಳಿಂದ ದರೋಡೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಯಾಂಕ್ ದರೋಡೆ ಪ್ರಕರಣಗಳ ಸಾಲಿಗೆ ಇದೀಗ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಕೂಡ ಸೇರ್ಪಡೆಯಾಗಿದೆ. ಕೇವಲ ೨೦ ನಿಮಿಷಗಳ ಒಳಗಾಗಿ ದರೋಡೆ ನಡೆಸಿ ದರೋಡೆಕೋರರು ಪರಾರಿಯಾಗಿದ್ದಾರೆ.
ಜಿಲ್ಲೆಯ ಮನಗೂಳಿಯ ಬ್ಯಾಂಕ್ ಲೂಟಿ ಜನರ ಮನದಿಂದ ಮಾಸುವ ಮುನ್ನವೆ ಸಿನಿಮಿಯ ಮಾದರಿಯಲ್ಲಿ ಮಂಗಳವಾರ ಚಡಚಣ ಪಟ್ಟಣದಲ್ಲಿ ಹಾಡು ಹಗಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೂಟಿ ಮಾಡಲಾಗಿದೆ.
ಮಂಗಳವಾರ ಸಂಜೆ ೬.೩೦ರ ಸಮಯಕ್ಕೆ ಅಪರಿಚಿತ ಮುಸುಕುಧಾರಿಗಳು ಸುಮಾರು ೩ ರಿಂದ ೪ ಜನ ಆಯುಧ ಹೊಂದಿದವರು ಗೇಟ್ ಲಾಕ್ ಮಾಡದೇ ಸಿಬ್ಬಂದಿ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಒಳನುಗ್ಗಿದ ಮೂವರು ಮುಸುಕುಧಾರಿಗಳು ಬ್ಯಾಂಕಿನ ಒಳಗೆ ನುಗ್ಗಿ ಬ್ಯಾಂಕ್ ಸಿಬ್ಬಂದಿಗಳ ಕೈಕಟ್ಟಿ, ಮ್ಯಾನೇಜರ್ ಗೆ ಥಳಿಸಿ, ಆಯುಧ ಪಿಸ್ತೂಲ್ ತೋರಿಸಿ ಗುಂಡು ಹಾರಿಸಿ ಅವರಿಂದ ಲಾಕರ್‌ಗಳ ಕೀಲಿಕೈ ತೆಗೆದು ಕೊಂಡು ಲೂಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ಮ್ಯಾನೇಜರ್ ತಾರಕೇಶ್ವರ ಸೇರಿದಂತೆ ಸುಮಾರು ಆರು ಜನ ಸಿಬ್ಬಂದಿಗಳಿಗೆ ಕೈಕಟ್ಟಿ, ತಲೆಗೆ ಪಿಸ್ತೂಲ್ ಇಟ್ಟು ಹೆದರಿಸಿದ್ದಾರೆ ಎನ್ನಲಾಗಿದೆ.

ಲೋನ್ ಸ್ಯಾಂಕ್ಷನ್ ಆಗಿದ್ದ ಈರ್ವರು ಸಹಿ ಮಾಡಿಹೋಗಲು ಬಂದ ಗ್ರಾಹಕರ ಕೈಕಟ್ಟಿ ಹಾಕಿದ್ದಾರೆ.
ಪಿಸ್ತೂಲಿನಿಂದ ಗುಂಡಿನ ಸದ್ದು ಕೇಳಿಸಿದ್ದು, ಒಂದೆರಡು ಪಿಸ್ತೂಲಿನ ಗುಂಡುಗಳು ಬಿದ್ದಿರುವುದು ಕಂಡುಬಂದಿದೆ ಎಂದು ತಿಳಿದುಬಂದಿದೆ.
ಸುಮಾರು ಸಂಜೆ ೬.೩೦ರ ಸುಮಾರಿಗೆ ಸಿನಿಮಯ ರೀತಿಯಲ್ಲಿ ಎಂಟ್ರಿ ಕೊಟ್ಟ ದುರುಳರು ಆಯುಧ ತೋರಿಸಿ ಎಷ್ಟು ಲೂಟಿ ಮಾಡಿದ್ದಾರೆ ಎನ್ನುವುದು ಪೋಲಿಸ್ ತನಿಖೆಯಿಂದ ಗೊತ್ತಾಗಲಿದೆ.
ಎಲ್ಲ ಲಾಕರ್‌ಗಳು ಓಪನ್ ಆಗಿದ್ದು ಎಷ್ಟು ಹಣ, ಬಂಗಾರದ ಒಡವೆ ಹೊತ್ತೊಯ್ದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.
ಚಡಚಣ ಸಿಪಿಆಯ್ ಸುರೇಶ ಬೆಂಡಗುಂಬಳ, ಪಿಎಸೈ ಮತ್ತು ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.
ಸಧ್ಯೆ ಯಾವುದೆ ಪ್ರಾಣಪಾಯವಾಗಿಲ್ಲ, ಆದರೆ ಎಷ್ಟು ಹಣ ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿಲ್ಲ. ಆ ಸಮಯದಲಿ ಗೋದ್ರೆಜ್ ಎಸಿ ರಿಪೇರಿ ಎಂದು ಬಂದಿರುವ ಇಬ್ಬರು-ಮೂವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸದ್ಯ ತನಿಖೆ ಮುಂದುವರಿದಿದ್ದು, ಕಳ್ಳತನವಾದ ನಗದು ಎಷ್ಟು? ಕೃತ್ಯ ಹೇಗಾಯಿತು? ಎಂಬಿತ್ಯಾದಿ ವಿವರ ತನಿಖೆ ಬಳಿಕವೇ ಗೊತ್ತಾಗಲಿದೆ.
ಸುದ್ದಿ ತಿಳಿಯುತ್ತಿದ್ದಂತೆ ವಿಜಯಪುರ ಎಸ್ ಪಿ, ಇಂಡಿ ಡಿವೈಎಸ್‌ಪಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

