ಸಿಂದಗಿ ನಗರ ಸಭೆಯ ಅಧ್ಯಕ್ಷ ಶಾಂತವೀರ ಮನಗೂಳಿ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಜಯಪುರ ಹಾಗೂ ಬೆಂಗಳೂರಿನ ಸಣ್ಣ ಕೈಗಾರಿಕೆಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎA.ಇಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿಯಲ್ಲಿ ಝಡ್.ಇ.ಡಿ ಮತ್ತು ಲೀನ್ ಯೋಜನೆಯ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಸಿಂದಗಿಯ ಹೊಸ ಮಿನಿ ವಿಧಾನಸೌಧದ ಹತ್ತಿರದ ಹೋಟೆಲ್ ಡಾಲ್ಪಿನ್‌ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಂದಗಿ ನಗರ ಸಭೆಯ ಅಧ್ಯಕ್ಷರಾದ ಶಾಂತವೀರ ಎಂ ಮನಗೂಳಿ ಅವರು ಝಡ್.ಇ.ಡಿ ಮತ್ತು ಲೀನ್ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಬೆಂಗಳೂರಿನ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕೈಗಾರಿಕಾ ಸಂಘಗಳ ಅಧ್ಯಕ್ಷರಾದ ಎಸ್.ವಿ.ಪಾಟೀಲ್, ಗಂಗಾಧರ ಸಂಬಣ್ಣಿ, ಪೀಟರ ಅಲೆಕ್ಸಾಂಡರ, ತಮ್ಮಣ್ಣ ಈಳಗೇರ, ಉಪಾಧ್ಯಕ್ಷರಾದ ಬಸವರಾಜ ಅಂಬಲಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ ಅವರು ಉಪಸ್ಥಿತರಿದ್ದರು.

