Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷದಂತೆ ಸೆ.೩೦ರಿಂದ ಅಕ್ಟೋಬರ್ ೦೪ರವರೆಗೆ ರಾಜ್ಯದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಭೇಟಿ ನೀಡಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಸ್ಸು ಮತ್ತು ರೈಲಿನ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ ೨೧ರವರೆಗೆ ವಿಸ್ತರಿಸಲಾಗಿದೆ.ರಾಜ್ಯದಿಂದ ನಾಗಪುರಕ್ಕೆ ಭೇಟಿ ನೀಡಲಿರುವ ಅನುಯಾಯಿಗಳು ಸಮಾಜ ಕಲ್ಯಾಣ ಇಲಾಖೆಯ https://swd.karnataka.gov.inವೆಬ್‌ಸೈಟ್ ಮೂಲಕ ವಿಜಯಪುರ ಜಿಲ್ಲೆಯ ಅನುಯಾಯಿಗಳು ಪ್ರಸಕ್ತ ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ಆರೈಕೆ ವಿಭಾಗದಲ್ಲಿ ಇದೇ ಜುಲೈ ೨೪ರಂದು ೬೨೦ ಗ್ರಾಮ ತೂಕ ಹೊಂದಿದ್ದ ನವಜಾತ ಶಿಶು ದಾಖಲಾಗಿತ್ತು. ಸತತ ೬೫ ದಿನಗಳವರೆಗೆ ಮಗುವಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಕಾಳಜಿಯಿಂದ ಮಗುವಿನ ಬೆಳವಣಿಗೆಯಾಗಿ ತೂಕ ೧.೧೦೦ ಕೆ.ಜಿ ಆಗಿದ್ದು, ತಾಯಿಯ ಹಾಲು ಕುಡಿಯುತ್ತಿದೆ. ಮಗು ಸಂಪೂರ್ಣ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಸಹಾಯ ಮತ್ತು ಸಹಕಾರ ಒದಗಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೋಳಿ, ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಮಗುವಿನ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆಈ ಸಂದರ್ಭದಲ್ಲಿ ನವಜಾತ ಶಿಶು ಆರೈಕೆ ಘಟಕದ ತಂಡದವರಾದ ಡಾ. ಸುಧೀರ ಚವ್ಹಾಣ ನವಜಾತ ಶಿಶು ತಜ್ಞವೈದ್ಯ ಡಾ. ಯಲಗುರಸ್ವಾಮಿ ಮತ್ತು ವಿನಯ, ರಮೇಶ ಇನ್‌ಚಾರ್ಜ ನರ್ಸಿಂಗ್ ಆಫಿಸರ್ ಮತ್ತು ವೈದ್ಯಾಧಿಕಾರಿಗಳು, ಸಿಬ್ಬಂಗಳು ಉಪಸ್ಥಿತರಿದ್ದರೆಂದು ಜಿಲ್ಲಾಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಇಂಡಿ-ಚಡಚಣ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿ-ಸಿಇಓ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಳೆಯಿಂದ ಪ್ರವಾಹ ಪರಿಸ್ಥಿತಿ ಎದುರಾಗಿರುವ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶುಕ್ರವಾರ ಜಿಲ್ಲೆಯ ಗುಂದವಾನ, ನಂದರಗಿ, ಶೀಗನಾಪುರ, ಧೂಮಕನಾಳ, ದೇವರನಿಂಬರಗಿ, ಹಾಗೂ ಜಿಗಜೇವಣಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ರೈತರ ಜಮೀನಿನಲ್ಲಿ ಕೆರೆ ಮತ್ತು ಹಳ್ಳದ ನೀರು ಹರಿಯುತ್ತಿರುವುದರಿಂದ ಬೆಳೆ ನಷ್ಟವಾಗಿರುವ ಕುರಿತು ವೀಕ್ಷಣೆ ನಡೆಸಿದ ಅವರು, ಬೆಳೆ ಹಾನಿ ಕುರಿತು ಸಮೀಕ್ಷೆ ಕೈಗೊಂಡು ಒಂದು ವಾರದೊಳಗೆ ಸೂಕ್ತ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ. ಅನುರಾಧ ವಸ್ತ್ರದ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಇಂದು ದಿ.೨೦-೦೯-೨೦೨೫ ರಂದು ೧೧೦/೧೧ಕೆವ್ಹಿ ದೇವರ ಹಿಪ್ಪರಗಿ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ, ೧೧೦/೧೧ಕೆವ್ಹಿ ದೇವರ ಹಿಪ್ಪರಗಿ ವಿದ್ಯುತ್ ವಿತರಣಾ ಉಪ ಕೇಂದ್ರದ ಎಲ್ಲಾ ೧೧ ಕೆವ್ಹಿ ಫೀಡರ್‌ಗಳ ಎನ್.ಜಿ.ವಾಯ್ ಮತ್ತು ಐ.ಪಿ ಫೀಡರ್‌ಗಳು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಮತ್ತು ೩೩/೧೧ಕೆವ್ಹಿ ಕೋರವಾರ ಮತ್ತು ಕಡ್ಲೇವಾಡ ವಿದ್ಯುತ್ ವಿತರಣಾ ಉಪ-ಕೇಂದ್ರದಿಂದ ಹೊರಹೋಗುವ ಎಲ್ಲಾ ೧೧ಕೆವ್ಹಿ ಫೀಡರ್‌ಗಳು ದಿ.೨೦/೦೯-೨೦೨೫ ರಂದು ಬೆಳಿಗ್ಗೆ ೧೦:೦೦ ಗಂಟೆಯಿಂದ ಸಾಯಂಕಾಲ ೫:೦೦ ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಸುರೇಶ ಶಿರಗೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹೆಸ್ಕಾಂ, ದೇವರಹಿಪ್ಪರಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ವೀರನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶಶಿಧರ ಬಿರಾದಾರ, ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅರ್ ಎನ್ ಆಲೂರ ತಿಳಿಸಿದರು.ಸರ್ವ ಸದಸ್ಯರ ಅನುಮತಿಯೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಜರುಗಿತು ಅದರ ಜೊತೆಗೆ ಶರಣಪ್ಪ ವಸ್ತಾರಿ, ಗುರುಪಾದ ನೆಲ್ಲಗಿ ಬಿಳಿಯಾನಿಸಿದ್ದ ವಡಿಯರ, ಭೂತಾಳಿ ತಳವಾರ, ಸುಭಾಸ ಭಾರತಿ, ಖಾದರಬಾಷಾ ಬಾಗವಾನ, ಶೋಭಾ ಮಂದೇವಾಲಿ, ಕಲಾವತಿ ದುದ್ದಗಿ, ಮೈಬೂಬಸಾಬ ಕಣ್ಣಿ, ಗುರುರಾಜ ಕೋಲಾರ, ಇವರನ್ನು ಕೂಡಾ ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮೈಬೂಬಸಾಬ ಕಣ್ಣಿ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ತಮ್ಮೇಲ್ಲರನ್ನು ಒಗ್ಗೂಡಿಸಿ ಅವಿರೋದವಾಗಿ ಆಯ್ಕೆ ಮಾಡಲಾಗಿದೆ ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಪ್ರತಿ ತಿಂಗಳು ಸಭೆಗಳನ್ನು ಕರೆದು ಸಾರ್ವಜನಿಕರಿಗೆ ಅನಕೂಲು ಮಾಡಿಕೊಡಬೇಕು ಸಮಯಕ್ಕೆ ಸರಿಯಾಗಿ ರೈತರಿಗೆ ಸಾಲ ಒದಗಿಸುವ ಕಾರ್ಯವಾಗಬೇಕು ಎಂದರು.ಇದೇ ಸಂದರ್ಭದಲ್ಲಿ ಸಹಕಾರ ಅಭಿವೃದ್ದಿ ಅಧಿಕಾರಿ ಲೀಲಾವತಿ ಗೌಡತಿ, ಎನ ಎನ್ ಪಾಟೀಲ, ಸಿದ್ದು ಸೀಲವಂತ, ರಜಾಕ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಎಲ್ಲ ಕಡೆ ಪ್ರತಿದಿನ ಸತತ ಮಳೆಯಾಗುತ್ತಿದ್ದು ಬೆಳೆ ಇರುವ ಕಡೆ ನೀರು ನಿಂತಿದ್ದರೆ ಅಂತಹ ಹೊಲಗಳಲ್ಲಿ ಹರಿ ಅಥವಾ ಬಸಿ ಗಾಲುವೆ ಮಾಡಿ ನೀರು ಹಾಕಲು ಪ್ರಯತ್ನಿಸಬೇಕೆಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ರೈತರಿಗೆ ಸಲಹೆ ನೀಡಿದ್ದಾರೆ.ತಾಲೂಕಿನ ವಿವಿಧ ಕಡೆ ರೈತರ ಹೊಲಗಳಿಗೆ ಭೇಟಿ ನೀಡಿ ಅವರಿಗೆ ಸಲಹೆ ನೀಡಿ ಉಪ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅದಲ್ಲದೆ ಬೆಳೆ ಇರುವ ನೀರು ನಿಂತ ಹೊಲಗಳಲ್ಲಿ ಬಸಿ ಗಾಲುವೆ ನಿರ್ಮಾಣ ಮಾಡಿ ಆ ಬಸಿಗಾಲುವೆಯಿಂದ ನೀರು ಹೊಲದಿಂದ ಹೊರಹಾಕಬೇಕು. ಹೊಲದಲ್ಲಿಯೇ ನೀರು ಉಳಿದರೆ ಬೆಳೆ ಹಾಳಾಗುವ ಸಾದ್ಯತೆ ಹೆಚ್ಚು. ಬೆಳೆಗಳಿಗೆ ಶೇ ೨ ರಷ್ಟು ಯುರಿಯಾ ಸಿಂಪರಣೆ ಮಾಡುವದು ಒಳಿತು ಎಂದು ಪವಾರ ಸಲಹೆ ಮಾಡಿದ್ದಾರೆ.ಕಳೆದ ಕೆಲವು ದಿನಗಳಿಂದ ಪ್ರತಿದಿನ ೪೦ ಮಿಮಿ ಕ್ಕೂ ಹೆಚ್ಚು ಅಥವಾ ವಾಡಿಕೆಗಿಂದ ಮಳೆಯಾಗುತ್ತಿದ್ದು ಮತ್ತೆ ಮೋಡ ಕವಿದ ವಾತಾವರಣ ಇದೆ.ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಕೃಷಿ ಅಧಿಕಾರಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ಮಧ್ಯರಾತ್ರಿ ಒಂದೇ ದಿನದಲ್ಲಿ ಐದಾರು ಬಾರಿ ಭೂಕಂಪನದ ಅನುಭವವಾಗಿದೆ. ಮಧ್ಯಾಹ್ನ ೩ ಗಂಟೆ, ರಾತ್ರಿ ೧೦ಗಂಟೆ ೧೧ನಿಮಿಷ, ೧೦ಗಂಟೆ ೨೫ನಿಮಿಷ, ೧೦ಗಂಟೆ ೪೭ನಿಮಿಷ, ೧ಗಂಟೆ ೨೧ನಿಮಿಷ, ೨ಗಂಟೆ, ೩ಗಂಟೆ ೦೬ನಿಮಿಷ, ೪ಗಂಟೆ ೬ನಿಮಿಷ, ೫ಗಂಟೆ ೧೪ನಿಮಿಷ ರಾತ್ರಿಯ ವೇಳೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಈ ಘಟನೆಯಿಂದ ಸಿಂದಗಿ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.ಮನೆಗಳಿಂದ ಹೊರಬಂದ ಜನ:ಭೂಕಂಪನದ ಅನುಭವವಾಗುತ್ತಿದ್ದಂತೆ ಸ್ಥಳೀಯ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಬಂದಿದ್ದು, ಭೂಕಂಪನದ ತೀವ್ರತೆಯ ಬಗ್ಗೆ ತಕ್ಷಣವೇ ಮಾಹಿತಿ ಲಭ್ಯವಾಗಿಲ್ಲವಾದರೂ, ಯಾವುದೇ ಜೀವಹಾನಿ ಮತ್ತು ಆಸ್ತಿ ಹಾನಿಯ ವರದಿಗಳು ಇದುವರೆಗೆ ಬಂದಿಲ್ಲ.ಈ ಹಿಂದೆ ಅನೇಕ ಬಾರಿ ಭೂಕಂಪನ: ಕಳೆದ ಎರಡು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸರಣಿ ರೂಪದಲ್ಲಿ ಭೂಕಂಪನಗಳು ಸಂಭವಿಸಿದ್ದವು, ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಆದರೆ ಗಮನಾರ್ಹ ಹಾನಿಯಾಗಿರಲಿಲ್ಲ. ಈಗ ಮತ್ತೆ ಸಿಂದಗಿಯಲ್ಲಿ ಒಂದೇ ದಿನದಲ್ಲಿ ಹಲವು ಬಾರಿ ಭೂಮಿ ಕಂಪಿಸಿರುವುದು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಬ್ಯಾಕೋಡ ಗ್ರಾಮದ ಹರಿಜನ ಕೇರಿಯ ಹತ್ತಿರವಿರುವ ತೆರೆದ ಭಾವಿಯ ತಡೆಗೋಡೆ ಕುಸಿದು ಬಿದ್ದು ೧ತಿಂಗಳಾದರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದಿರವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಿ.ಜೆ.ಪಿ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವಳಸಂಗ ತಿಲಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ತಡೆ ಗೋಡೆಯನ್ನು ಪುನಃರ್ ನಿರ್ಮಾಣ ಮಾಡದೇ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದು, ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂರ್ಪೂಣ ತಡೆ ಗೋಡೆಯು ಭಾವಿಯಲ್ಲಿ ಬಿದ್ದಿದೆ. ಕೊಂಚ್ ನಜರುಚೂಕಾದರೆ ವಾಹನಗಳು ಭಾವಿಯಲ್ಲಿ ಬಿದ್ದು ದೊಡ್ಡ ಅಪಘಾತವಾಗುವುದಲ್ಲದೇ ಜೀವಗಳು ಜೀವ ಹೋಗುವ ಸ್ಥಿತಿಯಿದೆ. ಅಲ್ಲದೇ ಬ್ಯಾಕೋಡ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಆ ಭಾವಿ ಹತ್ತಿರದಿಂದಲೇ ಶಾಲೆಗೆ ಹಾದು ಹೋಗುತ್ತಾರೆ. ಅಲ್ಲದೇ ಈ ಮಾರ್ಗವಾಗಿ ಕಲಕೇರಿ, ಬೆಂಗಳೂರು, ತಾಳಿಕೋಟಿ ಹಾಗೂ ನೂರಕ್ಕೂ ಅಧಿಕ ಖಾಸಗಿ ವಾಹನಗಳು ಸಂಚರಿಸುತ್ತವೆ. ಮತ್ತು ಸಿಂದಗಿ-ಬ್ಯಾಕೋಡ ರಸ್ತೆಯು ಸಂರ್ಪೂಣ ತಗ್ಗು ಗುಂಡಿ ತುಂಬಿದ್ದು,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಿಕ್ಷಕ ವೃತ್ತಿ ಪವಿತ್ರ ವೃತ್ತಿ. ಶಿಕ್ಷಕರು ಕೇವಲ ಪಠ್ಯ ವಿಷಯಗಳಲ್ಲದೇ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ನಿರಂತರ ಅಧ್ಯಯನ ಶೀಲರಾಗಬೇಕು ಎಂದು ಜಿ.ಪಿ. ಪೋರವಾಲ ಕಲಾ ವಾಣೀಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ಪದವಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.ಪಟ್ಟಣದ ಶ್ರೀಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲಾಯನ್ಸ್ ಕ್ಲಬ್ ಸಿಂದಗಿ ಹಾಗೂ ಮಾತೋಶ್ರೀ ಗುರುಬಸಮ್ಮ ಹ. ಸೋಮಾಪುರ ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ಕೆ.ಎಚ್. ಸೋಮಾಪುರ ಅವರ ಕೃತಿಗಳ ಉಚಿತ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ನೆಮ್ಮದಿ, ಆತ್ಮಸ್ಥೈರ್ಯ, ವಿಶ್ವಾಸ, ಸಾಧನೆಯ ಗುರಿ ಹಾಗೂ ಸಮಾಜಮುಖಿ ಬದುಕು ಮೂಡುತ್ತದೆ. ಓದು ಬದುಕನ್ನು ಬೆಳಗಿಸುವ ಶಕ್ತಿಯನ್ನು ಹೊಂದಿದೆ ಎಂದರು.ಈ ವೇಳೆ ಪತ್ರಕರ್ತ ಶಾಂತೂ ಹಿರೇಮಠ, ಲಯನ್ ಕ್ಲಬ್ ತಾಲೂಕಾಧ್ಯಕ್ಷ ಎಸ್.ಎಸ್.ಪಾಟೀಲ, ಕೃತಿಯ ಕತೃ ಕೆ.ಎಚ್.ಸೋಮಾಪುರ, ಪ್ರಾಚಾರ್ಯ ಬಿ.ಎಂ.ಸಿಂಗನಹಳ್ಳಿ, ಪ್ರಾಚಾರ್ಯ ಜೆ.ಸಿ.ನಂದಿಕೋಲ ಮಾತನಾಡಿದರು.ಕಾರ್ಯಕ್ರಮದಲ್ಲಿ ಐ.ಬಿ.ಬಿರಾದಾರ, ಪಿ.ಎಂ.ಮಡಿವಾಳರ್, ಎಸ್.ಬಿ.ಚಾಗಶೆಟ್ಟಿ, ಎನ್.ಬಿ. ಪೂಜಾರಿ, ಡಾ.ಶರಣಬಸವ ಜೋಗುರ, ಡಾ.ಅಂಬರೀಶ…
ಹಳ್ಳಗಳು ಉಕ್ಕಿ ಹರಿದು ಅಪಾರ ಪ್ರಮಾಣದ ಬೆಳೆನಾಶ | ನೆಲಕ್ಕಪ್ಪಳಿಸಿದ ಕಬ್ಬು ಬೆಳೆ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಬೋರ್ಗರೆದು ಹರಿಯುತ್ತಿರುವ ಭೀಮಾನದಿ ಪ್ರವಾಹದಲ್ಲಿ ಶುಕ್ರವಾರ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು ನದಿ ಈಗಲೂ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಸಮೀಪ ಇರುವ ಸೊನ್ನ ಬ್ಯಾರೇಜ್ ನಲ್ಲಿ ಗುರುವಾರ ದಿವಸ 1 ಲಕ್ಷ 75 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಆದರೆ ಶುಕ್ರವಾರ ದಿವಸ ನೀರಿನ ಹರಿವಿನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದ್ದು 1 ಲಕ್ಷ 45 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ಹರಿವಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಈಗಲೂ ಕೂಡ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.ಗುರುವಾರ ಹಾಗೂ ಶುಕ್ರವಾರ ದಿವಸ ಸೂರ್ಯದ ಮಳೆಯಿಂದಾಗಿ ಆಲಮೇಲ ತಾಲೂಕಿನ ಹಲವು ಗ್ರಾಮಗಳಲ್ಲಿ…
