ಹಳ್ಳಗಳು ಉಕ್ಕಿ ಹರಿದು ಅಪಾರ ಪ್ರಮಾಣದ ಬೆಳೆನಾಶ | ನೆಲಕ್ಕಪ್ಪಳಿಸಿದ ಕಬ್ಬು ಬೆಳೆ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಬೋರ್ಗರೆದು ಹರಿಯುತ್ತಿರುವ ಭೀಮಾನದಿ ಪ್ರವಾಹದಲ್ಲಿ ಶುಕ್ರವಾರ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು ನದಿ ಈಗಲೂ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಸಮೀಪ ಇರುವ ಸೊನ್ನ ಬ್ಯಾರೇಜ್ ನಲ್ಲಿ ಗುರುವಾರ ದಿವಸ 1 ಲಕ್ಷ 75 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿತ್ತು ಆದರೆ ಶುಕ್ರವಾರ ದಿವಸ ನೀರಿನ ಹರಿವಿನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದ್ದು 1 ಲಕ್ಷ 45 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ಹರಿವಿನ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಈಗಲೂ ಕೂಡ ನದಿಯ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಗುರುವಾರ ಹಾಗೂ ಶುಕ್ರವಾರ ದಿವಸ ಸೂರ್ಯದ ಮಳೆಯಿಂದಾಗಿ ಆಲಮೇಲ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಕುಸಿದಿವೆ, ಹೊಲಗಳಲ್ಲಿ ಅಪಾರ ಪ್ರಮಾಣದ ನೀರುಗಳು ತುಂಬಿ ನಿಂತು, ಒಡ್ಡುಗಳು ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿರುವ ಘಟನೆ ಅಲ್ಲಲ್ಲಿ ಕಂಡು ಬಂದಿದೆ, ಹಳ್ಳಗಳು ಉಕ್ಕಿ ಹರಿದು ಅಪಾರ ಪ್ರಮಾಣದಲ್ಲಿ ಬೆಳೆನಾಶ ವಾಗಿದೆ ಅನೇಕ ಹೊಲಗಳಲ್ಲಿ ಈಗಲೂ ಕೂಡ ನೀರು ಹರಿಯುವುದು ಸಾಮಾನ್ಯವಾಗಿದೆ.
ಮಳೆಯ ಜೊತೆಗೆ ಗಾಳಿ ಬೀಸಿರುವುದರಿಂದ ಅಲ್ಲಲ್ಲಿ ಕಬ್ಬುಗಳು ನೆಲಕಪ್ಪಳಿಸಿವೆ.

