ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಇಂದು ದಿ.೨೦-೦೯-೨೦೨೫ ರಂದು ೧೧೦/೧೧ಕೆವ್ಹಿ ದೇವರ ಹಿಪ್ಪರಗಿ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ, ೧೧೦/೧೧ಕೆವ್ಹಿ ದೇವರ ಹಿಪ್ಪರಗಿ ವಿದ್ಯುತ್ ವಿತರಣಾ ಉಪ ಕೇಂದ್ರದ ಎಲ್ಲಾ ೧೧ ಕೆವ್ಹಿ ಫೀಡರ್‌ಗಳ ಎನ್.ಜಿ.ವಾಯ್ ಮತ್ತು ಐ.ಪಿ ಫೀಡರ್‌ಗಳು ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಮತ್ತು ೩೩/೧೧ಕೆವ್ಹಿ ಕೋರವಾರ ಮತ್ತು ಕಡ್ಲೇವಾಡ ವಿದ್ಯುತ್ ವಿತರಣಾ ಉಪ-ಕೇಂದ್ರದಿಂದ ಹೊರಹೋಗುವ ಎಲ್ಲಾ ೧೧ಕೆವ್ಹಿ ಫೀಡರ್‌ಗಳು ದಿ.೨೦/೦೯-೨೦೨೫ ರಂದು ಬೆಳಿಗ್ಗೆ ೧೦:೦೦ ಗಂಟೆಯಿಂದ ಸಾಯಂಕಾಲ ೫:೦೦ ಗಂಟೆ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂನ ಸುರೇಶ ಶಿರಗೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಹೆಸ್ಕಾಂ, ದೇವರಹಿಪ್ಪರಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

