ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ವೀರನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಶಶಿಧರ ಬಿರಾದಾರ, ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅರ್ ಎನ್ ಆಲೂರ ತಿಳಿಸಿದರು.
ಸರ್ವ ಸದಸ್ಯರ ಅನುಮತಿಯೊಂದಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಜರುಗಿತು ಅದರ ಜೊತೆಗೆ ಶರಣಪ್ಪ ವಸ್ತಾರಿ, ಗುರುಪಾದ ನೆಲ್ಲಗಿ ಬಿಳಿಯಾನಿಸಿದ್ದ ವಡಿಯರ, ಭೂತಾಳಿ ತಳವಾರ, ಸುಭಾಸ ಭಾರತಿ, ಖಾದರಬಾಷಾ ಬಾಗವಾನ, ಶೋಭಾ ಮಂದೇವಾಲಿ, ಕಲಾವತಿ ದುದ್ದಗಿ, ಮೈಬೂಬಸಾಬ ಕಣ್ಣಿ, ಗುರುರಾಜ ಕೋಲಾರ, ಇವರನ್ನು ಕೂಡಾ ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಬೂಬಸಾಬ ಕಣ್ಣಿ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ತಮ್ಮೇಲ್ಲರನ್ನು ಒಗ್ಗೂಡಿಸಿ ಅವಿರೋದವಾಗಿ ಆಯ್ಕೆ ಮಾಡಲಾಗಿದೆ ರೈತರ ಹಿತಾಸಕ್ತಿ ಕಾಪಾಡುವುದರ ಜೊತೆಗೆ ಪ್ರತಿ ತಿಂಗಳು ಸಭೆಗಳನ್ನು ಕರೆದು ಸಾರ್ವಜನಿಕರಿಗೆ ಅನಕೂಲು ಮಾಡಿಕೊಡಬೇಕು ಸಮಯಕ್ಕೆ ಸರಿಯಾಗಿ ರೈತರಿಗೆ ಸಾಲ ಒದಗಿಸುವ ಕಾರ್ಯವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಹಕಾರ ಅಭಿವೃದ್ದಿ ಅಧಿಕಾರಿ ಲೀಲಾವತಿ ಗೌಡತಿ, ಎನ ಎನ್ ಪಾಟೀಲ, ಸಿದ್ದು ಸೀಲವಂತ, ರಜಾಕ ಬಾಗವಾನ, ಶ್ರೀಶೈಲ ಕೆರಿಗೊಂಡ, ಬಸುಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲು ಗೋಲಾ, ಮುತ್ತಪ್ಪ ಸಿಂಗೆ, ತಿಪ್ಪಸೆಟ್ಟಿ, ಬಾಗಣ್ಣ ಕೆಂಬಾವಿ, ಸಂತೋಷ ಕೆರಿಗೊಂಡ, ಸುಬಾಸ ನಗನೂರ, ಸೇರಿದಂತೆ ಪ್ರಗತಿಪರ ರೈತರು ಗ್ರಾಮಸ್ಥರು ಇದ್ದರು.

