ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಆಸ್ಪತ್ರೆಯ ನವಜಾತ ಶಿಶು ಆರೈಕೆ ವಿಭಾಗದಲ್ಲಿ ಇದೇ ಜುಲೈ ೨೪ರಂದು ೬೨೦ ಗ್ರಾಮ ತೂಕ ಹೊಂದಿದ್ದ ನವಜಾತ ಶಿಶು ದಾಖಲಾಗಿತ್ತು. ಸತತ ೬೫ ದಿನಗಳವರೆಗೆ ಮಗುವಿಗೆ ವೈದ್ಯರು ಹಾಗೂ ಸಿಬ್ಬಂದಿಗಳು ಕಾಳಜಿಯಿಂದ ಮಗುವಿನ ಬೆಳವಣಿಗೆಯಾಗಿ ತೂಕ ೧.೧೦೦ ಕೆ.ಜಿ ಆಗಿದ್ದು, ತಾಯಿಯ ಹಾಲು ಕುಡಿಯುತ್ತಿದೆ. ಮಗು ಸಂಪೂರ್ಣ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಸಹಾಯ ಮತ್ತು ಸಹಕಾರ ಒದಗಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೋಳಿ, ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಮಗುವಿನ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ
ಈ ಸಂದರ್ಭದಲ್ಲಿ ನವಜಾತ ಶಿಶು ಆರೈಕೆ ಘಟಕದ ತಂಡದವರಾದ ಡಾ. ಸುಧೀರ ಚವ್ಹಾಣ ನವಜಾತ ಶಿಶು ತಜ್ಞವೈದ್ಯ ಡಾ. ಯಲಗುರಸ್ವಾಮಿ ಮತ್ತು ವಿನಯ, ರಮೇಶ ಇನ್‌ಚಾರ್ಜ ನರ್ಸಿಂಗ್ ಆಫಿಸರ್ ಮತ್ತು ವೈದ್ಯಾಧಿಕಾರಿಗಳು, ಸಿಬ್ಬಂಗಳು ಉಪಸ್ಥಿತರಿದ್ದರೆಂದು ಜಿಲ್ಲಾಸ್ಪತ್ರೆಯ ಪ್ರಕಟಣೆ ತಿಳಿಸಿದೆ.
