Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಶ್ವದ ಅತೀ ಕಿರಿಯ ಮುಖ್ಯಗುರುವೆಂದು ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಬಾಬರ ಅಲಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷಣ ಎಂದರೆ ಬರೀ ಪುಸ್ತಕದ ಜ್ಞಾನವನ್ನು ತಿಳಿಸುವುದಲ್ಲ. ಬದಲಿಗೆ ಮಾನವೀಯ ಮೌಲ್ಯಗಳನ್ನು ಹಾಗೂ ಸಾಮಾಜಿಕ ಚಿಂತನೆಗಳನ್ನು ಬಿತ್ತಿ, ಸಮಾಜದ ಅಭಿವೃದ್ಧಿಗಾಗಿ ಮಕ್ಕಳನ್ನು ತಯಾರಿಸುವುದಾಗಿದೆ ಎಂದು ವಿಶ್ವದ ಅತೀ ಕಿರಿಯ ಮುಖ್ಯಗುರುವೆಂದು ಗುರುತಿಸಿಕೊಂಡಿರುವ ಪಶ್ಚಿಮ ಬಂಗಾಳದ ಬಾಬರ ಅಲಿ ಹೇಳಿದರು.ನಗರದ ಎಕ್ಸಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು; ಸಮಾಜಕ್ಕೆ ಒಳ್ಳೆಯದನ್ನು ಮಾಡಿದರೆ ಆ ದೇವರು ನಮಗೆ ಒಳಿತನ್ನು ಮಾಡುತ್ತಾನೆ. ಆದರೆ ಮಾಡುವ ಕಾರ್ಯದಲ್ಲಿ ಆತ್ಮತೃಪ್ತಿ ಇರಬೇಕು. ಯಾವುದೇ ಕಾರ್ಯವಾಗಲಿ ಉತ್ಸಾಹ ರಹಿತವಾಗಿ ಮಾಡಿದರೆ ಅದರಲ್ಲಿ ಯಾವುದೇ ಹುರುಳಿರುವುದಿಲ್ಲ. ಅದನ್ನು ಚಿಕ್ಕ ವಯಸ್ಸಿನಿಂದಲೂ ಕಂಡು ಕೊಂಡಿದ್ದ ನಾನು ಅದೇ ಉತ್ಸಾಹದೊಂದಿಗೆ ಚಿಕ್ಕವಯಸ್ಸಿನಲ್ಲಿಯೇ ಬೋಧನಾ ಕಾರ್ಯ ಶುರು ಮಾಡಿದೆ. ಅದರ ಜೊತೆಯಲ್ಲಿ ಬಂಗಾಳದಲ್ಲಿರುವ ಬಡ ಮಕ್ಕಳ ಶಿಕ್ಷಣಕ್ಕೆ ನಾನು ನೆರವಾಗಬೇಕು ಎಂದು ಹೊರಟಿದ್ದರ ಫಲವಾಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಸೃಷ್ಠಿ ಜವಳಕರ ಅವರು “ಮ್ಯಾಸ್ಕುಲಿನಿಟಿ ಆಂಡ್‌ಜಂಡರ್ ಇನ್ ಕನ್ನಡ ಟೆಲಿವಿಜನ್ ಕಮರ್ಶಿಯಲ್: ಎ ಕ್ರಿಟಿಕಲ್ ಸ್ಟಡಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಸೃಷ್ಠಿ ಜವಳಕರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವಸೃಷ್ಠಿ ಜವಳಕರ ಅವರನ್ನು ಕುಲಪತಿ ಪ್ರೊ.ವಿಜಯಾಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ. ಎಲ್ ಲಕ್ಕಣ್ಣವರ್ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರು ಭೌತಿಕ, ಅಧ್ಯಾತ್ಮೀಕ ಸತ್ಯ ತತ್ವಗಳನ್ನು ಜಗತ್ತಿಗೆ ನೀಡಿದ ಮಹಾತ್ಮರು ಎಂದು ಉಪನ್ಯಾಸಕಿ ಶಿಲ್ಪಾ ಭಸ್ಮೆ ಹೇಳಿದರು.ನಗರದ ವೀರಶೈವ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಮಾಸಿಕ ಶಿವಾನುಭವ ಗೊಷ್ಠಿಯಲ್ಲಿ ಶರಣ ಘಟವಾಳಯ್ಯನವರ ಬದುಕು ಮತ್ತು ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು ಬಸವಾದಿ ಶರಣರ ವಚನಕಾರರಲ್ಲಿ ಶರಣ ಘಟವಾಳಯ್ಯನವರು ಪ್ರಮುಖರು. ಅವರ ವಚನಗಳಲ್ಲಿ ಆತ್ಮ ಸಾಕ್ಷಾತ್ಕಾರ, ಜ್ಞಾನ ಸಾಕ್ಷಾತ್ಕಾರ, ನಡೆ, ನುಡಿ, ಸತ್ಯ, ಶುದ್ಧ ಕಾಯಕ ಅರ್ಥಹೀನ ಬದುಕಿನ ಡಾಂಬೀಕ ಭಕ್ತಿ ಹೀಗೆ ಅವರ ವಚನಗಳಲ್ಲಿ ಕಾಣುತ್ತೇವೆ. ಚಿಕ್ಕಯ್ಯಪ್ರೀಯ ಸಿದ್ಧಲಿಂಗ ಎಂಬ ಅಂಕಿತ ನಾಮದಿಂದ ೧೪೭ ವಚನಗಳನ್ನು ರಚಿಸಿದ್ದಾರೆ. ಚರಿತ್ರೆಕ್ಕಿಂತ ಸಾಧನೆ ಮುಖ್ಯ. ಶರಣರನ್ನು ನೆನೆಯುವುದು ಜನಾಂಗದ ಉನ್ನತಿಗಾಗಿ ಎಂದು ಹೇಳಿದರು.ಜಿಲ್ಲಾ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಶರಣರಲ್ಲಿ ಅಗ್ರಸ್ಥಾನ ಪಡೆದವರು ಘಟವಾಳಯ್ಯನವರು ಸಮರ್ಪಕವಾದ ಚಿಂತನೆಯಿಂದ ವಚನ ರಚಿಸಿದ್ದಾರೆ. ಇಂದು ಶರಣ ತತ್ವ ಸಿದ್ದಾಂತ ನಾವೆಲ್ಲಾ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಗೆಲುವನ್ನು ಬಯಸುವವರೆ ಇಲ್ಲಿ ಎಲ್ಲ ಅಂದರೆ ತಪ್ಪೇನಿಲ್ಲ. ಎಲ್ಲರೂ ಜೀವನದಲ್ಲಿ ಗೆಲುವನ್ನು ಬಯಸದವರು ಯಾರೂ ಇಲ್ಲ. ಮೇಲಿನ ಹೇಳಿಕೆಗಳೇನೋ ಸರಿಯಾಗಿಯೇ ಇವೆ. ಆದರೆ ಈ ಹೇಳಿಕೆಗಳಂತೆ ಎಲ್ಲರೂ ಗೆಲುವನ್ನು ಸಾಧಿಸುವುದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ ಅಲ್ಲವೇ? ಹೌದು ನಿಮಗೆ ಅನಿಸಿದ್ದು ಸರಿ. ಆದರೆ ಗೆಲುವು ಬಯಸುವವರಲ್ಲಿ ಅನೇಕರು ಅಸೂಯೆ ಪಡುವ ಜನರ ಮಾತುಗಳನ್ನು, ನಕಾರಾತ್ಮಕ ಟೀಕೆಗಳನ್ನು ಕೇಳಿ ಸೋಲುಗಳಿಗೆ ಹೆದರಿ ವಿಫಲರಾಗುತ್ತಾರೆ. ಅವರಿಗೆ ತಮ್ಮ ಗೆಲುವಿಗಿಂತ ಜನರ ಮಾತುಗಳೇ ಹೆಚ್ಚು ಪ್ರಭಾವ ಬೀರುತ್ತವೆ! ಗುರಿಯ ಹಾದಿಯಲ್ಲಿ ಬರುವ ಅವಮಾನಗಳೆಲ್ಲವೂ ಒಂದೊಂದು ಉಳಿಪೆಟ್ಟಿದ್ದಂತೆ. ಅವಮಾನಗಳು ಎರಡು ರೀತಿ ಇರುತ್ತವೆ. ಒಂದು ನಿಮ್ಮನ್ನು ನೋಯಿಸಿದರೆ ಇನ್ನೊಂದು ನಿಮ್ಮನ್ನು ಬದಲಾಯಿಸುತ್ತದೆ. ಆದ್ದರಿಂದ ಜನರ ಟೀಕೆಗಳೆಂಬ ಕಲ್ಲುಗಳನ್ನು ಉಪಯೋಗಿಸಿಕೊಂಡು ಗೆಲುವಿನ ಕೋಟೆ ಕಟ್ಟುವುದನ್ನು ರೂಢಿಸಿಕೊಳ್ಳಬೇಕು.ಕೇಂದ್ರೀಕರಿಸಿ ನೀವು ಬಲಹೀನರು. ನಿಮ್ಮ ಕೈಯಲ್ಲಿ ಏನೂ ಆಗಲ್ಲ ಎಂದವರನ್ನು ಮರೆಯದಿರಿ. ಅವರೇ ನಿಮಗೆ ಸ್ಪೂರ್ತಿ. ಗೆಲ್ಲುವವರು ಎಂದೂ ನಿರಪಯುಕ್ತ ಮಾತುಗಳಿಗೆ ತಲೆ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ 27 ನೆಯ ದಿನದ ಶರಣ ಮಾಲಿಕೆಯಲ್ಲಿ ಡಾ.ಗಜಾನಂದ ಸೊಗಲನ್ನವರ ಅವರು ಹರಳಯ್ಯ ಮತ್ತು ಕಲ್ಯಾಣಮ್ಮ ಅವರ ಬಗೆಗೆ ಅತ್ಯಂತ ಅದ್ಭುತ ವಾಗಿ ಮಾತನಾಡಿದರು.ಸಮಾನತೆಯ ಹರಿಕಾರರು, ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಕೊಟ್ಟವರು, ಲಿಂಗಪೂಜೆಯನ್ನು ಅರುಹಿ ದವರು, ಅನುಭವ ಮಂಟಪ ಸ್ಥಾಪಿಸಿ, ಅವರಿವರೆನ್ನದೆ ಎಲ್ಲರಿಗೂ ಅನುಭಾವ ಹಂಚಿಕೊಳ್ಳಲು ಅನುವು ಮಾಡಿಕೊಟ್ಟವರು ಬಸವಣ್ಣ ನವರು ಎಂದು ಹೇಳುತ್ತಾ, “ಕಳಬೇಡ, ಕೊಲಬೇಡ” “ಎನ್ನಕಾಲೇ ಕಂಬ ” ” ವೇದಕ್ಕೆ ಒರೆ ಹಚ್ಚುವೆ ” ಎನ್ನುವ ಹಲವಾರು ಸರಳ ವಚನಗಳ ಪ್ರಸ್ತಾವನೆ ಮಾಡಿದರು.ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತರಾಗಿದ್ದ ಇವರು ಗುರುಲಿಂಗ ಜಂಗಮ ಸೇವೆಗೆ ತಮ್ಮ ತನುಮನಗಳನ್ನು ಮುಡುಪಾಗಿಟ್ಟಿದ್ದವರು. ಒಮ್ಮೆ ಬಸವಣ್ಣನವರನ್ನು ಮಾರ್ಗ ಮಧ್ಯದಲ್ಲಿ ಭೇಟಿಯಾದ ಹರಳಯ್ಯನವರು ಶರಣ ಬಸವವರಸ ಎಂದು ತಲೆಬಾಗಿ ವಂದಿಸಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು ಶರಣು ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದರು. ತಮ್ಮ ಒಂದು ಶರಣಾರ್ಥಿಗೆ ಬಸವಣ್ಣನವರು…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಬರುವ ಸೆಪ್ಟಂಬರ್ ೧೩ ಮತ್ತು ೧೪ ರಂದು ಜರುಗಲಿರುವ ಕ್ಷೇತ್ರದ ಅಧಿಪತಿ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ೯೮ನೇ ಪುಣ್ಯಾರಾಧನೆಯ ನಿಮಿತ್ಯ “ಬಂಥನಾಳದ ಜ್ಞಾನ ದಾಸೋಹಿ ಶ್ರೀ ಸಂಗನಬಸವ ಮಹಾಶಿವಯೋಗಿಗಳ” ಜೀವನ ಚರಿತ್ರೆ ಕುರಿತ ಮಹಾಪುರಾಣ ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಇದೇ ಆಗಷ್ಟ ೨೪ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಬರುವ ಸೆಪ್ಟಂಬರ್ ೧೩ರ ವರೆಗೆ ಒಟ್ಟು ೨೧ ದಿನಗಳ ವರೆಗೆ ನಿತ್ಯ ಸಂಜೆ ೬ ಗಂಟೆಗೆ ಜರುಗಲಿರುವ ಈ ಮಹಾಪುರಾಣ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ತಿಮ್ಮಾಪೂರ – ಮುದಗಲ್‌ನ ಕಲ್ಯಾಣ ಆಶ್ರಮದ ಹೆಸರಾಂತ ಪ್ರವಚನಕಾರ ಶ್ರೀ ಮಹಾಂತ ಸ್ವಾಮೀಜಿ ಭಾಗವಹಿಸಿ ನಿತ್ಯ ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಬಂಥನಾಳ ಹಾಗೂ ಲಚ್ಯಾಣ ಮಠದ ಪೂಜ್ಯ ಪೀಠದ ಪೀಠಾಧೀಶ ಶ್ರೀ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಮುಗಳಖೋಡದ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಹಾಗೂ ಯರನಾಳದ ಗುರು ಸಂಗನಬಸವ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ.ಗವಾಯಿಗಳಾಗಿ ಕಲ್ಲೂರಿನ ಶಂಕರಯ್ಯ ಆರ್.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಅಗಸ್ಟ್ 20 ಬುಧವಾರದಿಂದ ಆರಂಭವಾಗಬೇಕಿದ್ದ 2025-26 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂದೂಡಲ್ಪಟ್ಟಿದೆ.ಜಿಲ್ಲೆಯ ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಆಶ್ರಯದಲ್ಲಿ ಸಂಯೋಜಿಸಿರುವ ಈ ಕ್ರೀಡಾಕೂಟ ಮಳೆ ಹಿನ್ನೆಲೆಯಲ್ಲಿ ನಿಗದಿಪಡಿಸಿದ ಅಗಸ್ಟ್ 20 ಹಾಗೂ 21 ದಿನಾಂಕದಂದು ಜರುಗಿಸಲು ಕಷ್ಟಕರವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಲ್ಲಿ ಬಿಟ್ಟು ಬಿಡದೇ ಅಗಾಗ ಮಳೆ ಜರಿಯುತ್ತಿದೆ. ಆಟದ ಅಂಕಣಗಳು ಮಳೆಯಿಂದ ಒದ್ದೆಯಾಗಿದ್ದು ಭಾಗಶಃ ಸ್ಪಧೆ೯ಗಳು ಈ ಸಮಯದಲ್ಲಿ ನಡೆಸವುದು ಕಷ್ಟಸಾಧ್ಯವಾಗಿದೆ. ಈಗಾಗಲೇ ಕ್ರೀಡಾಕೂಟದ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಪೂರ್ಣಪ್ರಮಾಣದಲ್ಲಿ ಮಾಡಿಕೊಳ್ಳಲಾಗಿತ್ತು.ಇದೀಗ ಕ್ರೀಡಾಕೂಟ ನಡೆಸಲು ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಕ್ಷೇತ ಶಿಕ್ಷಣಾಧಿಕಾರಿ ವಸಂತ ರಾಠೋಡ ಹಾಗೂ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ ಅವರ ಮಾರ್ಗದರ್ಶನ, ಸೂಚನೆ ಅನ್ವಯ ಕ್ರೀಡಾಕೂಟವನ್ನು ಮಳೆ ಕ್ಷೀಣಿಸುವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕ್ರೀಡಾಕೂಟ ಆಯೋಜನೆಯ ಮುಂದಿನ ನಿಗದಿಪಡಿಸಿದ ದಿನಾಂಕವನ್ನು ನಂತರ ಸಂಬಂಧಿಸಿದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ಧಾರವಾಡ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಹೇಳಿದರು.ಅವರು ತಿಕೋಟಾ ತಾಲೂಕಿನ ಅರಕೇರಿಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ವಿದ್ಯಾರ್ಥಿಗಳ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪಠ್ಯದಿಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿ ಜೀವನವನ್ನು ಅತ್ಯಂತ ಸದುಪಯೋಗಪಡೆದುಕೊಂಡು ಉನ್ನತ ಹುದ್ದೆ ಹೊಂದುವ ಮೂಲಕ ಮಾದರಿ ಎನಿಸಿಕೊಳ್ಳಬೇಕು. ಶಿಕ್ಷಣದ ಜೊತಗೆ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಅಧ್ಯಯನಶೀಲತೆ ಹಾಗೂ ದೃಢ ನಿಶ್ಚಯ ಹೊಂದಿ, ಆ ದಿಸೆಯಲ್ಲಿ ಸಾಗಬೇಕು. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಸದುಪಯೋಗ ಪಡೆದು ಕಲಿಕೆಯ ಕಡೆ ಗಮನ ಹರಿಸಬೇಕು ಎಂದು ಮಕ್ಕಳಿಗೆ ಹೇಳಿದರು.ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನೀವು ತಂದೆ-ತಾಯಿಗಳಿಂದ ದೂರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಿಕೋಟಾ ತಾಲೂಕಿನ ಜಾಲಗೇರಿ ಗ್ರಾಮದ ರಿಸನಂ.೩೧೬/*/೧ರಲ್ಲಿ ೧೦ಎಕರೆ ೧೮ಗುಂಟೆ ಸರ್ಕಾರಿ ಹುಲ್ಲು ಗಾವಲು ಜಮೀನನ್ನು ೨೨೦ ಕೆ.ವಿ. ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಹಾಗೂ ವಸತಿ ಗೃಹ ನಿರ್ಮಾಣ ಮಾಡಲು ವಿಜಯಪುರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರಿಗೆ ಮಂಜೂರು ಮಾಡಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ ೩೦ ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಇಂಡಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಂಡಿ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ:೧೯-೦೮-೨೦೨೫ ರಿಂದ ೦೧-೦೯-೨೦೨೫ ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಸಂಬAಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
