ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕೇಂದ್ರ ಸರ್ಕಾರ ದಸರಾ ಹಬ್ಬದ ಕೊಡುಗೆಯಾಗಿ 4ರ ಬದಲಿಗೆ 2 ಸ್ತರದ ಜಿಎಸ್‌ಟಿ ಜಾರಿಗೊಳಿಸಿದ್ದು, ನಿತ್ಯ ಬಳಕೆಯ ವಸ್ತುಗಳು, ಔಷಧಿಗಳು ಸೇರಿ 375 ವಸ್ತುಗಳು ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ದೊರಕುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿ ಸೋಮವಾರ ಶಾಸಕ ಜಗದೀಶ ಗುಡಗುಂಟಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ನಗರದ ಹಳೆಯ ತಹಸೀಲ್ದಾರ್ ಕಚೇರಿಯಿಂದ ಹನುಮಾನ್ ಚೌಕ್‌ವರೆಗೆ ಮೆರವಣಿಗೆ ನಡೆಸಿ ಮೋದಿ ಪರ ಘೋಷಣೆ ಕೂಗಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜಗದೀಶ ಗುಡಗುಂಟಿ, ಕೇಂದ್ರ ಸರ್ಕಾರ ಜನಪರ ಯೋಜನೆ ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. 140 ಕೋಟಿ ಜನರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಒಂದು ದೇಶ ಒಂದು ತೆರಿಗೆ ಯೋಜನೆ ಜಾರಿಗೆ ತರಲಾ ಗಿದೆ. ಉತ್ಪಾದಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತ ನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲ ದೇಶವಾಸಿಗಳಿಗೆ ಒಂದೇ ರೀತಿಯ ತೆರಿಗೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ದೇಶವನ್ನು ವಿಶ್ವಗುರು ಮಾಡಲು ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.
ವಿ.ಪ. ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷ ಡಾ. ವಿಜಯಲಕ್ಷ್ಮೀ ತುಂಗಳ, ಸಿ.ಟಿ. ಉಪಾಧ್ಯಾಯ, ಶ್ರೀಧರ ಕಂಬಿ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಸುರೇಶಗೌಡ ಪಾಟೀಲ, ಈಶ್ವರ ಆದೆಪ್ಪನವರ, ಶಂಕರ ಕಾಳೆ, ಗಣೇಶ, ಸಿರಗಣ್ಣ ವರ, ಸಂಗು ದಳವಾಯಿ, ಗುರು ಪಾದಪ್ಪ ಮೆಂಡಿ ಗೇರಿ, ಯಮನೂರು ಮುಲಂಗಿ, ಶಂಕರ ಕಾಳೆ, ಪ್ರಶಾಂತ ಶಂಕ್ರಪ್ಪಗೋಳ, ರಾಜಾಸಾಬ ಕಡಕೋಳ, ಪ್ರಶಾಂತ ಗಾಯಕವಾಡ, ಪ್ರಕಾಶ ಅರಕೇರಿ, ಹನುಮಂತ ಲಿಗಾಡಿ, ಪ್ರದೀಪ ನಂದೆಪ್ಪನವರ, ಸುಜೀತಗೌಡ ಪಾಟೀಲ, ವಿಶ್ವಾಸ ಪಾಟೀಲ, ಎಂ.ಬಿ. ನ್ಯಾಮಗೌಡ, ಸಿದ್ದು ನ್ಯಾಮಗೌಡ ಇಬ್ಬರು.

