ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಹಾವಿನಾಳ ಗ್ರಾಮದ ಶ್ರೀದತ್ತ ಇಂಡಿಯಾ ಸಕ್ಕರೆ ಕಾಖಾನೆಯಲ್ಲಿ ಸೋಮವಾರ ಘಟಸ್ಥಾಪನೆಯ ಮೂಹೂರ್ತದಲ್ಲಿ ಕಾರ್ಖಾನೆಯ ಬಾಯಲರ್ ಅಗ್ನಿ ಪ್ರದೀಪನ ಪೂಜೆ ಮಾಡಲಾಯಿತು.
ಬಾಯಲರ್ ಅಗ್ನಿ ಪ್ರದೀಪನವನ್ನು ಶ್ರೀಕೃಷ್ಣ ದೇವಸ್ಥಾನ ಕಮೀಟಿಯ ಅಧ್ಯಕ್ಷ ಶ್ಯಾಮಸುಂದರ್ ಶಾಸ್ತ್ರಿ ಅವರು ಪೂಜೆ ನೆರವೇರಿಸಿದರು.
ಕಂಪನಿಯ ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಮಾತನಾಡಿ, ಇದು ನಮ್ಮ ಕಂಪನಿಯ ನಾಲ್ಕನೆಯ ಕಬ್ಬು ನುರಿಸುವಿಕೆ ಹಂಗಾಮವಿದ್ದು, ಪ್ರಸಕ್ತ ಸಾಲಿನ ಕಬ್ಬು ನುರಿಸುವಿಕೆಯನ್ನು ಅ.೨೦ ರಿಂದ ಪ್ರಾರಂಭಿಸಲಾಗುವುದು. ಆದ್ದರಿಂದ ಈ ಭಾಗದ ರೈತರು ತಾವು ಬೆಳೆದ ಕಬ್ಬನ್ನು ಶ್ರೀದತ್ತ ಇಂಡಿಯಾ ಕಾರ್ಖಾನೆಗೆ ನುರಿಸಲು ಕಳುಹಿಸುವಂತೆ ವಿನಂತಿ ಮಾಡಿದರು.
ಕಬ್ಬು ಬೆಳೆಗಾರರ ಕಬ್ಬಿನ ಬಿಲ್, ಕಟಾವು ಸಾಗಾಣಿಕೆಯ ಬಿಲ್ ಸರಕಾರದ ನಿಯಮದ ಪ್ರಕಾರ ಸರಿಯಾದ ವೇಳೆಗೆ ರೈತರಿಗೆ ಪಾವತಿ ಮಾಡಲಾಗುವದೆಂದು ಹೇಳಿದ ಅವರು, ಪ್ರಸಕ್ತ ಸಾಲಿನಲ್ಲಿ ೭ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಎಂದರು..
ಈ ಕಾರ್ಯಕ್ರಮದಲ್ಲಿ ಕಂಪನಿಯ ಸಂಚಾಲಕ ಚೇತನ ಧಾರು, ರಾಜ್ಯ ಶಿಕರ್ ಬ್ಯಾಂಕಿನ ಸಂಚಾಲಕ ಅವಿನಾಶ ಮಹಾಗಾವಕರ, ಆಡಳಿತ ಅಧಿಕಾರಿ ರವೀಂದ್ರ ಗಾಯಕವಾಡ, ಜನರಲ್ ಮ್ಯಾನೇಜರ (ಟೆಕ್ನಿಕಲ್) ಜಿತೇಂದ್ರ ಮೆಟಕರಿ, ಜನರಲ್ ಮ್ಯಾನೇಜರ (ಉತ್ಪಾದನೆ) ಶ್ರೀಕಾಂತ ಕುಂಬಾರ, ಜನರಲ್ ಮ್ಯಾನೇಜರ (ಕಬ್ಬು) ಅನಿರುದ್ಧ ಪಾಟೀಲ, ರವೀಂದ್ರ ಬಿರಾಜದಾರ, ವಿಜಯಕುಮಾರ ಹತ್ತೂರೆ, ಸುದರ್ಶನ ಕವಜಲಗಿ, ಸಂಗ್ರಾಮ ಸೂರ್ಯವಂಶಿ, ಧನಂಜಯ ಪಾಟೀಲ, ಸಚೀನ ನಿಕ್ಕಮ್, ಪ್ರವೀಣ ಜಾಧವ, ವಿನಾಯಕ ಪೂಜಾರಿ, ಮಹಮ್ಮದಹನಿಫ ನದಾಫ ಸೇರಿದಂತೆ ಕಾರ್ಖಾನೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಬ್ಬು ಬೆಳೆಗಾರರು ಉಪಸ್ಥಿತರಿದ್ದರು.

