ಉದಯರಶ್ಮಿ ದಿನಪತ್ರಿಕೆ
ಚಡಚಣ: ಸ್ಥಳೀಯ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಗಠಾಣ ಮತಕ್ಷೇತ್ರದ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರ ೭೫ನೇ ಹುಟ್ಟು ಹಬ್ಬದ ಪ್ರಯುಕ್ತ ಮಂಗಳವಾರ ಬಿಜೆಪಿ ಕಾರ್ಯಕರ್ತರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ರಕ್ತದಾನ ಶಿಬಿರದಲ್ಲಿ ನಾಗಠಾಣ ಮತಕ್ಷೇತ್ರದ ಮುಖಂಡ ಸಂಜು ಐಹೊಳೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ನಾಯಕ, ನಾಗಠಾಣ ಮಂಡಲ ಅದ್ಯಕ್ಷ ಸಿದಗೊಂಡ ಬಿರಾದಾರ ,ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ಯುವ ಮೋರ್ಚಾ ಅಧ್ಯಕ್ಷ ಕೇದಾರ ಸಾಳುಂಕೆ, ಎಸ್ ಸಿ ಮೋರ್ಚಾ ಅದ್ಯಕ್ಷ ವಿನೋದ್ ಕೋಳೂರಗಿ, ಪ್ರಧಾನ ಕಾರ್ಯದರ್ಶಿ ಕೇದಾರ ವಾಳಿಖಿಂಡಿ, ಜಿಲ್ಲಾ ಮೀನುಗಾರಿಕೆ ಸಹಸಂಚಾಲಕ ಮಹೇಶ ಶಿಂಧೆ, ಸಿದ್ದರಾಮ ಬಗಲಿ, ಪ್ರಮೋದ್ ಮಠ, ಮಾದೇವ ಯಂಕಂಚಿ, ಬಸವರಾಜ್ ಅವಟಿ, ಅಜಿತ್ ದೇವಕೂಳೆ ಎಲ್ಲ ಪದಾಧಿಕಾರಿಗಳು ಭಾಗವಹಿಸಿ ಸುಮಾರು ೮೧ ಬಿಜೆಪಿ ಕಾರ್ಯಕರ್ತರು ಯುವಕರು ರಕ್ತದಾನ ಮಾಡಿದರು.

