Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗ ಜಿಲ್ಲಾಡಳಿತ ಹಾಗೂ ವಿಜಯಪುರ ರೋಟರಿ ಕ್ಲಬ್‌ನ ಇವರ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಮಾತನಾಡಿ, ವಿಭಾಗದ ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಬಸ್‌ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಾಲಯ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ. ಪರವಾನಿಗೆದಾರರು ಪ್ರತಿನಿತ್ಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಲು ಬಸ್ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ ಎಂಬ ವಾಟ್ಸ್-ಅಪ್ ಗ್ರೂಪ್ ರಚಿಸಿಕೊಂಡು ಅಲ್ಲಿ ಪ್ರತಿ ದಿನ ಮೂರು ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತಾಗಿ ಜಿಪಿಎಸ್ ಫೋಟೊ ಅಪ್‌ಲೋಡ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಸಂಸ್ಥೆಯ ಸಿಬ್ಬಂದಿಗಳು ಹಾಗೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೦೨೫-೨೬ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಕ್ಟೋಬರ್ ೧೪ರವರೆಗೆ ಇಲಾಖೆ ವೆಬ್‌ಸೈಟ್ https://bcwd.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: ೮೦೫೦೭೭೦೦೦೪ ಹಾಗೂ ೮೦೫೦೭೭೦೦೦೫ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಪ್ರಸ್ತಾವಿತ ೧*೧೦ ಎಂವ್ಹಿಎ, ೧೧೦/೧೧ಕೆವ್ಹಿ ವಿದ್ಯುತ್ ಉಪ ಕೇಂದ್ರ ಮತ್ತು ೧೧೦ ಕೆವಿ ದ್ವಿ-ಮಾರ್ಗ ಗೋಪುರದ ಮೇಲೆ ಒಂಟಿ ವಿದ್ಯುತ್ ಮಾರ್ಗವನ್ನು ಹಾಲಿ ಇರುವ ೧೧೦ ಕೆವ್ಹಿ ಉಕ್ಕಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಒಂದು ಟರ್ಮಿನಲ್ ಬೇ ನಿರ್ಮಿಸುವ ಮೂಲಕ ೧೫.೫೮೯ ಕಿ.ಮೀ. ವಿದ್ಯುತ್ ಮಾರ್ಗವನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಅ.೯ರಂದು ಮಧ್ಯಾಹ್ನ ೧೨ ರಿಂದ ೩ ಗಂಟೆಯವರೆಗೆ ಶಿವಣಗಿ ಐಪಿ, ಬಹು ಗ್ರಾಮ ನೀರು ಸರಬರಾಜು, ಯಂಭತ್ನಾಳ ಐಪಿ, ಹಡಗಲಿ ಐಪಿ, ರಾಮತೀರ್ಥ ಐಪಿ ಹಾಗೂ ಶಿವಣಗಿ ಎನ್.ಜೆ.ವಾಯ್. ಫೀಡರ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸೈನಿಕ ವಿಶ್ರಾಂತಿ ಗೃಹದಲ್ಲಿ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗೆ ತಂಗಲು ಕೊಠಡಿಗಳು ಲಭ್ಯವಿದ್ದು, ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಲು ಹಾಗೂ ಮುಂಗಡ ಪಾವತಿಗಾಗಿ ಇಲಾಖೆಯ ಸಿಬ್ಬಂದಿ ರಾವಸಾಹೇಬ ಮೇಣಸಂಗಿ ಅವರ ಮೊಬೈಲ್ ಸಂಖ್ಯೆ: ೯೫೯೧೬೭೫೬೨೩ ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ: ೦೮೩೫೨- ೨೫೦೯೧೩ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದ ರಿ.ಸನಂ: ೮೪ರ ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದಿಂದ ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ವಿದ್ಯುತ್ ಪ್ರಸರಣ ಸ್ವಿಟ್ಚಿಂಗ್ ಸ್ಟೇಷನ್‌ಗಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಮಂಜೂರಾದ ಜಮೀನನ್ನು ಕಾಲುದಾರಿಯ ಮಾರ್ಗ ಬದಲಾವಣೆ ಮಾಡಲು ಉದ್ದೇಶಿಸಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ ೩೦ ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಕೆರೆ ಹಾಗೂ ತಡವಲಗಾ ಕ್ಯಾನಲ್‌ಗೆ ಬುಧವಾರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹೊರ್ತಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೆರೆ ಭರ್ತಿಯಾಗಿ ಏರಿ ಕುಸಿತ ಕಂಡ ಹಿನ್ನಲೆಯಲ್ಲಿ ರೈತರ ಹೊಲಗಳಿಗೆ ನೀರು ಹರಿದು ಬೆಳೆ ಹಾನಿ ಸೇರಿದಂತೆ ಹಾನಿಗೊಳಗಾದ ಪ್ರದೇಶವನ್ನು ಸಮೀಕ್ಷೆ ನಡೆಸಿ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಅಕ್ಟೋಬರ ೨ ರಂದು ಹೆಚ್ಚಿನ ಪ್ರಮಾಣದ ಏರಿಯ ಕುಸಿತ ಕಂಡ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಕೆರೆಯ ಕೋಡಿಯಿಂದ ಸುಮಾರು ೩೦ ಮೀಟರ ದೂರದಲ್ಲಿ ಹಾಗೂ ಕುಸಿತ ಕಂಡುಬಂದ ಸ್ಥಳದಿಂದ ೫೦ ಮೀಟರ ಅಂತರದಲ್ಲಿ ಕ್ರಮೇಣವಾಗಿ ನೀರನ್ನು ಹೊರಗೆ ಹಾಕಲು ಕೃತಕವಾಗಿ ಕೆರೆಯ ಏರಿಯಲ್ಲಿ ಚಾನಲ್ ನಿರ್ಮಾಣ ಮಾಡಿ ಈಗಾಗಲೇ ಹಂತ ಹಂತವಾಗಿ ನೀರನ್ನು ಹೊರಹಾಕಲಾಗಿದ್ದು, ಕುಸಿತ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಲ್ಲಿನ ದೇಸಾಯಿ ವೃತ್ತದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ಮೂಲಕ ರಸ್ತೆ ತಡೆ ಮಾಡಿ ತಹಶೀಲ್ದಾರ ಅನೀಲ ಬಡಿಗೇರಗೆ ಮನವಿ ಸಲ್ಲಿಸಿದರು.ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯದ ಹಿಂದೆ ಯಾರು ಇದ್ದಾರೆ ಎಂಬುದನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಪ್ರಧಾನಮಂತ್ರಿಗಳು ಘಟನೆಯನ್ನು ಖಂಡಿಸಿ ಬಿಟ್ಟರೆ ಸಾಲದು, ನಿಮ್ಮ ಮೇಲೆ ಜನರಿಗೆ ಸಂಶಯ ಮೂಡದಂತೆ ಸಂವಿಧಾನ ಬದ್ದವಾಗಿ ನಡೆದುಕೊಳ್ಳಬೇಕು ಈ ಹೇಯ ಕೃತ್ಯವನ್ನು ಖಂಡಿಸುತ್ತೆನೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಇಲ್ಲಿನ ದೇಸಾಯಿ ವೃತ್ತದಲ್ಲಿ ಬುಧವಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಪ್ರತಿಭಟನೆ ಮೂಲಕ ರಸ್ತೆ ತಡೆ ಮಾಡಿ…
ಪೂರ್ವತಯಾರಿ ಇಲ್ಲದ, ಗೊಂದಲದ ಸಮೀಕ್ಷೆ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಆರೋಪ ಬೆಂಗಳೂರು: ರಾಜಕೀಯ ಒತ್ತಡಕ್ಕೆ ಮಣಿದು ಪೂರ್ವ ಸಿದ್ಧತೆಗಳಿಲ್ಲದೆ ಹಿಂದುಳಿದ ವರ್ಗಗಳ ಆಯೋಗವು ಆತುರಾತುರವಾಗಿ ಸಮೀಕ್ಷೆ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಗೊಂದಲದಿಂದ ಕೂಡಿದ್ದು, ಅಪ್ರಸ್ತುತ ಪ್ರಶ್ನೆಗಳನ್ನು ಪ್ರಶ್ನಾವಳಿಯಲ್ಲಿ ಸೇರಿಸಲಾಗಿದೆ ಎಂದು ಕಿಡಿಕಾರಿದರು.ಸರಕಾರ ದಿನಕ್ಕೊಂದು ಬದಲಾವಣೆ ಹೇಳುತ್ತಿದೆ. ಆಯೋಗವು ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ, ಯಾರದೋ ಒತ್ತಡಕ್ಕೆ ಮಣಿದು ಗಣತಿ ಮಾಡುತ್ತಿದೆ. 60 ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಪ್ರಶ್ನೆಗಳಿಗೆ ಸ್ವತಃ ಡಿಸಿಎಂ ಕೂಡ ಉತ್ತರಿಸಲು ಸಾಧ್ಯವಾಗಿಲ್ಲ, ಇನ್ನು ಒಬ್ಬ ಸಾಮಾನ್ಯ ವ್ಯಕ್ತಿ ಆ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತಾನೆ? ಇದು ಅವೈಜ್ಞಾನಿಕವಾಗಿದೆ. ಪ್ರಶ್ನಾವಳಿಯಲ್ಲಿ ಹಲವು ಅಪ್ರಸ್ತುತ ಪ್ರಶ್ನೆಗಳಿವೆ. ಇದರಿಂದ ಶಿಕ್ಷಕರು ಕೂಡ ಅನಾನುಕೂಲಗಳನ್ನು ಎದುರಿಸುತ್ತಿದ್ದಾರೆ.ಅವರಿಗೂ ಕುಟುಂಬ, ಎಲ್ಲವೂ ಇರುತ್ತದೆ. ವಿಕಲಚೇತನರನ್ನೂ ಬಳಸಿಕೊಂಡಿದ್ದು ಸಾಕಷ್ಟು ಟೀಕೆಗಳು ಬಂದಿವೆ. ಹಾಸನದ ಬೇಲೂರಿನಲ್ಲಿ…
ಲೇಖನ- ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆಫೋ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಮನುಷ್ಯರಾದ ನಾವು ಜೀವನೋಪಾಯಕ್ಕಾಗಿ ಯಾವುದೇ ಉದ್ಯೋಗವನ್ನು ಕೈಗೊಂಡರೂ ಅದರ ಹಿಂದಿರುವ ನಗ್ನ ಸತ್ಯ ಅದು ‘ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ’ಯೇ ಎಂದು ದಾಸರುಗಳು ಹೇಳಿದ್ದಾರೆ. ಆ ಮಾತು ಸಾರ್ವತ್ರಿಕ ಸತ್ಯವೂ ಹೌದೆನ್ನಬಹುದು. ಮನುಷ್ಯ ತಾನು ದುಡಿದದ್ದೆಲ್ಲ ತನ್ನ ಗೇಣುದ್ದದ ಹೊಟ್ಟೆಗಾಗಿ ಎಂದು ತನ್ನ ದುಡಿತದ ಅವಧಿಯಲ್ಲಿ ದುಡಿದ ಮೊತ್ತವನ್ನೆಲ್ಲಾ ಸಂಪೂರ್ಣವಾಗಿ ಖರ್ಚು ಮಾಡುತ್ತಾ ಹೋದರೆ ಪರಿಸ್ಥಿತಿ ಹೇಗಿರಬಹುದು ಎಂದು ಒಂದು ಕ್ಷಣ ಯೋಚಿಸುವುದು ಉತ್ತಮ. ದುಡಿಮೆ ಮಾಡದೇ ಇರುವವರು ಯಾರೂ ಇರಲಾರರೆಂದು ಹೇಳಬಹುದಾಗಿದ್ದು, ಆದರೆ ದುಡಿದು ಆದಾಯ ಗಳಿಸುವ ವಿಧಾನಗಳು ಮಾತ್ರ ಬೇರೆ ಬೇರೆ ಇರಬಹುದಷ್ಟೇ. ಸಾಮಾನ್ಯವಾಗಿ ಮನುಷ್ಯನ ದೇಹ ಮತ್ತು ಮನಸ್ಸು ನಿರಂತರವಾಗಿ ಎಲ್ಲಾ ವಯಸ್ಸಿನಲ್ಲಿಯೂ ದುಡಿಯಲು ಏಕ ಪ್ರಕಾರವಾಗಿ ಸಹಕರಿಸುವುದಿಲ್ಲ. ಹಾಗಾಗಿ ಯೌವನದಲ್ಲಿ ದುಡಿದ ಮೊತ್ತದ ಒಂದು ಪಾಲನ್ನು ಮುಪ್ಪಿನಲ್ಲಿ ಬಳಸಿಕೊಳ್ಳುವಂತಾಗಬೇಕೆಂದರೆ ದುಡಿಯುತ್ತಿರುವಾಗಲೇ ನಿರಂತರವಾಗಿ ನಿರ್ದಿಷ್ಟ ಮೊತ್ತದ ಉಳಿತಾಯವನ್ನು ಪ್ರಾರಂಭಿಸಲೇಬೇಕು. ಇಲ್ಲವೆಂದಾದಲ್ಲಿ ‘ಯುದ್ಧಕಾಲೇ…
ಉತ್ತರ ಕರ್ನಾಟಕ ಭಾಗದ ಮಕ್ಕಳಿಗೆ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮೂಲಕ ಹೊಸ ಬದುಕು ನೀಡುತ್ತಿರುವ ಆಸ್ಪತ್ರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆ ಆಗಿರುವ ನಾರಾಯಣ ಹೆಲ್ತ್ ಸಿಟಿಯು ಗಂಭೀರವಾದ ರಕ್ತ ಮತ್ತು ರೋಗನಿರೋಧಕ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಪೀಡಿಯಾಟ್ರಿಕ್ ಸ್ಟೆಮ್ ಸೆಲ್ ಟ್ರಾನ್ಸ್ ಪ್ಲಾಂಟೇಶನ್ ಮೂಲಕ ಚಿಕಿತ್ಸೆ ನೀಡಿ ಅತ್ಯುತ್ತಮ ಸಾಧನೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ.ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಹೆಮಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್, ಪೀಡಿಯಾಟ್ರಿಕ್ ಆಂಕಾಲಜಿ ಕನ್ಸಲ್ಟೆಂಟ್ ಡಾ. ಶೋಭಾ ಬಡಿಗೇರ್ ಅವರು ವಿಜಯಪುರ, ಬಾಗಲಕೋಟೆ, ರಾಯಚೂರು ಮತ್ತು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಮಕ್ಕಳಿಗೆ ಯಶಸ್ವಿಯಾಗಿ ಈ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಗಳನ್ನು ನಡೆಸಿದ್ದಾರೆ ಮತ್ತು ಆ ಮೂಲಕ ಅದೆಷ್ಟೋ ಕುಟುಂಬಗಳ ಮನೆಗೆ ಆಶಾಕಿರಣವಾಗಿ ಮೂಡಿಬಂದಿದ್ದಾರೆ.ಈ ಮಕ್ಕಳ ಪೈಕಿ ಕೆಲವರು ಗಂಭೀರವಾದ ಥಲಸ್ಸೇಮಿಯಾ ಮೇಜರ್ (ಇದು ಹುಟ್ಟಿನಿಂದಲೇ ಬರುವ ಗಂಭೀರ ರಕ್ತ ಸಮಸ್ಯೆಯಾಗಿದ್ದು,…
