ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಲ್ಲಿನ ದೇಸಾಯಿ ವೃತ್ತದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ಮೂಲಕ ರಸ್ತೆ ತಡೆ ಮಾಡಿ ತಹಶೀಲ್ದಾರ ಅನೀಲ ಬಡಿಗೇರಗೆ ಮನವಿ ಸಲ್ಲಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯದ ಹಿಂದೆ ಯಾರು ಇದ್ದಾರೆ ಎಂಬುದನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಪ್ರಧಾನಮಂತ್ರಿಗಳು ಘಟನೆಯನ್ನು ಖಂಡಿಸಿ ಬಿಟ್ಟರೆ ಸಾಲದು, ನಿಮ್ಮ ಮೇಲೆ ಜನರಿಗೆ ಸಂಶಯ ಮೂಡದಂತೆ ಸಂವಿಧಾನ ಬದ್ದವಾಗಿ ನಡೆದುಕೊಳ್ಳಬೇಕು ಈ ಹೇಯ ಕೃತ್ಯವನ್ನು ಖಂಡಿಸುತ್ತೆನೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಇಲ್ಲಿನ ದೇಸಾಯಿ ವೃತ್ತದಲ್ಲಿ ಬುಧವಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ ಬಣ) ನೇತೃತ್ವದಲ್ಲಿ ಪ್ರತಿಭಟನೆ ಮೂಲಕ ರಸ್ತೆ ತಡೆ ಮಾಡಿ ತಹಶೀಲ್ದಾರ ಅನೀಲ ಬಡಿಗೇರಗೆ ಮನವಿ ಸಲ್ಲಿಸಿದರು.
ಜಿಲ್ಲಾಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ ಇಡೀ ದೇಶದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೀನ ಕೃತ್ಯ ನಡೆದಿದೆ, ಇದು ದೇಶದ ಇತಿಹಾಸದಲ್ಲಿಯೇ ಮೊಟ್ಟಮೊದಲು. ಈ ಹೀನ ಕೃತ್ಯ ನೋಡಿದರೆ ಬಹುಶಃ ದೇಶದಲ್ಲಿ ಸಂವಿಧಾನದಿಂದ ಅಸ್ಪೃಶ್ಯರು ಉನ್ನತ ಹುದ್ದೆಯಲ್ಲಿ ಇರುವ ಬಗ್ಗೆ ಅಸಹಿಷ್ಣತೆಯ ಹೇಳಿಕೆ ಇರಬಹುದು ಆದರಿಂದ ಈ ದೇಶದ ಸಂವಿಧಾನದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಮದ್ಯ ಪ್ರವೇಶಿಸಿ ಆ ವ್ಯಕ್ತಿ ಮೇಲೆ ಸ್ವಯಂ ಪ್ರೇರಿತ ದೇಶದ್ರೋಹ ಪ್ರಕರಣ ದಾಖಲು ಮಾಡಿ ತನಿಖೆ ಮಾಡಬೇಕು ಎಂದರು.
ಮುಖಂಡ ತೌಫೀಕ ಪಾರ್ಥನಳ್ಳಿ, ಬಸವಕೇಂದ್ರ ಅಧ್ಯಕ್ಷ ರವಿ ಯಡಹಳ್ಳಿ, ವಕೀಲ ಶಶಿಕಾಂತ ದೊಡಮನಿ, ಶರಣಕುಮಾರ ಕಂಬಾಗಿ, ಅಶೋಕ ಕಾಂಬಳೆ, ಸೂರಜ ಕುಡ್ರಾಣಿ, ಕುಮಾರ ಆಲಗೂರ, ಸಂಗಮೇಶ ಕಾಂಬಳೆ, ಸದಾಶಿವ ಐನಾಪುರ ಬಸವರಾಜ ದೊಡಮನಿ, ಪರಸು ಕಾಂಬಳೆ, ಅಮೀತ ಸೂರಗೊಂಡ ಸೇರಿದಂತೆ ಇತರರು ಇದ್ದರು.
ದಸಂಸ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ, ರವಿ ಬಬಲೇಶ್ವರ, ವಕೀಲ ದೊಡ್ಡಮನಿ, ಸದಾಶಿವ ಬಿದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕೀಲರಿಂದ ಕಲಾಪ ಬಹಿಷ್ಕಾರ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಮೇಲೆ ಶೂ ಎಸೆದ ಕೃತ್ಯ ಖಂಡಿಸಿ, ನ್ಯಾಯಾಂಗದ ವ್ಯವಸ್ಥೆ ಮೇಲೆ ಅತೀಕ್ರಮನ ಮಾಡಿದಂತಾಗಿದೆ, ಅವರ ಮೇಲೆ ಕಾನೂನು ಕ್ರಮ ಕೈಗೊಂಡು ವಕೀಲ ವೃತ್ತಿಯಿಂದ ವಜಾಮಾಡಬೇಕು ಎಂದು ಅಗ್ರಹಿಸಿ ಇಲ್ಲಿನ ವಕೀಲ ಸಂಘ ಕೋರ್ಟ್ ನಿಂದ ಹೊರಗುಳಿದರು.

