Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೀತಿನ್ ನಬೀನ್ ನೇಮಕಗೊಂಡ ಹಿನ್ನೆಲೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಜೆಪಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೀತಿನ್ ನಬೀನ್ ನೇಮಕಗೊಂಡ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಮಾವೇಶಗೊಂಡ ಬಿಜೆಪಿ ಮುಖಂಡರು, ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಇದೆ, ಯಾರು ಪಕ್ಷಕ್ಕಾಗಿ ದುಡಿಯುತ್ತಾರೋ ಅವರಿಗೆ ಹುದ್ದೆ ಒಲಿದು ಬರುತ್ತದೆ, ಯುವಕರಾಗಿರುವ ನೀತಿನ್ ನಬೀನ್ ಅವರಿಗೆ ದೊಡ್ಡ ಹುದ್ದೆಯನ್ನು ಪಕ್ಷ ನೀಡಿದೆ, ಅವರ ಸಾರಥ್ಯದಲ್ಲಿ ಪಕ್ಷ ಇನ್ನಷ್ಟೂ ಉತ್ಸಾಹ ಭರಿತವಾಗಿ ಮುನ್ನಡೆಯಲಿದೆ ಎಂದರು.ಬಿಜೆಪಿ ಬಗ್ಗೆ ಜನತೆ ಅಪಾರ ಒಲವು ಹೊಂದಿದ್ದಾರೆ, ಪ್ರಧಾನಿ ಮೋದಿಜಿ ಅವರ ಆಡಳಿತವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯೇ ಸಾಕ್ಷಿ, ಬಿಹಾರ ಚುನಾವಣೆಯಲ್ಲಿಯೂ ಜಯಬೇರಿ ಬಾರಿಸಿದ್ದ ಬಿಜೆಪಿ ಈಗ ಗೆಲುವಿನ ಅಲೆಯಲ್ಲಿ ಮುನ್ನಡೆಯುತ್ತಿದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣ ನದಿ ತೀರದಲ್ಲಿ ಗಾನಯೋಗಿ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಪವಿತ್ರವಾದ ಕೃಷ್ಣ ನದಿಯನ್ನು ಸ್ವಚ್ಛವಾಗಿ ಕಾಪಾಡಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು.ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ ಆರ್.ಕೆ. ಅವರು, “ನದಿ ನಮ್ಮ ತಾಯಿ. ಕೇವಲ ಪೂಜೆ ಮಾಡುವುದಕ್ಕಿಂತಲೂ ನದಿಯನ್ನು ಕಾಪಾಡುವುದೇ ನಿಜವಾದ ಭಕ್ತಿ. ನಂಬಿಕೆ ಹೆಸರಲ್ಲಿ ನದಿಗಳಿಗೆ ಕಸ, ಬಟ್ಟೆ, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಗ್ರಿಗಳನ್ನು ಬಿಸಾಡುವುದು ಧರ್ಮವಲ್ಲ; ಅದು ಪ್ರಕೃತಿಗೆ ಮಾಡಿದ ಅಪರಾಧ” ಎಂದು ಹೇಳಿದರು.ಸ್ವಚ್ಛ ನದಿ ಎಂದರೆ ಆರೋಗ್ಯಕರ ಸಮಾಜ ಹಾಗೂ ಭವಿಷ್ಯ ಎಂದು ಅವರು ತಿಳಿಸಿದರು.ಇಂದು ಮಾಡಿರುವ ಸ್ವಚ್ಛತಾ ಕಾರ್ಯ ಸಣ್ಣ ಪ್ರಯತ್ನವಾಗಿರಬಹುದು, ಆದರೆ ನಾಳೆಯ ದೊಡ್ಡ ಬದಲಾವಣೆಗೆ ಇದು ಮಹತ್ವದ ಮೊದಲ ಹೆಜ್ಜೆಯಾಗಿದೆ. ಸಾರ್ವಜನಿಕರು ತಮ್ಮ ಹೊಣೆಗಾರಿಕೆಯನ್ನು ಅರಿತು ನದಿ, ಪರಿಸರ ಮತ್ತು ಪ್ರಕೃತಿಯನ್ನು ಕಾಪಾಡುವಲ್ಲಿ ಕೈಜೋಡಿಸಬೇಕು ಎಂದು ಸಂಘದ ಸದಸ್ಯರು ಮನವಿ ಮಾಡಿದರು.ಈ ಸಂದರ್ಭದಲ್ಲಿ ವಿಕಾಸ್, ರವಿ, ಸಚಿನ್, ರಾಜಕುಮಾರ್, ವೀರೇಶ್,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ : ಅದಾನಿ ಸಂಸ್ಥೆಯ ಭಾಗವಾಗಿರುವ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಪರಿಹಾರ ಒದಗಿಸುವ ಕಂಪನಿಯಾದ ಎಸಿಸಿ, ಗುತ್ತಿಗೆದಾರರಿಗೆ ತಾಂತ್ರಿಕ ಪರಿಣತಿ, ವಿನೂತನ ಸೇವೆಗಳು ಮತ್ತು ನಿರಂತರ ಸೈಟ್ ಸಮಾಲೋಚನಾ ಮಾರ್ಗದರ್ಶನ ಒದಗಿಸುವ ಮೂಲಕ ಕರ್ನಾಟಕದಾದ್ಯಂತ ಇರುವ ಗುತ್ತಿಗೆದಾರರ ಜೊತೆಗಿನ ಸಂಬಂಧವನ್ನು ಬಲಪಡಿಸಿಕೊಳ್ಳುತ್ತಿದೆ. ವಿಜಯಪುರದಲ್ಲಿ, ನಿರ್ಮಾಣ ಕ್ಷೇತ್ರದಲ್ಲಿ 15 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿರುವ ಗುತ್ತಿಗೆದಾರ ಮಹೇಶ್ ಬಿರಾದಾರ್ ಅವರು, ಎಸಿಸಿಯೊಂದಿಗೆ ಕೈಜೋಡಿಸಿದ ನಂತರ ಲಭಿಸಿದ ಪ್ರಯೋಜನಗಳ ಕಾರಣದಿಂದ ತಮ್ಮ ಕೆಲಸದ ವಿಧಾನಗಳನ್ನು ಹೊಸ ರೂಪಕ್ಕೆ ತಂದಿದ್ದಾರೆ.ಹಲವು ವರ್ಷಗಳಿಂದ ಮಹೇಶ್ ಅವರು ಒಂದೇ ಸಿಮೆಂಟ್ ಬ್ರ್ಯಾಂಡ್ ಅನ್ನು ಅವಲಂಬಿಸಿದ್ದರು ಮತ್ತು ಅದು ಅವರ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಈ ಸಮಯದಲ್ಲಿ, ಪ್ರಾಯೋಗಿಕವಾಗಿ ತೊಡಗಿಸಿಕೊಳ್ಳುವ ಮೂಲಕ ಎಸಿಸಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಮುಂದಾಯಿತು. ಎಸಿಸಿ ತಂಡವು ಅವರಿಗೆ ಐಎಂಪಿ (ಇನ್ ಸ್ಟಾಂಟ್ ಮಿಕ್ಸ್ ಪ್ರೊಪೋರ್ಷನ್), ಎಸಿಟಿ (ಎಸಿಸಿ ಸರ್ಟಿಫೈಡ್ ಟೆಕ್ನಾಲಜಿ)…
ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ, ಪಿಂಚಣಿ, ಉಚಿತ ಬಸ್ ಪಾಸ್ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸುವಂತೆ ಸದಸನದಲ್ಲಿ 15ಕ್ಕೂ ಹೆಚ್ಚು ಸಲ ಧ್ವನಿ ಎತ್ತಿರುವೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಸೋಮವಾರ ಬಬಲೇಶ್ವರ ತಾಲೂಕಿನ ಕುಮಠೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಗ್ರಾಮೀಣ ಗೋದಾಮು ಮತ್ತು ಎನ್.ಆರ್.ಎಲ್.ಎಂ ಶೆಡ್ ಉದ್ಘಾಟಿಸಿ ಅವರು ಮಾತನಾಡಿದರು.ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಿತ ಕಾಪಾಡಲು ಬದ್ಧನಾಗಿದ್ದೇನೆ. ಮುಂದೆಯೂ ಗ್ರಾ. ಪಂ. ಸದಸ್ಯರ ಪರ ಧ್ವನಿ ಎತ್ತುತ್ತೇನೆ. ಕೇರಳ ಮಾದರಿಯಲ್ಲಿ ಸದಸ್ಯರಿಗೆ ಸೌಲಭ್ಯ ಒದಗಿಸಲು ಮುಂದೆಯೂ ಧ್ವನಿ ಎತ್ತುತ್ತೇನೆ ಎಂದು ಅವರು ಹೇಳಿದರು.ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ಗ್ರಾ. ಪಂ. ಸದಸ್ಯರು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಗ್ರಾಮ ಸ್ವರಾಜ್ಯ ಕನಸು ನನಸಾಗಲು ಮಾದರಿ ಕೆಲಸ ಮಾಡಬೇಕು ಎಂದು ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಇನಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಅಸಿಸ್ಟಂಟ್ ಪ್ರೊಫೆಸರ್ ಮತ್ತು ನರ್ಸಿಂಗ್ ಸೈಕ್ಯಾಟ್ರಿಕ್ ವಿಭಾಗದ ಮುಖ್ಯಸ್ಥ ಡಾ. ಎಂ. ಬಿ. ತಡಲಗಿ ಅವರನ್ನು ಸರಕಾರ ಕರ್ನಾಟಕ ಶುಶ್ರೂಷ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ.ಡಾ. ಎಂ. ಬಿ.ತಡಲಗಿ ಅವರನ್ನು ನಾಮನಿರ್ದೇಶನ ಮಾಡಿರುವುದಕ್ಕೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ತಾರಾಪುರ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸೇರಿದ ಸರ್ವೇ ನಂಬರ 596 ರ 5 ಎಕರೆ 30 ಗುಂಟೆ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಭಸ್ಮವಾಗಿದೆ.ಜಮೀನಿನಲ್ಲಿ ಹಾಯ್ದು ಹೋಗಿರುವ ವಿದ್ಯುತ್ ಕಂಬಗಳಲ್ಲಿನ ತಂತಿ ಇಳಿಬಿದ್ದಿರುವ ಪರಿಣಾಮ ಗಾಳಿಗೆ ಘರ್ಷಣೆ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನುತ್ತಾರೆ ಸ್ಥಳೀಯ ರೈತರು.ರಾತ್ರಿ 9 ಘಂಟೆ ವೇಳೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಸ್ಥಳದಲ್ಲಿ ಇದ್ದ ಜನರು, ಯುವಕರು,ರೈತರು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ ಕೊನೆಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ಹಾನಿ ಉಂಟಾಗಿದೆ, ಅಲ್ಲದೇ ಹೊಲದಲ್ಲಿರುವ ಪೈಪ್ ಗಳು, ಕೇಬಲ್ ಗಳು ಸಂಪೂರ್ಣ ಸುಟ್ಟು ಹೋಗಿವೆ.ಹೊಲವನ್ನು ಮಾಡಿರುವ ರೈತ ಹಾಗೂ ಅವರ ಪತ್ನಿಯ ಗೋಳು ಜನರ ಕಣ್ಣಲ್ಲಿ ನೀರು ತರಿಸಿತು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆ ನೀಡುವ ೨೦೨೬ ರ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.ಮಾಜಿ ಸಚಿವ ದಿ. ಎಂ.ಸಿ.ಮನಗೂಳಿ ಸ್ಮರಣಾರ್ಥ ನೀಡಲಾಗುವ ‘ಕರುನಾಡಿನ ಅತ್ಯುತ್ತಮ ಪ್ರಕಾಶನ’ ಪ್ರಶಸ್ತಿಯನ್ನು ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನ ಆಯ್ಕೆಯಾಗಿದ್ದು ರೂ.೨೫ ಸಾವಿರ ನಗದು, ಪ್ರಶಸ್ತಿಫಲಕ ಒಳಗೊಂಡಿದೆ. ಅಂಕಿತ ಪ್ರಕಾಶನವು ಕಳೆದ ೩೦ವರ್ಷಗಳಲ್ಲಿ ಸಾವಿರಪುಸ್ತಕಗಳನ್ನು ಪ್ರಕಟಿಸಿದ್ದು ಬಹುದೊಡ್ಡ ಸಾಧನೆಯನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿಗೆ ಕಲಬುರಗಿಯ ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅವರಿಗೆ ನೀಡಲು ತೀರ್ಮಾನಿಸಿದ್ದು ಪ್ರಶಸ್ತಿಯು ಹತ್ತು ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಫೆಬ್ರವರಿ ಮೊದಲ ವಾರದದಲ್ಲಿ ಕಡಣಿಯಲ್ಲಿ ನಡೆಯುವ ೯ನೇ ವರ್ಷದ ಸಂಭ್ರಮ ಹಾಗೂ ೨೫ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್.ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಡಚಣದಲ್ಲಿ ಸಂಗಮೇಶ್ವರ ಜಾತ್ರೆಯ ಸಂಭ್ರಮ | ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೆರವಣಿಗೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ.18 ರಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ 2ನೇ ದಿನವಾದ ಸೋಮವಾರ ಸಾಯಂಕಾಲ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಹೊರಟ ಪಲ್ಲಕ್ಕಿ ಹಾಗೂ ನಂದಿ ಧ್ವಜದ ಮೇರವಣಿಗೆಯು ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನದ ಮೂಲಕ 9.00 ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನ ತಲುಪಿತು.ನಂತರ 9.00 ಗಂಟೆಗೆ ಜಾತ್ರೆಯ ನಿಮಿತ್ಯ ದೇವಸ್ಥಾನದ ಪಕ್ಕದಲ್ಲಿರುವ ಎತ್ತರದ ವಿಶಾಲವಾದ ಮೈದಾನದಲ್ಲಿ ಶ್ರೀ ದತ್ತ ಇಂಡಿಯಾ ಶುಗರ್ ಹಾವಿನಾಳ ಕಾರ್ಖಾನೆಯ (ಒಂದು ಲಕ್ಷ ರೂಪಾಯಿ ದೇಣಿಗೆ) ಸಹಯೋಗದೊಂದಿಗೆ ಆಯೋಜಿಸಿದ್ದ ಆಕರ್ಷಕ ಚಿತ್ರ-ವಿಚಿತ್ರವಾದ ಮದ್ದು ಸುಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಜಾತ್ರೆಯ ಅಂಗವಾಗಿ ಏರ್ಪಡಿಸಲಾಗಿದ್ದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಪಟಾಕಿಗಳು ಹೊರಹೊಮ್ಮಿಸಿದ ಶಬ್ದ, ಮೂಡಿಸಿದ ಬೆಳಕಿನ ಚಿತ್ತಾರ ಸೇರಿದ ಜನಸಾಗರವನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಯಿತು. ವಿಧ ವಿಧವಾದ ಬಣ್ಣಗಳ ಬಾಣ ಬಿರುಸು ಆಕಾಶಕ್ಕೆ ನೆಗೆದು…
ಉದಯರಶ್ಮಿ ದಿನಪತ್ರಿಕೆ ಹೆಚ್.ಡಿ. ಕೋಟೆ: ಆದಿವಾಸಿ ಮತ್ತು ಬುಡಕಟ್ಟು ಜನರಲ್ಲಿ ಆರೋಗ್ಯ ಬಗ್ಗೆ ಅರಿವು ಮೂಡಿಸುವ ಮೂಲಕ, ನಮ್ಮ ತಾಲೂಕಿನಲ್ಲಿ ಸಿಕೆಲ್ ಸೆಲ್ (ಕುಡಗೋಲು) ರೋಗ ಮರುಕಳಿಸದಂತೆ ಜಾಗೃತವಹಿಸಬೇಕಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ಹೆಚ್ ಡಿ ಕೋಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆಚ್ ಡಿ ಕೋಟೆ ಹಾಗು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್ ಡಿ ಕೋಟೆ ವತಿಯಿದ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಿಕೆಲ್ ಸೆಲ್ ಅನೀಮಿಯ ಜಾಗೃತಿ ನಿರ್ಮೂಲನ ಕಾರ್ಯಕ್ರಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಾಗೃತಿ ಕಾರ್ಯಕ್ರಮಗಳ ಮೂಲಕ ಆದಿವಾಸಿ ಜನರಲ್ಲಿ ಆರೋಗ್ಯ ಕಾಳಜಿ ಬಗ್ಗೆ ಅರಿವು ಮೂಡಿಸಿ, ರೋಗಗಳು ಉದ್ಭವಿಸದಂತೆ ನಾವು ನೀವೆಲ್ಲರೂ ಸಹಕರಿಸಬೇಕಾಗಿದೆ ಎಂದು ತಹಸೀಲ್ದಾರ್ ಶ್ರೀನಿವಾಸ್ ಹೇಳಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಈ ಹಿಂದೆ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಅಂಕಗಳಿಕೆ ಎಂಬುದು ಉದ್ಯೋಗದ ಭಾಗವಷ್ಟೇ, ಸಚ್ಚಾರಿತ್ರ್ಯದ ಸನ್ಮಾರ್ಗ ತೋರುವುದೇ ಶಿಕ್ಷಣದ ಅಂತಿಮ ಗುರಿಯಾಗಬೇಕು ಎಂದು ಉಪನ್ಯಾಸಕ ಡಾ.ಯಂಕನಗೌಡ ಎಸ್ ಪಾಟೀಲ ಹೇಳಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 164 ನೇ ಜಯಂತೋತ್ಸವ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ ಎಂದವರು. “ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬಂತೆ ಪತ್ನಿ ಮತ್ತು ಪತಿಯರು ಒಂದಾಗಿ, ಶಿಕ್ಷಣ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಬಾಬು ಪಟೇಲ್ ಯಲ್ಗೋಡ ಹಾಗೂ ಅವರ ಧರ್ಮಪತ್ನಿ ಮಾಸಾಬಿ ಯಲ್ಗೋಡ ಇವರ ಮಹಾನ್ ಕಾರ್ಯಕ್ಕೆ ಸಾಥ್ ನೀಡುತ್ತಿರುವ ಆಡಳಿತ ಮಂಡಳಿಯ ಸರ್ವ ಸದಸ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ, ಕಳೆದ ಮೂರು ದಶಕಗಳಿಂದ ನೂರಾರು ವಿದ್ಯಾರ್ಥಿಗಳ ಬಾಳಲಿ ಜ್ಞಾನ…
