Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೆಚ್‌ಐವಿ ಏಡ್ಸ್ ಬಗ್ಗೆ ಜಾಗೃತಿ ಅಗತ್ಯ :ಅರ್ಚನಾ ಒಲಕೋಟೆ

ಶಾಲೆಗಳಲ್ಲಿ ಪತ್ರಿಕೆಗಳ ಓದು ಕಡ್ಡಾಯ: ಸರ್ಕಾರದ ಕ್ರಮಕ್ಕೆ ಕೆಯುಡಬ್ಲ್ಯೂಜೆ ಸ್ವಾಗತ

ಪದ್ಮಶ್ರೀ ರಘು ರಾಯ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿಎಲ್ಡಿಇ ನಗರ ಆರೋಗ್ಯ ಕೇಂದ್ರದಿಂದ ಅತ್ಯುತ್ತಮ ಆರೋಗ್ಯ ಸೇವೆ
(ರಾಜ್ಯ ) ಜಿಲ್ಲೆ

ಬಿಎಲ್ಡಿಇ ನಗರ ಆರೋಗ್ಯ ಕೇಂದ್ರದಿಂದ ಅತ್ಯುತ್ತಮ ಆರೋಗ್ಯ ಸೇವೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಬಿ.ಎಲ್.ಡಿ.ಇ‌ ಆಸ್ಪತ್ರೆ ನಗರ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ‌ ನಗರದ ದಕ್ಷಿಣ ಭಾಗದ ಜನರಿಗೂ ಅತ್ಯುತ್ತಮ ಆರೋಗ್ಯ ಸೇವೆ‌ ಒದಗಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ‌ ಡಾ. ರಾಜೇಶ ಹೊನ್ನುಟಗಿ‌ ತಿಳಿಸಿದ್ದಾರೆ.
ಶುಕ್ರವಾರ ನಗರದ ಸರಕಾರಿ ಪಾಲಿಟೆಕ್ನಿಕ್ ಹಿಂಭಾದಲ್ಲಿರುವ ಬಿ.ಎಲ್.ಡಿ.ಇ ಆಯುರ್ವೇದ ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಅಲೋಪಥಿ ಮತ್ತು ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ‌ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ಆಶಯದಂತೆ ಆಯುರ್ವೇದ ಕಾಲೇಜಿನ‌ ಆವರಣದಲ್ಲಿ ನಗರ ಆರೋಗ್ಯ ಕೇಂದ್ರ ಪ್ರಾರಂಭಿಸಿದೆ. ಮುಖ್ಯ ಆಸ್ಪತ್ರೆಯ ಮಾದರಿಯಲ್ಲಿಯೇ ಇಲ್ಲಿಯೂ ಅತ್ಯುತ್ತಮ ಆರೋಗ್ಯ ಸೇವೆಗಳ ಸೌಲಭ್ಯವಿದೆ. ಹೆಚ್ಚುವರಿ ಸೇವೆಗಳಿಗೆ ಮುಖ್ಯ ಆಸ್ಪತ್ರೆಗೂ ಶಿಫಾರಸು ಮಾಡಲಾಗುತ್ತದೆ. ಈ ಭಾಗದ ಜನರಿಗೆ ಇದರಿಂದ ಸಾಕಷ್ಟು‌ ಅನುಕೂಲವಾಗಿದೆ ಎಂದು‌ ಹೇಳಿದರು.
ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆ ಮತ್ತು ನಗರ ಆರೋಗ್ಯ‌ ಕೇಂದ್ರದ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿ, ಆಯುರ್ವೇದ ಆಸ್ಪತ್ರೆ ದೇಶ- ವಿದೇಶಗಳಲ್ಲಿಯೂ ಖ್ಯಾತಿ ಹೊಂದಿದೆ. ವಿದೇಶಿಗರು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಆಯುರ್ವೇದ ಮತ್ತು‌ ಅಲೋಪಥಿ ಎರಡೂ ಸಮನ್ವಯ ಆರೋಗ್ಯ ಸೇವೆಗಳ ಮೊದಲ‌ ಶಿಬಿರ ಇದಾಗಿದೆ. ಇನ್ನು ಮುಂದೆ ಪ್ರತಿ‌ ತಿಂಗಳು ಸಮನ್ವಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಆಯುರ್ವೇದ ಕಾಲೇಜಿನ‌ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಒಂದೇ ಸೂರಿನಡಿ‌ ಆಯುರ್ವೇದ ಮತ್ತು‌ ಅಲೋಪಥಿ ಆರೋಗ್ಯ ಸೇವೆಗಳು‌ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಈ‌ ಶಿಬಿರದಲ್ಲಿ ಅಲೋಪಥಿ ವಿಭಾಗದಲ್ಲಿ 232 ಮತ್ತು ಆಯುರ್ವೇದ ವಿಭಾಗದಲ್ಲಿ 215 ಸೇರಿದಂತೆ ಸುಮಾರು 450ಕ್ಕೂ ಹೆಚ್ಚು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ‌ ಸಂದರ್ಭದಲ್ಲಿ ಅಲೋಪಥಿ ವೈದ್ಯರಾದ‌ ಡಾ. ಅನುಜಾ ಎಂ. ಕೆ., ಡಾ. ಭುವನೇಶ್ವರಿ ಜಿ., ಡಾ. ಎನ್. ಎಸ್. ದೇಶಮುಖ, ಡಾ. ತಿರುಮಲ ಕುಲಕರ್ಣಿ, ಡಾ. ಸಾಹೇಬಗೌಡ ಪಾಟೀಲ, ಡಾ. ಏಕ್ತಾ ಸಿ., ಆಯುರ್ವೇದ ವೈದ್ಯರಾದ ಡಾ. ಜಾವೇದ ಬಾಗಾಯತ, ಡಾ. ಅನಿಸುರ ರೆಹಮಾನ ಮದನಿ, ಡಾ. ಪಿ. ಜಿ. ಗಣ್ಣೂರ, ಡಾ. ಉಮಾ ಪಾಟೀಲ, ಡಾ. ಮಲ್ಲಮ್ಮ ಬಿರಾದಾರ, ಡಾ. ವಿಜಯಲಕ್ಷ್ಮಿ ಹಾದಿಮನಿ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ, ಡಾ. ರವಿ ರಜಪೂರ, ಡಾ. ರಾಜೆಸಾಬ ಕಬಾಡೆ, ಡಾ. ಮಾನಸಾ ಪಂಚಾಕ್ಷರಿಮಠ, ಡಾ. ಸೀತಾ ಬಿರಾದಾರ, ಡಾ. ನಂದಿತಾ ಕುಲಕರ್ಣಿ, ಡಾ. ಕವಿತಾ ಚವ್ಹಾಣ, ಆಸ್ಪತ್ರೆಯ ಸಹಾಯಕ‌ ಆಡಳಿತಾಧಿಕಾರಿ ಏಕನಾಥ ಜಾಧವ, ಸಿಬ್ಬಂದಿಯಾದ ದೀಪಕ ಔರಂಗಾಬಾದ, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೆಚ್‌ಐವಿ ಏಡ್ಸ್ ಬಗ್ಗೆ ಜಾಗೃತಿ ಅಗತ್ಯ :ಅರ್ಚನಾ ಒಲಕೋಟೆ

ಶಾಲೆಗಳಲ್ಲಿ ಪತ್ರಿಕೆಗಳ ಓದು ಕಡ್ಡಾಯ: ಸರ್ಕಾರದ ಕ್ರಮಕ್ಕೆ ಕೆಯುಡಬ್ಲ್ಯೂಜೆ ಸ್ವಾಗತ

ಪದ್ಮಶ್ರೀ ರಘು ರಾಯ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ

ಏ.೩೦ ರಂದು ಬಿ.ಎಲ್.ಡಿ ಸೌಹಾರ್ದ ಸಹಕಾರಿ ಸಂಘದ ಮುಧೋಳ ಶಾಖೆ ಆರಂಭ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೆಚ್‌ಐವಿ ಏಡ್ಸ್ ಬಗ್ಗೆ ಜಾಗೃತಿ ಅಗತ್ಯ :ಅರ್ಚನಾ ಒಲಕೋಟೆ
    In (ರಾಜ್ಯ ) ಜಿಲ್ಲೆ
  • ಶಾಲೆಗಳಲ್ಲಿ ಪತ್ರಿಕೆಗಳ ಓದು ಕಡ್ಡಾಯ: ಸರ್ಕಾರದ ಕ್ರಮಕ್ಕೆ ಕೆಯುಡಬ್ಲ್ಯೂಜೆ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಪದ್ಮಶ್ರೀ ರಘು ರಾಯ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ
    In (ರಾಜ್ಯ ) ಜಿಲ್ಲೆ
  • ಏ.೩೦ ರಂದು ಬಿ.ಎಲ್.ಡಿ ಸೌಹಾರ್ದ ಸಹಕಾರಿ ಸಂಘದ ಮುಧೋಳ ಶಾಖೆ ಆರಂಭ
    In (ರಾಜ್ಯ ) ಜಿಲ್ಲೆ
  • ದಿ.ಮಹಾದೇವಪ್ಪ ಮುಳವಾಡ ಮೃತದೇಹ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ
    In (ರಾಜ್ಯ ) ಜಿಲ್ಲೆ
  • ರಸ್ತೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು!
    In (ರಾಜ್ಯ ) ಜಿಲ್ಲೆ
  • ಸಮಾಜದಲ್ಲಿ ಬದಲಾವಣೆಗೆ ಶಿಕ್ಷಣವೇ ಪ್ರಬಲ ಅಸ್ತ್ರ :ಎಸ್‌ಪಿ ಗಡಾದೆ
    In (ರಾಜ್ಯ ) ಜಿಲ್ಲೆ
  • ಹುಬನೂರ ಸರ್ಕಾರಿ ಪ್ರೌಢ ಶಾಲೆ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಕ್ರೈಸ್ತ್ ವಸತಿ ಕಾಲೇಜುಗಳಿಗೆ ಪಿಯುಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಆಕ್ಷೇಪಣೆ ಅವಧಿ ಮೇ ೨ ರವರೆಗೆ ವಿಸ್ತರಣೆ :ಪರಿಶೀಲನಾ ಅದಾಲತ್ ಮುಂದೂಡಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.