Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ಪಾಲಿಕೆಯ ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ೨೬೫ ಕೋಟಿ ರೂ.ಗಳಾಗಿದ್ದು ಅದರಲ್ಲಿ ಆದಾಯ ಹಾಗೂ ವೆಚ್ಚಗಳನ್ನು ಸರಿದೂಗಿಸಿ ೧೨ ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ್ನು ಮೇಯರ್ ಎಂ.ಎಸ್. ಕರಡಿ ಶುಕ್ರವಾರ ಮಂಡಿಸಿದರು.ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ವಿಸ್ತçತವಾಗಿ ವಿವರಣೆ ನೀಡುವ ಮೂಲಕ ಕರಡಿ ಬಜೆಟ್ ಮಂಡಿಸಿದರು.ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಾನಗರ ಪಾಲಿಕೆಯ ಆಯ್ಯ ವ್ಯಯಕ್ಕೆ ಸಂಬAಧಿಸಿದAತೆ ೨೬೫.೨೦ ಕೋಟಿ ರೂ.ಗಳು ಸ್ವೀಕೃತಿಯಾಗಿದ್ದು ಅದರಲ್ಲಿ ೨೬೫.೦೮ ಕೋಟಿ ರೂ.ಗಳು ವೆಚ್ಚವಾಗಿದ್ದು ಒಟ್ಟು ೧೨ ಲಕ್ಷ ರೂ. ಉಳಿತಾಯದ ಬಜೆಟ್ ಇದಾಗಿದೆ ಎಂದು ಕರಡಿ ವಿಶ್ಲೇಷಿಸಿದರು.ಆರ್ಥಿಕ ಅಂಶಗಳ ಕುರಿತು ವಿವರಣೆ ನೀಡಿದ ಅವರು, ೨೦೨೬-೨೭ ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ ೧೭೨.೦೬ ಕೋಟಿ ರೂ. ಇದ್ದು, ಬಂಡವಾಳ ಸ್ವೀಕೃತಿ ೫೮.೪೮ ಕೋಟಿ ರೂ., ಅಸಾಧಾರಣ ಸ್ವೀಕೃತಿ ೩೪.೬೬ ಕೋಟಿ ರೂ. ಇದೆ ಎಂದು ವಿವರಿಸಿದರು.೨೦೨೬-೨೭ ನೇ ಸಾಲಿನಲ್ಲಿ ವೆಚ್ಚಗಳಿಗೆ ಸಂಬAದಿಸಿದAತೆ ೧೬೫.೯೦ ಕೋಟಿ ರೂ. ರಾಜಸ್ವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಳೆದ ಎರಡು ದಿನಗಳ ಹಿಂದಷ್ಟೇ ಸೈಬರ್ ಪ್ರಕರಣಗಳನ್ನು ಬೇಧಿಸಿ ಕೋಟ್ಯಂತರ ರೂ. ಮೌಲ್ಯದ ನಗದು ಜಪ್ತು ಮಾಡಿಕೊಂಡು ನೊಂದವರಿಗೆ ಮರಳಿ ಒಪ್ಪಿಸುವ ಮೂಲಕ ಉತ್ತಮ ಕಾರ್ಯ ಮಾಡಿದ್ದ ವಿಜಯಪುರ ಪೊಲೀಸರು ಈಗ ಪುನ: ವಿವಿಧ ಬಂಗಾರ ಕಳ್ಳತನ, ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಲಕ್ಷಾಂತರ ರೂ. ಮೌಲ್ಯದ ಬಂಗಾರ, ಮೋಟಾರ್ ಬೈಕ್ ಹಾಗೂ ಪೂರಕ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ೪೮ ಬಂಗಾರ, ಮೋಟಾರ್ ಬೈಕ್ ಕಳುವು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ೧೪ ಜನ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಆರೋಪಿತರನ್ನು ಬಂಧಿಸಿ ಅವರಿಂದ ಅಂದಾಜು ೬೫ ಲಕ್ಷ ರೂ. ಮೌಲ್ಯದ ೪೨೬.೨ ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ೨೦ ಲಕ್ಷ ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ೦೨ ಕಾರುಗಳನ್ನು ಹಾಗೂ ೩೯ ಮೋಟಾರ್ ಬೈಕ್ ಜಪ್ತು ಮಾಡಿಕೊಂಡಿದ್ದು, ಆರೋಪಿತರಿಂದ ೧,೧೭,೦೦,೦೦೦ ರೂ. ಮೌಲ್ಯದ ವಸ್ತಗಳನ್ನು ಸ್ವತ್ತುಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಇದೇ ದಿನಾಂಕ ೨೪ ರಿಂದ ಮೂರು ದಿನಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ೪೫ ನೇ ಪ್ರಾಂತ ಸಮ್ಮೇಳನ ನಡೆಯಲಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಾಂತ ಸಮ್ಮೇಳನದ ಕುರಿತು ವಿವರಣೆ ನೀಡಿದ ಅವರು, ಈಗಾಗಲೇ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ, ೬ ವಿಭಾಗಗಳ ೧೬ ಜಿಲ್ಲೆಯಿಂದ ಸುಮಾರು ೭೦೦ ವಿದ್ಯಾರ್ಥಿಗಳು, ೩೦೦ ವಿದ್ಯಾರ್ಥಿನಿಯರು ಮತ್ತು ೧೦೦ ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಶಿಕ್ಷಣ ತಜ್ಞರು ಸೇರಿ ಒಟ್ಟು ೧೧೦೦ ಕ್ಕೂ ಅಧಿಕ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.ದಿ.೨೩ ರಂದು ಎಲ್ಲ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ರಾತ್ರಿ ೯ ಗಂಟೆಗೆ ರಾಜ್ಯದ ವಿದ್ಯಾರ್ಥಿ ಪರಿಷತ ನ ಚಟುವಟಿಕೆಗಳು ಹಾಗೂ ವಿಶೇಷ ಅಭಿಯಾನಗಳನ್ನು ಒಳಗೊಂಡ ಪ್ರದರ್ಶಿನಿಯನ್ನು ನಗರದ ಶ್ರೀ ಸಿದ್ದೇಶ್ವರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಲಿದ್ದಾರೆ.ದಿ.೨೪ ರಂದು ಬೆಳಿಗ್ಗೆ ಧ್ವಜಾರೋಹಣದಿಂದ ಸಮ್ಮೇಳನ ಪ್ರಾರಂಭವಾಗಲಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಚಿಂತನೆ ಎಂಬ ಉದಾತ್ತ ತತ್ವಗಳ ಆಶಯಗಳೊಂದಿಗೆ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ನೇತೃತ್ವದಲ್ಲಿ ಇದೇ ದಿ.೨೪ ರಂದು ಮಧ್ಯಾಹ್ನ ೩ ಕ್ಕೆ ಭವ್ಯ ಭಕ್ತಿಭಾವದ ಶೋಭಾಯಾತ್ರೆ ನಡೆಯಲಿದೆ ಎಂದು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಸಂಚಾಲಕ ಸದಾನಂದ ದೇಸಾಯಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ನಾಲ್ಕು ಕಡೆಗಳಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ, ವಿಜಯಪುರದ ನಾಲ್ಕು ದಿಕ್ಕುಗಳಲ್ಲಿಯೂ ಸಹ ಈ ಕಾರ್ಯಕ್ರಮ ನಡೆಯಲಿದೆ, ಜಲನಗರ ಮೊದಲಾದ ಬಡಾವಣೆಗಳ ಭಾಗಗಳನ್ನು ಬಸವೇಶ್ವರ ಭಾಗ ಎಂದು ಗುರುತಿಸಿ ಅಲ್ಲಿ ಈ ಕಾರ್ಯಕ್ರಮಗಳ ಸರಣಿ ನಡೆಯಲಿದೆ, ದಿ.೨೪ ರಂದು ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಮುರಾಣಕೇರಿಯ ಶ್ರೀ ಈಶ್ವರಲಿಂಗ ದೇವಸ್ಥಾನದಿಂದ ಭಾರತ ಮಾತೆ ಹಾಗೂ ವಿವಿಧ ಮಹಾಪುರುಷರ ಭಾವಚಿತ್ರಗಳ ಮೆರವಣಿಗೆ ಸಂಜೆ ೩ ರಿಂದ ಆರಂಭಗೊಳ್ಳಳಿದೆ, ಮಕ್ಕಳು ಮಹಾಪುರುಷರ ವೇಷಗಳನ್ನು ಧರಿಸಿ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಮುರಾಣಕೇರಿ ಕೋರ್ಟ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೯೫೯ ರ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನ್ವಯ ಯಂಕಂಚಿಯ ದಾವಲ್ ಮಲಿಕ್ ಉರುಸು (ಜಾತ್ರಾ ಮಹೋತ್ಸವ)ದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಕೂಡಲೇ ತಡೆಯಬೇಕು ಎಂದು ಪಶು ಪ್ರಾಣಿ ಬಲಿ ನಿರ್ಮೂಲನಾ ಜಾಗೃತ ಮಹಾಸಂಘದ ಪ್ರಮುಖರಾದ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಂಕಂಚಿಯ ದಾವಲ್ ಮಲಿಕ್ ಜಾತ್ರೆ (ಉರುಸು) ಸಂದರ್ಭದಲ್ಲಿ ಸಾವಿರಾರು ಪ್ರಾಣಿ ಬಲಿ ನಡೆಯುತ್ತದೆ, ಕಳೆದ ಬಾರಿಯೂ ಸಹ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೆ, ಈ ಬಾರಿಯೂ ಸಹ ನಾನು ಈ ವಿಷಯವನ್ನು ಗಮನಕ್ಕೆ ತಂದಿರುವೆ, ಕೂಡಲೇ ಅಲ್ಲಿ ನಡೆಯುವ ಪ್ರಾಣಿ ಬಲಿಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಸಂಪೂರ್ಣ ಪ್ರಾಣಿ ಬಲಿ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿದೆ, ೧೯೫೯ ರಲ್ಲಿ ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಕಾಯ್ದೆ ಅನ್ವಯ ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಬಲಿ ಕೊಡುವಂತಿಲ್ಲ, ಬಲಿಗೆ ಪ್ರೇರಣೆ ಕೊಡುವಂತಿಲ್ಲ, ಈ ಮೊದಲು ಕೇವಲ ಹಿಂದೂ ದೇವಾಲಯಕ್ಕೆ ಸೀಮಿತವಾಗಿದ್ದ ಈ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೃಷ್ಣಾ ನದಿ ತಟದಲ್ಲಿರುವ ಪುಣ್ಯ ಕ್ಷೇತ್ರ ಕೊಲ್ದಾರ ಪಟ್ಟಣದ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವವು ಇದೆ ಜ.24 ರಿಂದ 26 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.ದಿನಾಂಕ: 24-01-2026 ಶನಿವಾರ ದಿವಸ ಬೆಳಿಗ್ಗೆ 10-30 ಘಂಟೆಗೆ ಶ್ರೀ ಬನಶಂಕರಿದೇವಿಯ ಅಷ್ಟೋತ್ತರ ಕುಂಕುಮಾರ್ಚನೆಯು ಶಕ್ತಿಪೀಠ ಶ್ರೀ ಕ್ಷೇತ್ರ ಬನಶಂಕರಿ (ಬದಾಮಿ) ಚಿದಂಬರಭಟ್ಟ ಎಸ್. ಪೂಜಾರ ಅರ್ಚಕರು ಇವರಿಂದ ನೆರವೇರುವದು. ಅದೇ ದಿನ ರಾತ್ರಿ 7-00 ಗಂಟೆಗೆ ಶಂಕರ ಮ. ಯಂಕಂಚಿ ಇವರ ತಂಡದಿಂದ ‘ಜಾಣರ ಜಗಲಿ ನಗೆಹಬ್ಬ’ ಕಾರ್ಯಕ್ರಮ ಜರುಗುವುದು.ದಿನಾಂಕ : 25-01-2026 ರವಿವಾರ ದಿವಸ ಬೆಳಿಗ್ಗೆ : 6-00 ಗಂಟೆಗೆ ಶ್ರೀ ಬನಶಂಕರಿದೇವಿಯ ರುದ್ರಾಭಿಷೇಕ, ಹೋಮ ಹವನ ಕಾರ್ಯಕ್ರಮವನ್ನು ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಬೇಲೂರ ಜಿ. ಬೀದರ (ಕೊಲ್ದಾರ) ಮತ್ತು ವೇದಮೂರ್ತಿ ಶ್ರೀ ರಾಘವೇಂದ್ರಸ್ವಾಮಿಗಳು, ದೇವಾಂಗಮಠ, ಗೊಳಸಂಗಿ ಹಾಗೂ ಶ್ರೀ ಈರಣ್ಣ ಹ. ಮೇಲಗಿರಿ (ದೇವಿ ಆರ್ಚಕರು) ಇವರಿಂದ ಜರುಗುವುದು.ಅದೇ ದಿನ ಮುಂಜಾನೆ 10-30 ಕ್ಕೆ ಮುತ್ತೈದೆಯರ ಆರತಿಯೊಂದಿಗೆ ಶ್ರೀ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಅನುಗ್ರಹ ವ್ಹಿಜನ್ ಪೌಂಡೇಶನ್ ಟ್ರಸ್ಟ್ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ರೈತಮಿತ್ರ ಕಾಶೀನಾಥ ಪತ್ತಾರ ಪೌಂಡೇಶನ್ ಮುತ್ತಗಿ ಇವರ ಸಂಯುಕ್ತ ಆಶ್ರಯದಲ್ಲಿ,77ನೇ ಗಣರಾಜ್ಯೋತ್ಸವದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ 26-01-2026 ಸೋಮವಾರ ಬೆಳಿಗ್ಗೆ 9-30 ರಿಂದ 3-00 ಗಂಟೆ ವರೆಗೆಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೀರಲದಿನ್ನಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.ವಿಜಯಪುರ ನಗರದ ಡಾ,ಪ್ರಭುಗೌಡ.ಬಿ.ಎಲ್. (ಚಬನೂರ) ರವರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞರು ಶಿಬಿರದಲ್ಲಿ ಭಾಗವಹಿಸಿ ನೇತ್ರ ತಪಾಸಣೆ ಮಾಡಲಿದ್ದಾರೆ.ಪ್ರತಿಯೊಬ್ಬ ಅರ್ಹ ರೋಗಿಯನ್ನು ವಿಜಯಪುರ ನಗರದ ಅನುಗ್ರಹ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಮಾಡಿ ಲೈನ್ಸ್ ಅಳವಡಿಸಲಾಗುವುದು.ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ 9590064059,7353477283,9448759368, 8150804574, ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡುವವರ 2 ಫೋಟೋ ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು, ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಲೇಖನಡಾ ಶಶಿಕಾಂತ ಪಟ್ಟಣರಾಮದುರ್ಗಬೆಳಗಾವಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅನಾಥರು ಅಬಲರು ಕುರುಡರು ಏನಿಲ್ಲದೆ ಬಳಲಿದ ಕಂದಮ್ಮಗಳು ಮುಂದೆ ಭಾರತದ ಸರ್ವ ಶ್ರೇಷ್ಠ ಸಂಗೀತ ಮತ್ತು ಸಾಹಿತ್ಯ ದಿಗ್ಗಜರೆನಿಸಿಕೊಳ್ಳುತ್ತಾರೆ ಎಂದು ಯಾರು ಅಂದು ಕೊಂಡಿರಲಿಲ್ಲ. ನನ್ನ ಲೇಖನದ ಕಥಾನಾಯಕ ಪರಮಪೂಜ್ಯ ಡಾ ಪುಟ್ಟರಾಜ ಗವಾಯಿಗಳಜೀವನ ಸಂಘರ್ಷ ನಿಜಕ್ಕೂ ನಮಗೆಲ್ಲ ಅಚ್ಚರಿ ಮೂಡಿಸುತ್ತದೆ.ಎರಡು ವರುಷದ ಕಂದಮ್ಮ ಎಲ್ಲವನ್ನೂ ಕಳೆದುಕೊಂಡು ಅನಾಥ ಸ್ಥಿತಿಯಲ್ಲಿರುವಾಗ ಅವರ ಪಾಲಿಗೆ ದೊರೆತವರೇ ಶ್ರೀ ಪಂಚಾಕ್ಶರಿ ಗವಾಯಿಗಳು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ.ಕರ್ನಾಟಕದ ನಾಟಕ ಮತ್ತು ಸಂಗೀತಕ್ಕೆ ಹೊಸ ರೂಪವನ್ನು ಕೊಟ್ಟವರು ಡಾ ಪುಟ್ಟರಾಜ ಗವಾಯಿಗಳುಬಾಲ್ಯದಲ್ಲಿ ಎರಡು ವರ್ಷಕ್ಕೆ ತಂದೆ ಹಾಗು ತಾಯಿಯನ್ನು ಕಳೆದುಕೊಂಡು ಅನಾಥನಾದ ಪುಟ್ಟಯ್ಯನನ್ನು ಸೋದರಮಾವ ಚಂದ್ರಶೇಖರಯ್ಯ ಬೆಳೆಸಿದರು. ಎಂಟು ವರ್ಷದವರೆಗೆ ತನ್ನಲ್ಲಿದ್ದ ಸಂಗೀತಜ್ಞಾನವನ್ನು ಮಗುವಿಗೆ ನೀಡಿದರು. ಆ ಬಳಿಕ ನವಲಗುಂದದ ಗವಿಮಠಕ್ಕೆ ಕರೆತಂದು ಅಲ್ಲಿ ಬಂದಿದ್ದ ಪಂಚಾಕ್ಷರಿ ಗವಾಯಿಗಳ ಉಡಿಯಲ್ಲಿ ಪುಟ್ಟಯ್ಯನನ್ನು ಹಾಕಿದರು. ಈ ಅಂಧ ಗುರು ಹಾಗು ಅಂಧ ಶಿಷ್ಯ ಸಂಗೀತ ಪ್ರಪಂಚವನ್ನು ಬೆಳಗುತ್ತಾರೆಂದು ಆಗ…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನೇತಾಜಿ ಅವರು “ಒಬ್ಬ ವ್ಯಕ್ತಿ ಭಾರತಕ್ಕೋಸ್ಕರ ಪ್ರಾಣ ತ್ಯಜಿಸಬಹುದು. ಆದರೆ, ಆತನ ತ್ಯಾಗವೇ ಸಹಸ್ರಾರು ಜನರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಪ್ರೇರೇಪಿಸುತ್ತದೆ” ಎಂದು ಹೇಳಿದ್ದಾರೆ. ವೀರ ಸೇನಾನಿ, ದೇಶ ಕಂಡ ಅಸಾಧಾರಣ ನಾಯಕ, ವರ್ಚಸ್ವಿ ವಾಗ್ಮಿ ಮತ್ತು ಅತ್ಯಂತ ಪ್ರಭಾವಶಾಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸಚಂದ್ರ ಭೋಸ ಅವರು ಪ್ರತಿಯೊಬ್ಬ ಭಾರತೀಯರ ಹೃದಯ ಅಂತರಾಳದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿ ರಾಷ್ಟçಭಕ್ತಿ ಮತ್ತು ರಾಷ್ಟ್ರೀಯತೆ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.‘ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ವನ್ನು ಕೊಡುತ್ತೇನೆ’ ಎಂದು ಹೇಳುತ್ತಾ, ಅಸಂಖ್ಯಾತ ಭಾರತೀಯ ಯುವಕರು ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ನೇತಾಜಿ ಸುಭಾಸಚಂದ್ರ ಭೋಸ ಅವರು ೨೩ ನೇಯ ಜನೇವರಿ ೧೮೯೭ ರಲ್ಲಿ ಒರಿಸ್ಸಾ ರಾಜ್ಯದ ಕಟಕ್ ಎಂಬಲ್ಲಿ ಜಾನಕಿನಾಥ ಭೋಸ್ ಹಾಗೂ ಪ್ರಭಾವತಿ ದತ್ ಬೋಸ್ ದಂಪತಿಗಳ ಸುಪುತ್ರರಾಗಿ ಜನಿಸಿದರು. ಚಿಕ್ಕ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಆರಾಧ್ಯ ದೈವ ಶ್ರೀ ಸಂಗಮೇಶ್ವರ ದೇವರ ಜಾತ್ರೆಯು ಜ.18 ರಿಂದ ಅದ್ದೂರಿಯಾಗಿ ಆರಂಭಗೊಂಡಿದ್ದು, ಜಾತ್ರೆಯ 3 ನೇ ದಿನವಾದ ಮಂಗಳವಾರ ಜಾತ್ರೆ ಅಂಗವಾಗಿ ಜರುಗಿದ ಭಾರ ಎತ್ತುವ ಸ್ಪರ್ಧೆ ಹಾಗೂ ಪ್ರಸಿದ್ದ ಮಲ್ಲರ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತಿತ್ತು.ಕರ್ನಾಟಕ-ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಭಾರ ಎತ್ತುವ ಸ್ಪರ್ಧಿಗಳು ಹಾಗೂ ಕುಸ್ತಿ ಪಟುಗಳು ಭಾಗವಹಿಸಿ ಪಂದ್ಯಾವಳಿಗೆ ಮೆರಗು ತಂದಿದ್ದರು.ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಟುಗಳು 20 ಕೆ.ಜಿ. ಇಂದ 188 ಕೆ.ಜಿಯ ವರೆಗಿನ ಸಾಣಿ ಕಲ್ಲು ಹಾಗೂ ಗುಂಡು ಕಲ್ಲುಗಳನ್ನು ಅವರವರ ಸಾಮರ್ಥ್ಯಕ್ಕನುಸಾರವಾಗಿ ಕಲ್ಲುಗಳನ್ನು ಎತ್ತುಂತಿದ್ದಂತೆ ನೋಡುಗರ ಮೈ ನವರೇಳಿಸಿತು.ಇನ್ನು 200 ಕೆ.ಜಿ. ಭಾರದ ಎಮ್.ಸ್ಯಾಂಡ್ ಚೀಲ, ಹಾಗೂ 100 ಕೆ.ಜಿ. ಭಾರದ ಜೋಳದ ಚೀಲವನ್ನು ಪಟುಗಳು ಎತ್ತಿ ನೋಡುಗರನ್ನು ಮನರಂಜಿಸಿದರು.ಪ್ರಸಿದ್ಧ ಮಲ್ಲರ ಕುಸ್ತಿ ಸ್ಪರ್ಧೆಯಲ್ಲಿ ದೇಹದಾರ್ಡ್ಯ ಕಟ್ಟುಮಸ್ತು ಹೊಂದಿದ್ದ ಪೈಲ್ವಾನರು ಎದುರಾಳಿಗಳನ್ನು ಸೆಣಸುತ್ತಿರುವುದನ್ನು ನೋಡುತ್ತಿದ್ದ ಕುಸ್ತಿ ಪ್ರಿಯರು ಸಿಳ್ಳೆ, ಚಪ್ಪಾಳೆ ತಟ್ಟಿ ಹುರುದುಂಬಿಸಿದರು.…
