ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ೫೦ ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆಗಾಗಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸುವುದಕ್ಕಾಗಿ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಪ್ರಶಸ್ತಿಯನ್ನು ವ್ಯಕ್ತಿ ಮತ್ತು ಸಂಸ್ಥೆಗಳ (ಸರ್ಕಾರಿ ವಲಯ, ಸರ್ಕಾರೇತರ ಸಂಸ್ಥೆ, ಕಂಪನಿ ಟ್ರಸ್ಟುಗಳು ಇತರೆ) ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥಾಪನೆ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಮೂರು ವ್ಯಕ್ತಿಗಳಿಗೆ-ಸಂಸ್ಥೆಗಳಿಗೆ ನೀಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪರಿಸರ ಸಂರಕ್ಷಣೆ-ಪರಿಸರ ವ್ಯವಸ್ಥಾಪನೆ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಆರಂಭಶೀಲತೆ, ಯೋಜನೆ, ಕಾರ್ಯಕ್ರಮಗಳ ಮೂಲಕ ನೀಡಿರುವ ಕೊಡುಗೆಯ ಮೌಲ್ಯನಿರ್ಣಯ ಮಾಡಲಾಗುವುದು.
ಪರಿಸರ ಸಂರಕ್ಷಣೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಸರ್ಕಾರೇತರ ಸಂಸ್ಥೆಗಳಿದ್ದಲ್ಲಿ ನೊಂದಣಿಯಾಗಿ ಕನಿಷ್ಠ ಮೂರು ವರ್ಷಗಳಾಗಿರಬೇಕು. ಈ ಪ್ರಶಸ್ತಿಗಾಗಿ ಪರಿಗಣಿಸಲಾಗುವ ವ್ಯಕ್ತಿ, ಸಂಸ್ಥೆಯ ಆರಂಭಶೀಲತೆ, ಕಾರ್ಯಕ್ರಮಗಳು, ಸುಸ್ಥಿರ ಯೋಜನೆಗಳು, ಕೊಡುಗೆಗಳ ದಿನಾಂಕ: ೨೫.೧೦.೨೦೨೫ಕ್ಕೆ ೫ ವರ್ಷಗಳ ಒಳಗಿರಬೇಕು. ಯಾವುದೇ ವ್ಯಕ್ತಿ, ಸಂಸ್ಥೆಗಳು ಪರಿಸರ ಕ್ಷೇತ್ರದಲ್ಲಿ ನಿರ್ವಹಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ತಾನೇ ಅಥವಾ ಪ್ರಶಸ್ತಿ ಸಮಿತಿಯ ಸಮಾಲೋಚನೆಯೊಂದಿಗೆ ನಾಮಕರಣ ಮಾಡುವ ಅಧಿಕಾರವನ್ನು ಜಿಲ್ಲಾಡಳಿತವು ಕಾಯ್ದಿರಿಸಿದೆ. ವ್ಯಕ್ತಿ, ಸಂಸ್ಥೆಯ ಹೆಸರು, ವ್ಯವಹರಿಸಬೇಕಾದ ವಿಳಾಸ, ನಿರ್ವಹಿಸಲಾದಕಾರ್ಯ, ಆರಂಭಶೀಲತೆ, ಯೋಜನೆ, ಕಾರ್ಯಕ್ರಮಗಳ ಕುರಿತಾಗಿ ವಿವರಗಳನ್ನು ವರ್ಷವಾರು ಮತ್ತುಕ್ಷೇತ್ರವಾರು ಪೂರಕ ದಾಖಲೆಗಳೊಡನೆ ನೀಡಬೇಕು.
ವ್ಯಕ್ತಿ, ಸಂಸ್ಥೆಗಳು ಪರಿಸರ ಸಂರಕ್ಷಣೆಗಾಗಿ ನಿರ್ವಹಿಸಿರುವ ಕಾರ್ಯದ ಅವಧಿ (ವರ್ಷಗಳಲ್ಲಿ) ಮತ್ತು ಸಾಧನೆ, ಪ್ರಶಸ್ತಿಗೆ ಸೂಚಿಸಲಾಗಿರುವಕಾರ್ಯ, ಆರಂಭಶೀಲತೆ, ಯೋಜನೆ, ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿನಿಯೋಗಿಸಲಾಗಿರುವ ಹಣ ಮತ್ತುಆರ್ಥಿಕ ಸಹಾಯದ ಮೂಲಗಳು (ಪಡೆದಿದ್ದಲ್ಲಿ), ಈವರೆಗೆ ಪಡೆದಿರುವ ಪ್ರಶಸ್ತಿಗಳ ವಿವರಗಳು (ಪಡೆದಿದ್ದಲ್ಲಿ), ಪ್ರತಿಪಾದನೆ ಕುರಿತಾಗಿ ಸಾಕ್ಷ್ಯಾಧಾರಗಳು.
ಕೊನೆಯ ದಿನಾಂಕ: ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:೨೫-೧೦-೨೦೨೫ ರಂದು ಸಾಯಂಕಾಲ ೫.೦೦ ಗಂಟೆಯೊಳಗಾಗಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಪರಿಸರ ಅಧಿಕಾರಿಗಳ ಕಛೇರಿ, ಕರ್ನಾಟಕ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ವಿಜಯಪುರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.