Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಉತ್ತಮ ಮಳೆ, ತಾಲೂಕಿನ ಸಮೃದ್ಧಿ ಹಾಗೂ ಜನ-ಜಾನುವಾರುಗಳ ಕ್ಷೇಮಕ್ಕಾಗಿ ಸಿಂದಗಿಯ ಸಾರಂಗಮಠದಲ್ಲಿ ಆ.೨೩ರಂದು ಬೆಳಿಗ್ಗೆ ೬ ರಿಂದ ಆ.೨೪ರ ಬೆಳಿಗ್ಗೆ ೬ ಗಂಟೆಯವರೆಗೆ ೨೪ ಗಂಟೆಗಳ ಕಾಲ ನಿರಂತರ ಶಿವಭಜನೆ ಹಾಗೂ ಶಿವ ಸಪ್ತಾಹ ಆಯೋಜಿಸಲಾಗಿದೆ ಎಂದು ಪೂಜ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡದ ಅವರು, ತಾಲೂಕಿನಾದ್ಯಂತ ಉತ್ತಮ ಮಳೆಯಾಗಿ ರೈತರು, ಜನರು ಹಾಗೂ ಜಾನುವಾರುಗಳ ಬದುಕು ಹಸನಾಗಲೆಂಬ ಸಂಕಲ್ಪದಿಂದ ಸಾಮೂಹಿಕವಾಗಿ ಶಿವನಾಮ ಸ್ಮರಣೆ ಹಾಗೂ ಪ್ರಾರ್ಥನೆ ಸಲ್ಲಿಸಲಾಗುವುದು. ಸಿಂದಗಿ, ಚಿಕ್ಕಸಿಂದಗಿ, ಬಂದಾಳ, ರಾಂಪುರ, ಬ್ಯಾಕೋಡ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಸಿಂದಗಿಯ ತಾಯಂದಿರು ಕೂಡ ಶಿವಭಜನೆಯಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಶಿವ ಸಪ್ತಾಹದಲ್ಲಿ ಭಾಗವಹಿಸುವ ಭಕ್ತರು ಬಿಳಿ ಲುಂಗಿ, ವಸ್ತ್ರ ಹಾಗೂ ಟವಲ್ ತರಬೇಕು ಎಂದು ವಿನಂತಿಸಿದರು. ಸಭೆಯಲ್ಲಿ ಶ್ರೀಮಠದ ಉತ್ತರಾಧಿಕಾರಿ ಪೂಜ್ಯಶ್ರೀ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಸದ್ಭಕ್ತರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಯಂಕಂಚಿ ಕುಂಟೋಜಿ ಹಿರೇಮಠ ಪೂಜ್ಯಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ಅವರ ಸಾರಥ್ಯದಲ್ಲಿ ಶ್ರಾವಣ ಮಾಸದ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ಶಿವಯೋಗ ಮೌನ ಅನುಷ್ಠಾನವು ಆ.೨೧ರಿಂದ ಸೆ.೧೪ರವರೆಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.ಲೋಕ ಕಲ್ಯಾಣ, ಶಾಂತಿ ಹಾಗೂ ಸರ್ವರ ಒಳಿತಿಗಾಗಿ ನಡೆಯಲಿರುವ ಈ ಧಾರ್ಮಿಕ ಅನುಷ್ಠಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿವಾನುಗ್ರಹಕ್ಕೆ ಪಾತ್ರರಾಗಬೇಕೆಂದು ಆಯೋಜಕರು ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಬಿ ಜಿ ರಾಮಜಿ ಯೋಜನೆಯಡಿ ತಾಲೂಕಿನಲ್ಲಿ ಬಬಲಾದ ಗ್ರಾ.ಪಂ ವ್ಯಾಪ್ತಿಯ ಘನ ತಾಜ್ಯ ವಿಲೇವಾರಿ ಘಟಕದ ಹತ್ತಿರ ಅರಣ್ಯ ಪ್ರದೇಶದಲ್ಲಿ ಟ್ರೆಂಚಳ ನಿರ್ಮಾಣ ಕಾಮಗಾರಿಯನ್ನು ಇಂಡಿ ತಾಲೂಕಾ ಇಓ ಮಹಾದೇವಪ್ಪ ಏವೂರ ಹಾಗೂ ಸಹಾಯಕ ನಿರ್ದೇಶಕ ಸಂಜಯ ಖಡಗೇಕರ ಭೇಟಿ ನೀಡಿ ಪರಿಶೀಲಿಸಿದರು.ಕಾಮಗಾರಿ ಸ್ಥಳದಲ್ಲಿ ೬೪ ಮಹಿಳೆಯರು ೧೦ ಪುರುಷರು ಒಟ್ಟು ೭೪ ಕೂಲಿಕಾರರು ಭಾಗವಹಿಸಿದ್ದರು.ಮಣ್ಣಿನ ಸಂರಕ್ಷಣೆ ಹಾಗೂ ಮಳೆ ನೀರು ಸಂಗ್ರಹಣೆಗೆ ಪೂರಕ ಕಾಮಗಾರಿಯಾಗಿದೆ ಎಂದರು.ಕೂಲಿಕಾರರ ಜೊತೆಗೆ ಸಂವಾದ ನಡೆಸಿ ವಿಬಿ ಜಿ ರಾಮ ಜಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಒಂದು ಮಾನವ ದಿನಕ್ಕೆ ೩೮೨ ರೂ ರಂತೆ ೧೨೫ ದಿನಗಳ ಉದ್ಯೋಗ ಖಾತ್ರಿ ಪಡಿಸುವಲ್ಲಿ ಜಾಬ ಕಾರ್ಡ ಪ್ರಮುಖ ಪಾತ್ರ ವಹಿಸುತ್ತದೆ. ಕೆಲಸಕ್ಕಾಗಿ ಜಾಬ ಕಾರ್ಡ ಪಡೆಯುವದು ನಿಮ್ಮ ಹಕ್ಕಾಗಿದೆ.ನಿಮ್ಮ ಜಾಬ ಕಾರ್ಡು ನಿಮಗೆ ಉದ್ಯೋಗ ಖಾತ್ರಿ ನೀಡುವದರ ಜೊತೆಗೆ ವಾರ್ಷಿಕ ೪೭೭೫೦ ರೂ ವೇತನದ ಖಾತ್ರಿ ನೀಡುತ್ತದೆ. ಇದಕ್ಕಾಗಿ ಎಲ್ಲರೂ ಜಾಬ ಕಾರ್ಡ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾರತ ಜೋಡೋ ಯುವ ಸಂಘವನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸುವ ಪ್ರಕ್ರಿಯೆ ಆರಂಭಗೊಂಡಿದ್ದು,ಪ್ರತಿ ವಾರ್ಡ್ಗೆ ಒಂದರಂತೆ, ಸರಾಸರಿ ೧೦,೦೦೦ ಜನಸಂಖ್ಯೆಗೆ ೧ ಸಂಘ ರಚಿಸಲು ತೀರ್ಮಾನಿಸಲಾಗಿದೆ. ​ಈ ಯೋಜನೆಯಡಿ ಪ್ರತಿ ಸಂಘಕ್ಕೆ ೧೦೦ ಜನ ಸದಸ್ಯರನ್ನು ನೋಂದಾಯಿಸಲು ಅವಕಾಶವಿದೆ. ೧೮ ರಿಂದ ೩೫ ವರ್ಷ ವಯೋಮಿತಿಯ ಆಸಕ್ತ ಯುವಕ-ಯುವತಿಯರು ಸಂಘದ ಸದಸ್ಯರಾಗಲು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಯುವಕ-ಯುವತಿಯರು ತಮ್ಮ ಆಧಾರ್ ಕಾರ್ಡ್ನೊಂದಿಗೆ bರಿಥಿs.ಞಚಿಡಿಟಿಚಿಣಚಿಞಚಿ.gov.iಟಿ ಪೋರ್ಟಲ್, ಮೊಬೈಲ್ ಆ್ಯಪ್ ಅಥವಾ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ೧೦ ರೂ. ಶುಲ್ಕವಿದೆ. ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪಾಲಿಕೆಯ ಆಯುಕ್ತರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ, ಕೊಲ್ದಾರ ಹಾಗೂ ನಿಡಗುಂದಿ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಪಡಿಸಲು ಕ್ರಮವಹಿಸಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಈ ಸಹಕಾರ ಸಂಘಗಳು ನಿಯಮಾವಳಿಗಳಂತೆ ಕಾರ್ಯನಿರ್ವಹಿಸದೇ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಸಮಾಪನಾ ಆದೇಶ ಹೊರಡಿಸಿದ್ದು, ಸಮಾಪನಾಧಿಕಾರಿಯನ್ನೂ ನೇಮಕ ಮಾಡಿದ್ದಾರೆ.ಈ ಸಂಘಗಳು ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ಆಡಳಿತ ಮಂಡಳಿ ಸದಸ್ಯರು ಅಥವಾ ಮುಖ್ಯ ಕಾರ್ಯನಿರ್ವಾಹಕರ (ಕಾರ್ಯದರ್ಶಿ) ಮಾಹಿತಿ ಲಭ್ಯವಿರುವುದಿಲ್ಲ. ಅಲ್ಲದೆ, ಸುದೀರ್ಘ ಅವಧಿಯಿಂದ ಲೆಕ್ಕ ಪರಿಶೋಧನೆಯೂ ನಡೆದಿರುವುದಿಲ್ಲ.ಆಕ್ಷೇಪಣೆಗೆ ೭ ದಿನಗಳ ಗಡುವು:ಈ ಕೆಳಗಿನ ಸಹಕಾರ ಸಂಘಗಳೊಂದಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ವ್ಯವಹಾರಿಕ ಬಾಕಿ (ಕೊಡತಕ್ಕ ಅಥವಾ ಬರತಕ್ಕ ಬಾಕಿಗಳು) ಹೊಂದಿದ್ದರೆ, ಸೂಕ್ತ ದಾಖಲಾತಿಗಳೊಂದಿಗೆ ಈ ಪ್ರಕಟಣೆ ಹೊರಬಿದ್ದ ೦೭ ದಿನಗಳೊಳಗಾಗಿ ಬಸವನಬಾಗೇವಾಡಿಯ ಪಿಎಲ್‌ಡಿ ಬ್ಯಾಂಕ್ ಕಚೇರಿ ಕಟ್ಟಡದಲ್ಲಿರುವ ಸಹಕಾರ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.ನಿಗದಿತ ಅವಧಿಯೊಳಗೆ ಯಾವುದೇ ಅರ್ಜಿ ಅಥವಾ ಆಕ್ಷೇಪಣೆಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ತಾಲೂಕಿನ ವ್ಯಾಪ್ತಿಯಲ್ಲಿನ ಬೈಲಾದಲ್ಲಿನ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಮಾಹಿತಿ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಈ ಸಹಕಾರ ಸಂಘಗಳು ತಮ್ಮ ನೋಂದಾಯಿತ ಸ್ಥಳ ಆಡಳಿತ ಮಂಡಳಿ ಮಾಹಿತಿ ಲಭ್ಯವಿರುವುದಿಲ್ಲ. ಅಲ್ಲದೆ, ಹಲವು ವರ್ಷಗಳಿಂದ ಸಂಘಗಳ ವ್ಯವಹಾರಗಳ ಲೆಕ್ಕಪರಿಶೋಧನೆಯೂ ನಡೆದಿರುವುದಿಲ್ಲ. ಸಂಘಗಳ ಕೊಡತಕ್ಕ ಹಾಗೂ ಬರತಕ್ಕ ಬಾಬುಗಳ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ.ಈ ಹಿನ್ನೆಲೆಯಲ್ಲಿ, ಮಾನ್ಯ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಳಗಾವಿ ಪ್ರಾಂತ, ಬೆಳಗಾವಿ ಹಾಗೂ ಮಾನ್ಯ ಸಹಕಾರ ಸಂಘಗಳ ಉಪನಿಬಂಧಕರು, ವಿಜಯಪುರ ಅವರು ಈ ಕುರಿತು ಆದೇಶ ಹೊರಡಿಸಿ ಸಮಾಪನಾಧಿಕಾರಿಯನ್ನು ನೇಮಕ ಮಾಡಿರುತ್ತಾರೆ.ಆಕ್ಷೇಪಣೆಗೆ ೭ ದಿನಗಳ ಕೆಳಕಂಡ ಸಹಕಾರ ಸಂಘಗಳೊಂದಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕೊಡತಕ್ಕ ಅಥವಾ ಬರತಕ್ಕ ಬಾಕಿ ಹೊಂದಿದ್ದಲ್ಲಿ, ಸಂಬಂಧಿಸಿದವರು ಸೂಕ್ತ ದಾಖಲೆಗಳೊಂದಿಗೆ ಈ ಪ್ರಕಟಣೆ ಹೊರಬಿದ್ದ ೦೭ ದಿನಗಳೊಳಗಾಗಿ ಸಮಾಪನಾಧಿಕಾರಿಯ ಕಚೇರಿಯನ್ನು ಸಂಪರ್ಕಿಸಿ…

Read More

ಸಬಲೀಕರಣ, ಸಾಮಾಜಿಕ ಸಾಮರಸ್ಯ ಹಾಗೂ ಸಮುದಾಯ ಅಭಿವೃದ್ಧಿಗೆ ‘ಭಾರತ್ ಜೋಡೋ ಯುವ ಸಂಘ’ ಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವಜನರನ್ನು ಸಂಘಟಿಸಿ, ಅವರಲ್ಲಿರುವ ಶಕ್ತಿ, ಪ್ರತಿಭೆ, ಸೃಜನಶೀಲತೆ ಹಾಗೂ ನಾಯಕತ್ವ ಗುಣಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘ ಯೋಜನೆ ಜಾರಿಗೆ ತರಲು ಅನುಷ್ಠಾನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಜನರಿಗೆ ಸ್ಥಳೀಯ ಮಟ್ಟದಲ್ಲೇ ವ್ಯವಸ್ಥಿತ ವೇದಿಕೆ ಕಲ್ಪಿಸಿ, ಅವರನ್ನು ಸಮುದಾಯ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕ್ರೀಡೆ, ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.ರಾಜ್ಯದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ವಾರ್ಡ್ಗಳನ್ನು ಆಧಾರವಾಗಿಟ್ಟುಕೊಂಡು ಒಟ್ಟು ೧೦,೦೦೦ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಿ, ೫೦ ಲಕ್ಷಕ್ಕೂ ಅಧಿಕ ಯುವಕರನ್ನು ಸಂಘಟಿಸುವ ಗುರಿ ಹೊಂದಲಾಗಿದೆ.ಒಂದು ಸಂಘ ರಚನೆಗೆ ಕನಿಷ್ಠ ೧೦೦ ಸದಸ್ಯರು ಅಗತ್ಯ. ಆಧಾರ್ ಆಧಾರಿತ ನೋಂದಣಿ ಮೂಲಕ ಬಿಜೆವೈಎಸ್ ಪೋರ್ಟಲ್, ಮೊಬೈಲ್ ಆ್ಯಪ್…

Read More

ಇಂದು (ಅಗಷ್ಟ ೨೧, ಶುಕ್ರವಾರ) “ಹಿರಿಯ ನಾಗರೀಕರ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ಉಪನ್ಯಾಸಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ “ಏನೆಲ್ಲ ಮರೆತರು ತಮ್ಮ, ಹಡೆದವರ ನೀ ಮರಿಬ್ಯಾಡ. ಉಪಕಾರ ತೀರಿಸಬೇಕು ಈ ಮಾತು ತಿಳಿದು ನೋಡು” ಎಂಬ ಭಜನಾ ಪದದ ಹಿಂದಿನ ಸಾರ-ಸಂದೇಶವನ್ನು ಅರಿತು ನಾವೆಲ್ಲರೂ ಹಿರಿಯ ಜೀವಿಗಳನ್ನು ಮಕ್ಕಳಂತೆ ನೋಡಬೇಕು.ಆದರೆ ಇಂದಿನ ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನ ಶೈಲಿಗಳಿಂದಾಗಿ ನಮ್ಮ ಮನ, ಮನೆ, ಕುಟುಂಬ ಮತ್ತು ಸಮಾಜದಲ್ಲಿ ಬದುಕುವ ರೀತಿ-ನೀತಿ ಮತ್ತು ಜೀವನ ಕ್ರಮ ಬದಲಾಗುತ್ತಿದೆ. ಇಂದು ‘ನಾವಿಬ್ಬರು ನಮಗಿಬ್ಬರು’ (ಗಂಡ-ಹೆಂಡತಿ ಮತ್ತು ಮಕ್ಕಳು) ಎಂಬ ಸಂಕುಚಿತ ಭಾವ ಬರುತ್ತಿದೆ. ಆದರೆ ತಮ್ಮ ಬಹುಪಾಲು ಜೀವನವನ್ನು ಕೇವಲ ಮಕ್ಕಳ ಪಾಲನೆ-ಪೋಷಣೆ, ಕುಟುಂಬ ನಿರ್ವಹಣೆ ಮತ್ತು ಇತರರ ಶ್ರೇಯಸ್ಸಿಗಾಗಿಯೇ ಹಗಲಿರುಳು ದುಡಿದು ಇಂದು ವಯೋವೃದ್ಧರಾಗಿರುವ ಕುಟುಂಬದ ಹಿರಿಯ ಜೀವಿಗಳನ್ನು ಪ್ರೀತಿಸುವ, ಗೌರವಿಸುವ ಮತ್ತು ಉಪಚರಿಸುವ ಪರಿಯು ಕಳವಳಕಾರಿ ಸಂಗತಿ.ಹಿರಿಯ ಜೀವಿಗಳು ಸಂಸ್ಕೃತಿ-ಸಂಸ್ಕಾರದ…

Read More

ಲೇಖನ- ಮಂಡ್ಯ.ಮ.ನಾ.ಉಡುಪಸಾಹಿತಿಮಂಡ್ಯ ಉದಯರಶ್ಮಿ ದಿನಪತ್ರಿಕೆ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ, ಅವು ಬದುಕಿನ ಮೌಲ್ಯಗಳನ್ನು ನೆನಪಿಸುವ ಆಧ್ಯಾತ್ಮಿಕ ನಿಲ್ದಾಣಗಳು. ಅಂತಹ ಪವಿತ್ರ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತಕ್ಕೆ ಅಗ್ರಸ್ಥಾನವಿದೆ. ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸಲ್ಪಡುವ ಈ ವ್ರತವು ಸ್ತ್ರೀಯರ ಶ್ರದ್ಧೆ, ಕುಟುಂಬದ ಸಮೃದ್ಧಿ ಮತ್ತು ದೈವೀ ಅನುಗ್ರಹದ ಸಂಗಮವಾಗಿದೆ.ವರ ಎಂದರೆ ವರವನ್ನು ನೀಡುವವಳು, ಮಹಾಲಕ್ಷ್ಮಿ ಎಂದರೆ ಸಂಪತ್ತಿನ ಅಧಿದೇವತೆ. ಭಕ್ತರು ಕೇಳಿದ ವರಗಳನ್ನು ಕರುಣಿಸುವ ತಾಯಿ ಎಂಬ ಕಾರಣಕ್ಕೆ ಆಕೆಯನ್ನು ವರಮಹಾಲಕ್ಷ್ಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಮಹಾಲಕ್ಷ್ಮಿಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯರ ಅನುಗ್ರಹವೂ ಒಟ್ಟಿಗೆ ದೊರೆಯುತ್ತದೆ ಎಂಬುದು ನಂಬಿಕೆ.ವ್ರತದ ಹಿನ್ನೆಲೆ ಮತ್ತು ಪೌರಾಣಿಕ ಕಥೆವರಮಹಾಲಕ್ಷ್ಮಿ ವ್ರತದ ಕುರಿತು ಸ್ಕಂದ ಪುರಾಣದಲ್ಲಿ ವಿಸ್ತಾರವಾದ ಉಲ್ಲೇಖವಿದೆ. ಒಮ್ಮೆ ಪರಮೇಶ್ವರನು ಪಾರ್ವತಿದೇವಿಗೆ ಅತ್ಯಂತ ಶ್ರೇಷ್ಠವಾದ, ಸ್ತ್ರೀಯರಿಗೆ ಸೌಭಾಗ್ಯವನ್ನು ನೀಡುವ ವ್ರತದ ಬಗ್ಗೆ ತಿಳಿಸುತ್ತಾನೆ. ಅದೇ ವರಮಹಾಲಕ್ಷ್ಮಿ ವ್ರತ.ಇನ್ನೊಂದು ಜನಪ್ರಿಯ ಕಥೆಯ ಪ್ರಕಾರ, ಕುಂಡಿನಪುರ ಎಂಬ ಪಟ್ಟಣದಲ್ಲಿ ಚಾರುಮತಿ ಎಂಬ ಗುಣವತಿ, ಪತಿವ್ರತಾ ಸ್ತ್ರೀ ಇದ್ದಳು.…

Read More