ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ವಿಜಯಪುರ ನಗರ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಸಿಂದಗಿ ತಾಲೂಕು ಹಾಗೂ ನಗರ ವಲಯದ ಸಮಸ್ತ ಶಿಕ್ಷಕರ ಪರವಾಗಿ ಗೌರವ ಸನ್ಮಾನ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರ ವಲಯದ ನೂತನ ಅಧ್ಯಕ್ಷ ಸಯ್ಯದ ಜುಬೇರ ಕೆರೂರ, ಹಲವಾರು ವರ್ಷಗಳಿಂದ ಶಿಕ್ಷಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿರುವೆ. ಅದಕ್ಕಾಗಿ ಹೊಸ ಜವಾಬ್ದಾರಿ ದೊರೆತಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಂದಗಿ ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಯು ಐ ಶೇಖ, ಶಿಕ್ಷಕರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಸಂಘ ಕಾರ್ಯ ನಿರ್ವಹಿಸಬೇಕು. ಈ ಸಲ ಆಯ್ಕೆಯಾದ ನೂತನ ಪದಾಧಿಕಾರಿಗಳೆಲ್ಲರು ಕ್ರೀಯಾಶೀಲರಾಗಿದ್ದು, ಉತ್ತಮ ಕಾರ್ಯ ನಿರ್ವಹಣೆ ಮಾಡುವ ಭರವಸೆಯಿದೆ. ಅಧಿಕಾರ ಸಿಕ್ಕಾಗ ಉತ್ತಮ ಸೇವೆ ಮಾಡುವ ಗುರಿ ಹೊಂದಿರಬೇಕು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಶುಭ ಕೋರಿದರು.
ನೂತನ ಪದಾಧಿಕಾರಿಗಳಾದ ಮಂಜುನಾಥ ಅರೆಶಂಕರ, ಬಸೀರ ನದಾಫ, ಅಜೀಜ ಅರಳಿಮಟ್ಟಿ, ಶಿವಾನಂದ ರೂಗಿ, ಕಬೂಲ್ ಕೊಕಟನೂರ ಇವರನ್ನು ಸಿಂದಗಿ ತಾಲೂಕು ಹಾಗೂ ವಿಜಯಪುರ ನಗರದ ಸಮಸ್ತ ಶಿಕ್ಷಕರ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ರಿಯಾಜ ತಮದಡ್ಡಿ, ಅಲ್ತಾಪ ಸಾಲೋಟಗಿ, ಸರತಾಜ ಬಗಲಿ, ಲತೀಫ ಬಾಗವಾನ, ಝಮೀರ ನಾಗರಬೌಡಿ, ಅಬೀದ ಬುರಕಾಫೋಷ, ಅಜರ್ ಮುಲ್ಲಾ, ಹಾಶಿಂಪೀರ ಇನಾಮದಾರ, ಪಿ ಎ ಚಿಕ್ಕಗಸಿ, ಫಯಾಝ ತಮದಡ್ಡಿ ಸೇರಿದಂತೆ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.

