Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 08,2026

ಜನಪದ ಸಂಗಮ ತರಬೇತಿ: ಅರ್ಜಿ ಆಹ್ವಾನ

ಭೋವಿ ಸಮಾಜದ ಆರ್ಥಿಕ ಸಬಲೀಕರಣಕ್ಕೆ ಒತ್ತು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದೇಶದ ಬೆನ್ನೆಲುಬಾಗಿರುವ ಯವಕರಿಗೆ ಸದಾ ನಮ್ಮ ಬೆಂಬಲ
(ರಾಜ್ಯ ) ಜಿಲ್ಲೆ

ದೇಶದ ಬೆನ್ನೆಲುಬಾಗಿರುವ ಯವಕರಿಗೆ ಸದಾ ನಮ್ಮ ಬೆಂಬಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತಿಕೋಟಾದಲ್ಲಿ ನಡೆದ ಯುವ ಶಕ್ತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಭರವಸೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ದೇಶದ ಬೆನ್ನೆಲುಬಾಗಿರುವ ಯವಕರಿಗೆ ನಾವು ಸದಾ ಬೆಂಬಲವಾಗಿ ನಿಂತಿದ್ದೇವೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ರವಿವಾರ ಮುಸ್ಸಂಜೆ ತಿಕೋಟಾ ಪಟ್ಟಣದಲ್ಲಿ ನಡೆದ ಯುವ ಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಕಾರ್ಯಕ್ರಮ ಯುವಕರ ಶಕ್ತಿ ಪ್ರದರ್ಶನ ಮಾತ್ರವಲ್ಲ, ಯುವಕರ ಬೃಹತ್ ಜಾತ್ರೆಯಾಗಿದೆ. ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಕಂಡು ಮಂತ್ರಮುಗ್ದನಾಗಿದ್ದೇನೆ. ತಾವು ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ಋಣಿಯಾಗಿದ್ದೇನೆ. ಈ ಕಾರ್ಯಕ್ರಮ ವಿರೋಧಿಗಳಿಗೆ ನಿದ್ದೆ ಗೆಡಿಸಲಿದೆ. ತಮ್ಮೆಲ್ಲರ ಒಳಿತಿಗಾಗಿ ನಾವು ಸದಾ ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಭಾರತದ ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಕರಿದ್ದಾರೆ. ಹೀಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರನ್ನು ಬೆಳೆಸುವ ಕೆಲಸವನ್ನು ಮಾಡುತ್ತಿದ್ದೇವೆ. ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಯೋಜನೆಗಳು ಯುವಜನತೆ ಕೃಷಿ, ತೋಟಗಾರಿಕೆ ಸೇರಿದಂತೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಿ ಬದುಕು ಸಾಗಿಸಲು ನೆರವಾಗಿವೆ. ಲಭ್ಯವಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಯುವಕರು ಕೃಷಿಯಲ್ಲಿ ಹೆಚ್ಚೆಚ್ಚು ಆದಾಯ ಕಂಡುಕೊಳ್ಳಬಹುದಾಗಿದೆ. ಹೊಸ ಹೊಸ ಯೋಚನೆಗಳನ್ನು ಹೊಂದಿರುವ ಯುವಕರು ರಾಜಕೀಯಕ್ಕೆ ಬರಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಬೇಕು. ಅಲ್ಲದೇ, ಯುವಕರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ರಾಜಕೀಯದಲ್ಲಿಯೂ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳಬೇಕು. ನಿರ್ಭಿತಿಯಿಂದ ಕೆಲಸ ಮಾಡಬೇಕು. ಮುಂಬರುವ ಸ್ಥಳೀಯ ಚುನಾವಣೆಗಳಾದ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಸಚಿವ ಎಂ. ಬಿ. ಪಾಟೀಲ ಮತ್ತು ನಾನು ಸದಾ ತಮ್ಮೊಂದಿಗೆ ಇರುತ್ತೇವೆ ಎಂದು ಸುನೀಲಗೌಡ ಪಾಟೀಲ ಯುವಕರಿಗೆ ಅಭಯ ನೀಡಿದರು.
ತೊರವಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಯುವಕರ ಇಂದಿನ ಉತ್ಸಾಹ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಇದು ಎಂ. ಬಿ. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರ ಮೇಲೆ ಯುವಕರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ. ತಮ್ಮನ್ನು ಹೃದಯಲ್ಲಿ ಇಟ್ಟುಕೊಂಡಿರುವ ಯುವಕರಿಗೆ ಸುನೀಲಗೌಡರು ಬೆನ್ನೆಲುಬಾಗಿ ನಿಂತಿದ್ದಾರೆ. ಸಂತರ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ಜನಪರ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಸಚಿವ ಎಂ. ಬಿ. ಪಾಟೀಲರು ರೈತರಿಗಾಗಿ ಮಾಡಿರುವ ಕೆಲಸ ಕಾರ್ಯಗಳು ಇಡೀ ರಾಜ್ಯಾದ್ಯಂತ ಮನೆಮಾತಾಗಿವೆ. ಇಂಥ ಸಹೋದರರು ಜಿಲ್ಲೆಯಲ್ಲಿದ್ದರೆ ಜನರಿಗೆ ಯಾವುದೇ ಕೊರತೆ ಇರುವುದಿಲ್ಲ. ಇಬ್ಬರೂ ಸಹೋದರು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ತಿಕೋಟಾ ಶಿವಬಸವ ಶಿವಾಚಾರ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಗೌಡನವರ, ಈರನಗೌಡ ಬಿರಾದಾರ, ಮುಖಂಡರಾದ ರಾಮು ದೇಸಾಯಿ, ಬಸಯ್ಯ ವಿಭೂತಿ, ಲೇಪು ಕೊಣ್ಣೂರ, ಭಾಗೀರಥಿ ತೇಲಿ, ಶೋಭಾ ಹುಲ್ಯಾಳ, ಪ್ರಶಾಂತ ಪಾಟೀಲ ಕನಮಡಿ, ಕಿರಣ ದಳವಾಯಿ(ದೇಸಾಯಿ), ವಿ. ಎಂ. ಪಾಟೀಲ, ರಾಮರಾವ ದೇಸಾಯಿ, ಬಾಬು ಹಂಚಿನಾಳ, ಪ್ರಕಾಶ ಜಲಗೇರಿ, ಸುರೇಶ ಕೊಣ್ಣೂರ, ಅರುಣ ಖೈರಾವ, ಸಚಿನ ಪಾಟೀಲ, ಅಮರ ಬಿಸನಾಳ, ಸಚಿನ ಚಿನವಾಲ, ಆಕಾಶ ಕಲಬುರ್ಗಿ, ರಾಜು ಚವ್ಹಾಣ ಸೇರಿದಂತೆ ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ತಾಲೂಕುಗಳ ನಾನಾ ಗ್ರಾಮಗಳ ಸಾವಿರಾರು ಯುವಕರು ಉಪಸ್ಥಿತರಿದ್ದರು.
ಯುವ ಮುಖಂಡರಾದ ಶಿವಾನಂದ ಹಂಜಗಿ ಸ್ವಾಗತಿಸಿದರು. ಪ್ರಶಾಂತ ಝಂಡೆ ನಿರೂಪಿಸಿದರು.

ಗಮನ ಸೆಳೆದ ಭವ್ಯ ಮೆರವಣಿಗೆ

ಈ ಕಾರ್ಯಕ್ರಮಕ್ಕೂ ಮುಂಚೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರನ್ನು ಯುವಕರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು.
ದಾರಿಯುದ್ದಕ್ಕೂ ಹೂಮಳೆ ಸುರಿಸಿದ ಯುವಕರು, ಅಬ್ಬರದ ಸಂಗೀತ, ಹಲಗೆ ವಾದನ ಸೇರಿದಂತೆ ನಾನಾ ಸಂಗೀತ ವಾದ್ಯಗಳೊಂದಿಗೆ ವೇದಿಕೆವರೆಗೆ ಮೆರವಣಿಗೆ ನಡೆಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 08,2026

ಜನಪದ ಸಂಗಮ ತರಬೇತಿ: ಅರ್ಜಿ ಆಹ್ವಾನ

ಭೋವಿ ಸಮಾಜದ ಆರ್ಥಿಕ ಸಬಲೀಕರಣಕ್ಕೆ ಒತ್ತು

ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಕ್ತಿ :ಆರ್.ಡಿ.ಕುಲಕರ್ಣಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 08,2026
    In ದಿನಪತ್ರಿಕೆ
  • ಜನಪದ ಸಂಗಮ ತರಬೇತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಭೋವಿ ಸಮಾಜದ ಆರ್ಥಿಕ ಸಬಲೀಕರಣಕ್ಕೆ ಒತ್ತು
    In (ರಾಜ್ಯ ) ಜಿಲ್ಲೆ
  • ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಕ್ತಿ :ಆರ್.ಡಿ.ಕುಲಕರ್ಣಿ
    In (ರಾಜ್ಯ ) ಜಿಲ್ಲೆ
  • ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಎಚ್.ಟಿ.ಕುಲಕರ್ಣಿ ಸರ್
    In (ರಾಜ್ಯ ) ಜಿಲ್ಲೆ
  • ಗೋಲಗೇರಿ ಗೊಲ್ಲಾಳೇಶ್ವರನಿಗೆ ವಿಶೇಷ ಪೂಜೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳದ ದಾನ-ಧರ್ಮದ ಪರಂಪರೆ ಸಮಾಜಕ್ಕೆ ಪ್ರೇರಣೆ
    In (ರಾಜ್ಯ ) ಜಿಲ್ಲೆ
  • ಗಣೇಶ ಹಬ್ಬದಲ್ಲಿ ಇಲಾಖೆ ನಿಯಮಾವಳಿ ಪಾಲಿಸಿ :ಪಿಎಸೈ
    In (ರಾಜ್ಯ ) ಜಿಲ್ಲೆ
  • ವಿದ್ಯೆ ನೀಡುವ ಪವಿತ್ರ ಕಾರ್ಯಗೈವ ಶಿಕ್ಷಕ ರಾಷ್ಟ್ರ ರಕ್ಷಕ
    In (ರಾಜ್ಯ ) ಜಿಲ್ಲೆ
  • ಅಕ್ರಮ ಸಾಗಿಸುತ್ತಿದ್ದ ೩೦ ಚೀಲ ಅಕ್ಕಿ ಜಪ್ತಿ!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.