ಉದಯರಶ್ಮಿ ದಿನಪತ್ರಿಕೆ
ರೇವತಗಾಂವ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರವೊಂದು ಸೋಮವಾರ ಬೀಸಿದ ಬಿರುಗಾಳಿಗೆ ಧರೆಗುರುಳಿ ಬಿದ್ದಿದೆ.
ಶಾಲೆಗಳಿಗೆ ರಜೆ ಇರುವ ಹಿನ್ನಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ಮಂಗಳವಾರದಂದು ಶಾಲಾ ಮುಖ್ಯ ಗುರುಗಳು ಹಾಗೂ ಸಹ ಶಿಕ್ಷಕರು ಮರವನ್ನು ತೆರವುಗೊಳಿಸುವ ಮೂಲಕ ಶಾಲಾ ಪ್ರಾರಂಭೋತ್ಸವದ ಮುನ್ನ ಶಾಲಾ ಅವರಣವನ್ನು ಈ ಸಂದರ್ಭದಲ್ಲಿ ಸ್ವಚ್ಛಗೊಳಿಸಿದರು.

