Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಸಿರಸಗಿ ಆದರ್ಶಗ್ರೂಪ್ ಆಪ್ ಟ್ರಸ್ಟ್ ಮತ್ತು ಕಾನೂನು ಸೇವಾ ಸಮಿತಿ ಸಿಂದಗಿ ಇವರ ಸಹಯೋಗದಲ್ಲಿ ‘ರೆಹಮತಬಿ ಎ ಸಿರಸಗಿ ಮೆಮೊರಿಯಲ್ ಕಾನೂನು ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ಒಕ್ಕೂಟ ಜಿಮಖಾನಾ ಚಟುವಟಿಕೆಗಳ ಉದ್ಘಾಟನೆ, ಎಲ್.ಎಲ್.ಬಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನ.23 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಕೇರಿ ಗ್ರಾಮದ ಆದರ್ಶ ಕ್ಯಾಂಪಸ್ ನಲ್ಲಿ ಜರುಗಲಿದೆ.ಸಿಂದಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೊಗೇರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಕುಲಪತಿಗಳಾದ ಪ್ರೊ.ಸಿ.ಬಸವರಾಜ ಉಪಸ್ಥಿತರಿರುವರು.ಅಧ್ಯಕ್ಷತೆಯನ್ನು ಸಿರಸಗಿ ಆದರ್ಶ ಗ್ರೂಪ್ ಆಪ್ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ಜಹಾಂಗೀರಬಾಶ್ಯಾ ಸಿರಸಗಿ ವಹಿಸುವರು.ಅತಿಥಿಗಳಾಗಿ ಸಿಂದಗಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಆರ್.ಎ.ಮುಲ್ಲಾ, ಸಿವಿಲ್ ನ್ಯಾಯಾಧೀಶೆ ಪಂಕಜಾ ಕೊಣ್ಣೂರ, ದೇವರಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ ಹಾಗೂ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹೃದಯದ ಹೃದಯವೇನೀ ಕಣ್ಣಿಗೆ ಬಿದ್ದಾಗಿನಿಂದ ಎಂಥ ತ್ರಿಪುರ ಸುಂದರಿಯರಿಗೂ ಮನಸ್ಸು ಸೋಲುತ್ತಿಲ್ಲ. ಮುಷ್ಟಿಯಷ್ಟಿರುವ ಹೃದಯದಲ್ಲಿ ನೂರಾರು ಕನಸುಗಳು ತಾವಾಗಿಯೇ ಗೂಡು ಕಟ್ಟಿಕೊಂಡಿವೆ. ನಿನ್ನ ಒಪ್ಪಿಗೆ ಕಾಯದೇ ಬೆಚ್ಚನೆಯ ಎದೆಯಲ್ಲಿ ನಿನ್ನಂದ ಬಚ್ಚಿಟ್ಟುಕೊಂಡು ಹೋದಲ್ಲೆಲ್ಲ ನಿನ್ನನ್ನು ಕರೆದೊಯ್ಯುತಿರುವೆ. ಲೋಕದಲ್ಲೆೆಲ್ಲ ನೀನೇ ತುಂಬಿರುವೆ.ಈ ಪುಟ್ಟ ಹೃದಯವನು ಮನಸಾರೆ ನಿನ್ನ ಕೈಲಿಡಲು ಕಣ್ಣ ರೆಪ್ಪೆಗಳನು ಅಂಟಿಸದೇ ಕಾಯುತಿರುವೆ. ಪ್ರಪಂಚವು ಒಪ್ಪಲಿ ಬಿಡಲಿ ನಾನೆಂದಿಗೂ ನಿನ್ನವನೇ ಗೆಳತಿ. ಸಣ್ಣ ಸಣ್ಣ ಆಸೆಗಳ ಸಂಭ್ರಮ, ಹೊತ್ತು ಗೊತ್ತಿಲ್ಲದೇ ನಿದ್ದೆ ಕೆಡಿಸುತಿದೆ. ನಿನ್ನ ಮೈ ಮಾಟದ ಅಂದ ಚೆಂದದ ಬಣ್ಣನೆ ಕೇಳಿದರೆ ಹುಟ್ಟುಗುರುಡನೂ ನಿನ್ನ ಕಿರು ಬೆರಳನು ಹಿಡಿಯಲು ಹಟ ಹಿಡಿಯುತ್ತಾನೆ. ಅಂತಾದ್ರಲ್ಲಿ ನಾನಾವ ಲೆಕ್ಕ? ಇನ್ನಾರಾದರೂ ನಿನ್ನ ಕೈ ಕೇಳಿ, ನೀ ಒಪ್ಪಿಬಿಟ್ಟರೆ ಎಂಬ ಚಿಂತೆ ಕಾಡುತಿದೆ. ಪ್ರೇಮಲೋಕದಲ್ಲಿ ಕೊನೆಯಾಗದ ಪ್ರೇಮಗೀತೆಯನ್ನು ಜೊತೆ ಜೊತೆಯಲ್ಲಿ ಹಾಡುವಾಸೆ ಕೇಳು ಸಿಂಗಾರಿ. ಅಳಿಸಲಾಗದ ಬಂಧನದಲ್ಲಿ ಬಂಧಿಸಿಕೊಳ್ಳುವ ಆಸೆ. ಹದಿ ಹರೆಯದ ಹುಡುಗರನ್ನು…
ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಇದೇ ತಿಂಗಳು 21, 22, 23 ರಂದು ಉತ್ತರ ಈಶಾನ್ಯ ರಾಜ್ಯ ಅಸ್ಸಾಂ ನ ಗೌಹಾತಿಯಲ್ಲಿ ಅಖಿಲ ಭಾರತ ಕವಯತ್ರಿಯರ 25 ನೆಯ ವರ್ಷದ ಸಮ್ಮೇಳನವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ. ಇದರಲ್ಲಿ ಇಡೀ ಭಾರತದ ಎಲ್ಲ ಭಾಷೆಗಳ ಕವಯತ್ರಿಯರು ಭಾಗವಹಿಸುತ್ತಿರುವುದು ಒಂದು ವಿಶೇಷ. 25 ಭಾಷೆಯ ಪುಸ್ತಕ ಗಳು ಬಿಡುಗಡೆಗೊಳ್ಳುತ್ತಿರುವುದು ಇನ್ನೊಂದು ವಿಶೇಷ.ಅಲ್ಲಿ ಬಹುಭಾಷಾ ಕವಿಗೋಷ್ಠಿ, ಪ್ರಬಂಧ ಮಂಡನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದರ ಜೊತೆಗೆ ಹಲವಾರು ದತ್ತಿ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳು, ರಾಜ್ಯಪಾಲರು ಮತ್ತು ಇತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿಯಿಂದ ಇಪ್ಪತ್ತೈದು ಜನ ಕವಯತ್ರಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅದರಲ್ಲಿ ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಅಡಿಯಲ್ಲಿರುವ ಅಕ್ಕನ ಅರಿವು ಮತ್ತು ಕನ್ನಡ ಕವನ ಕಾವ್ಯ ಕೂಟದ ಬಳಗದಿಂದ ವಿಶ್ವಸ್ಥರಾದ ಶ್ರೀಮತಿ ಸುಧಾ ಪಾಟೀಲ್ ಅವರು ಮತ್ತು ಆಜೀವ ಸದಸ್ಯರಾದ ಪ್ರೊ.ರಾಜನಂದಾ ಘಾರ್ಗಿ ಅವರೂ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಸರಕಾರಿ ನೌಕರರ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೭೨ ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಸಹಕಾರ ಶಿಕ್ಷಣ ನಿಧಿ ಸಂದಾಯ ಮಾಡಿದ ಗುಡ್ಡದ ಬಸವರಾಜೇಂದ್ರ ಸೌಹಾರ್ದ ಸಹಕಾರಿ ಸಂಘಕ್ಕೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿದ್ಯಾಶ್ರೀ ಪಾಟೀಲ್ ಅವರಿಗೆ ಸಹಕಾರ ಇಲಾಖೆಯ ಅಧಿಕಾರಿ ಭಾಗ್ಯಶ್ರೀ ಕುಂಬಾರ ಪ್ರಶಸ್ತಿ ವಿತರಿಸಿದರು.ಸಹಕಾರಿ ಧುರೀಣರಾದ ಎಂ.ಆರ್. ಪಾಟೀಲ, ಶ್ರೀಮಂತ ಇಂಡಿ, ಎಂ.ಸಿ. ಮುಲ್ಲಾ, ಗುರುಶಾಂತ ನಿಡೋಣಿ ಸೇರಿದಂತೆ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಮನುಷ್ಯ ಜೀವನ ಪವಿತ್ರ ಪಾವನ. ಅರಿತು ಬಾಳುವದರಲ್ಲಿ ಸುಖ ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಮನುಷ್ಯ ದೊಡ್ಡದೊಡ್ಡ ಮಾತು ಆಡುವದರಿಂದ ದೊಡ್ಡವರಾಗಲ್ಲ. ದೊಡ್ಡ ಮನಸ್ಸು ಮತ್ತು ದೊಡ್ಡ ಗುಣಗಳಿಂದ ಮನುಷ್ಯನಿಗೆ ದೊಡ್ಡಸ್ತಿಕೆ ಪ್ರಾಪ್ತಿಯಾಗಲಿದೆ ಎಂದು ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು ಹೇಳಿದರು.ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮಾದೇವಿ ೪ ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಬಾಲ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೀಪೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೀವನ ನಮಗೆ ಏನು ಕೊಟ್ಟಿದೆ ಎಂಬುದಕಿಂತ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಸ್ವಾಭಿಮಾನದ ಕೊರತೆ ಯಿಂದ ಅನೇಕ ನೋವು ಅನುಭವಿಸುವ ಪರಿಸ್ಥಿತಿ ಇದೆ.ದೇಶಾಭಿಮಾನ ಮತ್ತು ಧರ್ಮಾಭಿಮಾನ ಎಲ್ಲರಲ್ಲೂ ಬೆಳೆದು ಬರಬೇಕು. ಮನುಷ್ಯನ ಮನಸ್ಸು ಶಾಂತ ಪ್ರಶಾಂತಗೊಳ್ಳಲು ಸಾದನೆ ಬೇಕು. ಚಂಚಲ ಮನಸ್ಸನ್ನು ತಣ್ಣ ಗಿಡುವ ಜೀವನವೇ ಆಧ್ಯಾತ್ಮ. ಆದ್ಯಾತ್ಮದ ಬದುಕು ಬಲಗೊಳ್ಳಲು ಆಧ್ಯಾತ್ಮದ ಅರಿವು ಸಾದನೆ ನಿರಂತರವಾಗಿರಬೇಕು ಎಂದರು.ಆಳೂರ ಶಂಕರಾನಂದ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ಕೈಗೊಂಡು ಅನಿರ್ದಿಷ್ಟಾವಧಿ ಧರಣಿ ಕುಳಿತರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಭೆ ಸೇರಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ, ಸಿಐಯುಟಿ ತಾಲ್ಲೂಕು ಸಮಿತಿ ಹಾಗೂ ಕರ್ನಾಟಕ ರಾಜ್ಯ ಪಂಚಾಯತ್ ಕ್ಲರ್ಕ್ ಕಮ್ ಡಾಟಾಎಂಟ್ರಿ ಆಪರೇಟರ್ ನೌಕರರ ಸಂಘದ ಪದಾಧಿಕಾರಿಗಳು ಘೋಷಣೆಗಳೊಂದಿಗೆ ಮೆರವಣಿಗೆ ಹೊರಟು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡರು. ಈ ಸಂದರ್ಭದಲ್ಲಿ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಗೊಟೂರ ಮಾತನಾಡಿ, ಪ್ರತಿ ತಿಂಗಳ ೫ನೇ ದಿನಾಂಕದ ಒಳಗಾಗಿ ವೇತನ ನೀಡಬೇಕು, ಗ್ರಾಮ ಪಂಚಾಯಿತಿ ವರ್ಗ ರ ಖಾತೆಯಿಂದ ೪೦ ಪ್ರತಿಶತ ಅನುದಾನವನ್ನು ಗ್ರಾ.ಪಂ. ನೌಕರರ ವೇತನಕ್ಕಾಗಿ ಮೀಸಲಿಡಬೇಕು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು. ಹೊಸ ನೇಮಕಾತಿ ಕೈಗೊಳ್ಳಬೇಕು, ನಿವೃತ್ತಿ ಉಪಧನ ನೀಡಬೇಕು, ಇಓ ರವರು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಗುರುವಿನ ಕೃಪೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಗುರುವಿನಂತಹ ಕರುಣಾ ಮೂರ್ತಿ ಜಗತ್ತಿನಲ್ಲಿ ಎಲ್ಲು ಸಿಗಲು ಸಾಧ್ಯವಿಲ್ಲ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ಸಿಂದಗಿ ತಾಲೂಕಿನ ಯಂಕಂಚಿ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರರ ೪೮ನೆಯ ಪುಣ್ಯಾರಾಧನೆಯ ನಿಮಿತ್ಯ ಹಮ್ಮಿಕೊಂಡ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನ ಹಾಗೂ ತುಲಾಭಾರ ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಬಡತನ ಇದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಪಾಲಕರು ಸಂಸ್ಕಾರ ನೀಡಿದರೆ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದರು.ಈ ವೇಳೆ ಶಹಾಪೂರ ವಿಶ್ವಕರ್ಮ ಸರಸ್ವತಿ ಪೀಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪುರಾಣ ಪ್ರವಚನ ನೀಡಿ ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬಂತೆ ಗುರುವಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸದಾ ಕಾಲ ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಯಂಕಂಚಿ ನಿಂಗಣ್ಣ ವಿಶ್ವಕರ್ಮ, ಪಡದಳ್ಳಿ ಕಲ್ಲಯ್ಯಸ್ವಾಮಿ, ಮೋರಟಗಿಯ ರವಿ ವಿಭೂತಿ ಸಂಗೀತ ಸೇವೆಯನ್ನು ನಡೆಸಿಕೊಟ್ಟರು.ಶಂಕರಗೌಡ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರದ ತನು ಫೌಂಡೇಶನ್ ಕೊಡ ಮಾಡುವ ರಾಜ್ಯಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಅಖಂಡ ಸಿಂದಗಿ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ, ಜ್ಞಾನಭಾರತಿ ಶಾಲೆ ಶಿಕ್ಷಕ ಬುಳ್ಳಪ್ಪ. ಡಿ ಆಯ್ಕೆಯಾಗಿದ್ದಾರೆ.ಇದೇ ನ.೨೩ರಂದು ಸಾಯಂಕಾಲ ೪ಗಂಟೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಬುಳ್ಳಪ್ಪ. ಡಿ ಅವರಿಗೆ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ, ಆಡಳಿತ ಮಂಡಳಿ, ಶಾಲೆಯ ಮುಖ್ಯಗುರುಗಳು, ಸಿಬ್ಬಂದಿ ಮತ್ತು ಸ್ನೇಹಿತರ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಕಾಖಂಡಕಿಯ ಶಿವಯೋಗೀಶ್ವರ ಶ್ರೀ ಅಭಿಮತ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿರುವ ಸಂಗಮೇಶ ಬಬಲೇಶ್ವರ ಅವರು, ನಾಡಿನ ಮಕ್ಕಳ ಅಭ್ಯುದಯಕ್ಕಾಗಿ ದಣಿವರಿಯದ ಸೇವೆಯಲ್ಲಿ ತೊಡಗಿರುವುದು ಮಕ್ಕಳ ಮೇಲೆ ಅವರಿಗಿರುವ ಕಾಳಜಿ ಮತ್ತು ಬದ್ಧತೆಯನ್ನು ತೋರಿಸುತ್ತದೆ ಎಂದು ವಿಜಯಪುರ ಜಿಲ್ಲೆಯ ಕಾಖಂಡಕಿಯ ಗುರುದೇವಾಶ್ರಮದ ಶಿವಯೋಗೀಶ್ವರ ಸ್ವಾಮೀಜಿ ಶ್ಲಾಘಿಸಿದರು.ಗುರುವಾರ ನಗರದ ಹೊರವಲಯದ ’ನೇಚರ್ ಫಸ್ಟ್ ಇಕೋ ವಿಲೇಜ್’ ನಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಯೋಜಿಸಿರುವ ರಾಜ್ಯಮಟ್ಟದ ವಸತಿಯುತ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಕ್ಕಳಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಅಕಾಡೆಮಿಯು ಸದಾ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದೆ. ನಮ್ಮ ಎಲ್ಲ ಪ್ರಯತ್ನಗಳಿಗೆ ಬೆಂಗಾವಲಾಗಿ ನಿಂತಿರುವ ಸಿಎಂ ಸಿದ್ದರಾಮಯ್ಯ, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ, ಎಂ.ಬಿ.ಪಾಟೀಲ, ಸಂತೋಷ ಲಾಡ ರಿಗೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.ಕನಸಿನ ಕಟ್ಟೆಯ ಮೇಲೆ ನಡೆದ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು…
ವಿವಿಧ ಅನಿಷ್ಠ ಪದ್ಧತಿಗೆ ಕಡಿವಾಣ | ಮಕ್ಕಳ ರಕ್ಷಣಾ ಕಾನೂನಿನ ಕುರಿತು ತಿಂಗಳಿಗೊಮ್ಮೆ ಕಾವಲು ಸಮಿತಿ ಸಭೆ | ಡಿಸಿ ಆನಂದ ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಪೋಕ್ಸೋ ಕಾಯ್ದೆ, ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾನೂನು ಸೇರಿದಂತೆ ವಿವಿಧ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು, ಜನರಲ್ಲಿ ಸೂಕ್ತ ತಿಳುವಳಿಕೆ ಮೂಡಿಸಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ಕಾವಲು ಸಮಿತಿ ಸಭೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ವಿವಿಧ ಅನಿಷ್ಠ ಪದ್ಧತಿಗಳ ನಿರ್ಮೂಲನೆಗಳಾಗಿ ಜಾರಿಗೊಳಿಸಿರುವ ಕಾನೂನಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸುವುದು ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸಭೆಗಳಲ್ಲಿ ಗ್ರಾಮಸ್ಥರ…
