ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಸಿರಸಗಿ ಆದರ್ಶಗ್ರೂಪ್ ಆಪ್ ಟ್ರಸ್ಟ್ ಮತ್ತು ಕಾನೂನು ಸೇವಾ ಸಮಿತಿ ಸಿಂದಗಿ ಇವರ ಸಹಯೋಗದಲ್ಲಿ ‘ರೆಹಮತಬಿ ಎ ಸಿರಸಗಿ ಮೆಮೊರಿಯಲ್ ಕಾನೂನು ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ಒಕ್ಕೂಟ ಜಿಮಖಾನಾ ಚಟುವಟಿಕೆಗಳ ಉದ್ಘಾಟನೆ, ಎಲ್.ಎಲ್.ಬಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ನ.23 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಕೇರಿ ಗ್ರಾಮದ ಆದರ್ಶ ಕ್ಯಾಂಪಸ್ ನಲ್ಲಿ ಜರುಗಲಿದೆ.
ಸಿಂದಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೊಗೇರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಕುಲಪತಿಗಳಾದ ಪ್ರೊ.ಸಿ.ಬಸವರಾಜ ಉಪಸ್ಥಿತರಿರುವರು.
ಅಧ್ಯಕ್ಷತೆಯನ್ನು ಸಿರಸಗಿ ಆದರ್ಶ ಗ್ರೂಪ್ ಆಪ್ ಟ್ರಸ್ಟ್ ನ ಸಂಸ್ಥಾಪಕ ಕಾರ್ಯದರ್ಶಿ ಜಹಾಂಗೀರಬಾಶ್ಯಾ ಸಿರಸಗಿ ವಹಿಸುವರು.
ಅತಿಥಿಗಳಾಗಿ ಸಿಂದಗಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎ.ಆರ್.ಎ.ಮುಲ್ಲಾ, ಸಿವಿಲ್ ನ್ಯಾಯಾಧೀಶೆ ಪಂಕಜಾ ಕೊಣ್ಣೂರ, ದೇವರಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ ಹಾಗೂ ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಸೇರಿದಂತೆ ಅನೇಕರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
.
