ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರದ ತನು ಫೌಂಡೇಶನ್ ಕೊಡ ಮಾಡುವ ರಾಜ್ಯಮಟ್ಟದ ತನು ಕನ್ನಡ ಮನ ಕನ್ನಡ ರಾಜ್ಯ ಪ್ರಶಸ್ತಿಗೆ ಅಖಂಡ ಸಿಂದಗಿ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ, ಜ್ಞಾನಭಾರತಿ ಶಾಲೆ ಶಿಕ್ಷಕ ಬುಳ್ಳಪ್ಪ. ಡಿ ಆಯ್ಕೆಯಾಗಿದ್ದಾರೆ.
ಇದೇ ನ.೨೩ರಂದು ಸಾಯಂಕಾಲ ೪ಗಂಟೆಗೆ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.
ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಬುಳ್ಳಪ್ಪ. ಡಿ ಅವರಿಗೆ ಸಂಸ್ಥೆಯ ಕಾರ್ಯದರ್ಶಿ ಸತೀಶ ಹಿರೇಮಠ, ಆಡಳಿತ ಮಂಡಳಿ, ಶಾಲೆಯ ಮುಖ್ಯಗುರುಗಳು, ಸಿಬ್ಬಂದಿ ಮತ್ತು ಸ್ನೇಹಿತರ ಬಳಗ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

