Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಹಾಗೂ ಖಜಾಂಚಿಯಾಗಿ ತಾಲೂಕಿನ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಸರ್ಕಾರಗಳ ಗಮನ ಸೇಳೆಯುವ ಮೂಲಕ ರಾಜ್ಯದಲ್ಲಿ ಕರಾಟೆ ಕ್ರೀಡೆಯನ್ನು, ರಾಜ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ವಸತಿ ಶಾಲೆಗಳಿಗೂ ಕರಾಟೆ ತರಬೇತಿಯನ್ನು ಕೊಡೆಸುವಲ್ಲಿ ಪ್ರಮುಖರಾಗಿ ಹೋರಾಟವನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದ ಹಿನ್ನೆಲೆ ಇವರನ್ನು ಸತತವಾಗಿ ನಾಲ್ಕನೇ ಬಾರಿಗೆ ಸಂಘದ ಸರ್ವ ಸದಸ್ಯರು ಈ ಜವಾಬ್ದಾರಿಯನ್ನು ನೀಡಿದ್ದಾರೆ.ಕ್ರೀಡೆಗಳಲ್ಲಿ ಮಹತ್ತರ ಜ್ಞಾನ ಮತ್ತು ಅನುಭವನ್ನು ಹೊಂದಿದ್ದ ಶಾರದಳ್ಳಿಯವರು ಕರಾಟೆ ಕ್ರೀಡೆ ಮಾತ್ರವಲ್ಲದೇ ತಾಲೂಕಿನಲ್ಲಿ ಸ್ಕೇಟಿಂಗ್ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿ ತಾಲೂಕಿನ ಹೆಸರು ರಾಜ್ಯದಲ್ಲೆಡೆ ಪಸರಿಸಿ ಕೀರ್ತಿ ತಂದ ಇವರಿಗೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು ಹೆಮ್ಮೆಯ ವಿಷಯ ಎಂದು ತಾಲೂಕಿನ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಮಹಾಂತಗೌಡ ಬಿರಾದಾರ ಹಾಗೂ ಶಾಲಾ ಆಡಳಿತ ಮಂಡಳಿಯವರು ಶಾರದಳ್ಳಿಯವರಿಗೆ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ​ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಆರಾಧ್ಯ ದೈವ ಶ್ರೀ ಬಾಲೇಶ್ವರ ದೇವರ ಜಾತ್ರಾ ಮಹೋತ್ಸವವು ರವಿವಾರ ಶ್ರದ್ಧಾ ಭಕ್ತಿಯೊಂದಿಗೆ ಅದ್ದೂರಿಯಾಗಿ ನೆರವೇರಿತು.ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸಾವಿರಾರು ಭಕ್ತಾದಿಗಳು ದೈವದರ್ಶನ ಪಡೆದು ಪುನೀತರಾದರು.​ ಜಾತ್ರೆಯ ಅಂಗವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬಾಲೇಶ್ವರ ದೇವರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ, ನೈವೇದ್ಯ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಯಿತು. ನಂತರ ಗ್ರಾಮದ ಪುಣ್ಯ ಗಂಗಸ್ಥಳದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.​ವೈವಿಧ್ಯಮಯ ಕಲಾತಂಡಗಳ ಮೆರವಣಿಗೆ​ಗಂಗಸ್ಥಳದಿಂದ ದೇವಸ್ಥಾನದವರೆಗೆ ನಡೆದ ಪಲ್ಲಕ್ಕಿ ಮೆರವಣಿಗೆಯು ನೋಡುಗರ ಕಣ್ಣು ಸೆಳೆಯಿತು. ನೂರಾರು ಡೊಳ್ಳುಗಳ ಬಡಿತದ ನಿನಾದ ಅಂಬರ ಚುಂಬಿಸಿತ್ತು. ಕರಡಿ ಮಜಲು, ಸಕಲ ವಾದ್ಯ ವೈಭವಗಳು ಮೆರವಣಿಗೆಗೆ ಮೆರುಗು ನೀಡಿದವು. ಜೋಗತಿ ನೃತ್ಯ ಭಕ್ತರ ಗಮನ ಸೆಳೆಯಿತು. ನೂರಾರು ಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.​ಭಕ್ತರ ಹರಕೆ ಮತ್ತು ದೀರ್ಘದಂಡ ನಮಸ್ಕಾರ​ದೇವರಿಗೆ ಹರಕೆ ಹೊತ್ತ ನೂರಾರು ಮಹಿಳೆಯರು,…

Read More

ಸಾರಂಗಮಠದ ಗೋಶಾಲೆಗೆ ಉಚಿತವಾಗಿ ಮೇವು ಒದಗಿಸಿದ ಡಾ.ಶಾಂತವೀರ ಮನಗೂಳಿ & ಡಾ.ವಿಜಯಕುಮಾರ ವಾರದ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದೇಶಿ ಹಸುಗಳನ್ನು ಸಂರಕ್ಷಣೆ ಮಾಡುವುದು ಮುಖ್ಯ ಕಾರ್ಯವಾಗಿದೆ. ಅದಕ್ಕಾಗಿ ದಾನಿಗಳು ಮೇವು ಒದಗಿಸಲು ಮುಂದೆ ಬರಬೇಕೆಂದು ಸಾರಂಗಮಠ-ಗಚ್ಚಿನಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದ್ದರು.ಈ ದಿಸೆಯಲ್ಲಿ ಎರಡು ಟ್ರ್ಯಾಲಿ ತುಂಬಿದ ಜೋಳದ ಮೇವನ್ನು ಪುರಸಭೆ ಮಾಜಿ ಅಧ್ಯಕ್ಷ, ಮನಗೂಳಿ ಆಸ್ಪತ್ರೆ ವೈದ್ಯ ಡಾ.ಶಾಂತವೀರ ಮನಗೂಳಿ, ಒಂದು ಟ್ರ್ಯಾಕ್ಟರ್ ಟ್ರ್ಯಾಲಿ ತುಂಬಿದ ಜೋಳದ ಮೇವನ್ನು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ.ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವೈದ್ಯರಾದ ಡಾ.ವಿಜಯಕುಮಾರ ವಾರದ ಸಾರಂಗಮಠದ ಗೋಶಾಲೆಗೆ ನೀಡಿದ್ದಾರೆ.ದನ ಕರು, ತಳಿ ಆಕಳುಗಳ ಸಂರಕ್ಷಣೆ ಗೋಶಾಲೆಗೆ ಮೇವು ನೀಡಿದ ವೈದ್ಯರಿರ್ವರಿಗೂ ಮತ್ತು ಹಸಿ ಮೆಕ್ಕೆಜೋಳದ ಕಣಕಿಯನ್ನು ನೀಡಿದ ನಗರದ ಮಲಘಾಣ ರಸ್ತೆಯಲ್ಲಿನ ಎಸ್.ಕೆ.ಪೆಟ್ರೋಲಿಯಂ ಮಾಲೀಕ ಕರಣಕುಮಾರ ಹಾಗರಗಿ ಅವರಿಗೆ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವದಿಸಿ ಶುಭ ಹಾರೈಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಕ್ತದಾನ ಶ್ರೇಷ್ಠದಾನ. ಅದ್ದರಿಂದ ಯುವಕರು ರಕ್ತದಾನ ಮಾಡುವ ಮೂಲಕ ಜೀವಗಳನ್ನು ಉಳಿಸಲು ಸಹಕರಿಸಿ ಎಂದು ಚಾಂದಕವಟೆ ಗ್ರಾಮದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಗುರುರಾಜಗೌಡ ಪಾಟೀಲ ಹೇಳಿದರು.ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರಾ ಪ್ರಯುಕ್ತ ಬಸವೇಶ್ವರ ಜಾತ್ರಾ ಕಮೀಟಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಾಂದಕವಟೆ, ತಾಲೂಕಾ ಆರೋಗ್ಯ ಇಲಾಖೆ, ಜಿಲ್ಲಾ ರಕ್ತನಿಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಅಗತ್ಯದ ಮತ್ತು ತುರ್ತುಚಿಕಿತ್ಸೆಯ ಸಮಯದಲ್ಲಿ ರಕ್ತದಾನಿಗಳ ರಕ್ತವನ್ನೇ ರೋಗಿಗಳು ಅವಲಂಬಿಸಿರುತ್ತಾರೆ. ಆದ ಕಾರಣ ಯುವಕರ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದರು.ಈ ವೇಳೆ ಡಾ.ಎ.ಎ.ಮಾಗಿ ಮಾತನಾಡಿ, ಅನಿರೀಕ್ಷಿತ ಅಪಘಾತಗಳು, ತುರ್ತುಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ, ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸಮಯದಲ್ಲಿ ರಕ್ತದ ಆವಶ್ಯಕತೆ ಹೆಚ್ಚಾಗಿ ಇರುತ್ತದೆ. ಇದಲ್ಲದೆ ತಲಸ್ಸೇಮಿಯಾ (ಆನುವಂಶಿಕ ನ್ಯೂನತೆ) ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಕನ್ನಡಿಗರ ಹಬ್ಬ. ಇಲ್ಲಿ ಹಲವಾರು ವಿಚಾರಧಾರೆಗಳು ಅನಾವರಣಗೊಳ್ಳುವುದರಿಂದ ಇದು ಜ್ಞಾನದ ಹಬ್ಬವೂ ಹೌದು. ಇಂತಹ ಕನ್ನಡದ ಅಸ್ಮಿತೆಯ, ಕನ್ನಡಾಂಬೆಯ ನುಡಿ ಜಾತ್ರೆಗೆ ಅಖಂಡ ಸಿಂದಗಿ ತಾಲೂಕಿನ ವೈದ್ಯರೆಲ್ಲರೂ ತನು-ಮನ, ಧನದಿಂದ ಸಂಪೂರ್ಣ ಸಹಾಯ ಸಹಕಾರ ನೀಡುವ ಭರವಸೆಯನ್ನು ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ಸಂದೀಪ್ ಪಾಟೀಲ ವ್ಯಕ್ತಪಡಿಸಿದರು.ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ೨೧ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಹಮ್ಮಿಕೊಂಡ ವೈದ್ಯರುಗಳ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಎರಡು ದಿನಗಳವರೆಗೆ ಜರುಗುವ ಅಕ್ಷರ ಜಾತ್ರೆಯ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವುದಾಗಿ ಹೇಳಿದರು.ಈ ವೇಳೆ ಕಾರ್ಯಕ್ರಮದ ರೂಪರೇಷೆಯ ಕುರಿತು ವಿವರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸಮ್ಮೇಳನದ ಉದ್ಘಾಟನೆಯ ಪ್ರಥಮ ದಿನ ಸಾರೋಟಿನಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ, ಜೊತೆ ಜೊತೆಗೆ ಸಾವಿರಾರು ಮಕ್ಕಳು,…

Read More

ಲೇಖನ- ಶಿಲ್ಪಾ ಮೃತ್ಯುಂಜಯ. ಮಿಣಜಿಗಿಸಹ ಶಿಕ್ಷಕಿಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್ಧಾರವಾಡ ಉದಯರಶ್ಮಿ ದಿನಪತ್ರಿಕೆ ಬಸವಾದಿ ಪ್ರಮಥರ ತಪೋಭೂಮಿ, ಮುದ್ರಣ ಕಾಶಿ ಎಂದೇ ಹೆಸರುವಾಸಿಯಾದಂತಹಗದಗದ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳ ಜಾತ್ರೆಯು ಉತ್ತರ ಕರ್ನಾಟಕದ ಅತ್ಯಂತ ದೊಡ್ಡ ಮತ್ತು ಪ್ರಸಿದ್ಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಎಪ್ರಿಲ್ ೦೨ ರಂದು ಗದಗದಲ್ಲಿ ನಡೆಯಲಿರುವ ಈ ಜಾತ್ರೆಯು ಅತ್ಯಂತ ಸಡಗರ-ಸಂಭ್ರಮದಿಂದ ಜರುಗುತ್ತದೆ.ಈ ಜಾತ್ರೆಯ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ.ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವಈ ಜಾತ್ರೆಯು ೧೫ನೇ ಶತಮಾನದ ಶ್ರೇಷ್ಠ ಶಿವಶರಣರಾದ ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಸ್ಮರಣಾರ್ಥವಾಗಿ ನಡೆಯುತ್ತದೆ.ಗದುಗಿನ ಶ್ರೀ ತೋಂಟದಾರ್ಯ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕೇಂದ್ರವಾಗಿಯೂ ಹೆಸರುವಾಸಿಯಾಗಿದೆ.ಜಾತ್ರೆಯ ಪ್ರಮುಖ ಆಕರ್ಷಣೆಗಳುರಥೋತ್ಸವ: ಜಾತ್ರೆಯ ಮುಖ್ಯ ಆಕರ್ಷಣೆಯೇ ಭವ್ಯವಾದ ರಥೋತ್ಸವ. ಸಾವಿರಾರು ಭಕ್ತರು ಸೇರಿ ಸಿದ್ಧಲಿಂಗೇಶ್ವರನಿಗೆ ಹರ ಹರ ಮಹದೇವ ಎಂಬ ಘೋಷಣೆಗಳೊಂದಿಗೆ ರಥವನ್ನು ಎಳೆಯುತ್ತಾರೆ.ಕೃಷಿ ಮೇಳ ಮತ್ತು ಪ್ರದರ್ಶನಇಲ್ಲಿ ರೈತರಿಗಾಗಿ ವಿಶೇಷ ಕೃಷಿ ಮೇಳಗಳು ಮತ್ತು ಜಾನುವಾರು ಪ್ರದರ್ಶನಗಳು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎರಡು ಬೈಕ್ ಗಳ ಮದ್ಯ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಬಸವನಬಾಗೇವಾಡಿಯ ತಾಲೂಕಿನ ಮಸಬಿನಾಳ ಬಳಿ ಸಂಭವಿಸಿದೆ.ಇಂಗಳೇಶ್ವರ ತಾಂಡಾದ ಸಂತೋಷ ಲಾಲು ಚವಾಣ್ (32) ಮತ್ತುದೇಗಿನಾಳ ಗ್ರಾಮದ ಭೀಮನಗೌಡ ಪಾಟೀಲ (45) ಮೃತ ದುರ್ದೈವಿಗಳು.ಇನ್ನು ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಸವನಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ‌ ಪರಿಶೀಲನೆ ನಡೆಸಿದ್ದಾರೆ.ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Read More

ಸಿಂದಗಿ ಬಳಿಯ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘೋರ ದುರಂತ | ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು | ಮೃತ ಯುವಕನ ಸೆಲ್ಫಿ ವಿಡಿಯೋದಿಂದ ಆ್ಯಕ್ಸಿಡೆಂಟ್ ಕೇಸ್‌ಗೆ ಮೇಜರ್ ಟ್ವಿಸ್ಟ್ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಿಂದಗಿ ಬಳಿ ಮಂಗಳವಾರ ಮಧ್ಯಾಹ್ನ ಮೈ ಜುಂ ಎನ್ನುವಂತಹ ಭೀಕರ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಬೈಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇಡೀ ಬಸ್ ಅಗ್ನಿಗಾಹುತಿಯಾಗಿದೆ.ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಹೇಬಗೌಡ ನಾಗರಾಳ (22)ಎಂಬುವವರೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವದಹನವಾದ ದುರ್ದೈವಿ.ಡಿಕ್ಕಿಯ ರಭಸಕ್ಕೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಬೈಕ್ ಸವಾರನಿಗೆ ಚೇತರಿಸಿಕೊಳ್ಳಲು ಕಾಲಾವಕಾಶವೇ ಸಿಗಲಿಲ್ಲ. ಘಟನೆಯ ತೀವ್ರತೆಗೆ ಇಡೀ ಬಸ್ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ…

Read More

ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಗರ್ಭಿಣಿ ಬಾಣಂತಿಯರೊಂದಿಗೆ ಡಾ.ನಾಗಲಕ್ಷ್ಮಿ ಚೌಧರಿ ಸಂವಾದ ಉದಯ ರಶ್ಮಿ ದಿನಪತ್ರಿಕೆ ಅಥಣಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌಧರಿ ಅವರು ಅಥಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದರು.ಈ ವೇಳೆ ರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರೊಂದಿಗೆ ಸಂವಾದ ನಡೆಸಿ ಆಸ್ಪತ್ರೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಅಥಣಿ ಸರ್ಕಾರಿ ಆಸ್ಪತ್ರೆಯು ಅತ್ಯಂತ ಸ್ವಚ್ಛವಾಗಿದ್ದು, ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಇಲ್ಲಿ ತಿಂಗಳಿಗೆ 300 ರಿಂದ 400 ಹೆರಿಗೆಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ. ರೋಗಿಗಳು ಹಾಗೂ ಸಾರ್ವಜನಿಕರು ಇಲ್ಲಿನ ವೈದ್ಯರ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಕುಡಿಯುವ ನೀರು ಹಾಗೂ ಬಿಸಿನೀರಿನ ವ್ಯವಸ್ಥೆ ಸಮರ್ಪಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅಲ್ಲದೆ, ನೂತನವಾಗಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿಯನ್ನು ಶ್ಲಾಘಿಸಿದರು.ಶೌಚಾಲಯ ದುರಸ್ತಿ: ಆಸ್ಪತ್ರೆಯ ಶೌಚಾಲಯಗಳಲ್ಲಿನ ಸಿಂಕ್‌ಗಳು ಬಂದ್ ಆಗಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದರು.ಔಷಧಿಗಳಲಭ್ಯತೆ: ಕೆಲವರು ಹೊರಗಿನ ಔಷಧಿ ಬರೆಯುತ್ತಿದ್ದಾರೆ ಎಂದು…

Read More