Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯಾದ್ಯಂತ ಸಮಾಜಸೇವೆ ಮಾಡುವ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ

ವಚನಕಾರ ಶಿವಶರಣ ವೀರ ಗೊಲ್ಲಾಳೇಶ್ವರ

​ಭಗವಾನ್ ಮಹಾವೀರ ಜನ್ಮಕಲ್ಯಾಣೋತ್ಸವ ಆಚರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಾಲೇಶ್ವರ ಜಾತ್ರೆ: ಭಕ್ತಸಾಗರದಲ್ಲಿ ತೇಲಿದ ಭವ್ಯ ಪಲ್ಲಕ್ಕಿ ಉತ್ಸವ!
(ರಾಜ್ಯ ) ಜಿಲ್ಲೆ

ಬಾಲೇಶ್ವರ ಜಾತ್ರೆ: ಭಕ್ತಸಾಗರದಲ್ಲಿ ತೇಲಿದ ಭವ್ಯ ಪಲ್ಲಕ್ಕಿ ಉತ್ಸವ!

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

​ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಆರಾಧ್ಯ ದೈವ ಶ್ರೀ ಬಾಲೇಶ್ವರ ದೇವರ ಜಾತ್ರಾ ಮಹೋತ್ಸವವು ರವಿವಾರ ಶ್ರದ್ಧಾ ಭಕ್ತಿಯೊಂದಿಗೆ ಅದ್ದೂರಿಯಾಗಿ ನೆರವೇರಿತು.
ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸಾವಿರಾರು ಭಕ್ತಾದಿಗಳು ದೈವದರ್ಶನ ಪಡೆದು ಪುನೀತರಾದರು.
​ ಜಾತ್ರೆಯ ಅಂಗವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಬಾಲೇಶ್ವರ ದೇವರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ, ನೈವೇದ್ಯ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಯಿತು. ನಂತರ ಗ್ರಾಮದ ಪುಣ್ಯ ಗಂಗಸ್ಥಳದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
​ವೈವಿಧ್ಯಮಯ ಕಲಾತಂಡಗಳ ಮೆರವಣಿಗೆ
​ಗಂಗಸ್ಥಳದಿಂದ ದೇವಸ್ಥಾನದವರೆಗೆ ನಡೆದ ಪಲ್ಲಕ್ಕಿ ಮೆರವಣಿಗೆಯು ನೋಡುಗರ ಕಣ್ಣು ಸೆಳೆಯಿತು. ನೂರಾರು ಡೊಳ್ಳುಗಳ ಬಡಿತದ ನಿನಾದ ಅಂಬರ ಚುಂಬಿಸಿತ್ತು. ಕರಡಿ ಮಜಲು, ಸಕಲ ವಾದ್ಯ ವೈಭವಗಳು ಮೆರವಣಿಗೆಗೆ ಮೆರುಗು ನೀಡಿದವು. ಜೋಗತಿ ನೃತ್ಯ ಭಕ್ತರ ಗಮನ ಸೆಳೆಯಿತು. ನೂರಾರು ಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
​ಭಕ್ತರ ಹರಕೆ ಮತ್ತು ದೀರ್ಘದಂಡ ನಮಸ್ಕಾರ
​ದೇವರಿಗೆ ಹರಕೆ ಹೊತ್ತ ನೂರಾರು ಮಹಿಳೆಯರು, ಪುರುಷರು ಮತ್ತು ಮಕ್ಕಳು ಗಂಗಸ್ಥಳದಿಂದ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ತಮ್ಮ ಶ್ರದ್ಧಾಭಕ್ತಿಯನ್ನು ಮೆರೆದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.
​ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಪ್ರಮುಖರಾದ ಪರಶು ನಾಗರಬೆಟ್ಟ, ಲಕ್ಷಣ ಒಳಕಲದಿನ್ನಿ, ಯಮನಪ್ಪ ಬಿರಾದಾರ, ನಾಗೇಶ ಬಿರಾದಾರ, ಯಲ್ಲಪ್ಪ ಚಲವಾದಿ, ರಮೇಶ ಬಿರಾದಾರ, ಹಣಮಗೌಡ ಪಾಟೀಲ, ಭೈಲಪ್ಪ ನಾಗರಬೆಟ್ಟ, ಬಸಪ್ಪ ತುರಡಗಿ, ಬಸನಗೌಡ ಪಾಟೀಲ, ಶಿವಪ್ಪ ನಾಗರಬೆಟ್ಟ, ಹಣಮಂತ ಬಿರಾದಾರ, ಶರಣಗೌಡ ಪಾಟೀಲ, ಸಂತೋಷ ಬಿರಾದಾರ, ಬಸನಗೌಡ ಪಾಟೀಲ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಸರ್ವ ಸದ್ಭಕ್ತರು ಪಾಲ್ಗೊಂಡು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

​ಸಮೃದ್ಧಿಯ ದೈವ ನುಡಿ

​ಗ್ರಾಮದ ಭವಿಷ್ಯದ ಬಗ್ಗೆ ನುಡಿದ ಪೂಜಾರಿಗಳು, “ಬರುವ ವರ್ಷದಲ್ಲಿ ಉತ್ತಮ ಮಳೆ-ಬೆಳೆಯಾಗಿ ಗ್ರಾಮವು ಸಕಲ ಸಂಪತ್ತು ಮತ್ತು ಸಮೃದ್ಧಿಯಿಂದ ಬೆಳೆಯಲಿದೆ” ಎಂದು ದೈವವಾಣಿಯನ್ನು ನುಡಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯಾದ್ಯಂತ ಸಮಾಜಸೇವೆ ಮಾಡುವ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ

ವಚನಕಾರ ಶಿವಶರಣ ವೀರ ಗೊಲ್ಲಾಳೇಶ್ವರ

​ಭಗವಾನ್ ಮಹಾವೀರ ಜನ್ಮಕಲ್ಯಾಣೋತ್ಸವ ಆಚರಣೆ

ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರರಾಗಿ ಶಾರದಳ್ಳಿ ಆಯ್ಕೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯಾದ್ಯಂತ ಸಮಾಜಸೇವೆ ಮಾಡುವ ಕಾರ್ಯಕರ್ತರನ್ನು ಹೊಂದಿರುವ ಬಿಜೆಪಿ
    In (ರಾಜ್ಯ ) ಜಿಲ್ಲೆ
  • ವಚನಕಾರ ಶಿವಶರಣ ವೀರ ಗೊಲ್ಲಾಳೇಶ್ವರ
    In ವಿಶೇಷ ಲೇಖನ
  • ​ಭಗವಾನ್ ಮಹಾವೀರ ಜನ್ಮಕಲ್ಯಾಣೋತ್ಸವ ಆಚರಣೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರರಾಗಿ ಶಾರದಳ್ಳಿ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಬಾಲೇಶ್ವರ ಜಾತ್ರೆ: ಭಕ್ತಸಾಗರದಲ್ಲಿ ತೇಲಿದ ಭವ್ಯ ಪಲ್ಲಕ್ಕಿ ಉತ್ಸವ!
    In (ರಾಜ್ಯ ) ಜಿಲ್ಲೆ
  • ದೇಶಿ ಹಸುಗಳ ಸಂರಕ್ಷಣೆ ಮುಖ್ಯ :ಡಾ.ಪ್ರಭುಸಾರಂಗದೇವ ಶ್ರೀ
    In (ರಾಜ್ಯ ) ಜಿಲ್ಲೆ
  • ರಕ್ತದಾನ ಮೂಲಕ ಜೀವಗಳನ್ನು ಉಳಿಸಲು ನೆರವಾಗಿ :ಗುರುರಾಜಗೌಡ
    In (ರಾಜ್ಯ ) ಜಿಲ್ಲೆ
  • ಕನ್ನಡ ಸಾಹಿತ್ಯ ಸಮ್ಮೇಳನ ಜ್ಞಾನದ ಹಬ್ಬ :ಡಾ.ಸಂದೀಪ
    In (ರಾಜ್ಯ ) ಜಿಲ್ಲೆ
  • ತ್ರಿವಿಧ ದಾಸೋಹಿ ತೋ0ಟದಾರ್ಯ ಸಿದ್ದಲಿಂಗೇಶ್ವರ ಜಾತ್ರೆ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 01, 2026
    In ದಿನಪತ್ರಿಕೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.