ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಹಾಗೂ ಖಜಾಂಚಿಯಾಗಿ ತಾಲೂಕಿನ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸರ್ಕಾರಗಳ ಗಮನ ಸೇಳೆಯುವ ಮೂಲಕ ರಾಜ್ಯದಲ್ಲಿ ಕರಾಟೆ ಕ್ರೀಡೆಯನ್ನು, ರಾಜ್ಯ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಮತ್ತು ವಸತಿ ಶಾಲೆಗಳಿಗೂ ಕರಾಟೆ ತರಬೇತಿಯನ್ನು ಕೊಡೆಸುವಲ್ಲಿ ಪ್ರಮುಖರಾಗಿ ಹೋರಾಟವನ್ನು ಹಮ್ಮಿಕೊಂಡು ಯಶಸ್ವಿಯಾಗಿದ್ದ ಹಿನ್ನೆಲೆ ಇವರನ್ನು ಸತತವಾಗಿ ನಾಲ್ಕನೇ ಬಾರಿಗೆ ಸಂಘದ ಸರ್ವ ಸದಸ್ಯರು ಈ ಜವಾಬ್ದಾರಿಯನ್ನು ನೀಡಿದ್ದಾರೆ.
ಕ್ರೀಡೆಗಳಲ್ಲಿ ಮಹತ್ತರ ಜ್ಞಾನ ಮತ್ತು ಅನುಭವನ್ನು ಹೊಂದಿದ್ದ ಶಾರದಳ್ಳಿಯವರು ಕರಾಟೆ ಕ್ರೀಡೆ ಮಾತ್ರವಲ್ಲದೇ ತಾಲೂಕಿನಲ್ಲಿ ಸ್ಕೇಟಿಂಗ್ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಯಶಸ್ವಿಯಾಗಿ ತಾಲೂಕಿನ ಹೆಸರು ರಾಜ್ಯದಲ್ಲೆಡೆ ಪಸರಿಸಿ ಕೀರ್ತಿ ತಂದ ಇವರಿಗೆ ರಾಜ್ಯ ಕರಾಟೆ ಶಿಕ್ಷಕರ ಸಂಘ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು ಹೆಮ್ಮೆಯ ವಿಷಯ ಎಂದು ತಾಲೂಕಿನ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಮಹಾಂತಗೌಡ ಬಿರಾದಾರ ಹಾಗೂ ಶಾಲಾ ಆಡಳಿತ ಮಂಡಳಿಯವರು ಶಾರದಳ್ಳಿಯವರಿಗೆ ಅಭಿನಂದಿಸಿದ್ದಾರೆ.

