Author: editor.udayarashmi@gmail.com

ಕೆರೆಗೆ ಹೊಂದಿ ಕೊಳವೆಬಾವಿ ಕೊರೆಯಿಸಿ ಕಾನೂನು ಬಾಹಿರ ನೀರು ಮಾರಾಟ | ನೀರು ಮಾರಾಟ ಸ್ಥಳಕ್ಕೆ ಅಧಿಕಾರಿಗಳ ತಂಡ ದಾಳಿ | ನೀರು ಮಾರಾಟ ಮಾಡದಂತೆ ಮಾರಾಟಗಾರರಿಗೆ ತಹಸೀಲ್ದಾರ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ೨೩ ವಾರ್ಡಗಳಿಗೆ ನೀರು ಸರಬರಾಜು ಮಾಡುಲು ನಗರದಲ್ಲಿನ ಕೆರೆಗೆ ಕಾಲುವೆ ಮೂಲಕ ನೀರು ಸಂಗ್ರಹಿಸಲಾಗುತ್ತಿದೆ. ಆದರೆ ಕೆರೆಯ ಪಕ್ಕದಲ್ಲಿ ಕಾನೂನು ಬಾಹಿರವಾಗಿ ಬಾವಿ ಮತ್ತು ಕೊಳವೆ ಬಾವಿ ಕೊರೆದು ಅಕ್ರಮವಾಗಿ ನೀರು ಮಾರಾಟ ಮಾಡುತ್ತಿರುವ ಸ್ಥಳಕ್ಕೆ ಬುಧವಾರ ತಹಶೀಲ್ದಾರ ಕರೆಪ್ಪ ಬೆಳ್ಳಿ ಮತ್ತು ಪುರಸಭೆ ಅಭಿಯಂತರ ಅಜರ ನಾಟಿಕಾರಿ ಜಂಟಿಯಾಗಿ ದಾಳಿ ನಡೆಸಿ ನೀರು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದ ಪಕ್ಷದಲ್ಲಿ ಟ್ಯಾಂಕರ್‌ಗಳನ್ನು ಸೀಜ್ ಮಾಡಲಾಗುತ್ತದೆ ಎಂದು ನೀರು ಮಾರಾಟಗಾರರಿಗೆ ಎಚ್ಚರಿಕೆ ನಿಡಿದ ಘಟನೆ ನಡೆದಿದೆ.೨೦೧೧ ಅಡಿಯಲ್ಲಿ ವಾಣಿಜ್ಯ ಅಥವಾ ಟ್ಯಾಂಕರ್ ಮೂಲಕ ಅಂತರ್ಜಲ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ ಕಡ್ಡಾಯ. ಆದರೆ ಸಿಂದಗಿ ನಗರದ ಕೆರೆಯ ಹತ್ತಿರ ಯಾವುದೇ ಅನುಮತಿ ಪಡೆಯದೇ ಟ್ಯಾಂಕರ್ ಮೂಲಕ…

Read More

ವಿರೋಧ ಪಕ್ಷಗಳನ್ನು ಗುರಿಯಾಗಿಸಿ ಕೇಂದ್ರದಿಂದ ತನಿಖಾ ಸಂಸ್ಥೆಗಳ ಬಳಕೆ | ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮೈಸೂರು: ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ (ಇಡಿ) ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಗುಂಡ್ಲುಪೇಟೆ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಅವರ ಪುತ್ರರು ಮತ್ತು ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ಅವರ ಮೊಮ್ಮಗನ ಮನೆಗಳ ಮೇಲೆ ನಡೆದ ಇಡಿ ದಾಳಿಗಳನ್ನು ಉಲ್ಲೇಖಿಸಿ, “ಇವು ಆಯ್ಕೆಮಾಡಿದ ಕ್ರಮಗಳಂತೆ ಕಾಣುತ್ತಿವೆ” ಎಂದು ಹೇಳಿದರು.“ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರ ಇಂತಹ ದಾಳಿಗಳು ನಡೆಯುತ್ತಿವೆ. ಬಿಜೆಪಿ ನಾಯಕರ ವಿರುದ್ಧ ಇದೇ ರೀತಿಯ ಕ್ರಮಗಳು ಕಾಣುತ್ತಿಲ್ಲ. ಇದರಿಂದ ತನಿಖಾ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುತ್ತದೆ,” ಎಂದು ಸಿಎಂ ಟೀಕಿಸಿದರು.ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಪರೋಕ್ಷವಾಗಿ ಸೂಚಿಸಿದ ಅವರು, ಕೇಂದ್ರ ಸರ್ಕಾರ ತನ್ನ ವಿರೋಧ ಪಕ್ಷಗಳನ್ನು…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಸತ್ಯ ಶರಣರು, ಸಂತರು, ಪವಾಡ ಪುರುಷರು ನಡೆದಾಡಿದ ದೇಶ ನಮ್ಮದು ಯುವ ಪೀಳಿಗೆ ಸತ್ಪುರುಷರ, ಶರಣರ, ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಗ್ರಾಮದಲ್ಲಿ ಸಮಗಾರ ಸಮುದಾಯದ ಬಾಂದವರು ಹಮ್ಮಿಕೊಂಡ ಶರಣ ಹರಳಯ್ಯನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಶರಣ ಹರಳಯ್ಯ ದಂಪತಿಗಳು ಬಸವಣ್ಣನವರಿಗಾಗಿ ತಮ್ಮ ತೊಡೆಯ ಚರ್ಮ ಕೊಟ್ಟು ಪಾದುಕೆಗಳನ್ನು ತಯಾರಿಸಿ ಪಾವನರಾದರು. ಅವರ ಈ ತ್ಯಾಗವು ಕೇವಲ ಭಕ್ತಿ ಕಥೆಯಲ್ಲ, ಅದು ಸಮಾನತೆ ಮತ್ತು ಶರಣತತ್ತ್ವದ ಶಾಶ್ವತ ಸಂದೇಶ. ಬಸವಣ್ಣನವರು ಈ ಪಾದುಕೆಯನ್ನು ಸ್ವೀಕರಿಸಿ, ಅದನ್ನು ಕೂಡಲಸಂಗಮದೇವರಿಗೇ ಅರ್ಪಿಸಿದ ಘಟನೆ ಇಂದಿಗೂ ಇತಿಹಾಸವಾಗಿ ಉಳಿದಿದೆ. ಇಂತಹ ಮಹಾ ಶರಣರ ಜಯಂತೋತ್ಸವಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಅವರ ಆಚಾರ ವಿಚಾರಗಳು ಪ್ರತಿ ನಿತ್ಯವೂ ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು. ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು. ನಿಮ್ಮೊಂದಿಗೆ ನಾವಿದ್ದೇವೆ. ಸರಕಾರದ ಸವಳತ್ತಗಳನ್ನು ತಮ್ಮ ಸಮಾಜಕ್ಕೆ ಕೊಡಿಸುವ…

Read More

ಬೈಲಹೊಂಗಲ ತಾಲೂಕಿನ ಸರಕಾರಿ ಎಸ್.ಪಿ.ಎಂ ಪದವಿ ಪೂರ್ವ ಕಾಲೇಜ್ ಸಾಧನೆ ಉದಯರಶ್ಮಿ ದಿನಪತ್ರಿಕೆ ಬೈಲಹೊಂಗಲ: ತಾಲೂಕಿನ ಸರಕಾರಿ ಎಸ್.ಪಿ.ಎಂ ಪದವಿ ಪೂರ್ವ ಕಾಲೇಜಿನ ಫಲಿತಾಂಶ 100 ಕ್ಕೆ 100 ರಷ್ಟು ಸಾಧನೆ ಮಾಡಿದೆ.ಪರೀಕ್ಷೆಗೆ ಕುಳಿತ ಒಟ್ಟು 46 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ವ್ಯವಹಾರ ಅಧ್ಯಯನ ವಿಷಯದಲ್ಲಿ-5, ಇತಿಹಾಸ-2, ಅರ್ಥಶಾಸ್ತ್ರ, ಕನ್ನಡ, ಸಮಾಜಶಾಸ್ತ್ರ ವಿಷಯಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿ 100 ಅಂಕಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಿತ್ತೂರಿನ ಶಾಸಕ ಬಾಬಾಸಾಹೇಬ ದೇ ಪಾಟೀಲ ಇವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಜಿ.ಕೆ.ಸಂಬಣ್ಣವರ ಹಾಗೂ ಉಪನ್ಯಾಸಕರು ಮತ್ತು ಕಾ.ಆ.ಸಮೀತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಪ್ರಶಸ್ತಿ | ಏ.೨೫ ರಂದು ವಿಜಯಪುರದಲ್ಲಿ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಹಿರುಯ ಪತ್ರಕರ್ತ ಹಾಗೂ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಅವರು ’ಬಸವ ಸೇವಾ ಪ್ರಶಸ್ತಿ’ ಗೌರವಕ್ಕೆ ಭಾಜನರಾಗಿದ್ದಾರೆ.ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಈ ’ಬಸವ ಸೇವಾ ಪ್ರಶಸ್ತಿ’ ಯನ್ನು ಕೊಡಮಾಡುತ್ತಿದೆ.”ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ನಿಮ್ಮ ಶ್ರಮ ಮತ್ತು ಬದ್ಧತೆಯನ್ನು ಗೌರವಿಸಲು ಮಾನವೀಯತೆ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ವಿಶ್ವಗುರು ಬಸವಣ್ಣನವರ ಹೆಸರಿನ ಪ್ರಶಸ್ತಿ ತಮಗೆ ಸಂದಿರುವುದು ನಿಮ್ಮ ಸೇವೆಗೆ ಸಂದ ಗೌರವ” ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ತಿಳಿಸಿದ್ದಾರೆ.ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಜಿಲ್ಲಾ ಘಟಕದ ವತಿಯಿಂದ, ಏಪ್ರಿಲ್ 25 ರಂದು ವಿಜಯಪುರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಏರ್ಪಡಿಸಿದ ಬಸವ ಜಯಂತಿ ಹಾಗೂ…

Read More

ವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಉತ್ಸವ | ಪ. ಪೂ.1008 ಆಚಾರ್ಯ ಗುಣದರನಂದಿ ಮುನಿ ಮಹಾರಾಜರಿಂದ ವಿವರಣೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಒಂಬತ್ತು ದಿನಗಳ ಕಾಲ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ ಹಾಗೂ 1008 ಭಗವಾನ ಪಾರ್ಶ್ವನಾಥ ತೀರ್ಥಂಕರ ಮಹಾ ಮಸ್ತಾಭಿಷೇಕ ಮತ್ತು ಪುರಾತನ 1008 ಭಗವಾನ ಆದಿನಾಥ ತೀರ್ಥಂಕರ ಜಿನ ಮಂದಿರ ಜೀರ್ಣೋದ್ಧಾರಗೊಂಡಿರುವ ನಿಮಿತ್ತ ವಜ್ರ ಮಹೋತ್ಸವ ಕಾರ್ಯಕ್ರಮ ಜರುಗುತ್ತದೆ ಎಂದು ಪ. ಪೂ.1008 ಆಚಾರ್ಯ ಗುಣದರನಂದಿ ಮುನಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಹೇಳಿದರು.ತಾಲೂಕಿನ ಆಲಗೂರ ಗ್ರಾಮದ ಜೈನ ಮಂದಿರದಲ್ಲಿ ಮಾತನಾಡಿದ ಅವರು, ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ 9 ದಿನಗಳ ಕಾರ್ಯಕ್ರಮ ಜರುಗುವುದು, ಇದೇ ದಿನಾಂಕ 23 ರಂದು ಧ್ವಜಾರೋಹಣ ಇಂದ್ರ ಸಭೆ, 24 ರಂದು ಗರ್ಭ ಕಲ್ಯಾಣ, 25 ರಂದು ಭಗವದ್ ಜನ್ಮ ಕಲ್ಯಾಣ, 26 ರಂದು ರಾಜ್ಯಾಭೀಷೇಕ,27 ರಂದು ದೀಕ್ಷಾ ಕಲ್ಯಾಣ, 28 ರಂದು ಕೇವಲಜ್ಞಾನ ಕಲ್ಯಾಣ,29 ರಂದು ನಿರ್ವಾಣ…

Read More

ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ೧೭ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಕ್ಕಮಹಾದೇವಿಯವರ ಹೆಸರಿನ ವಿಶ್ವವಿದ್ಯಾಲಯವು ಮಹಿಳಾ ಶಿಕ್ಷಣ, ಸಬಲೀಕರಣ, ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಉಜ್ವಲ ಕೇಂದ್ರವಾಗಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.ಮಂಗಳವಾರ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ೧೭ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾದ ಜ್ಞಾನವು ವ್ಯಕ್ತಿಯನ್ನು ಸ್ವತಂತ್ರ, ನಿರ್ಭೀತ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂಬ ಸಂದೇಶವನ್ನು ಅಕ್ಕಮಹಾದೇವಿ ಅವರು ತಮ್ಮ ಜೀವನದ ಮೂಲಕ ನೀಡಿದರು. ಶಿಕ್ಷಣವು ಜ್ಞಾನ ಸಂಪಾದನೆಯ ಮಾರ್ಗ ಮಾತ್ರವಲ್ಲದೆ, ಆತ್ಮ ವಿಶ್ವಾಸ ಮತ್ತು ಸಾಮಾಜಿಕ ಸೇವೆಯ ಮಾರ್ಗವಾಗಿದೆ ಎಂದು ಅವರ ಆದರ್ಶಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದರು.ಶಿಕ್ಷಣದಲ್ಲಿ ಪಡೆದ ಪದವಿ ಜ್ಞಾನಕ್ಕೆ ಸಾಕ್ಷಿಯಾಗಿರುವುದರ ಜೊತೆಗೆ ಶಿಸ್ತು, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ. ಈ ಯುಗವು ಅವಕಾಶಗಳು ಮತ್ತು ಸವಾಲುಗಳಿಂದ…

Read More

ವಿಜಯಪುರದಲ್ಲಿ ನಡೆದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಆಚರಣೆಯಲ್ಲಿ ಆದಿತ್ಯಾ ವೈದ್ಯ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರು ಜಯಂತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಹಾಗೂ ಶ್ರೀ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಆದಿತ್ಯಾ ವೈದ್ಯ ಅವರು, ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಹೊಂದಿರುವ ಶ್ರೀ ಆದಿ ಶಂಕರಾಚಾರ್ಯರು ವೇದಗಳಿಗೆ ಭಾಷ್ಯ ಬರೆದು ಜಗತ್ತಿಗೆ ಅದ್ವೈತ ತತ್ವವನ್ನು ಪರಿಚಯಿಸಿದ ಮಹಾನ್ ತತ್ವಜ್ಞರು ಹಾಗೂ ಇಡೀ ದೇಶ ಸಂಚರಿಸಿ ಅದೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶ್ರೀ ಆದಿ ಶಂಕರಚಾರ್ಯರ ಜೀವನ ಇಂದಿನವರಿಗೆ ಆದರ್ಶಪ್ರಾಯವಾಗಿದೆ ಶಂಕರಾಚಾರ್ಯಾರು ಮಾಹಾ ವಿದ್ವಾಂಸ, ಕವಿ ಯಾಗಿದ್ದರು ಅವರ ಜೀವನದ ಮೌಲ್ಯಗಳು ಪ್ರಸ್ತುತವಾಗಿವೆ ಎಂದು ಅವರು ಹೇಳಿದರು.ವಿವಿದ ಸಿದ್ದಾಂತಗಳ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ನಡೆಸಲಿರುವ ಮಟ್ಟದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆ-ಸೆಟ್) ಮತ್ತು ನವದೆಹ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ರಾಷ್ಟ್ರಮಟ್ಟದ ಕಾಲೇಜು ಸಹ ಪ್ರಾಧ್ಯಾಪಕರ (ಯುಜಿಸಿ-ನೆಟ್) ಮತ್ತು ಕಿರಿಯ ಶಿಷ್ಯ ವೇತನ ಸಂಶೋಧನೆ ಸಹಾಯಕರ ಅರ್ಹತಾ ಪರೀಕ್ಷೆಗಳಿಗೆ ೪೫ ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ನಿರ್ಧರಿಸಲಾಗಿದೆ.ಆಸಕ್ತರು ಇದೇ ಏಪ್ರಿಲ್.೨೪ರ ರೊಳಗಾಗಿ ಬೆಳಿಗ್ಗೆ ೧೦.೦೦ ಗಂಟೆಯಿಂದ ಸಂಜೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ: ೦೮೨೧-೨೫೧೫೯೪೪ ಸಂಪರ್ಕಿಸಬಹುದೆಂದು ಕರಾಮುವಿ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More