ಸಂಗನಬಸವ ಶ್ರೀಗಳನ್ನು ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್‌ಗೆ ಕರೆ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರ ಹಿಂದೂ ಸ್ವಾಮೀಜಿಗಳ ಮೇಲೆ ದೊಡ್ಡ ಷಡ್ಯಂತ್ರ ಮಾಡುತ್ತಿದೆ, ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಈ ರೀತಿ ಹಿಂಸೆ ನೀಡುವ ಕೆಲಸ ಮಾಡುತ್ತಿದೆ, ಸರ್ಕಾರಿ ವೈದ್ಯಕೀಯ ಕಾಲೇಜಿನ ನ್ಯಾಯಯುತ ಹೋರಾಟದಲ್ಲಿ ತೊಡಗಿದ್ದ ಶ್ರೀ ಸಂಗನಬಸೇಶ್ವರ ಸ್ವಾಮೀಜಿಯವರನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲವಾದರೆ ವಿಜಯಪುರ ಬಂದ್ ಸೇರಿದಂತೆ ವಿವಿಧ ಹಂತದ ಹೋರಾಟ ಕೈಗೊಳ್ಳಲು ನಾವು ಸಿದ್ಧ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ಮುಖ್ಯಮಂತ್ರಿಗಳು ವಿಜಯಪುರಕ್ಕೆ ಬರುವ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ, ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಸಿ.ಎಂ. ಸಿದ್ಧರಾಮಯ್ಯ ಅವರು ಉದ್ಘಾಟಿಸುವುದು ಬೇಡ ಎಂದು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದಾರೆ, ಈಗ ಪಿಪಿಪಿ ಹೋರಾಟಗಾರರಿಂದ ಮುಖ್ಯಮಂತ್ರಿಗಳಿಗೆ ವಿರೋಧ ವ್ಯಕ್ತವಾಗುವ ದೃಷ್ಟಿಯಿಂದ ಹೋರಾಟವನ್ನು ಹತ್ತಿಕ್ಕುವ ಕೆಲಸ ನಡೆದಿದೆ ಎಂದರು.
ಬAದಾಗ ಯಾವ ವಿರೋಧವೂ ವ್ಯಕ್ತವಾಗಬಾರದು ಎಂದು ಉದ್ದೇಶಪೂರ್ವಕವಾಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟಗಾರರನ್ನು ರೊಚ್ಚಿಗೆಬ್ಬಿಸುವ ಕೆಲಸ ನಡೆದಿದೆ,
ಹೋರಾಟಗಾರರು ಗೂಂಡಾಗಳಲ್ಲ, ಆದರೂ ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು
ಸರಿಯಲ್ಲ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಆಗ್ರಹಿಸಿ ೧೦೯ ದಿನ ಸತತ ಹೋರಾಟ ನಡೆಯುತ್ತಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೋರಾಟಗಾರರಿಗೆ ನ್ಯಾಯ ಒದಗಿಸಿಲ್ಲ, ಶಾಂತಿಯುತವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಹೋರಾಟಕ್ಕೆ ಅಣಿಯಾಗುತ್ತಿದ್ದರು, ಆ ವೇಳೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಖಾಕಿ ಸಮವಸ್ತçದಲ್ಲಿ ಬರದೇ ಹೋರಾಟಗಾರರನ್ನು ತಳ್ಳುವ ಕೆಲಸ ಮಾಡಿದರು ಎಂದರು.
ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ ಪ್ರಶ್ನೆ ಮಾಡಿದ ವೇಳೆಯಲ್ಲಿ ಸಚಿವ ಡಾ.ಎಂ.ಬಿ. ಪಾಟೀಲರು, ನಿಮ್ಮ ಪಕ್ಷದ ಜಿಲ್ಲಾಧ್ಯಕ್ಷರು ರಾಜಕೀಯ ಮಾಡುತ್ತಾರೆ ಎಂದು ಹೇಳಿದ ಒಂದು ಉದ್ದೇಶಕ್ಕೆ ಆ ಮುತ್ತಿಗೆ ಹಾಕುವ ಹೋರಾಟ ರಾಜಕೀಯ ಆಗಬಾರದು ಎನ್ನುವ ಕಾರಣಕ್ಕೆ ಹೋರಾಟದಲ್ಲಿ ಭಾಗವಹಿಸಲಿಲ್ಲ ಅಷ್ಟೇ, ಇಲ್ಲವಾದರೆ ನನಗೂ ಆಹ್ವಾನವಿತ್ತು ಎಂದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾತ್ರೋರಾತ್ರಿ ಟೆಂಟ್ ತೆಗೆದಿರುವುದು ಎಷ್ಟು ಸರಿ?
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ರಾತ್ರೋರಾತ್ರಿ ಟೆಂಟ್ ತೆಗೆದಿರುವುದು ಎಷ್ಟು ಸರಿ? ಬಂಧಿತ ಹೋರಾಟಗಾರರ ಮೇಲೆ ಕೊಲೆ ಪ್ರಯತ್ನ, ಅಪರಾಧಿಕ ಒಳಸಂಚು ಮೊದಲಾದ ಸುಳ್ಳು ಕೇಸು ದಾಖಲಿಸಲಾಗಿದೆ, ಹೀಗಾಗಿ ಎಫ್‌ಐಆರ್ ಕೂಡಲೇ ರದ್ದುಗೊಳಿಸಬೇಕು, ಕೂಡಲೇ ಸ್ವಾಮೀಜಿಗಳ ಕ್ಷಮೆ ಕೋರಿ ಹೋರಾಟಗಾರರ ಮೇಲೆ ಪ್ರಕರಣ ಹಿಂದಕ್ಕೆ ಪಡೆಯಬೇಕು, ವಿನಾಕಾರಣ ಸ್ವಾಮೀಜಿಗಳ ಮೊಬೈಲ್ ಕಸಿಯುವುದು ಮೊದಲಾದ ರೀತಿಯಲ್ಲಿ ಅವರ ಆಕ್ರೋಶ ಹೊರಬರುವಂತೆ ಮಾಡುವ ವ್ಯವಸ್ಥಿತ ಪ್ರಯತ್ನ ಅಲ್ಲಿ ನಡೆದಿತ್ತು, ಪೊಲೀಸ್ ಅಧಿಕಾರಿಗಳು ಪಬ್ಲಿಕ್ ಸರ್ವಂಟ್‌ಗಳು,
ಯಾರದ್ದೋ ಸರ್ವಂಟ್ ಆಗಬಾರದು ಎಂದರು.

