Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಡಚಣ: ಸುಕ್ಷೇತ್ರ ಹೊರ್ತಿ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರು ಸೋಮವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಅವರು, ರಾಜ್ಯದ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ಅಣ್ಣಪ್ಪ ಸಾವಕಾರ ಖೈನೂರ ಹಾಗೂ ಇಂಡಿ ಡಿವೈಎಸ್ಪಿ ಸದಾಶಿವ ಕಟ್ಟಿಮನಿ ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ಚಡಚಣ: ಬಳ್ಳೊಳ್ಳಿ ಗ್ರಾಮದ ನಾಡ ಕಚೇರಿಯಲ್ಲಿ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ನಾಡ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಸಾಕ್ಷಿಯಾದರು.ಕಾರ್ಯಕ್ರಮದ ಅಂಗವಾಗಿ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಉಪದೇಶಗಳು ಮತ್ತು ತತ್ವಗಳ ಮಹತ್ವವನ್ನು ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಳ್ಳೊಳ್ಳಿ ನಾಡ ಕಚೇರಿ ಉಪ ತಹಸೀಲ್ದಾರ್ ಆನಂದ ಪಮ್ಮಾರ, ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಆದಿ ಶಂಕರಾಚಾರ್ಯರ ಜಯಂತಿ ಅತ್ಯಂತ ಪವಿತ್ರ ದಿನವಾಗಿದ್ದು, ಅದ್ವೈತ ವೇದಾಂತದ ಮಹಾನ್ ಗುರುಗಳ ಜನ್ಮದಿನವಾಗಿದೆ ಎಂದು ಹೇಳಿದರು.ಸಮಾಜದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಬಲಪಡಿಸಲು ಇಂತಹ ಆಚರಣೆಗಳು ಅಗತ್ಯವೆಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಎಸ್‌ಡಿಎ ಎಂ.ಪಿ. ಕೊಡತೆ, ಗ್ರಾಮ ಆಡಳಿತಾಧಿಕಾರಿ ಶಂಕರ ಕಲಕೇರಿ, ಆಪರೇಟರ್ ಮಂಜುನಾಥ ಬನಸೋಡೆ, ಮಲ್ಲಿಕಾರ್ಜುನ ಭೋಸಗಿ ಸೇರಿದಂತೆ ಇತರ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರೂ ಆದಿ ಶಂಕರಾಚಾರ್ಯರ ಆದರ್ಶಗಳನ್ನು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಸದಸ್ಯರಾದ ಎಂ.ಹುAಬಯ್ಯ, ಸುನೀಲ್ ಎಂ ಉಕ್ಕಲಿ, ಎನ್.ದಿವಾಕರ್ ಮತ್ತು ಗೀತಾ ಥಾಂವಶಿ ಹಾಗೂ ಕಾರ್ಯದರ್ಶಿ ಡಾ. ಎಚ್.ಎಸ್. ಶಿವರಾಮು ಏ. ೨೮ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಏ. ೨೭ ರಂದು ಸಂಜೆ ಬೆಳಗಾವಿಯಿಂದ ವಿಜಯಪುರಕ್ಕೆ ಆಗಮಿಸುವರು. ಏ. ೨೮ ರಂದು ಬೆಳಗ್ಗೆ ೧೦.೨೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗುವ ಸಭೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳಿಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಾಂಗಕ್ಕೆ ಅನುದಾನ ವಿತರಣೆಯಾಗಿರುವ ಮತ್ತು ಜನರ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲಿದ್ದಾರೆ.ಮಧ್ಯಾಹ್ನ ೩ ಗಂಟೆಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು.ಏ. ೨೯ ರಂದು ವಿಜಯಪುರದಿಂದ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.ಈ ಸಭೆಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಸಂಘಟನೆ ಮುಖಂಡರುಗಳು ಮತ್ತು ಸಂಘ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆ ಹಾಗೂ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಇದೇ ಶುಕ್ರವಾರ, ಏಪ್ರಿಲ್.೨೪ರ ಬೆಳಿಗ್ಗೆ ೯ ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಉದ್ಘಾಟಿಸುವರು. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ–೨ ಹಾಗೂ ಶಾಸಕರಾದ ಪ್ರಕಾಶ ಬಿ. ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ ಅಧ್ಯಕ್ಷರೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ವಿಜಯಪುರ ಜಿಲ್ಲೆಯ ೧೩ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳನ್ನು ಪ್ರಕರಣ ೫(೧) ರಡಿ ನಿಗದಿಪಡಿಸಿ ಪ್ರಕಟಿಸಿದೆ.ಈ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಸಿಮಾ ಆಡಿeಈob ಆಯೋಗದ ವೆವ್ ಸೈಟ್:https://rdpr.karnataka.gov.in/rdc/public ಹಾಗೂ ದಿನಾಂಕ:೧೮-೪-೨೦೨೬ರ ಕರ್ನಾಟಕ ವಿಶೇಷ ರಾಜ್ ಪತ್ರದ ವಿಳಾಸ : https://erajyapatra.karnataka.gov.inಪ್ರಕಟಿಸಲಾಗಿದೆ.ಪ್ರಕಟಣೆಯಲ್ಲಿ ತಿಳಿಸಿರುವಂತೆ ಸಾರ್ವಜನಿಕ ಅಭಿಪ್ರಾಯ, ಅಕ್ಷೇಪಣೆಗಳನ್ನು ಆನ್ ಲೈನ್ ಮುಖಾಂತರ ಆಯೋಗದ ವೆಬ್‌ಸೈಟ್‌ನಲ್ಲಿ ಹಾಗೂ ಖುದ್ದಾಗಿ, ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಗೇಟ್ ನಂ೨, ೨ನೇ ಮಹಡಿ ಕೊಠಡಿ ಸಂಖ್ಯೆ ೨೨೯ ಮತ್ತು ೨೩೦ ಬಹುಮಹಡಿಗಳ ಕಟ್ಟಡ ಬೆಂಗಳೂರನಲ್ಲಿ ಮಾತ್ರ ಏ. ೨೪ ಒಳಗಾಗಿ ಸಲ್ಲಿಸಲು ಅವಕಾಶವಿದೆ.ಕಾರಣ ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ತಪ್ಪದೇ ಈ ಅಧಿಸೂಚನೆಯನ್ನು ಪರಿಶೀಲಿಸಿ, ನಿಗದಿತ ಸಮಯದ ಒಳಗಾಗಿ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಗೇಟ್ ನಂ೨, ೨ನೇ ಮಹಡಿ ಕೊಠಡಿ ಸಂಖ್ಯೆ ೨೨೯ ಮತ್ತು…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಶಿಕ್ಷಕಿ ಶಾಜಾದಬಿ ಮಕಬೂಲಸಾಬ್ ನಗಾರಶಿ, ಸಿಂದಗಿ ತಾಲ್ಲೂಕಿನ ಆಲಮೇಲದ ಪಿಎಂಶ್ರೀ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿರುವದನ್ನು ಗುರುತಿಸಿ ಕೋರವಾರ ಗ್ರಾಮದಲ್ಲಿ ಡಿಎಸ್ಎಸ್ ( ಸಾಗರ ಬಣ )ನೇತೃತ್ವದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ ಅವರ 135 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಅತ್ತ್ಯುತ್ತಮ ಶಿಕ್ಷಕಿಯರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಇಂಡಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಇಂಡಿ ನಗರ ಸೇರಿದಂತೆ ತಾಲೂಕಿನ ಯಾವದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಬೇಕು ಮತ್ತು ತಾಲೂಕಿನ ಎಲ್ಲಾ ಕೆರೆಗಳಲ್ಲಿ ಶೇ ೫೦ ರಷ್ಟು ನೀರು ಕಾಯ್ದುಕೊಳ್ಳಬೇಕು ಎಂದು ತಾಲೂಕಾ ಆಡಳಿತಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲರು ಸೂಚಿಸಿದರು.ಅವರು ಬುಧವಾರ ನಗರದ ತಾ.ಪಂ ಸಬಾಭವನದಲ್ಲಿ ಆಯೋಜಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಿನ ಮೈಲಾರ ಕೊಳುರಗಿ ಹಾಗೂ ಕೆಲವು ಅಡವಿ ವಸ್ತಿಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಅವುಗಳನ್ನು ತಕ್ಷಣವೇ ಬಗೆಹರಿಸಬೇಕು ಎಂದು ಸೂಚಿಸಿದರು.ತಾಲೂಕಿನ ೧೯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಬೇಕು.ಅವುಗಳಲ್ಲಿ ಸಾಕಷ್ಟು ನೀರು ಇದೆಯೋ ಇಲ್ಲವೋ ಎನ್ನುವದನ್ನು ಸತತ ನಿಗಾವಹಿಸಬೇಕು. ನೀರು ಕಡಿಮೆಯಾದರೆ ತಕ್ಷಣವೇ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯ ಮೂಲಕ ನೀರು ಹರಿಸಬೇಕು ಕೆರೆಗಳನ್ನು ತುಂಬಿಸುವ ವ್ಯವಸ್ಥೆ ಮಾಡಬೇಕೆಂದು ಕೃಷ್ಣಾ ಮೇಲ್ದಂಡೆ ಯೋಜನೆಯ…
ಇಂಡಿಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಉದ್ಘಾಟಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಸಲಹೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಇಂಡಿ ನಗರದ ಅಭಿವೃದ್ದಿಗಾಗಿ ಕೆಲಸ ಮಾಡುವ ಸಂಸ್ಥೆ ಇಂಡಿ ನಗರಾಭಿವೃದ್ದಿ ಪ್ರಾಧಿಕಾರ, ಅದರ ಪ್ರಯೋಜನ ಪಡೆದು ಕಾರ್ಯ ರೂಪಿಸಿ ಇಂಡಿ ನಗರ ಅಭಿವೃದ್ದಿ ಪಡಿಸುವ ಗುರಿಯಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ನಗರದ ಆಡಳಿತ ಸೌಧದ ಮೂರನೇಯ ಮಹಡಿಯಲ್ಲಿ ಇಂಡಿ ನಗರಾಭಿವೃದ್ದಿ ಪ್ರಾಧಿಕಾರ ಕಚೇರಿ ಉದ್ಘಾಟಿಸಿ ಮಾತನಾಡಿದರು.ಇಂಡಿ ನಗರದ ಅಭಿವೃದ್ದಿಗೆ ಇಂಡಿ ಅಭಿವೃದ್ದಿ ಪ್ರಾಧಿಕಾರ ಮತ್ತು ಇಂಡಿ ನಗರಸಭೆ ಕಾರ್ಯನಿರ್ವಹಿಸುತ್ತವೆ ಎಂದರು.ಇಂಡಿ ಅಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿ, ನಗರಗಳ ವ್ಯವಸ್ಥಿತ ಬೆಳವಣೆಗೆಗೆ ಯೋಜನೆ ಸಿದ್ದಪಡಿಸುವದು ಮತ್ತು ಅನುಷ್ಠಾನಗೊಳಿಸುವದು ಉದ್ದೇಶವಾಗಿದೆ. ಅಭಿವೃದ್ದಿ ಪಡಿಸಿದ ಪ್ರದೇಶಗಳಲ್ಲಿ ರಸ್ತೆ ನೀರು ಸರಬರಾಜು ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವದು ನಮ್ಮ ಗುರಿಯಾಗಿದೆ ಎಂದರು. ಇಂಡಿ ನಗರದ ವ್ಯವಸ್ಥಿತ ಅಭಿವೃದ್ದಿ ವಸತಿ ಯೋಜನೆಗಳು ಮತ್ತು ಮೂಲಸೌಕರ್ಯ ಮಾಡುವ ಉದ್ದೇಶ ಹೊಂದಿದೆ. ಶಾಸಕರು ನಮ್ಮನ್ನು ಈ…
ಪಡುವಲು ಶ್ರೀ ವಿರಕ್ತ ಮಠದ ಮಹದೇವಸ್ವಾಮಿಗಳ ಅಭಿಮತ ಉದಯರಶ್ಮಿ ದಿನಪತ್ರಿಕೆ ಸರಗೂರು: ಭಗವಂತ ಮತ್ತು ಭಕ್ತನ ನಡುವೆ ಅರ್ಚಕರು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಕ್ತರ ಆಶೋತ್ತರಗಳನ್ನ, ಬೇಡಿಕೆಗಳನ್ನ, ಅವರ ಮನದ ಇಚ್ಛೆಯನ್ನ, ತಮ್ಮ ಭಕ್ತಿಯ ಮೂಲಕವಾಗಿ ಭಗವಂತನಿಗೆ ಅರ್ಪಿಸುವ ಕಾರ್ಯವನ್ನು ಅರ್ಚಕರು ಮಾಡುತ್ತಿದ್ದಾರೆ ಎಂದು ಪಡುವಲು ಶ್ರೀ ವಿರಕ್ತ ಮಠದ ಅಧ್ಯಕ್ಷರಾದ ಶ್ರೀ ಮಹದೇವಸ್ವಾಮಿಗಳು ಹೇಳಿದರು.ಪಟ್ಟಣದ ಸೌಜನ್ಯ ಗ್ಯಾಸ್ ಫ್ಯಾಕ್ಟರಿ ಸಮೀಪ ಸಂಘದ ನಿವೇಶನದಲ್ಲಿ ಹಮ್ಮಿಕೊಂಡಿದ್ದ ಶೈವಾಗಮ ರೀತ್ಯಾ ಅರ್ಚಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್ ಗೆ ಜೋತುಬಿದ್ದು, ಆಚಾರ-ವಿಚಾರಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಶಿವಾರ್ಚಕರ ಸಂಘ, ಮಕ್ಕಳಿಗೆ ಸನಾತನ ಧರ್ಮದ ಸಂಸ್ಕಾರ, ಸಂಸ್ಕೃತಿ, ಪೂಜಾ ವಿಧಿ-ವಿಧಾನ ಹೇಳಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮಹದೇವಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಗಾವಡಗೆರೆಯ ಗುರುಲಿಂಗ ಜಂಗಮದೇವರ ಮಠಾಧ್ಯಕ್ಷ ನಟರಾಜುಸ್ವಾಮಿ ಮಾತನಾಡಿ, ದೇಶಕ್ಕೆ ದೊಡ್ಡಣ್ಣ ಎನಿಸಿಕೊಳ್ಳುವ ಅಮೇರಿಕಾದಲ್ಲಿ ಸಂಪತ್ತು ಇದೆ. ಆದರೆ ಸಂತೋಷ, ಪ್ರೀತಿ, ಅಭಿಮಾನ ಇಲ್ಲ. ದೇಶ-ದೇಶಗಳ ನಡುವೆ ಹೊತ್ತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಧರ್ಮ ಪ್ರಚಾರ, ಸಾಮಾಜಿಕ ಸಾಮರಸ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಕನ್ನೊಳ್ಳಿ ಹಿರೇಮಠ ಜಾತಿ ಭೇದವಿಲ್ಲದೆ ಲಿಂಗದೀಕ್ಷೆ ನೀಡುವಂತಹ ಪ್ರಗತಿಪರ ಚಿಂತನೆಗಳಿಗೆ ಹೆಸರುವಾಸಿಯಾಗಿದೆ ಎಂದು ಶ್ರೀಶೈಲಂ ಪೀಠದ ಜಗದ್ಗುರು ಡಾ.ಚೆನ್ನಸಿದ್ದರಾಮ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಜರುಗಿದ ಜಗದ್ಗುರು ಶ್ರೀ ದಾರುಕಾಚಾರ್ಯರ ನೂತನ ರಥೋತ್ಸವದ ಉದ್ಘಾಟನೆ ಹಾಗೂ ಲಿಂ.ಮರುಳಾರಾಧ್ಯ ಶಿವಾಚಾರ್ಯರ ೧೧೨ನೆಯ ಜಯಂತ್ಸುತ್ಸವ ನಿಮಿತ್ಯ ಹಮ್ಮಿಕೊಂಡ ಶತಮಾನದ ಶಿವಯೋಗಿ ಮರುಳಾರಾಧ್ಯ ಶಿವಾಚಾರ್ಯರ ಮಹಾಪುರಾಣ ಜನಜಾಗೃತಿ ಧರ್ಮಸಭೆ ಪಾವನ ಸಾನಿಧ್ಯ ವಹಿಸಿ ಆಶೀರ್ವದಿಸಿ ಮಾತನಾಡಿ ಅವರು, ಜಾತಿ, ಮತ, ಪಂಥಗಳನ್ನು ಬದಿಗೊತ್ತಿ, ಎಲ್ಲರೂ ಒಂದಾಗಿ ಜಾತ್ರೆ ರಥೋತ್ಸವ ಎಳೆಯುವುದರಿಂದ ಭಾರತೀಯ ಸಂಸ್ಕೃತಿಯಲ್ಲಿನ ಮಾನವೀಯತೆಯ ಸಂಕೇತವಾಗಿದೆ. ಇಂತಹ ಆಚರಣೆಗಳು ಸಮಾಜದಲ್ಲಿ ಶಾಂತಿ, ಸಹೋದರತ್ವ ಮತ್ತು ಅಂತರಂಗ ಮತ್ತು ಬಹಿರಂಗಗಳು ಒಂದೇ ಆಗಿರುವುದರಿಂದ ಒಗ್ಗಟ್ಟನ್ನು ಮೂಡಿಸುತ್ತವೆ. ಹೊರಗಿನ ರಥೋತ್ಸವಕ್ಕಿಂತ ನಮ್ಮ ಮನಸ್ಸು, ಶರೀರವನ್ನು ಭಕ್ತಿಯಿಂದ ಹದಗೊಳಿಸಿ ಗುರುವಿನ ಸನ್ಮಾರ್ಗದಲ್ಲಿ ನಡೆದಾಗ ಒಳಗಿರುವ ದೇವಾತ್ಮ ಸಾಕ್ಷಿಯಾಗಿ ಕಾಣುವುದೇ ನಿಜವಾದ ತೇರು. ಮನಸ್ಸು…
