ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ವಿಜಯಪುರ ಜಿಲ್ಲೆಯ ೧೩ ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಗಳನ್ನು ಪ್ರಕರಣ ೫(೧) ರಡಿ ನಿಗದಿಪಡಿಸಿ ಪ್ರಕಟಿಸಿದೆ.
ಈ ವಿವರಗಳನ್ನು ಕರ್ನಾಟಕ ಪಂಚಾಯತ್ ರಾಜ್ ಸಿಮಾ ಆಡಿeಈob ಆಯೋಗದ ವೆವ್ ಸೈಟ್:https://rdpr.karnataka.gov.in/rdc/public ಹಾಗೂ ದಿನಾಂಕ:೧೮-೪-೨೦೨೬ರ ಕರ್ನಾಟಕ ವಿಶೇಷ ರಾಜ್ ಪತ್ರದ ವಿಳಾಸ : https://erajyapatra.karnataka.gov.inಪ್ರಕಟಿಸಲಾಗಿದೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಸಾರ್ವಜನಿಕ ಅಭಿಪ್ರಾಯ, ಅಕ್ಷೇಪಣೆಗಳನ್ನು ಆನ್ ಲೈನ್ ಮುಖಾಂತರ ಆಯೋಗದ ವೆಬ್‌ಸೈಟ್‌ನಲ್ಲಿ ಹಾಗೂ ಖುದ್ದಾಗಿ, ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಗೇಟ್ ನಂ೨, ೨ನೇ ಮಹಡಿ ಕೊಠಡಿ ಸಂಖ್ಯೆ ೨೨೯ ಮತ್ತು ೨೩೦ ಬಹುಮಹಡಿಗಳ ಕಟ್ಟಡ ಬೆಂಗಳೂರನಲ್ಲಿ ಮಾತ್ರ ಏ. ೨೪ ಒಳಗಾಗಿ ಸಲ್ಲಿಸಲು ಅವಕಾಶವಿದೆ.
ಕಾರಣ ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳು ತಪ್ಪದೇ ಈ ಅಧಿಸೂಚನೆಯನ್ನು ಪರಿಶೀಲಿಸಿ, ನಿಗದಿತ ಸಮಯದ ಒಳಗಾಗಿ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಗೇಟ್ ನಂ೨, ೨ನೇ ಮಹಡಿ ಕೊಠಡಿ ಸಂಖ್ಯೆ ೨೨೯ ಮತ್ತು ೨೩೦ ಬಹುಮಹಡಿಗಳ ಕಟ್ಟಡ ಬೆಂಗಳೂರು ಇವರಿಗೆ ನೇರವಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
