ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಶಿಕ್ಷಕಿ ಶಾಜಾದಬಿ ಮಕಬೂಲಸಾಬ್ ನಗಾರಶಿ, ಸಿಂದಗಿ ತಾಲ್ಲೂಕಿನ ಆಲಮೇಲದ ಪಿಎಂಶ್ರೀ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಅತ್ಯಂತ ಪ್ರಾಮಾಣಿಕ ಸೇವೆ ಸಲ್ಲಿಸಿರುವದನ್ನು ಗುರುತಿಸಿ ಕೋರವಾರ ಗ್ರಾಮದಲ್ಲಿ ಡಿಎಸ್ಎಸ್ ( ಸಾಗರ ಬಣ )ನೇತೃತ್ವದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ ಅವರ 135 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಅತ್ತ್ಯುತ್ತಮ ಶಿಕ್ಷಕಿಯರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

