Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ಮುದ್ದಿನ ಹಳ್ಳಿ ಹುಡ್ಗಪೇಟೆಯ ಹುಡುಗರೆಲ್ಲ ‘ರಂಭಾ ಬೇಡ ಜಂಭ’ ಎಂದು ಕಾಲೆಳೆಯುತ್ತಿದ್ದರು. ‘ನಾನು ರಂಭೆ ಮೀರಿಸೋ ತರ ಇದ್ದರೂ, ಜಂಭದ ಕೋಳಿ.’ ‘ಕಿಲಾಡಿ ಹೆಣ್ಣು’ ಕೈಗೆ ಸಿಗೋದು ಕಷ್ಟ ಅಂತ ‘ಕೈಗೆಟುಕದ ದ್ರಾಕ್ಷಿ’ ಎಂದು ಹೆಸರಿಟ್ಟು ಬೆನ್ನ ಹಿಂದೆ ಮಾತನಾಡೋದು ನನಗೆ ಗೊತ್ತು. ನಗರದ ಜಾಣತನ ಮೆರೆವ ಚೆಲುವ ಚೆನ್ನಿಗರಾಯರು ಹಿಂದೆ ಬಿದ್ದರೂ ಕಣ್ಣೆತ್ತಿ ನೋಡದ ನಾನು, ಹಳ್ಳಿಯ ಸೀದಾ ಸಾದಾ ಹೈದನ ಕಂಡು ಮನಸೋತೆ. ನಿನ್ನಲ್ಲಿ ಏನೋ ಒಂದು ಮೋಹಕತೆ ಇದೆ. ಹುಡುಗಿಯರ ನಿನ್ನತ್ತ ಸೆಳೆಯುವ ಶಕ್ತಿಯಿದೆ. ಅರಳು ಹುರಿದಂತೆ ಆಡುವ ನಿನ್ನ ಸವಿ ಸವಿಯಾದ ಮಾತಿಗೆ ಮರುಳಾದೆ. ನಿನ್ನ ಮಾತಿಗೆ ಮರಳಾಗದವರು ಯಾರೂ ಇಲ್ಲ ಬಿಡು. ಇದು ‘ಜೋಡಿಯ ಬೇಡುವ ವಯಸ್ಸು’ಎಂದಾಗಲಂತೂ ನಾನೇ ನಿನ್ನ ಜೋಡಿ ಎನ್ನುವ ಪದಪುಂಜ ತುಟಿ ಮೇಲೆ ಬಂದು ನಾಚಿ ಮರಳಿತು. ಆದರೆ ನನ್ನುಸಿರಲಿ ನಿನ್ಹೆಸರನು ಬರೆಯುವುದನು ಮರೆಯಲಿಲ್ಲ. ಮೊದಲೇ ನೀನು ಅಪ್ಪಟ ಮಣ್ಣಿನ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕುಮಾರ ಗೊಲ್ಲಾಳದಯ್ಯ ಗದ್ದಗೀಮಠ ೫೫೨ (೮೮.೩೨%) ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಸೌಮ್ಯ ಜೋಗೂರ ೫೪೮ (೮೭.೬೮%) ದ್ವಿತೀಯ ಸ್ಥಾನ ಹಾಗೂ ಕುಮಾರ ಮಹದೇವಪ್ಪ ಮಾದಾರ ೫೩೪ (೮೫.೪೪%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಒಟ್ಟು ೮೦ ವಿಧ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೭೪ ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ೩ ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩೩ ವಿದ್ಯಾರ್ಥಿಗಳು ಪ್ರಥಮಶ್ರೇಣಿ,೧೭ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೨೧ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದು, ಶಾಲೆಯ ಓಟ್ಟು ಪಲಿತಾಂಶ ಶೇ ೯೨.೫ ರಷ್ಟಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಗಳಾದ ಜಗದೀಶ ಗುಮಶೆಟ್ಟಿ, ಸೇರಿದಂತೆ ಶಾಲೆಯ ಸಿಬ್ಬಂದ್ದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ವಿದ್ಯಾರ್ಥಿಗಳು ಸ್ಥಳಿಯ ಸರಕಾರಿ ಪ್ರೌಢಶಾಲೆ ಹಾಗೂ ಇತರ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‍್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಇಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾದ ೧೪೯ ವಿದ್ಯಾರ್ಥಿಗಳಲ್ಲಿ ೧೨೫ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಅದರಲಿ ್ಲ೧೧ ವಿದ್ಯಾರ್ಥಿಗಳು ಅತ್ಯತ್ತಮ ಶ್ರೇಣಿ ೪೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು ೨೧ ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ ಶಾಲೆಯ ಒಟ್ಟು ಫಲಿüತಾಂಶ ಶೇ.೮೪ ಪಡೆದಿದೆ ಎಂದು ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯೇ ಜೆ.ಎಸ್. ಸನದಿ ತಿಳಿಸಿದ್ದಾರೆ.ಕುಮಾರಿ ಪ್ರಿಯಾಂಕಾ ಪ್ರ. ಬೆಳಗಲಿ ೬೨೫ ಕ್ಕೆ ೬೦೪ (ಶೇ.೯೬.೬೪) ಅಂಕಗಳಿಸುವ ಮೂಲಕ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಕುಮಾರಿ ನಂದಿನಿ ಗಂ. ಸವದಿ ೫೯೭ (ಶೇ.೯೫.೫೨) ಅಂಕಗಳನು ಪಡೆದು ದ್ವಿತೀಯಸ್ಥಾನ ಪಡೆದಿದ್ದು, ಕುಮಾರಿ ವರ್ಷಿತಾ ಶ್ರೀ. ಪೂಜಾರಿ ೫೯೬ (೯೫.೩೬) ಅಂಕ ಪಡೆದು ಶಾಲೆಗೆ ತ್ರತೀಯ ಪಡೆದುಕೊಂಡಿದ್ದಾಳೆ, ಕುಮಾರಿ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟಣ್ಣದ ಗ್ರಾಮೀಣ ಅಭಿವೃದ್ದಿ ವಿದ್ಯಾವರ್ದಕ ಸಮಿತಿಯ ಪ್ರೌಢಶಾಲೆಯ ೨೦೨೫-೨೬ನೇ ಸಾಲಿನ ಎಸ್.ಎಸ್.ಎಲ್.ಸಿ ಪಲಿತಾಂಶ ಪ್ರಕಟಗೊಂಡಿದ್ದು. ಶಾಲೆಯ ಒಟ್ಟು ಫಲಿತಾಂಶ ೯೦ ಪಟ್ಟು ೬೭ ವಿದ್ಯಾರ್ಥಿಗಳಲ್ಲಿ ೫೯ ವಿದ್ಯಾಥಿಗಳು ಉತ್ತಿರ್ಣರಾಗಿದ್ದಾರೆ.ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಪೂಜಾ ಚಂ ಹಳೇಮನಿ(೯೪.೮೮%) ದ್ವೀತಿಯ ಸ್ಥಾನ ಕುಮಾರ ಪ್ರಜ್ವಲ ಒಲೇಕರ (೮೫.೯%) ಹಾಗೂ ಕುಮಾರ ಬಾಬುಗೌಡ ಮ ಕೂಡಿ( ೮೫.೭%) ತೃತಿಯ ಸ್ಥಾನ ಕುಮಾರಿ ಪ್ರೀತಿ ತಾಂಬೆ (೮೪.೬೯%) ವೈಷ್ಣವಿ ಬಡಿಗೇರ (೮೩.೩೬%) ಸೌಮ್ಯ ಹೂಗಾರ (೮೨.೪೦%) ಅಂಕಗಳನ್ನು ಪಡೆದಿದ್ದಾರೆ .ವಿದ್ಯಾರ್ಥಿಗಳ ಅತ್ಯತ್ತಮ ಸಾದನೆಗೆ ಸಂಸ್ಥೆಯ ಅಧ್ಯಕ್ಷರು ಶ್ರೀ ಶಿವುಕುಮಾರ ಗ ಗುಂದಗಿ ಹಾಗೂ ಮುಖ್ಯಗುರುಗಳು ಸಿಬ್ಬಂದ್ದಿ ವರ್ಗ ಮತ್ತು ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ
ಉದಯರಶ್ಮಿ ದಿನಪತ್ರಿಕೆ ಚಡಚಣ: ಎಸ್‌ಎಸ್‌ಎಲ್‌ಸಿ 2026ರ ಫಲಿತಾಂಶದಲ್ಲಿ ಬಳ್ಳೊಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆಯ ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 43 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಮುಖ್ಯಾಧ್ಯಾಪಕರಾದ ಮಹೇಶ ಅಳ್ಳೊಳ್ಳಿ ಅವರು ತಿಳಿಸಿದ್ದಾರೆ.ಶಾಲೆಯ ವಿದ್ಯಾರ್ಥಿಗಳಾದ ಮಾಯಾವತಿ ಈರಣ್ಣ ಶಿರಶ್ಯಾಡ ಶೇ.93 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಬಂದಿದ್ದು,ಪ್ರಜ್ವಲ ಅಮಸಿದ್ದ ನಾಯ್ಕೋಡಿ ಶೇ.90 ಅಂಕಗಳಿಸಿ ಶಾಲೆಗೆ ದ್ವೀತಿಯ ಸ್ಥಾನ ಪಡೆದಿದ್ದು, ವಿಜಯಲಕ್ಷ್ಮಿ ಈರಣ್ಣ ವಾಲೀಕಾರ ಶೇ.88 ಅಂಕ ತೆಗೆದುಕೊಂಡು ತೃತಿಯಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಮುಖ್ಯಾಧ್ಯಾಪಕರಾದ ಮಹೇಶ ಅಳ್ಳೊಳ್ಳಿ ಅವರು ಸೇರಿದಂತೆ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು, ವಿದ್ಯಾರ್ಥಿ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ | ಸಾಧಕರಿಗೆ ಸನ್ಮಾನ | ಜಿಪಂ ಸಿಇಓ ರಿಷಿ ಆನಂದ್ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದಲ್ಲಿ ಸ್ಥಳೀಯ ಸ್ವರಾಜ್ಯ ವ್ಯವಸ್ಥೆಗೆ ಸಂವಿಧಾನಾತ್ಮಕ ಬಲ ನೀಡಿದ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಸ್ಮರಣಾರ್ಥವಾಗಿ ಆಚರಿಸಲ್ಪಡುವ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ವಿಜಯಪುರ ಜಿಲ್ಲಾ ಪಂಚಾಯತಿ ವತಿಯಿಂದ ಶುಕ್ರವಾರ ಭವ್ಯವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.ಗ್ರಾಮೀಣ ಅಭಿವೃದ್ಧಿಯ ಹೃದಯವಾಗಿರುವ ಪಂಚಾಯತ್ ರಾಜ್ ಸಂಸ್ಥೆಗಳ ಸಾಧನೆಗಳನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಆಡಳಿತ ನೀಡುವ ದಿಸೆಯಲ್ಲಿ ಸಂಕಲ್ಪ ಕೈಗೊಳ್ಳಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಅವರು, “ಪಂಚಾಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದ್ದು, ಗ್ರಾಮೀಣ ಜನರ ಸಬಲೀಕರಣಕ್ಕೆ ಪ್ರಮುಖ ವೇದಿಕೆಯಾಗಿದೆ. 73ನೇ ಸಂವಿಧಾನ ತಿದ್ದುಪಡಿ ಮೂಲಕ ಪಂಚಾಯತಿಗಳಿಗೆ ದೊರೆತಿರುವ ಸಂವಿಧಾನಾತ್ಮಕ ಸ್ಥಾನಮಾನವು ಗ್ರಾಮೀಣ ಆಡಳಿತವನ್ನು ಶಕ್ತಿಶಾಲಿಯಾಗಿ ರೂಪಿಸಿದೆ. ಜನಪಾಲ್ಗೊಳ್ಳಿಕೆ, ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ಹೆಚ್ಚಿಸುವ ಮೂಲಕ ನಾವು ಸಮಗ್ರ ಅಭಿವೃದ್ಧಿಯನ್ನು…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಆದರ್ಶ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ೨೦೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಆಂಗ್ಲ ಮಾಧ್ಯಮದ ಕುಮಾರಿ ಆರೀಫಾ ಮುಲ್ಲಾ ೬೧೮ (೯೮.೮೮%) ಪ್ರಥಮ ಸ್ಥಾನ ಪಡೆದಿದ್ದು, ಕುಮಾರಿ ಸುಹಾನಾ ಸಿ. ೬೦೭ (೯೭.೧೨%) ದ್ವಿತೀಯ ಸ್ಥಾನ ಹಾಗೂ ಕುಮಾರಿ ಭೂಮಿಕಾ ದಿಗ್ಗಾಂವಿ ೬೦೪ (೯೬.೬೪%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಆಂಗ್ಲ ಮಾಧ್ಯಮದ ಒಟ್ಟು ೯೪ ವಿಧ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ೩೬ ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೪೪ ವಿದ್ಯಾರ್ಥಿಗಳು ಪ್ರಥಮಶ್ರೇಣಿ, ೦೮ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೦೬ ವಿಧ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದು, ಕನ್ನಡ ಮಾಧ್ಯಮದ ಪರೀಕ್ಷೆಗೆ ಹಾಜರಾದ ಒಟ್ಟು ೪೦ ವಿದ್ಯಾರ್ಥಿಗಳಲ್ಲಿ ೧೨ ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೧೯ ವಿದ್ಯಾರ್ಥಿಗಳು ಪ್ರಥಮಶ್ರೇಣಿ, ೦೮ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ ೦೧ ವಿಧ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದು, ಶಾಲೆಯ ಓಟ್ಟು ಪಲಿತಾಂಶ ಶೇ.೧೦೦ ರಷ್ಟಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮುಸ್ಲಿಂ ಸಮುದಾಯದ ಪ್ರತಿಯೊಬ್ಬರಿಗೂ ಪವಿತ್ರ ಹಜ್‌ಯಾತ್ರೆ ಪರಿಶುದ್ಧಿಗೊಳಿಸುವ ಸಂದರ್ಭವಾಗಿದೆ ಎಂದು ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಅಲ್‌ಹಾಜ್ ಎಂ.ಎನ್.ನದಾಫ ಹೇಳಿದರು.ಪಟ್ಟಣದ ಉದ್ಯಮಿ ಅಬ್ದುಲ್‌ರೆಹಮಾನ ವಡ್ಡೋಡಗಿ ಪರಿವಾರದಿಂದ ಹಜ್ ಯಾತ್ರೆಗೈದ ಹಾಗೂ ಹಜ್‌ಯಾತ್ರೆಗೆ ತೆರಳುವರಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಾನವನಾಗಿ ಬದುಕಲು ಧರ್ಮ ಅವಶ್ಯವಾಗಿದೆ. ನಾವೆಲ್ಲ ಧರ್ಮವಂತರಾಗಿ ಬಾಳಬೇಕು. ಪಾಪ ಪುಣ್ಯದ ಮಹತ್ವ ಗೊತ್ತಿರಬೇಕು. ಹಜ್ ಯಾತ್ರೆಯಿಂದ ಪಾವಿತ್ರ್ಯತೆ ಹೆಚ್ಚುವುದರ ಜೊತೆಗೆ ಪರಿಶುದ್ಧತೆ ಕಂಡುಕೊಳ್ಳುತ್ತೇವೆ. ಸಮುದಾಯದ ಪ್ರತಿಯೊಬ್ಬರು ಹಜ್‌ಯಾತ್ರೆ ಕೈಕೊಳ್ಳುವುದರ ಮೂಲಕ ಪಾವನಗೊಳ್ಳಬೇಕೆಂದರು.ಸಿಕ್ಯಾಬ್ ಪದವಿಪೂರ್ವ ಕಾಲೇಜು ಉಪನ್ಯಾಸಕ ಯು.ಎನ್.ಕುಂಟೋಜಿ ಮಾತನಾಡಿ, ಪರಮ ದಯಾಮಯಿ ದೇವರ ಕರುಣೆಗೆ ಪಾತ್ರರಾಗಲು ಆತ್ಮಶುದ್ಧಿ, ಪ್ರಾಂಜಲ ಮನಸ್ಸಿನಿಂದ ಇಸ್ಲಾಮಿನ ಐದು ಕಡ್ಡಾಯ ತತ್ವಗಳನ್ನು ಪಾಲಿಸಬೇಕು. ಅದರಲ್ಲಿ ಹಜ್‌ಯಾತ್ರೆಯೂ ಒಂದಾಗಿದೆ. ಜೀವನ ಮುಕ್ತಿಗಾಗಿ ಹಜ್ ಹಾಗೂ ಉಮ್ರಾ ಯಾತ್ರೆ ಕೈಕೊಳ್ಳುವುದು ಫಲದಾಯಕವಾಗಿದೆ ಎಂದರು.ಪ್ರಾಸ್ತಾವಿಕವಾಗಿ ವಕೀಲ ಎ.ಎಂ.ತಾಂಬೋಳಿ ಮಾತನಾಡಿ, ಹಜ್‌ಯಾತ್ರೆಯೆಂಬುದು ಅತ್ಯಂತ ಪ್ರವಿತ್ರವಾಗಿದ್ದು, ಹಜ್ ಯಾತ್ರೆಗೆ ತೆರಳುವವರಿಗೆ ಹಾಗೂ ಹಜ್ ಯಾತ್ರೆ ಕೈಕೊಂಡವರಿಗೆ ಸನ್ಮಾನ ಮಾಡಿ ಔತಣಕೂಟ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಪ್ರಸಕ್ತ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-೧ರಲ್ಲಿ ಸ್ಥಳೀಯ ಎಸ್.ವಿ.ವಿ. ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಂಎಚ್ಎಂ ಪ್ರೌಢಶಾಲಾ ವಿಭಾಗ ಶೇ.೯೭.೫೯ ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡಿದೆ.ಪರೀಕ್ಷೆಗೆ ಹಾಜರಾಗಿದ್ದ ೮೩ ವಿದ್ಯಾರ್ಥಿಗಳಲ್ಲಿ ೮೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿಯಲ್ಲಿ ೭, ಪ್ರಥಮ ಶ್ರೇಣಿಯಲ್ಲಿ ೪೬, ದ್ವಿತೀಯ ಶ್ರೇಣಿಯಲ್ಲಿ ೧೭ ಹಾಗೂ ತೃತೀಯ ಶ್ರೇಣಿಯಲ್ಲಿ ೧೧ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶಾಲೆ, ಸಂಸ್ಥೆ ಹಾಗೂ ಆಲಮಟ್ಟಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.೯೬.೮೦ ಅಂಕ ಗಳಿಸಿ ಕುಮಾರಿ ಸಂಜನಾ ದಳವಾಯಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ತನುಶ್ರೀ ಧನವೆ ಶೇ.೯೩.೧೨ ಅಂಕಗಳೊಂದಿಗೆ ದ್ವಿತೀಯ, ಕುಮಾರಿ ಸುಂದರಮ್ಮ ಬಡಿಗೇರ ಶೇ.೯೨.೮೦ ಅಂಕಗಳೊಂದಿಗೆ ತೃತೀಯ ಹಾಗೂ ಕುಮಾರಿ ರತ್ನಾ ಜಲ್ಲಿ ಶೇ.೯೦.೪೦ ಅಂಕಗಳೊಂದಿಗೆ ಚತುರ್ಥ ಸ್ಥಾನ ಪಡೆದಿದ್ದಾರೆ. ಶಾಲೆಯ ಟಾಪರ್‌ಗಳೆಲ್ಲ ಬಾಲಕಿಯರೇ ಎಂಬುದು ವಿಶೇಷ.ಹಿಂದಿ ವಿಷಯದಲ್ಲಿ ತನುಶ್ರೀ ಧನವೆ ಹಾಗೂ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಸದಸ್ಯರಾದ ಎಂ.ಹುಂಬಯ್ಯ, ಸುನೀಲ್ ಎಂ ಉಕ್ಕಲಿ, ಎನ್.ದಿವಾಕರ್ ಮತ್ತು ಗೀತಾ ಥಾಂವಶಿ ಹಾಗೂ ಕಾರ್ಯದರ್ಶಿ ಡಾ. ಎಚ್.ಎಸ್. ಶಿವರಾಮು ಏ. ೨೮ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.ಏ. ೨೭ ರಂದು ಸಂಜೆ ಬೆಳಗಾವಿಯಿಂದ ವಿಜಯಪುರಕ್ಕೆ ಆಗಮಿಸುವರು. ಏ. ೨೮ ರಂದು ಬೆಳಗ್ಗೆ ೧೦.೨೦ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗುವ ಸಭೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳಿಗೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಾಂಗಕ್ಕೆ ಅನುದಾನ ವಿತರಣೆಯಾಗಿರುವ ಮತ್ತು ಜನರ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಲಿದ್ದಾರೆ.ಮಧ್ಯಾಹ್ನ ೩ ಗಂಟೆಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವರು.ಏ. ೨೯ ರಂದು ವಿಜಯಪುರದಿಂದ ಕಲಬುರಗಿಗೆ ಪ್ರಯಾಣ ಬೆಳೆಸುವರು ಎಂದು ಪ್ರಕಟಣೆ ತಿಳಿಸಿದೆ.ಈ ಸಭೆಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಸಂಘಟನೆ ಮುಖಂಡರುಗಳು ಮತ್ತು ಸಂಘ…
