Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಕೆ. ಪಾಟೀಲ ಹೇಳಿದ್ದಾರೆ. ತಿಕೋಟಾ ಪಟ್ಟಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಈ ಸಂದರ್ಭಲ್ಲಿ ಮತಯಾಚಿಸುವ ಕೆಲವರು ಅಳುತ್ತಾರೆ. ಅಡ್ಡ ಬೀಳುತ್ತಾರೆ. ಅಂಗಲಾಚುತ್ತಾರೆ. ಈ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಆದರೆ, ಇದು ಅರ್ಹತೆಯಾಗಬಾರದು. ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಸಿಎಂ ಆಗುತ್ತಿದ್ದರು ಎಂದು ಅವರು ಹೇಳಿದರು. ಮತದ ಮಹತ್ವವನ್ನು ಪ್ರತಿಯೊಬ್ಬ ಮತದಾರರು ಅರಿತುಕೊಳ್ಳಬೇಕು. ಸದಾ ತಮ್ಮ ಶ್ರೇಯಸ್ಸು ಬಯಸುವ ಹಿತಚಿಂತಕರ ಪರ ಮತ ಚಲಾವಣೆಯಾಗಬೇಕು. ಮತದಾರರು ತಮ್ಮ ಮತ ಅಪಮೌಲ್ಯ ಆಗಬಾರದು ಎಂಬ ಪ್ರಜ್ಞೆ ಇಟ್ಟುಕೊಂಡು ಅರ್ಹರಿಗೆ ಮತ ಹಾಕಬೇಕು. ಒಬ್ಬ ಜನಪ್ರತಿನಿಧಿ ಮತ್ತು ಜನನಾಯಕನಿಗೆ ಇರಬೇಕಾದ ಎಲ್ಲ ಅರ್ಹತೆಗಳು ಎಂ. ಬಿ. ಪಾಟೀಲರಿಗೆ ಇವೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಜಿ.…
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸರ್ವಾಧಿಕಾರ ಧೋರಣೆಗೆ ಬೇಸತ್ತು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ನಾನು ಸ್ವಾಭಿಮಾನದ ಕಿಚ್ಚಿನಿಂದ ಪಕ್ಷ ತೊರೆದು ಹಿಂದುತ್ವವನ್ನು ಪ್ರತಿಪಾದಿಸುವ ಶಿವಸೇನಾ (ಉದ್ಭವ ಠಾಕ್ರೆ ಬಣ) ಪಕ್ಷದ ಅಭ್ಯರ್ಥಿಯಾಗಿ ಶಾಸಕ ಯತ್ನಾಳ ಅವರ ವಿರುದ್ಧ ಸ್ಪರ್ಧಿಸಿರುವುದಾಗಿ ವಿಜಯಪುರ ನಗರ ಕ್ಷೇತ್ರದ ಶಿವಸೇನಾ ಅಭ್ಯರ್ಥಿ ಸತೀಶ ಪಾಟೀಲ ತಿಳಿಸಿದರು.ಶುಕ್ರವಾರ ನಗರದ ಖಾಸಗಿ ಹೊಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾದ ಬೆನ್ನೆಲುಬಾಗಿದ್ದ ನನಗೆ ಶಾಸಕ ಯತ್ನಾಳ ಅವರ ಚಿತಾವಣೆಯಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ. ನನ್ನಂತೆ ಪಕ್ಷದ ಹಲವು ಹಿರಿಯರಿಗೂ ಟಿಕೆಟ್ ಕೈತಪ್ಪಿತು. ನನ್ನನ್ನು ಚುನಾವಣೆ ನಿರ್ವಹಣಾ ಸಮಿತಿಯಿಂದಲೂ ದೂರವಿಟ್ಟರು. ೧೫ವರ್ಷಗಳಿಂದ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ಪಕ್ಷ ಸಂಘಟನೆಗೆ ದುಡಿದ ನನ್ನನ್ನು ಎಲ್ಲ ಹಂತದಲ್ಲೂ ಯತ್ನಾಳರು ಕಡೆಗಣಿಸುತ್ತ ಬಂದಿದ್ದರಿAದ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿತ್ತು. ಹೀಗಾಗಿ ದಿ.ಬಾಳಾಸಾಹೇಬ ಠಾಕ್ರೆ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ನಾನು ಅವರ ವಿಚಾರಗಳನ್ನು ಬಿತ್ತಲು…
Udayarashmi kannada daily newspaper
Udayarashmi kannada daily newspaper
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಈ ಬಾರಿಯ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷಿಸಲು ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಘಟಾನುಘಟಿಗಳ ಸ್ಪರ್ಧೆಯಿಂದ ಕಣ ರಂಗೇರಿದೆ. ಇವರಿಗೆ ಎದುರಾಳಿಗಳಾಗಿ ಕಾಂಗ್ರೆಸ್ ಪಕ್ಷದಿಂದ ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ, ಜೆಡಿಎಸ್ ಪಕ್ಷದಿಂದ ಭೀಮನಗೌಡ (ರಾಜುಗೌಡ) ಪಾಟೀಲ ಕುದರಿಸಾಲವಾಡಗಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯರಶ್ಮಿ” ಶಾಸಕ ಸೋಮನಗೌಡ ಪಾಟೀಲರನ್ನು ಕಂಡು ಅವರ ಮುಂದೆ ಕೆಲ ಪ್ರಶ್ನೆಗಳನ್ನು ಹರವಿದಾಗ ಅವರು ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿದ್ದು ಹೀಗೆ.. ಉದಯರಶ್ಮಿ: ಕ್ಷೇತ್ರದಲ್ಲಿ ತಮ್ಮ ಚುನಾವಣೆ ಪ್ರಚಾರದ ವೈಖರಿ ಹೇಗಿದೆ?ಸೋಮನಗೌಡ: ವ್ಯವಸ್ಥಿತವಾಗಿ ಸಾಗಿದೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತದಾರರನ್ನು ಸಂಪರ್ಕಿಸುತ್ತಿರುವೆ. ದೇವರಹಿಪ್ಪರಗಿ ಮತಕ್ಷೇತ್ರ ನಾಲ್ಕು ತಾಲೂಕುಗಳಲ್ಲಿ ಹಂಚಿ ಹೋಗಿದ್ದು ೧೨೦ಕೀ.ಮಿ ಉದ್ದದ ವಿಸ್ತಾರ ಹೊಂದಿದೆ. ವಿಶಾಲ ಕ್ಷೇತ್ರವಾದರೂ ಪ್ರತಿ ಹಳ್ಳಿಗೂ ಭೇಟಿ…
ಸಿಂದಗಿ: ಪ್ರಜಾಪ್ರಭುತ್ವದ ಆಶಯದಂತೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಓ ಬಾಬು ರಾಠೋಡ ಹೇಳಿದರು.ಗುರುವಾರ ನಗರದಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯತ್, ಪುರಸಭೆ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಮೇ.೧೦ ರಂದು ಜರುಗುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ನಿಮಿತ್ಯವಾಗಿ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲು ಎತ್ತಿನ ಬಂಡಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಹಕ್ಕು ನಮ್ಮೆಲ್ಲರ ಹಕ್ಕು. ಆದ್ದರಿಂದ ಎಲ್ಲರೂ ತಪ್ಪದೇ ಜವಾಬ್ದಾರಿಯಿಂದ ಮತ ಚಲಾಯಿಸಿ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಿಸಿ ಎಂದರು.ಈ ಜಾಥಾ ಕಾರ್ಯಕ್ರಮವು ತಹಸೀಲ್ದಾರ್ ಕಚೇರಿಯಿಂದ ಆರಂಭಗೊAಡು ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಡಾ.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಸಾಗಿಬಂದಿತು.ಇದೇ ಸಂದರ್ಭದಲ್ಲಿ ಆಲಮೇಲ ತಹಶೀಲ್ದಾರ್ ಸುರೇಶ ಚಾವಲರ, ತಾಲೂಕು ಜಂಟಿ ನಿರ್ದೇಶಕ ಪ್ರಕಾಶ್ ಸಿಂಗೆಗೋಳ, ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪುರಸಭೆ ಮುಖ್ಯಾಧಿಕಾರಿ…
ವಿಜಯಪುರ: ಔದ್ಯೋಗಿಕ ನಗರವನ್ನಾಗಿ ಮಾಡುವ ಯೋಜನೆಯನ್ನು ತಂದೆಯವರು ಹಾಕಿಕೊಂಡಿದ್ದು, ತಾವು ಆಶೀರ್ದಿಸುವ ಮೂಲಕ ಯೋಜನೆ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು. ತಂದೆ ಪರ ನಗರ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.23 ರ ಪುಲಕೇಶಿ ನಗರ, ಕೀರ್ತಿ ನಗರ, ಅಂಬೇಡ್ಕರ್ ಕಾಲೊನಿ, ನಿಸರ್ಗ ಕಾಲೊನಿ, ತೊರವಿ ಸೇರಿದಂತೆ ವಿವಿಧೆಡೆ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು. ಹಿಂದಿನ ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ರಸ್ತೆ, ಚರಂಡಿ ಸೇರಿದಂತೆ ಅವಶ್ಯಕ ಮೂಲಸೌಕರ್ಯ ಕಲ್ಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿಯಂತೆ ಔದ್ಯೋಗಿಕ ನಗರವನ್ನಾಗಿ ಮಾಡುವ ಮೂಲಕ ಉದ್ಯೋಗ ಸೃಷ್ಟಿಸಿ, ನಮ್ಮ ಭಾಗದ ಯುವಕರು ಪಾಲಕರನ್ನು ಬಿಟ್ಟು ದೂರದ ಊರುಗಳಿಗೆ ಹೋಗಿ ದುಡಿಯುವ ಬದಲಾಗಿ, ನಮ್ಮಲ್ಲೇ ಕೆಲಸ ಸಿಗುವಂತೆ ಮಾಡಲಾಗುವುದು. ಅದಕ್ಕೆ ತಮ್ಮ ಆಶೀರ್ವಾದ ಅವಶ್ಯ ಎಂದು ಹೇಳಿದರು. ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇರುವ ನಾಯಕರನ್ನು ಬೆಂಬಲಿಸಿದರೆ ಮಾತ್ರ ನಾವು ಕಂಡ ಕನಸು ನನಸಾಗಲು ಸಾಧ್ಯ. ಅದು…
ಕೊಲ್ಹಾರ: ಪಟ್ಟಣ ವಿಶ್ವಕರ್ಮ ಸಮಾಜದ ಗುರುಹಿರಿಯರು ಹಾಗೂ ಬಂಧುಗಳು ಗುರುವಾರ ಕೊಲ್ಹಾರ ಪಟ್ಟಣದಲ್ಲಿ ಸಭೆ ನಡೆಸಿ ವಿಧಾನಸಭೆ ಚುನಾವಣೆಯಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಬೆಂಬಲ ಸೂಚಿಸಿ ಆತ್ಮೀಯವಾಗಿ ಸನ್ಮಾನಿಸಿದರು.ಈ ವೇಳೆ ಹಿರಿಯರಾದ ಸಿ.ಎಂ ಗಣಕುಮಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಯಂಕಪ್ಪ ಕಂಬಾರ, ಪುಂಡಲೀಕ್ ಕಂಬಾರ, ಮಳೆಪ್ಪ ಬಡಿಗೇರ, ಮೌನೇಶ್ವರ ಹಾಗೂ ಕಾಳಿಕಾದೇವಿ ದೇವಸ್ಥಾನದ ಅರ್ಚಕ ಮೌನೇಶ ಬಡಿಗೇರ, ಲಕ್ಷ್ಮಣ ಕಂಬಾರ, ಶಂಕರ ಬಡಿಗೇರ ಹಾಗೂ ಹಲವರಿದ್ದರು.
ವಿಜಯಪುರ: ಯೋಜನೆ ರೂಪಿಸಿ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಿ ಭೂ ಪರಿಹಾರವನ್ನೂ ನೀಡಿ ಎಂ. ಬಿ. ಪಾಟೀಲರು ಛಲದಂಕಮಲ್ಲರಾಗಿದ್ದಾರೆ ಎಂದು ರೈತ ಶಿವಾನಂದ ಸಸಾಲಟ್ಟಿ ಹೇಳಿದರು. ತಿಕೋಟಾ ತಾಲೂಕಿನ ರಾಂಪೂರದಲ್ಲಿ ಎಂ. ಬಿ. ಪಾಟೀಲರು ಕೈಗೊಂಡ ಪ್ರಚಾರದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಜನೋಪಯೋಗಿ ಕಾರ್ಯಗಳ ಮೂಲಕ ರೈತರು, ಯುವಕರು, ಮಹಿಳೆಯರ ಬಾಳನ್ನು ಹಸನಾಗಿಸಿದ್ದಾರೆ. ಇಂಥ ಜನ ನಾಯಕರನ್ನು ಪಕ್ಷಾತೀತವಾಗಿ ಬಹುಮತದೊಂದಿಗೆ ಆಯ್ಕೆ ಮಾಡೋಣ ಎಂದು ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಜರೆ ಹಳ್ಳಿಯಾಗಿದ್ದ ರಾಂಪೂರ ಗ್ರಾಮ ಈಗ ಕಂದಾಯ ಗ್ರಾಮವಾಗಿದೆ.ತಿಕೋಟಾ ಹೋಬಳಿ ನೀರಾವರಿಗಾಗಿ ರೂ. 3600 ಕೋಟಿ ಖರ್ಚು ಮಾಡಿ ದೇಶದಲ್ಲಿಯೇ ಹೋಬಳಿಯೊಂದರಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಕೆಲಸ ಮಾಡಿದ ಸಂತೃಪ್ತಿ ಇದೆ ಎಂದು ಹೇಳಿದರು. ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು ಅಭಿವೃದ್ಧಿಯ ಸಾಕಷ್ಟು ಕನಸುಗಳನ್ನು ಹೊಂದಿದ್ದೇವೆ. ಅವುಗಳನ್ನು ನನಸು…
ವಿಜಯಪುರ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ನಾವು ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುವುದು ನಿಶ್ಚಿತ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ನಗರದಲ್ಲಿ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮತ್ತು ಭಗೀರಥ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಫನಮನ ಸಲ್ಲಿಸಿ ಅವರು ಮಾತನಾಡಿದರು. ಮತಕ್ಷೇತ್ರದ ಜನರಿಗಾಗಿ ಹಗಲು ರಾತ್ರಿ ದುಡಿದಿದ್ದೇನೆ. ಐದು ವರ್ಷ ಸಚಿವನಾಗಿದ್ದಾಗ ವೈಯಕ್ತಿಕ ಜೀವನ ಬದಿಗೊತ್ತಿ, ವಿಶ್ರಮಿಸದೇ ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆಯೂ ಜನರ ಅಭಿವೃದ್ಧಿಗೆ ದುಡಿಯಲು ಪಣತೊಟ್ಟಿದ್ದೇನೆ ಎಂದು ಅವರ ಹೇಳಿದರು. ಜಗತ್ತು ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿಂತಿದೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರ ಸಂಪೂರ್ಣ ಬೆಂಬಲದಿಂದ 50 ಸಾವಿರ ಹೆಚ್ಚು ಮತಗಳ ಅಂತರದಿಂದ ಗೆಲುವು ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದರು. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನೆ ಮನೆಗೆ ತೆರಳಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಕಾಂಗ್ರೆಸ್ ಗ್ಯಾರಂಟಿ ಸ್ಕೀಂ…
