ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸರ್ವಾಧಿಕಾರ ಧೋರಣೆಗೆ ಬೇಸತ್ತು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ನಾನು ಸ್ವಾಭಿಮಾನದ ಕಿಚ್ಚಿನಿಂದ ಪಕ್ಷ ತೊರೆದು ಹಿಂದುತ್ವವನ್ನು ಪ್ರತಿಪಾದಿಸುವ ಶಿವಸೇನಾ (ಉದ್ಭವ ಠಾಕ್ರೆ ಬಣ) ಪಕ್ಷದ ಅಭ್ಯರ್ಥಿಯಾಗಿ ಶಾಸಕ ಯತ್ನಾಳ ಅವರ ವಿರುದ್ಧ ಸ್ಪರ್ಧಿಸಿರುವುದಾಗಿ ವಿಜಯಪುರ ನಗರ ಕ್ಷೇತ್ರದ ಶಿವಸೇನಾ ಅಭ್ಯರ್ಥಿ ಸತೀಶ ಪಾಟೀಲ ತಿಳಿಸಿದರು.
ಶುಕ್ರವಾರ ನಗರದ ಖಾಸಗಿ ಹೊಟೇಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾದ ಬೆನ್ನೆಲುಬಾಗಿದ್ದ ನನಗೆ ಶಾಸಕ ಯತ್ನಾಳ ಅವರ ಚಿತಾವಣೆಯಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗಲಿಲ್ಲ. ನನ್ನಂತೆ ಪಕ್ಷದ ಹಲವು ಹಿರಿಯರಿಗೂ ಟಿಕೆಟ್ ಕೈತಪ್ಪಿತು. ನನ್ನನ್ನು ಚುನಾವಣೆ ನಿರ್ವಹಣಾ ಸಮಿತಿಯಿಂದಲೂ ದೂರವಿಟ್ಟರು. ೧೫ವರ್ಷಗಳಿಂದ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ಪಕ್ಷ ಸಂಘಟನೆಗೆ ದುಡಿದ ನನ್ನನ್ನು ಎಲ್ಲ ಹಂತದಲ್ಲೂ ಯತ್ನಾಳರು ಕಡೆಗಣಿಸುತ್ತ ಬಂದಿದ್ದರಿAದ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿತ್ತು. ಹೀಗಾಗಿ ದಿ.ಬಾಳಾಸಾಹೇಬ ಠಾಕ್ರೆ ಅವರ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ನಾನು ಅವರ ವಿಚಾರಗಳನ್ನು ಬಿತ್ತಲು ಶಿವಸೇನೆ ಪಕ್ಷವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧಿಸಿರುವುದಾಗಿ ತಿಳಿಸಿದರು.
ಶಾಸಕ ಯತ್ನಾಳ ಅವರ ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು, ಯತ್ನಾಳರದು ಡೋಂಗಿ ಹಿಂದುತ್ವ. ಅವರು ಯಾವತ್ತೂ ಹಿಂದುತ್ವದ ಪರವಾಗಿರಲಿಲ್ಲ. ಯಾವಾಗ ಜೆಡಿಎಸ್‌ನಿಂದ ಸ್ಪರ್ಧಿಸಿ ಪೆಟ್ಟು ತಿಂದರೋ ಆ ಬಳಿಕ ಹಿಂದುತ್ವದ ಜಪ ಶುರು ಮಾಡಿದರು. ಇವರಿಗೆ ವೈಯಕ್ತಿಕ ಓಟ್ ಬ್ಯಾಂಕ್ ಇಲ್ಲ. ಹಿಂದು ಟ್ರಂಪ್ ಕಾರ್ಡ ಬಳಸಿಕೊಂಡು, ಪ್ರದಾನಿ ಮೋದಿಯವರ ಫೋಟೊ ಹಾಕಿಕೊಂಡು ಆಯ್ಕೆಯಾದವರು. ಬೇರೆಯವರ ಮನಸ್ಸಿಗೆ ನೋವಾಗುವಂತೆ ಹೇಳಿಕೆ ನೀಡುವ ಇವರು ಕೇವಲ ಪೊಳ್ಳು ಭಾಷಣಗಳಿಗೆ ಸೀಮಿತರಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾಯ್ಕರ್ತರನ್ನು ಹತ್ತಿಕ್ಕಿ ತಮ್ಮ ಸಿದ್ದಸಿರಿ ಬ್ಯಾಂಕಿನ ನೌಕರರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸದಾ ಕೋಮುಭಾವನೆ ಕೆರಳಿಸುವ ಹೇಳಿಕೆ ನೀಡುವ ಯತ್ನಾಳರು, ತಾವು ಕಟ್ಟರ್ ಹಿಂದುತ್ವವಾದಿ ಎಂದು ಸಿದ್ದೇಶ್ವರ ಗುಡಿಗೆ ಬಂದು ಪ್ರಮಾಣ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ತಾವು ಪ್ರಾಮಾಣಿಕರೆಂದು ಪೋಸು ಕೊಡುವ ಯತ್ನಾಳರ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿರುವುದು. ತಾವು ಗುತ್ತಿಗೆದಾರರಿಂದ ಹಣ ಪಡೆದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿದರೆ ತಾವು ಕಣದಿಂದಲೇ ನಿವೃತ್ತಿಯಾಗುವುದಾಗಿ ಶಿವಸೇನಾ ಅಭ್ಯರ್ಥಿ ಸತೀಶ ಪಾಟೀಲ ಸವಾಲು ಹಾಕಿದರು.
ಶಿವಸೇನಾ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾನಾಗೌಡ ಪಾಟೀಲ ಇದ್ದರು.
Related Posts
Add A Comment