ವಿಜಯಪುರ: ಯೋಜನೆ ರೂಪಿಸಿ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಿ ಭೂ ಪರಿಹಾರವನ್ನೂ ನೀಡಿ ಎಂ. ಬಿ. ಪಾಟೀಲರು ಛಲದಂಕಮಲ್ಲರಾಗಿದ್ದಾರೆ ಎಂದು ರೈತ ಶಿವಾನಂದ ಸಸಾಲಟ್ಟಿ ಹೇಳಿದರು.
ತಿಕೋಟಾ ತಾಲೂಕಿನ ರಾಂಪೂರದಲ್ಲಿ ಎಂ. ಬಿ. ಪಾಟೀಲರು ಕೈಗೊಂಡ ಪ್ರಚಾರದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಜನೋಪಯೋಗಿ ಕಾರ್ಯಗಳ ಮೂಲಕ ರೈತರು, ಯುವಕರು, ಮಹಿಳೆಯರ ಬಾಳನ್ನು ಹಸನಾಗಿಸಿದ್ದಾರೆ. ಇಂಥ ಜನ ನಾಯಕರನ್ನು ಪಕ್ಷಾತೀತವಾಗಿ ಬಹುಮತದೊಂದಿಗೆ ಆಯ್ಕೆ ಮಾಡೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಜರೆ ಹಳ್ಳಿಯಾಗಿದ್ದ ರಾಂಪೂರ ಗ್ರಾಮ ಈಗ ಕಂದಾಯ ಗ್ರಾಮವಾಗಿದೆ.
ತಿಕೋಟಾ ಹೋಬಳಿ ನೀರಾವರಿಗಾಗಿ ರೂ. 3600 ಕೋಟಿ ಖರ್ಚು ಮಾಡಿ ದೇಶದಲ್ಲಿಯೇ ಹೋಬಳಿಯೊಂದರಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಕೆಲಸ ಮಾಡಿದ ಸಂತೃಪ್ತಿ ಇದೆ ಎಂದು ಹೇಳಿದರು.
ಮತಕ್ಷೇತ್ರವನ್ನು ಬಂಗಾರದ ಬಬಲೇಶ್ವರವನ್ನಾಗಿ ಮಾಡಲು ಅಭಿವೃದ್ಧಿಯ ಸಾಕಷ್ಟು ಕನಸುಗಳನ್ನು ಹೊಂದಿದ್ದೇವೆ. ಅವುಗಳನ್ನು ನನಸು ಮಾಡಲು ಯೋಜನೆಗಳು ಸಿದ್ಧವಾಗಿವೆ ಈ ಮುಂಚೆ ಅಸಾಧ್ಯ ಎಂಬ ನೀರಾವರಿ ಕೆಲಸಗಳನ್ನು ದೇವರು ಶ್ರೀ ಸಿದ್ಧೇಶ್ವರ ಶ್ರೀಗಳ ಆಸೆಯದಂತೆ ನನ್ನ ಮೂಲಕ ಸಾಧ್ಯವಾಗಿಸಿದ್ದಾರೆ. ರೈತರ ಮುಂದಿನ ತಲೆ ಮಾರುಗಳು ಸುಖವಾಗಿರಲು ಈಗ ಕೈಗೊಂಡಿರುವ ನೀರಾವರಿ ಯೋಜನೆಗಳು ಶಾಶ್ವತ ಪರಿಹಾರ ಒದಗಿಸಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಮ್ಮಣ್ಣ ಹಂಗರಗಿ, ಮಲ್ಲಿಕಾರ್ಜುನ ಹೊನವಾಡ, ಹಾಜಿಲಾಲ ಬಾಗವಾನ, ಬಸಯ್ಯ ವಿಭೂತಿ, ವಿಜುಗೌಡ ಪಾಟೀಲ, ಜಗದೀಶ ಪಾಟೀಲ, ರಾಮರಾವ, ಮೊಮ್ಮು ಮುಜಾವರ, ಸಜ್ಜಾದೆಪೀರಾ ಮುಶ್ರೀಫ ಮುಂತಾದವರು ಉಪಸ್ಥಿತರಿದ್ದರು.