Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪ್ರೇಮ ಸ್ಪರ್ಶ

ವಿಳಾಸ ಬದಲಾದಾಗ..

ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮತ ಪಡೆಯಲು ಅಳುವುದೇ ಅರ್ಹತೆಯಲ್ಲ :ಜಿ.ಕೆ.ಪಾಟೀಲ
(ರಾಜ್ಯ ) ಜಿಲ್ಲೆ

ಮತ ಪಡೆಯಲು ಅಳುವುದೇ ಅರ್ಹತೆಯಲ್ಲ :ಜಿ.ಕೆ.ಪಾಟೀಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಜಿ. ಕೆ. ಪಾಟೀಲ ಹೇಳಿದ್ದಾರೆ.

ತಿಕೋಟಾ ಪಟ್ಟಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಈ ಸಂದರ್ಭಲ್ಲಿ ಮತಯಾಚಿಸುವ ಕೆಲವರು ಅಳುತ್ತಾರೆ. ಅಡ್ಡ ಬೀಳುತ್ತಾರೆ. ಅಂಗಲಾಚುತ್ತಾರೆ. ಈ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಆದರೆ, ಇದು ಅರ್ಹತೆಯಾಗಬಾರದು. ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಸಿಎಂ ಆಗುತ್ತಿದ್ದರು ಎಂದು ಅವರು ಹೇಳಿದರು.

ಮತದ ಮಹತ್ವವನ್ನು ಪ್ರತಿಯೊಬ್ಬ ಮತದಾರರು ಅರಿತುಕೊಳ್ಳಬೇಕು. ಸದಾ ತಮ್ಮ ಶ್ರೇಯಸ್ಸು ಬಯಸುವ ಹಿತಚಿಂತಕರ ಪರ ಮತ ಚಲಾವಣೆಯಾಗಬೇಕು. ಮತದಾರರು ತಮ್ಮ ಮತ ಅಪಮೌಲ್ಯ ಆಗಬಾರದು ಎಂಬ ಪ್ರಜ್ಞೆ ಇಟ್ಟುಕೊಂಡು ಅರ್ಹರಿಗೆ ಮತ ಹಾಕಬೇಕು. ಒಬ್ಬ ಜನಪ್ರತಿನಿಧಿ ಮತ್ತು ಜನನಾಯಕನಿಗೆ ಇರಬೇಕಾದ ಎಲ್ಲ ಅರ್ಹತೆಗಳು ಎಂ. ಬಿ. ಪಾಟೀಲರಿಗೆ ಇವೆ. ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಜಿ. ಕೆ. ಪಾಟೀಲ ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ತಿಕೋಟಾ ನಮ್ಮೂರು. ಚುನಾವಣೆ ಅಭಿವೃದ್ಧಿ ಪರ್ವದ ಚುನಾವಣೆಯಾಗಬೇಕು. ಈ ಪಟ್ಟಣದಲ್ಲಿ ಎಲ್ಲ ಕೆಲಸಗಳಾಗಿವೆ. ಮಿನಿ ವಿಧಾನಸೌಧಗಳಾಗಿವೆ. ಸಬ್ ರಜಿಸ್ಚ್ರಾರ್ ಕಚೇರಿಯಾಗಿದೆ ಎಂದು ಹೇಳಿದರು.

ವಿರೋಧಿಗಳ ಬಳಿ ಹೇಳಿಕೊಳ್ಳಲು ಯಾವುದೇ ವಿಷಯದ ಬಂಡವಾಳವಿಲ್ಲ. ಹೀಗಾಗಿ ಅನುಕಂಪ ಗಿಟ್ಟಿಸಲು ಮೊಸಳೆ ಕಣ್ಣೀರು, ಅಡ್ಡಲಾಗಿ ಬೀಳುವುದು ಮಾಡುತ್ತಿದ್ದಾರೆ. ಅಂಥವರ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಕೀಲಿ ಹಾಕಿವೆ. 40% ಲಂಚ ಈ ಸರಕಾರದ ಬಹುದೊಡ್ಡ ಸಾಧನೆ. ಬೆಲೆಯೇರಿಕೆ, ಉದ್ಯಮಿಗಳ ಸಾಲಮನ್ನಾ ಕೇಂದ್ರ ಸರಕಾರದ ದೊಡ್ಡ ಸಾಧನೆಯಾಗಿದೆ. ಡಬಲ್ ಎಂಜೀನ್ ಸರಕಾರದ ಎರಡೂ ಎಂಜಿನ್ ಫೇಲ್ ಆಗಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಜಲಸಂಪನ್ಮೂಲ ಸಚಿವನಾಗಿ ಯಾವುದೇ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಒಳಪಡದ ತಿಕೋಟಾ ಹೋಬಳಿಗೆ ಛಲದಿಂದ ನೀರು ತಂದು ಕೊಟ್ಟಿದ್ದೇನೆ. ರೂ. 3600 ಕೋ. ಖರ್ಚು ಮಾಡಿ 6.80 ನೀರಾವರಿ ಯೋಜನೆ ಜಾರಿ ಮಾಡಿದ್ದೇನೆ. ಈಗ ನೀರು ಬಂದಿದೆ. ಈ ಭಾಗದಲ್ಲಿ ಸಮೃದ್ಧಿಯಾಗಿದೆ. ಆದರೆ, ಭಾಗದಲ್ಲಿ ಅನುಷ್ಠಾನವಾಗಬೇಕಿದ್ದ ಎಫ್.ಐ.ಸಿ. ಕಾಮಗಾರಿಯನ್ನು ವಿರೋಧಿಗಳು ಪ್ಯಾಕೇಜ್ ಮೂಲಕ ಲಂಚ ಪಡೆಯುವ ಸಲುವಾಗಿ ಬಂದ್ ಇರಿಸಿದ್ದಾರೆ. ಜನ ಮತ್ತು ರೈತ ವಿರೋಧಿಯಾಗಿರುವ ಇಂಥವರ ಪರ ಇರುವ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಅಂಥ ಮತದಾರರ ಮನವೊಲಿಸಿ ಕಾಂಗ್ರೆಸ್ಸಿಗೆ ಮತ ಹಾಕಿಸಬೇಕು ಎಂದು ಹೇಳಿದರು.

ತಿಕೋಟಾ ಪಟ್ಟಣದಲ್ಲಿ ಪ್ರತ್ಯೇಕವಾಗಿ ನಡೆದ ಸಭೆಗಳಲ್ಲಿ ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ತಮ್ಮಣ್ಣ ಹಂಗರಗಿ, ಬಸಯ್ಯ ವಿಭೂತಿ, ರಾಮು ದೇಸಾಯಿ, ಎಚ್. ಎಂ. ಬಾಗವಾನ, ಜಗದೀಶ ಪಾಟೀಲ, ವಿಜುಗೌಡ ಪಾಟೀಲ, ಮಲ್ಕು ಹಂಜಗಿ, ಗಂಗಪ್ಪ ಕರಜಗಿ, ಭೀಮು ನಾಟಿಕಾರ, ಹಾಜಿಸಾಬ ಕೊಟ್ಟಲಗಿ, ಲೇಪು ಕೊಣ್ಣೂರ, ತಿಪ್ಪಣ್ಣ ಕೊಣ್ಣೂರ, ಮಾಳು ಗುಗದಡ್ಡಿ, ಪ್ರಕಾಶ ಸೊನ್ನದ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS kpcc m b patil udaya rashmi
Share. Facebook Twitter Pinterest Email Telegram WhatsApp
  • Website

Related Posts

ಪ್ರೇಮ ಸ್ಪರ್ಶ

ವಿಳಾಸ ಬದಲಾದಾಗ..

ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ

ಶರಣ ನಗೆಮಾರ ತಂದೆ ವಚನಗಳು ಬದುಕಿಗೆ ಪೂರಕ :ಸಾಲಕ್ಕಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪ್ರೇಮ ಸ್ಪರ್ಶ
    In ಕಾವ್ಯರಶ್ಮಿ
  • ವಿಳಾಸ ಬದಲಾದಾಗ..
    In ಭಾವರಶ್ಮಿ
  • ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ
    In (ರಾಜ್ಯ ) ಜಿಲ್ಲೆ
  • ಶರಣ ನಗೆಮಾರ ತಂದೆ ವಚನಗಳು ಬದುಕಿಗೆ ಪೂರಕ :ಸಾಲಕ್ಕಿ
    In (ರಾಜ್ಯ ) ಜಿಲ್ಲೆ
  • ನೆಟಬಾಲ್ ಚಾಂಪಿಯನಶಿಫ್ :ಅಕ್ಷರಾ ಶಾಲೆ ಪ್ರಥಮ
    In (ರಾಜ್ಯ ) ಜಿಲ್ಲೆ
  • ’ರೈತ ನಿನಗೆ ಗೋ ಶಾಪ?’ ಚಿತ್ರದ ಮೊದಲ ಲುಕ್ ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಜು.೧೨ರಂದು ನಿವೃತ್ತ ನೌಕರರ ವಿಶೇಷ ಸಭೆ
    In (ರಾಜ್ಯ ) ಜಿಲ್ಲೆ
  • ಸಮಸಮಾಜ ನಿರ್ಮಾಣಕ್ಕೆ ಬಸವ ಸಿದ್ಧಾಂತ ಅನುಸರಿಸೋಣ :ಘಂಟಿ
    In (ರಾಜ್ಯ ) ಜಿಲ್ಲೆ
  • ಜ್ಞಾನಯೋಗಾಶ್ರಮಕ್ಕೆ ವಿಶೇಷ ಬಸ್ ಕಾರ್ಯಾಚರಣೆ
    In (ರಾಜ್ಯ ) ಜಿಲ್ಲೆ
  • ಆಯ್ದ ೪ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.