Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ | ಲಕ್ಷ್ಮಣ ಸವದಿ ಭವಿಷ್ಯ ವಿಜಯಪುರ: ಹಿಂದುತ್ವದ ಬಗ್ಗೆ ಬಿಜೆಪಿಯವರು ಮಾತನಾಡಲು ಅವರೇನು ಅದನ್ನು ಖರೀದಿ ಮಾಡಿಲ್ಲ. ಎಲ್ಲ ಪಕ್ಷದಲ್ಲೂ ಹಿಂದುಗಳಿದ್ದಾರೆ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.ಬುಧವಾರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ಹಾಗೂ ಬಿಜೆಪಿ ಆಡಳಿತ ವಿರೋಧಿ ಅಲೆ ಇದೆ. 140ರಿಂದ 150 ಸ್ಥಾನ ಗಳಿಸುತ್ತಿವೆ. ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಯೋಜನೆಗಳಿಗೆ ಜನ ಸ್ಪಂದಿಸುತ್ತಿದ್ದಾರೆ. ಈ ಬಾರಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಮತದಾರರು ಕಾಂಗ್ರೆಸ್‌ಗೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ಭವಿಷ್ಯ ನುಡಿದರು.ಬಿಜೆಪಿ ಆಂತರಿಕ ಕಚ್ಚಾಟದಿಂದ ಜರ್ಜರಿತವಾಗಿದ್ದು, 50 ರಿಂದ 60 ಸೀಟು ಬರುವುದು ಕಷ್ಟ ಇದೆ ಎಂದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಬಾಗ್ಯ, ಕೃಷಿ ಭಾಗ್ಯ ಯೋಜನೆ ಜನರಿಗೆ, ರೈತಾಪಿ ವರ್ಗಕ್ಕೆ ಹೆಚ್ಚು ಅನುಕೂಲ ಆಗಿದೆ. ಆದರೆ, ಬಿಜೆಪಿ ಸರ್ಕಾರದ…
ವಿಜಯಪುರ: ವಿಜಯಪುರ ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ.೧೦ ರಂದು ಜರುಗುವ ಮತದಾನ ಹಾಗೂ ಮೇ. ೧೩ ರಂದು ನಡೆಯುವ ಮತ ಏಣಿಕೆ ಕಾರ್ಯಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು. ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಎನ್‌ಐಸಿ ಕೇಂದ್ರದಲ್ಲಿ ಚುನಾವಣಾ ಆಯೋಗದೊಂದಿಗೆ ವಿಜಯಪುರ ಜಿಲ್ಲೆಯ ಸಿದ್ಧತೆಗಳ ಕುರಿತು ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ೮ ವಿಧಾನಸಭಾ ಮತಕ್ಷೇತ್ರಗಳಲ್ಲಿ ೯೬೬೫೩೫ ಪುರುಷ, ೯೨೬೦೯೬ ಮಹಿಳಾ ಮತದಾರರು, ೨೨೧ ಇತರರು ಸೇರಿದಂತೆ ಒಟ್ಟು ೧೮,೯೨,೮೫೨ ಮತದಾರರಿದ್ದು, ಜಿಲ್ಲೆಯಾದ್ಯಂತೆ ೨೦೭೨ ಹಾಗೂ ಹೆಚ್ಚುವರಿಯಾಗಿ ೬ ಮತಗಟ್ಟೆಗಳು ಸೇರಿದಂತೆ ೨೦೭೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ೧,೪೭,೫೫೪ ಎಪಿಕ್ ಕಾರ್ಡ್ಗಳನ್ನು ಪೂರ್ಣ ಪ್ರಮಾಣದಲ್ಲಿ ವಿತರಿಸಲಾಗಿದೆ. ಮತದಾರರಿಗೆ ಓಟರ್ ಸ್ಲೀಪ್‌ಗಳನ್ನು ತಲುಪಿಸಲಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿಶ್ರಾಂತಿ ಕೊಠಡಿ, ಶಾಮಿಯಾನಾ, ಆಸನ, ಕುಡಿಯುವ ನೀರು, ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಮುಂದೆ ಸರತಿ ಸಾಲು…
ಬಸವನಬಾಗೇವಾಡಿ: ಪಟ್ಟಣದ ವೀರಭದ್ರೇಶ್ವರ ನಗರ ಸೇರಿದಂತೆ ವಿವಿಧೆಡೆ ಬುಧವಾರ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಅವರು ಮನೆ ಮನೆಗೆ ತೆರಳಿ ಮತ ಯಾಚಿಸಿದರು.ಈ ಸಂದರ್ಭದಲ್ಲಿ ಸಾವಿತ್ರಿ ಕಲ್ಯಾಣಶೆಟ್ಟಿ, ಸಿದ್ದನಗೌಡ ಪಾಟೀಲ, ಮುತ್ತು ಕಿಣಗಿ, ಶಿವಪುತ್ರಪ್ಪ ಕೆಂಭಾವಿ, ಎಸ್.ಎಸ್.ಹಿರೇಮಠ, ರಾಜು ಮುಳವಾಡ, ಬಸವರಾಜ ಬಿಜಾಪುರ,ಸಂಗಮೇಶ ವಾಡೇದ, ಸ್ವರೂಪರಾಣಿ ಬಿಂಜಲಭಾವಿ, ಪ್ರವೀಣ ಪವಾರ, ಆನಂದ ಬಿಸ್ಟಗೊಂಡ ಸೇರಿದಂತೆ ಅನೇಕರು ಇದ್ದರು.
ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ (ಡಿವ್ಹಿಬಿಡಿಸಿಪಿ) ಕಾರ್ಯಕ್ರಮದ ಅಡಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಆಗಮಿಸಿದ ಸಿಆರ್‌ಪಿಎಫ್ ಯೋಧರಿಗೆ ಮುಂಜಾಗೃತಾ ಕ್ರಮವಾಗಿ ಆರ್‌ಡಿಟಿ ಕಿಟ್ ಹಾಗೂ ರಕ್ತ ಲೇಪನ ತಗೆದು ಮಲೇರಿಯಾ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಯಿತು.ಈ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ, ಎಸ್.ಆರ್.ಸಜ್ಜನ, ಇಸ್ಮಾಯಿಲ್ ವಾಲಿಕಾರ್ ಹಾಗೂ ಮಲೇರಿಯಾ ಚಿಕಿತ್ಸಾ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ ಇದ್ದರು.
ಮುದ್ದೇಬಿಹಾಳ: ಕಳೆದ ೩೦ ವರ್ಷದ ನನ್ನ ರಾಜಕೀಯ ಪಯಣದಲ್ಲಿ ಯಾವತ್ತೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿಲ್ಲ. ನಾಡಗೌಡರ ಸಂಭಾವಿತ ರಾಜಕಾರಣಕ್ಕೆ ಮೆಚ್ಚಿ ಮತ್ತು ಸಿದ್ಧರಾಮಯ್ಯನವರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವುದಾಗಿ ಬಂಜಾರಾ ಸಮುದಾಯದ ಮುಖಂಡ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ಮಾಜಿ ಸಚೀವರು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗೃಹ ಕಚೇರಿಯಲ್ಲಿ ತಮ್ಮ ಸುಮಾರು ೧೫೦೦ ಅಭಿಮಾನಿಗಳೊಂದಿಗೆ ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆಗೊಂಡು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿಯವರ ಭ್ರಷ್ಟಾಚಾರ ಮತ್ತು ದುರಾಡಳಿಕ್ಕೆ ಬೇಸತ್ತು ಹೋಗಿದ್ದೇವೆ. ಮೊದಲಿನಿಂದಲೂ ಕಾಂಗ್ರೇಸ್ ಪಕ್ಷವನ್ನು ಪ್ರಭಲವಾಗಿ ವಿರೋಧಿಸಿದ ನನಗೆ ಕಾಂಗ್ರೇಸ್ ಪಕ್ಷದ ಆಡಳಿತವೇ ಉತ್ತಮವೆನಿಸಿದೆ. ಹಾಗಾಗಿ ನಮ್ಮ ಎಲ್ಲ ಅಭಿಮಾನಿಗಳ ಜೊತೆ ಇಂದು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದು, ನಾಡಗೌಡರನ್ನು ೨೫ಸಾವಿರ ಮತಗಳ ಅಂತರದಿAದ ಗೆಲ್ಲಿಸುತ್ತೇವೆ ಎಂದರು.ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆಯೇ ಇವರಿಗೆ ಕಾಂಗ್ರೇಸ್ ಪಕ್ಷಕ್ಕೆ ಆವ್ಹಾನಿಸಿದ್ದೆವು. ಅಂದು ನಿರಾಕರಿಸಿದ ಅವರ…
ಮತದಾನ ಪ್ರಮಾಣ ಹೆಚ್ಚಳಕ್ಕೆ, ಮತದಾರರನ್ನು ಆಕರ್ಷಿಸಲು ಕ್ರಮ ವಿಜಯಪುರ: ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೇ.10 ರಂದು ಜರುಗುವ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ವರ್ಗಗಳ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಜಿಲ್ಲೆಯಾದ್ಯಂತ ವಿಶೇಷಚೇತನರಿಗಾಗಿ ಮಾದರಿ ಮತಗಟ್ಟೆ, ಮಹಿಳಾ ಮತದಾರರಿಗಾಗಿ ಸಖಿ ಮತಗಟ್ಟೆ, ಯುವ ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು ಯುವ ಸಿಬ್ಬಂದಿಯಿAದ ನಿರ್ವಹಣೆಯ ಮತಗಟ್ಟೆ ಹಾಗೂ ವಿವಿಧ ವಿಷಯನ್ನೊಳಗೊಂಡ ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.ಜಿಲ್ಲೆಯ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ನಿರ್ವಹಿಸಲಿದ್ದಾರೆ. ಅದರಂತೆ ಯುವ ಮತದಾರ ಮತಗಟ್ಟೆಗಳಲ್ಲಿ ಯುವ ಅಧಿಕಾರಿ-ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಮೂಲಕ ಮತಗಟ್ಟೆ ಎಲ್ಲ ಚಟುವಟಿಕೆಗಳನ್ನು ನಿಭಾಯಿಸುತ್ತಿರುವುದು ವಿಶೇಷವಾಗಿದೆ.ವಿಧಾನಸಭಾವಾರು ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 01 ವಿಶೇಷಚೇತನರ ಮಾದರಿ ಮತಗಟ್ಟೆ, 05 ಸಖಿ ಮತಗಟ್ಟೆ, 01 ಯುವ ಮತಗಟ್ಟೆ ಹಾಗೂ 01 ಥೀಮ್ ಆಧಾರಿತ…
ಬಸವನಬಾಗೇವಾಡಿ: ಪಟ್ಟಣದ ಓಂ ನಗರ, ಗೌರಿ-ಶಂಕರ ದೇವಸ್ಥಾನ, ಮಹಾರಾಜರ ಮಠ, ವಿವೇಕಾನಂದ ಗಲ್ಲಿ, ಅಗಸಿ ಒಳಗಡೆ, ಹಳೆಪಲ್ಲೇದ ಕಟ್ಟಿ, ಗುರ್ಜಿ ಕಟ್ಟಿ ಸೇರಿದಂತೆ ವಿವಿಧೆಡೆ ಬುಧವಾರ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಮತಯಾಚಿಸಿದರು.ಶಾಸಕ ಶಿವಾನಂದ ಪಾಟೀಲರು ಕಳೆದ ಒಂದು ದಶಕದ ಅವಧಿಯಲ್ಲಿ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ, ಸಿದ್ದರಾಮಯ್ಯ ಸರ್ಕಾರದ ಅವಽಯಲ್ಲಿ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರ ಮಾಡಿರುವ ಜನಪರ ಯೋಜನೆಗಳ ಬಗ್ಗೆ ಮತಬಾಂಧವರಿಗೆ ತಿಳಿಸುವ ಜೊತೆಗೆ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಶಿವಾನಂದ ಪಾಟೀಲರಿಗೆ ಮತ ನೀಡುವಂತೆ ಮುಖಂಡರು ಮನವಿ ಮಾಡಿಕೊಂಡರು.ಮತ ಯಾಚನೆಯಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಸುಭಾಸ ಚಿಕ್ಕೊಂಡ, ಸಂಗಯ್ಯ ಕಾಳಹಸ್ತೇಶ್ವರಮಠ, ಶಂಕರಗೌಡ ಬಿರಾದಾರ, ವಿಶ್ವನಾಥ ಹಾರಿವಾಳ,ಎಂ.ಜಿ.ಆದಿಗೊಂಡ, ಜಟ್ಟಿಂಗರಾಯ ಮಾಲಗಾರ, ಅಜೀಜ ಬಾಗವಾನ, ಉದಯಕುಮಾರ ಮಾಂಗಲೇಕರ, ಬಸವರಾಜ ರಾಯಗೊಂಡ, ವಿಶ್ವನಾಥ…
ವಿಜಯಪುರ: ನಮ್ಮವರು ಪ್ರತಿಯೊಬ್ಬರೂ ಒಂದಾಗಬೇಕು. ಇಲ್ಲದಿದ್ದರೇ ಒಂದಾಗಿರುವ ಮುಸ್ಲಿಂ ಸಮುದಾಯ ನಮ್ಮ ಆಟ ಬಂದ್ ಮಾಡುತ್ತಾರೆ ಎಚ್ಚರವಿರಲಿ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಕಿವಿಮಾತು ಹೇಳಿದರು.ನಗರದ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.೧೮ ರ ಹರಣಶಿಖಾರಿ ಓಣಿಯ ಸುಂದರೇಶ್ವರ ದೇವಸ್ಥಾನ ಹತ್ತಿರ, ಕಮಾಲಖಾನ ಬಜಾರ್ ಓಣಿಯ ಗಣಪತಿ ಗುಣಿ ಹತ್ತಿರ ಹಾಗೂ ವಾ.ನಂ.೬ರ ಶಹಾಪುರ ಅಗಸಿ, ಕಲಾಲ ಗಲ್ಲಿ, ಅಗಸರ ಓಣಿ, ಡೋರಗಲ್ಲಿ, ಗೌಳಿ ಗಲ್ಲಿ ಜನರೊಂದಿಗೆ ಮತಯಾಚನೆ ಮಾಡಿ ಅವರು ಮಾತನಾಡಿದರು.ವಿರೋಧ ಪಕ್ಷದ ಅಭ್ಯರ್ಥಿ ತಮ್ಮ ಸಮುದಾಯದ ಆಸ್ತಿಯನ್ನೇ ಕಬಳಿಸಿದ್ದಾನೆ. ಇನ್ನೂ ಅಧಿಕಾರಕ್ಕೆ ಬಂದರೆ ನಮ್ಮವರನ್ನು ಹೇಗೆ ನಡೆಸಿಕೊಳ್ಳಬಹುದು ಒಂದು ಕ್ಷಣ ಯೋಚಿಸುವ ಅಗತ್ಯವಿದೆ. ನಿರೀಕ್ಷೆಗೂ ಮೀರಿ ನಗರದ ಅಭಿವೃದ್ಧಿ ಮಾಡಿದಲ್ಲದೇ, ಶಾಂತಿಯ ವಾತಾವರಣ ನೆಲೆಸುವಂತೆ ಉತ್ತಮ ಆಡಳಿತ ಕೊಟ್ಟಿರುವ ಹೆಮ್ಮೆಯಿದೆ. ಅಭಿವೃದ್ಧಿಗಾಗಿ ಯಾರ ಮುಲಾಜಿಲ್ಲದೇ, ತೆರೆವು ಕಾರ್ಯಾಚರಣೆ ನಡೆಸುವ ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ಹೈಟೆಕ್ ರಸ್ತೆಗಳು ಆಗಿವೆ ಎಂದು ಹೇಳಿದರು. ಕಾಯಿಪಲ್ಯ ಮಾರುಕಟ್ಟೆಗೆ ಹೋಗಲು ನಮ್ಮ…
ದೇವರಹಿಪ್ಪರಗಿ: ರಾಷ್ಟಿçÃಯ ಪಕ್ಷಗಳಿಂದ ಜನಸಾಮಾನ್ಯರು ಬೇಸತ್ತು ಹೋಗಿದ್ದು, ಈ ಸಲ ಕನ್ನಡಿಗರ ಪಕ್ಷ ಜೆಡಿಎಸ್‌ಗೆ ಅಧಿಕಾರ ನೀಡಲಿದ್ದು, ನನಗೆ ಬೆಂಬಲಿಸಿ ಆಶೀರ್ವಾದ ಮಾಡಬೇಕೆಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮನವಿ ಮಾಡಿದರು.ದೇವರಹಿಪ್ಪರಗಿ ಮತಕ್ಷೇತ್ರದ ಕೆರುಟಗಿ, ಕುದರಗೊಂಡ, ತಿಳಗೂಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಅನುಕಂಪದ ಅಲೆ ಈ ಸಲ ಹೆಚ್ಚಾಗಿದ್ದು, ಮತದಾರ ಪ್ರಭುಗಳು ಸ್ವಯಂಪ್ರೇರಿತರಾಗಿ ಕೈಯಿಂದ ಖರ್ಚು ಮಾಡಿಕೊಂಡು ನನ್ನ ಪ್ರಚಾರ ಮಾಡುತ್ತಿದ್ದಾರೆ. ಈ ಋಣ ತೀರಿಸಲು ಸಾಧ್ಯವಿಲ್ಲ. ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಪರಾಭಗೊಂಡರೂ ನಿಮ್ಮ ಮನೆ ಮಗನಾಗಿ ಸೇವೆ ಸಲ್ಲಿಸಿದ್ದೇನೆ.ಹಗಲು ರಾತ್ರಿ ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಸಂಚರಿಸಿ ತಮ್ಮ ಅನುವುತನುವುನಲ್ಲಿ ಭಾಗವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಅದಕ್ಕಾಗಿಯೇ ಇಂತಹ ಚುನಾವಣಾ ಸಮಯದಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ನೀಡಿ ಗೌರವಿಸುತ್ತಿರುವುದು ನೋಡಿದರೆ ಯಾವ ಜನ್ಮದ ಪುಣ್ಯವೋ ಎನ್ನುವಂತಾಗಿದೆ. ಎಲ್ಲ ಸಮಾಜದವರು ಸಮಾನ ದೃಷ್ಠಿಯಿಂದ ಕಂಡು ನನಗೆ ಅಭಯ ಹಸ್ತ ನೀಡುತ್ತಿದ್ದಾರೆ. ಯಾವುದೇ ಜಾತಿ…
ಬ್ರಹ್ಮದೇವನಮಡು: ಅಭಿವೃದ್ದಿಯೇ ಕಾಂಗ್ರೆಸ್ ಅಜೆಂಡಾ ಆಗಿದ್ದು, ಹಿAದೆ ಕಾಂಗ್ರೆಸ್ ಸಕಾ೯ರ ಕೈಗೊಂಡ ಅಭಿವೃದ್ದಿ ಕಾಯ೯ಗಳಿಂದ ನನ್ನ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಅಭ್ಶಥಿ೯ ಅಶೋಕ ಮನಗೂಳಿ ವಿಶ್ವಾಸ ವ್ಶಕ್ತಪಡಿಸಿದರು.ಸಿಂದಗಿ ತಾಲೂಕು ಗೋಲಗೇರಿ, ಸಾಸಾಬಾಳ, ಡಂಬಳ ಗ್ರಾಮದಲ್ಲಿ ಮಂಗಳವಾರ ಸಂಜೆ ಪ್ರಚಾರ ಕೈಗೊಂಡು, ಹಲವರನ್ನು ಪಕ್ಷಕ್ಕೆ ಸೇಪ೯ಡೆ ಮಾಡಿಕೊಂಡು ಅವರು ಮಾತನಾಡಿದರು.ಈ ಬಾರಿ ನನಗೆ ಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಶಿವು ಹತ್ತಿ, ಬಸವರಾಜ ಮಾರಲಭಾವಿ, ರವಿರಾಜ ದೇವರಮನಿ, ಬಸವರಾಜ ಹದಗಲ್ಲ್, ಶರಣಗೌಡ ಪಾಟೀಲ, ಶಿವಪುತ್ರ ಕನಾ೯ಳ,ರಾಮನಗೌಡ ಪಾಟೀಲ, ಸಚೀನಗೌಡ ಪಾಟೀಲ, ಶ್ರೀಶೈಲ ಜಾಲವಾದಿ, ಕುಮಾರ ಗೊಂದಳಿ, ಚAದ್ರು ಕೆಂಭಾವಿ, ಮಲ್ಲಿಕಾಜು೯ನ ಹದಗಲ್ಲ್ ಸೇರಿದಂತೆ ಇತರರಿದ್ದರು.
