ಮುದ್ದೇಬಿಹಾಳ: ಕಳೆದ ೩೦ ವರ್ಷದ ನನ್ನ ರಾಜಕೀಯ ಪಯಣದಲ್ಲಿ ಯಾವತ್ತೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿಲ್ಲ. ನಾಡಗೌಡರ ಸಂಭಾವಿತ ರಾಜಕಾರಣಕ್ಕೆ ಮೆಚ್ಚಿ ಮತ್ತು ಸಿದ್ಧರಾಮಯ್ಯನವರನ್ನ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುವುದಾಗಿ ಬಂಜಾರಾ ಸಮುದಾಯದ ಮುಖಂಡ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಮಾಜಿ ಸಚೀವರು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗೃಹ ಕಚೇರಿಯಲ್ಲಿ ತಮ್ಮ ಸುಮಾರು ೧೫೦೦ ಅಭಿಮಾನಿಗಳೊಂದಿಗೆ ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆಗೊಂಡು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರ ಭ್ರಷ್ಟಾಚಾರ ಮತ್ತು ದುರಾಡಳಿಕ್ಕೆ ಬೇಸತ್ತು ಹೋಗಿದ್ದೇವೆ. ಮೊದಲಿನಿಂದಲೂ ಕಾಂಗ್ರೇಸ್ ಪಕ್ಷವನ್ನು ಪ್ರಭಲವಾಗಿ ವಿರೋಧಿಸಿದ ನನಗೆ ಕಾಂಗ್ರೇಸ್ ಪಕ್ಷದ ಆಡಳಿತವೇ ಉತ್ತಮವೆನಿಸಿದೆ. ಹಾಗಾಗಿ ನಮ್ಮ ಎಲ್ಲ ಅಭಿಮಾನಿಗಳ ಜೊತೆ ಇಂದು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದು, ನಾಡಗೌಡರನ್ನು ೨೫ಸಾವಿರ ಮತಗಳ ಅಂತರದಿAದ ಗೆಲ್ಲಿಸುತ್ತೇವೆ ಎಂದರು.
ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳ ಹಿಂದೆಯೇ ಇವರಿಗೆ ಕಾಂಗ್ರೇಸ್ ಪಕ್ಷಕ್ಕೆ ಆವ್ಹಾನಿಸಿದ್ದೆವು. ಅಂದು ನಿರಾಕರಿಸಿದ ಅವರ ಮಾತುಗಳನ್ನು ಕೇಳಿ ಚ್ಚರಿಗೊಂಡಿದ್ದೆವು. ಪಕ್ಷನಿಷ್ಠರಾಗಿದ್ದ ಅವರು ಇಂದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ನೋಡಿದರೆ ಅಚ್ಚರಿಯಾಗಿದೆ. ಜೊತೆಗೆ ಆನೆಬಲ ಬಂದAತಾಗಿದೆ. ಈ ಬಾರಿ ವಿಜಯದ ಬಾವುಟ ಹಾರಿಸೋರು ನಾವೇ ಎಂದರು.
ಈ ವೇಳೆ ಬಾಲಾಜಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ವೇಂಕಟೇಶಗೌಡ ಪಾಟೀಲ, ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಚ್.ಹಾಲಣ್ಣವರ, ಗೋವಾ ಕನ್ನಡಿಗರ ಹೋರಾಟ ಸಮೀತಿ ಅಧ್ಯಕ್ಷ ಸಿದ್ದಣ್ಣ ಮೇಟಿ, ಶಿವಶಂಕರಗೌಡ ಹಿರೇಗೌಡರ, ರಾಜೇಂದ್ರ ರಾಯಗೊಂಡ, ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
ಜಿಪಂ ಮಾಜಿ ಸದಸ್ಯ ಚಿದಾನಂದ ಸೀತಿಮನಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
Related Posts
Add A Comment